ತಮಿಳುನಾಡಿನ ವಾಲ್ಪಾರೈನಲ್ಲಿ ಆಟವಾಡುತ್ತಿದ್ದ ಮಗುವಿನ ಮುಂದೆ ಚಿರತೆಯೊಂದು ಪ್ರತ್ಯಕ್ಷವಾಗಿರುವ ಘಟನೆ ನಡೆದಿದೆ. ನಾಯಿಗಳ ಬೊಗಳು ಮತ್ತು ಮಗುವಿನ ಕಿರುಚಾಟದಿಂದ ಚಿರತೆ ಓಡಿಹೋಗಿದೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ತಮಿಳುನಾಡು ವಾಲ್ಪಾರೈನಲ್ಲಿ ಮನೆಯಂಗಳದಲ್ಲಿ ಆಟವಾಡುತ್ತಿದ್ದ ಮಗುವಿನ ಮುಂದೆ ಹುಲಿಯೊಂದು ಬಂದ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ಆದರೆ ಅದೃಷ್ಟವಶಾತ್ ಮಗು ಮತ್ತು ಮನೆಯಲ್ಲಿದ್ದ ನಾಯಿಗಳು ಬೊಬ್ಬೆ ಹೊಡೆದಾಗ ಈ ಹುಲಿ ಆ ಜಾಗದಿಂದ ಓಡಿ ಹೋಗಿದೆ. ಈ ಘಟನೆಯ ದೃಶ್ಯಾವಳಿಗಳು ಅಲ್ಲೇ ಇದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ತಮಿಳುನಾಡು ವಾಲ್ಪಾರೈನಲ್ಲಿ ಸೋಮವಾರ ಸಂಜೆ ಐದು ಗಂಟೆ ವೇಳೆಗೆ ಈ ಘಟನೆ ನಡೆದಿದೆ.
ವಾಲ್ಪಾರೈ ರೊಟ್ಟಿಕಡೆ ಬಳಿ ವಾಸಿಸುವ ಶಿವಕುಮಾರ್-ಸತ್ಯ ಎಂಬುವವರ ಮನೆಯಂಗಳದಲ್ಲಿ ಹುಲಿ ಕಾಣಿಸಿಕೊಂಡಿದೆ. ಇದೇ ವೇಳೆ ಅವರ ಮಗ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ. ಹುಲಿಯನ್ನು ನೋಡಿದ ನಾಯಿಗಳು ಮೊದಲು ಬೊಗಳುತ್ತಾ ಓಡಿದವು. ನಂತರ ಅಂಗಳಕ್ಕೆ ನುಗ್ಗಿದ ಹುಲಿ ಮಗುವಿನ ಕಿರುಚಾಟ ಕೇಳಿ ಅಲ್ಲಿಂದ ಓಡಿಹೋಗಿದೆ. ಆದರೆ. ಸಿಸಿಟಿವಿ ಪರಿಶೀಲಿಸಿದಾಗ ಬಂದಿದ್ದು ಹುಲಿಯಲ್ಲ ಚಿರತೆ ಎಂದು ತಿಳಿದು ಬಂದಿದೆ. ವೈರಲ್ ಆದ ವೀಡಿಯೋದಲ್ಲಿ ನಾಯಿಗಳೆರಡು ಬೊಗಳುತ್ತಾ ಬಂದಿದ್ದು, ಇದೇ ವೇಳೆ ಅಂಗಳಕ್ಕೆ ಬಂದ ಚಿರತೆ ನಾಯಿಯ ಬೊಗಳುವಿಕೆಯ ಸದ್ದಿಗೆ ಅಲ್ಲಿಂದ ಓಡಿ ಹೋಗಿದೆ.
