ಗೆಳೆಯನಿಂದ ಕಳ್ಳತನದ ಟ್ರೈನಿಂಗ್‌: ಗುರುದಕ್ಷಿಣೆ ಕೊಡಲು ಬೈಕ್ ಕದ್ದ ಬಾಲಕ ಅಂದರ್..!

ಗೆಳೆಯನಿಗೆ ದುಬಾರಿ ಗಿಫ್ಟ್ ನೀಡಲು 17ರ ಹುಡುಗನೋರ್ವ ಬೈಕ್ ಕದ್ದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದ್ದು, ಬಾಲಾಪರಾಧ ಕಾಯ್ದೆಯಡಿ ಈ ಹುಡುಗನನ್ನು ಪೊಲೀಸರು ಬಂಧಿಸಿದ್ದಾರೆ.

17 Year old boy arrested for Bike theft, who steals bike to buy costly gift to his friend akb

ಲಕ್ನೋ: ಗೆಳೆಯನಿಗೆ ದುಬಾರಿ ಗಿಫ್ಟ್ ನೀಡಲು 17ರ ಹುಡುಗನೋರ್ವ ಬೈಕ್ ಕದ್ದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದ್ದು, ಬಾಲಾಪರಾಧ ಕಾಯ್ದೆಯಡಿ ಈ ಹುಡುಗನನ್ನು ಪೊಲೀಸರು ಬಂಧಿಸಿದ್ದಾರೆ. ತನ್ನ ಸ್ನೇಹಿತನ 18ನೇ ಹುಟ್ಟುಹಬ್ಬಕ್ಕೆ ದುಬಾರಿ ಗಿಫ್ಟ್‌ ನೀಡಿ ಇಂಪ್ರೆಸ್ ಮಾಡಲು ಬಯಸಿದ್ದ. ಆದರೆ ಹಣವಿಲ್ಲದ ಕಾರಣ ಸುಲಭವಾಗಿ ಹಣ ಮಾಡಲು ಬೈಕ್ ಕಳ್ಳತನ ಮಾಡಿದ್ದ. ಹೀಗಾಗಿ ಈತ ಮನೆಯೊಂದರ ಮುಂದೆ ನಿಲ್ಲಿಸಿದ್ದ ಬೈಕೊಂದನ್ನು ಎಗರಿಸಿದ್ದ. ಇದಕ್ಕಾಗಿ ಈತ ಡುಪ್ಲಿಕೇಟ್ ಕೀ ಬಳಸಿದ್ದ.  ನಂತರ ಸೌಂಡ್ ಬರದಂತೆ ಬೈಕ್‌ನ್ನು ಸ್ವಲ್ಪ ದೂರದವರೆಗೆ ಎಳೆದುಕೊಂಡು ಹೋಗಿ ನಂತರ ಸುರಕ್ಷಿತ ಜಾಗದಲ್ಲಿರಿಸಿದ್ದ ಆತ ಕದ್ದ ಬೈಕನ್ನು ಮಾರಲು ಗ್ರಾಹಕರನ್ನು ಹುಡುಕುತ್ತಿದ್ದ. 

ಇತ್ತ ಬೈಕ್ ಮಾಲೀಕ ರಾಮ್ ಸಹರೆ ವಿಶ್ವಕರ್ಮ, ಮನೆ ಮುಂದೆ ನಿಲ್ಲಿಸಿದ್ದ ತಮ್ಮ ಬೈಕ್ (Bike Theft) ಕಾಣಿಸದೇ ಇರುವುದರಿಂದ ಆತಂಕಗೊಂಡು ಸಿಸಿಟಿವಿ ದೃಶ್ಯಾವಳಿ (CCTV Footage) ಗಮನಿಸಿದಾಗ ಹುಡುಗನೋರ್ವ ಬೈಕ್ ಎಗರಿಸಿಕೊಂಡು ಹೋಗಿರುವುದು ಸಿಸಿಟಿವಿಯಲ್ಲಿ ಸೆರೆ ಆಗಿದೆ. ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ಆರಂಭಿಸಿದ ಪೊಲೀಸರು ಬೈಕ್ ಕದ್ದ ಅಪ್ರಾಪ್ತನನ್ನು ವಶಕ್ಕೆ ಪಡೆದಿದ್ದಾರೆ. 

ತಾನೇ ಹೆಣೆದ ಬಲೆಗೆ ಬಿದ್ದ ಚೀನಾ ಸಬ್‌ಮರೀನ್‌: ಚೀನಾ ನೌಕಾಪಡೆಯ ಸಿಬ್ಬಂದಿ ಸೇರಿ 55 ಜನ ಬಲಿ

ಕಳವಿಗೆ ಗೆಳೆಯನೇ ಗುರು
ಘಟನೆಗೆ ಸಂಬಂಧಿಸಿದಂತೆ ಎಸ್‌ಎಚ್‌ಒ ವಿಕ್ರಮ್ ಸಿಂಗ್ ಮಾಹಿತಿ ನೀಡಿದ್ದು, ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. 
ಆತ ತನ್ನ ಆತ್ಮೀಯ ಗೆಳೆಯನ ಹುಟ್ಟುಹಬ್ಬಕ್ಕೆ ದುಬಾರಿ ಉಡುಗೊರೆ ಖರೀದಿಸಲು ಬೈಕ್ ಕದ್ದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಯ ಸ್ನೇಹಿತನ ವಿರುದ್ಧವೂ ಕಳ್ಳತನ ಪ್ರಕರಣವಿದ್ದು, ಆತನಿಗೆ ಮಂಗಳವಾರಕ್ಕೆ 18 ವರ್ಷ ತುಂಬಿತ್ತು ಎಂದು ಹೇಳಿದ್ದಾರೆ. 

ಉಚಿತ ಕೊಡುಗೆಗಳಿಂದ ದಿವಾಳಿಯತ್ತ ಖಜಾನೆ: 3.27 ಲಕ್ಷ ಕೋಟಿ ರು. ಸಾಲದ ಸುಳಿಯಲ್ಲಿ ಪಂಜಾಬ್‌

ಈತನ ಸ್ನೇಹಿತನೇ ಕಳ್ಳತನದ ಬಗ್ಗೆ ಈತನಿಗೆ ತರಬೇತಿ ನೀಡಿದ್ದ, ಕಳ್ಳತನದ ಬಗ್ಗೆ ತನಗೆ ತಿಳಿದಿದ್ದ ಎಲ್ಲಾ ತಂತ್ರಗಳನ್ನು ತನಗಿಂತ ಸಣ್ಣವನಾದ ಅಪ್ರಾಪ್ತ ಬಾಲಕನಿಗೆ ಆತನ ಸ್ನೇಹಿತ ಹೇಳಿಕೊಟ್ಟಿದ್ದ, ಆತನ ಪಾಲಿಗೆ ಈ ಗೆಳೆಯ ಕಳ್ಳತನದ ವಿಚಾರದಲ್ಲಿ ಗುರುವಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ. ಬಾಲಕನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಭಾರತದ ತಾಕೀತು ಬಳಿಕ ಮೆತ್ತಗಾದ ಕೆನಡಾ: ಖಲಿಸ್ತಾನಿಗಳ ಓಸಿಐ ಸ್ಥಾನಮಾನ ಕಟ್‌?

ಹೆಚ್ಚು ಇಳುವರಿಯ ಪುಸಾ ಭತ್ತ ನಿಷೇಧಿಸಲು ಪಂಜಾಬ್‌ ನಿರ್ಧಾರ

Latest Videos
Follow Us:
Download App:
  • android
  • ios