ತಾನೇ ಹೆಣೆದ ಬಲೆಗೆ ಬಿದ್ದ ಚೀನಾ ಸಬ್‌ಮರೀನ್: ಚೀನಾ ನೌಕಾಪಡೆಯ ಸಿಬ್ಬಂದಿ ಸೇರಿ 55 ಜನ ಬಲಿ
- ಹಳದಿ ಸಮುದ್ರದ ಆಳದಲ್ಲಿ ಆ.21ರಂದೇ ನಡೆದ ಘಟನೆ ತಡವಾಗಿ ಬೆಳಕಿಗೆ
- ಬ್ರಿಟನ್ ಗುಪ್ತಚರ ದಳ ವರದಿ । ಆದರೆ ಇಂಥ ಘಟನೆ ನಡೆದೇ ಇಲ್ಲ ಎಂದ ಚೀನಾ!
- ಅಮೆರಿಕ, ವೈರಿದೇಶಗಳ ಜಲಾಂತರ್ಗಾಮಿಗಳ ಸಿಲುಕಿಸಲು ಚೀನಾ ಹಾಕಿದ್ದ ಬಲೆ
ಬೀಜಿಂಗ್: ಅಮೆರಿಕನ್ ಮತ್ತು ಬ್ರಿಟಿಷ್ ಹಡಗುಗಳನ್ನು ಸಿಲುಕಿಸುವ ಉದ್ದೇಶದಿಂದ ತಾನೇ ಹಾಕಿದ ಬಲೆಗೆ, ಚೀನಾದ ಪರಮಾಣು-ಚಾಲಿತ ಜಲಾಂತರ್ಗಾಮಿಯೊಂದು ಸಿಲುಕಿದ ಪರಿಣಾಮ, 55 ಚೀನೀಯರು ಸಾವನ್ನಪ್ಪಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇಂಥ ಘಟನೆಯನ್ನು ಚೀನಾ ನಿರಾಕರಿಸಿದ್ದರೂ ಬ್ರಿಟನ್ ಗುಪ್ತಚರ ದಳ ಖಚಿತಪಡಿಸಿದೆ.
ಹಳದಿ ಸಮುದ್ರದಲ್ಲಿ ಶಾಂಡಾಂಗ್ ಪ್ರಾಂತ್ಯದ (Shandong province) ಸನಿಹ ಈ ಘಟನೆ ಸಂಭವಿಸಿದ್ದು, ಬಲೆಗೆ ಸಿಲುಕಿದ್ದರಿಂದ ‘093-417 ಜಲಾಂತರ್ಗಾಮಿ’ ಕಾರ್ಯನಿರ್ವಹಣೆಯಲ್ಲಿ ವಿಫಲಗೊಂಡಿದೆ. ಅದರಲ್ಲಿದ್ದ ಆಕ್ಸಿಜನ್ ಖಾಲಿ ಆಗಿದೆ. ಹೀಗಾಗಿ ಇದರಲ್ಲಿದ್ದ ಕ್ಯಾಪ್ಟನ್ ಹಾಗೂ 21 ಅಧಿಕಾರಿಗಳು ಸೇರಿ 55 ಜನರು ಸಾವನ್ನಪ್ಪಿದ್ದಾರೆ ಎಂದು ಬ್ರಿಟನ್ ಗುಪ್ತಚರ ದಳ ಹೇಳಿದೆ.
ಭಾರತದ ತಾಕೀತು ಬಳಿಕ ಮೆತ್ತಗಾದ ಕೆನಡಾ: ಖಲಿಸ್ತಾನಿಗಳ ಓಸಿಐ ಸ್ಥಾನಮಾನ ಕಟ್?
ಚೀನಾ ನೌಕಾಪಡೆಯು (China Navy) ಸಮುದ್ರದಾಳದಲ್ಲಿ ಅಮೆರಿಕ ಹಾಗೂ ಇತರ ದೇಶಗಳ ಜಲಾಂತರ್ಗಾಮಿಗಳನ್ನು ಸಿಲುಕಿಸಲು ಕಬ್ಬಿಣದ ಚೈನಿನ ಬಲೆ ಹಾಗೂ ಲಂಗರು ಹಾಕಿತ್ತು. ಅದಕ್ಕೆ ಚೀನಾ ಜಲಾಂತರ್ಗಾಮಿ (china Submarine)ಸಿಲುಕಿದೆ. ಆಗ ಅದರಲ್ಲಿನ ಎಂಜಿನ್ ವ್ಯವಸ್ಥೆಯೇ ಹಾಳಾಗಿದೆ. 6 ತಾಸು ಕಾಲ ಇದರ ದುರಸ್ತಿಗೆ ಯತ್ನ ಮಾಡಲಾಯಿತಾದರೂ ಆಕ್ಸಿಜನ್ ವ್ಯವಸ್ಥೆ ವಿಫಲಗೊಂಡು ಜಲಾಂತರ್ಗಾಮಿಯಲ್ಲಿದ್ದವರು ಸಾವನ್ನಪ್ಪಿದರು ಎನ್ನಲಾಗಿದೆ.
ಪತಿ ರಿಷಿಗಾಗಿ ಮೊದಲ ಬಾರಿ ರಾಜಕೀಯ ವೇದಿಕೆ ಏರಿದ ಇನ್ಪಿ ಮೂರ್ತಿ ಪುತ್ರಿ ಅಕ್ಷತಾ ಮೂರ್ತಿ
ಕಳೆದ ತಿಂಗಳೇ ಈ ಜಲಾಂತರ್ಗಾಮಿಯ ಹಣೆಬರಹದ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ (Social Media) ವದಂತಿ ಹಬ್ಬಿದ್ದವು. ಆದರೆ ಊಹಾಪೋಹಗಳನ್ನು ಚೀನಾ ತಳ್ಳಿಹಾಕಿತ್ತು. ಚೀನಾ ಬಳಿ ಇಂಥ 6 ಜಲಾಂತರ್ಗಾಮಿಗಳಿವೆ. ವೈರಿಗಳ ಮೇಲೆ ದಾಳಿಗೆ ಇವನ್ನು ಬಳಸಲಾಗುತ್ತದೆ.
ಆಕಸ್ಮಿಕವಾಗಿ 'ಮಮ್ಮಿ' ಆದವನಿಗೆ 128 ವರ್ಷಗಳ ಬಳಿಕ ಅಂತ್ಯಕ್ರಿಯೆ ಭಾಗ್ಯ