ಥಾರ್ ಗಾಡಿಯಲ್ಲಿ ಉಕ್ಕಿ ಹರಿತ್ತಿದ್ದ ನದಿ ದಾಟಲು ಮುಂದಾದ ಯುವಕರು: ಆಮೇಲೇನಾಯ್ತು ನೋಡಿ
ಉಕ್ಕಿ ಹರಿಯುತ್ತಿದ್ದ ರಾಮ್‌ಗಂಗಾ ನದಿಯನ್ನು ಥಾರ್ ಗಾಡಿ ಸಮೇತ ದಾಟಲು ಹೋಗಿ ಮೂವರು ಯುವಕರು ನದಿಯ ಮಧ್ಯೆ ಸಿಲುಕಿದ ಘಟನೆ ಉತ್ತರಾಖಂಡ್‌ನ ಅಲ್ಮೋರಾ ಸಮೀಪದ ರಾಮ್‌ಗಂಗಾ ನದಿಯಲ್ಲಿ ನಡೆದಿದ್ದು, ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಲ್‌ಮೋರಾ: ಉಕ್ಕಿ ಹರಿಯುತ್ತಿದ್ದ ರಾಮ್‌ಗಂಗಾ ನದಿಯನ್ನು ಥಾರ್ ಗಾಡಿ ಸಮೇತ ದಾಟಲು ಹೋಗಿ ಮೂವರು ಯುವಕರು ನದಿಯ ಮಧ್ಯೆ ಸಿಲುಕಿದ ಘಟನೆ ಉತ್ತರಾಖಂಡ್‌ನ ಅಲ್ಮೋರಾ ಸಮೀಪದ ರಾಮ್‌ಗಂಗಾ ನದಿಯಲ್ಲಿ ನಡೆದಿದ್ದು, ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮೂವರು ಯುವಕರು ಡೆಲ್ಲಿ ಎನ್‌ಸಿಆರ್ ಪ್ರದೇಶದ ನಿವಾಸಿಗಳಾಗಿದ್ದು, ಉತ್ತರಾಖಂಡ್‌ಗೆ ಪ್ರವಾಸ ಹೋಗಿದ್ದರು.
ಗ್ರೇಟರ್ ನೋಯ್ಡಾ ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವೀಡಿಯೋ ಅಪ್‌ಲೋಡ್ ಆಗಿದ್ದು, ನದಿ ಮಧ್ಯೆ ಥಾರ್ ಗಾಡಿ ಸಮೇತ ಸಿಲುಕಿದ ಯುವಕರು ದೆಹಲಿ ಮೂಲದವರು ಎಂದು ಉಲ್ಲೇಖಿಸಿದೆ. ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಗಂಗಾರಾಮ್ ನದಿ ಉಕ್ಕಿ ಹರಿಯುತ್ತಿದ್ದು, ನದಿ ಉಕ್ಕಿ ಹರಿಯುತ್ತಿರುವುದನ್ನು ಗಮನಿಸಿಯೂ ಈ ಯುವಕರು ತಮ್ಮ ಮಹೀಂದ್ರ ಥಾರ್ (Mahindra Thar) ಗಾಡಿಯೊಂದಿಗೆ ನದಿ ದಾಟಲು ಮುಂದಾಗಿದ್ದರು. ಆದರೆ ಗಾಡಿ ನದಿ ಮಧ್ಯದಲ್ಲೇ ಸ್ಥಗಿತಗೊಂಡಿದೆ, ಇದರಿಂದ ಈ ಯುವಕರು ಇತ್ತ ಬಾರಲಾಗದೇ ಅತ್ತ ಹೋಗಲಾಗದೇ ನದಿ ಮಧ್ಯೆ ತಮ್ಮ ಥಾರ್ ಗಾಡಿ ಮೇಲೆ ನಿಂತು ಚಡಪಡಿಸಿದ್ದಾರೆ.
ಗೆಳೆಯನಿಂದ ಕಳ್ಳತನದ ಟ್ರೈನಿಂಗ್: ಗುರುದಕ್ಷಿಣೆ ಕೊಡಲು ಬೈಕ್ ಕದ್ದ ಬಾಲಕ ಅಂದರ್..!
ವೈರಲ್ ಆಗಿರುವ ವೀಡಿಯೋದಲ್ಲಿ ಬಹುತೇಕ ಮುಕ್ಕಾಲು ಭಾಗ ಮುಳುಗಿದ ಎಸ್‌ಯುವಿ ಥಾರ್ (SUV Thar)ಗಾಡಿ ಮೇಲೆ ಮೂವರು ಯುವಕರು ನಿಂತು ನದಿ ದಾಟಲು ಪರದಾಡುವುದನ್ನು ನೋಡಬಹುದು. ಇವರಲ್ಲೊಬ್ಬ ಲೈಫ್ ಜಾಕೆಟ್ ಧರಿಸಿದ್ದು, ನದಿಗೆ ಹಾರಲು ಸಿದ್ಧನಾಗಿ ನದಿಗೆ ಹಾರುತ್ತಾನೆ. ಉಳಿದ ಇಬ್ಬರು ಥಾರ್ ಗಾಡಿ ಮೇಲೆಯೇ ನಿಂತಿದ್ದಾರೆ. ನದಿ ಪಕ್ಕದಲ್ಲಿ ಇತರರು ಈ ಹುಡುಗರನ್ನೇ ನೋಡುತ್ತಿರುವ ದೃಶ್ಯವಿದೆ.
ತಾನೇ ಹೆಣೆದ ಬಲೆಗೆ ಬಿದ್ದ ಚೀನಾ ಸಬ್‌ಮರೀನ್: ಚೀನಾ ನೌಕಾಪಡೆಯ ಸಿಬ್ಬಂದಿ ಸೇರಿ 55 ಜನ ಬಲಿ
ಅಲ್ಲದೇ ನದಿ ಪಕ್ಕದಲ್ಲಿರುವ ಮರವೊಂದಕ್ಕೆ ಹಗ್ಗವೊಂದನ್ನು ಕಟ್ಟಿ ಹಗ್ಗದ ಮತ್ತೊಂದು ತುದಿಯನ್ನು ಯುವಕರಿರುವಲ್ಲಿಗೆ ಸ್ಥಳೀಯರು ಎಸೆದಿದ್ದಾರೆ. ಇನ್ನು ಲೈಫ್ ಜಾಕೆಟ್ (Life Jacket) ಹಾಕಿ ನದಿಗೆ ಹಾರಿದ ಯುವಕ ಸ್ವಲ್ಪ ದೂರ ನದಿಯಲ್ಲಿ ಕೊಚ್ಚಿ ಹೋಗಿದ್ದು, ನದಿ ತೀರದಲ್ಲೇ ಇದ್ದ ಕೆಲವರು ಆತನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗೆ ಎಲ್ಲ ಯುವಕರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗುತ್ತಿದೆ.
ಉಚಿತ ಕೊಡುಗೆಗಳಿಂದ ದಿವಾಳಿಯತ್ತ ಖಜಾನೆ: 3.27 ಲಕ್ಷ ಕೋಟಿ ರು. ಸಾಲದ ಸುಳಿಯಲ್ಲಿ ಪಂಜಾಬ್
ವೀಡಿಯೋ ನೋಡಿದ ನೆಟ್ಟಿಗರು ಹಲವು ಕಾಮೆಂಟ್ ಮಾಡಿದ್ದಾರೆ, ಥಾರ್ ಗಾಡಿ ಖರೀದಿಸುವಷ್ಟು ದುಡ್ಡಿದೆ, ಆದ್ರೆ ಬುದ್ದಿ ಇಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಸೊಕ್ಕು ತೋರಿದ ಇವರನ್ನು ರಕ್ಷಿಸಬಾರದಿತ್ತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಭಾರತದ ತಾಕೀತು ಬಳಿಕ ಮೆತ್ತಗಾದ ಕೆನಡಾ: ಖಲಿಸ್ತಾನಿಗಳ ಓಸಿಐ ಸ್ಥಾನಮಾನ ಕಟ್?