ಉಚಿತ ಕೊಡುಗೆಗಳಿಂದ ದಿವಾಳಿಯತ್ತ ಖಜಾನೆ: 3.27 ಲಕ್ಷ ಕೋಟಿ ರು. ಸಾಲದ ಸುಳಿಯಲ್ಲಿ ಪಂಜಾಬ್
ಆಮ್ ಆದ್ಮಿ ಪಕ್ಷದ ಸರ್ಕಾರ ಇರುವ ಪಂಜಾಬ್ ಈಗ ಸಾಲದ ಸುಳಿಗೆ ಸಿಲುಕಿದ್ದು, ಸರ್ಕಾರದ ಸಾಲದ ಭಾರ 3.27 ಲಕ್ಷ ಕೋಟಿ ರು.ಗೆ ಏರಿದೆ.
ಚಂಡೀಗಢ: ಆಮ್ ಆದ್ಮಿ ಪಕ್ಷದ ಸರ್ಕಾರ ಇರುವ ಪಂಜಾಬ್ ಈಗ ಸಾಲದ ಸುಳಿಗೆ ಸಿಲುಕಿದ್ದು, ಸರ್ಕಾರದ ಸಾಲದ ಭಾರ 3.27 ಲಕ್ಷ ಕೋಟಿ ರು.ಗೆ ಏರಿದೆ. ಈ ಹಿಂದಿನ ಸರ್ಕಾರಗಳು ಹಾಗೂ ಈಗಿನ ಸರ್ಕಾರದ ಉಚಿತ ಕೊಡುಗೆಗಳೇ ಸಾಲ ಭಾರಿ ಪ್ರಮಾಣದಲ್ಲಿ ಏರಲು ಕಾರಣ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರಿಗೆ ಪತ್ರ ಬರೆದಿರುವ ಮುಖ್ಯಮಂತ್ರಿ ಭಗವಂತ ಮಾನ್ (Chief Minister Bhagwant Mann), 5 ವರ್ಷಗಳ ಕಾಲ ಸಾಲ ಮರುಪಾವತಿ ಪ್ರಕ್ರಿಯೆ ಸ್ಥಗಿತಗೊಳಿಸಲು (ಮೊರಟೋರಿಯಂ ಪಡೆಯಲು) ಕೇಂದ್ರ ಸರ್ಕಾರದ (Central Government) ಅನುಮತಿ ಪಡೆಯುವಲ್ಲಿ ಸಹಾಯ ಮಾಡಬೇಕು ಎಂದು ಕೋರಿದ್ದಾರೆ
ಪತಿ ರಿಷಿಗಾಗಿ ಮೊದಲ ಬಾರಿ ರಾಜಕೀಯ ವೇದಿಕೆ ಏರಿದ ಇನ್ಪಿ ಮೂರ್ತಿ ಪುತ್ರಿ ಅಕ್ಷತಾ ಅಕ್ಷತಾ
‘ಪಂಜಾಬ್‌ನ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು, ಕನಿಷ್ಠ ಐದು ವರ್ಷಗಳ ಕಾಲ ರಾಜ್ಯದ ಸಾಲ ಮರುಪಾವತಿ ಸ್ಥಗಿತಗೊಳಿಸಲು ಅವಕಾಶ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರಿಗೆ ಮನವರಿಕೆ ಮಾಡಲು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ಇದರಿಂದ ರಾಜ್ಯದ ಆದಾಯ ಬೆಳವಣಿಗೆ ಆಗಿ ಅಭಿವೃದ್ಧಿಯ ವೇಗ ಹೆಚ್ಚಲಿದೆ’ ಎಂದು ಮಾನ್ ತಿಳಿಸಿದ್ದಾರೆ.
ಬಜೆಟ್‌ನ ಶೇ.20 ಹಣ ಸಾಲ ಕಟ್ಟಲು ಬಳಕೆ:
ಪಂಜಾಬ್ ವಾರ್ಷಿಕ ಬಜೆಟ್‌ನ ಶೇ.20ರಷ್ಟು ಹಣವನ್ನು ಸಾಲ ಮರುಪಾವತಿಗೆ ಖರ್ಚು ಮಾಡುತ್ತದೆ. ಕಳೆದ ಹಣಕಾಸು ವರ್ಷದ ಅಂತ್ಯಕ್ಕೆ ಪಂಜಾಬ್‌ನ ಸಾಲ 3.12 ಲಕ್ಷ ಕೋಟಿ ರು. ಇತ್ತು. ಅದು ಈಗ 3.27 ಲಕ್ಷ ಕೋಟಿ ರು.ಗೆ ಏರಿದೆ.
ಲೇಸರ್ ಫೇಶಿಯಲ್ ಎಫೆಕ್ಟ್: ಸೀದೋದ ದೋಸೆಯಂತಾಯ್ತು ಮುದ್ದಾದ ಯುವತಿ ಮುಖ
ಸಾಲ ಕಟ್ಟಲೆಂದು ಕಳೆದ ಆರ್ಥಿಕ ವರ್ಷದಲ್ಲಿ 15,946 ಕೋಟಿ ರು. ಅಸಲು ಮತ್ತು 20,100 ಕೋಟಿ ರು. ಬಡ್ಡಿ ಕಟ್ಟಲಾಗಿದೆ. 2023-24 ರ ಆರ್ಥಿಕ ವರ್ಷದಲ್ಲಿ, ಸರ್ಕಾರವು ತನ್ನ ಬಜೆಟ್ ಅಂದಾಜಿನ ಪ್ರಕಾರ, ಅಸಲು 16,626 ಕೋಟಿ ರು. ಮತ್ತು ಬಡ್ಡಿಯಾಗಿ 22,000 ಕೋಟಿ ರು. ಪಾವತಿಸಬೇಕಾಗುತ್ತದೆ. ಇದೇ ಪರಿಸ್ಥಿತಿ ಮುಂದುವರಿದೆ 2 ವರ್ಷದಲ್ಲಿ ಸಾಲ 4 ಲಕ್ಷ ಕೋಟಿ ರು.ಗೆ ಏರಬಹುದು ಎನ್ನಲಾಗಿದೆ.
ರಾಜ್ಯ ಸರ್ಕಾರದ ಪರಿಸ್ಥಿತಿ ಎಷ್ಟು ದಯನೀಯವಾಗಿದೆ ಎಂದರೆ ಸಾಲದ ಹಣ ಕಟ್ಟಲು ಬೇರೆ ಸಂಸ್ಥೆಗಳಿಂದ ಸಾಲ ಪಡೆಯುತ್ತಿದೆ.
ಪ್ರಣಯ ನಗರಿಗೆ ಹೊಸ ಹಾವಳಿ : ಮೆಟ್ರೋ ಏರ್‌ಪೋರ್ಟ್ ಹೊಟೇಲ್ ಥಿಯೇಟರ್ ಎಲ್ಲೆಂದರಲ್ಲಿ ತಿಗಣೆಗಳ ದರ್ಬಾರ್
38 ಸಾವಿರ ಕೋಟಿಯಿಂದ 3.2 ಲಕ್ಷ ಕೋಟಿಗೆ:
2002 ರಲ್ಲಿ ಅಂದಿನ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ (Amarinder Singh)ಅವರ ಸರ್ಕಾರವು ಮೊದಲ ಬಾರಿಗೆ ಅಧಿಕಾರ ವಹಿಸಿಕೊಂಡಾಗ, ಬಾಕಿ ಸಾಲ ಕೇವಲ 36,854 ಕೋಟಿ ರು. ಸಾಲ ಇತ್ತು. ಅದು ಬಿಜೆಪಿ-ಅಕಾಲಿದಳ 2017ರಲ್ಲಿ ಅಧಿಕಾರ ಬಿಟ್ಟಾಗ 2.08 ಲಕ್ಷ ಕೋಟಿಗೆ ಏರಿತು. ನಂತರದ ಕಾಂಗ್ರೆಸ್ ಹಾಗೂ ಈಗಿನ ಆಪ್ ಆಳ್ವಿಕೆಗಳು ಸಾಲವನ್ನು 3.27 ಲಕ್ಷ ಕೋಟಿ ರು.ಗೆ ಏರಿಸಿವೆ.
ಆಕಸ್ಮಿಕವಾಗಿ 'ಮಮ್ಮಿ' ಆದವನಿಗೆ 128 ವರ್ಷಗಳ ಬಳಿಕ ಅಂತ್ಯಕ್ರಿಯೆ ಭಾಗ್ಯ
ಉಚಿತ ಕೊಡುಗೆಗಳ ಎಫೆಕ್ಟ್?:
ಪಂಜಾಬ್ ಸಾಲದ ಸುಳಿಗೆ ಕಾರಣ ಹುಡುಕುತ್ತ ಹೊರಟರೆ ಉಚಿತ ಕೊಡುಗೆಗಳು ಇದಕ್ಕೆ ಕಾರಣ ಇರಬಹುದು ಎಂದು ತಿಳಿದುಬರುತ್ತದೆ. 1997ರಲ್ಲಿ ಅಂದಿನ ಸಿಎಂ ರಾಜಿಂದರ್ ಕೌರ್ ಭಟ್ಟಲ್ ರೈತರು, ಉದ್ದಿಮೆಗಳಿಗೆ ಸಬ್ಸಿಡಿ ದರದಲ್ಲಿ ವಿದ್ಯುತ್ ಪ್ರಕಟಿಸಿದ್ದರು. ಹೀಗಾಗಿ 26 ವರ್ಷದಲ್ಲಿ ಸರ್ಕಾರ 1.38 ಲಕ್ಷ ಕೋಟಿ ರು. ವಿದ್ಯುತ್ ಸಬ್ಸಿಡಿಗಾಗಿ ಬಳಸಿದೆ. ಈಗ ವರ್ಷಕ್ಕೆ 20 ಸಾವಿರ ಕೋಟಿ ರು. ವಿದ್ಯುತ್ ಸಬ್ಸಿಡಿಗೆ ನೀಡಲಾಗುತ್ತದೆ.
ಇನ್ನು ಮಹಿಳೆಯರಿಗೆ ಉಚಿತ ಸಾರಿಗೆಗಾಗಿ 547 ಕೋಟಿ ರು.ಗಳನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿದೆ. ಇದು ಬೊಕ್ಕಸದ ಮೇಲೆ ಮತ್ತಷ್ಟು ಹೊರೆ ಹೆಚ್ಚಿಸಿದೆ