Asianet Suvarna News Asianet Suvarna News

Watch: 'ಇನ್ನು 2-3 ವರ್ಷದಲ್ಲಿ ಮೋದಿಯನ್ನು ಕೊಲ್ತೇವೆ..' ಪಂಜಾಬ್‌ ರೈತನ ಧಮ್ಕಿ!

PM Modi Will Be Killed Punjab Farmer threat ಸೋಶಿಯಲ್‌ ಮೀಡಿಯಾದಲ್ಲಿ ಈ ವಿಡಿಯೋ ಭಾರೀ ವೈರಲ್‌ ಆಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೇರವಾಗಿ ಜೀವ ಬೆದರಿಕೆ ಹಾಕಲಾಗಿದೆ. ಮುಂದಿನ 2 ಅಥವಾ ಮೂರು ವರ್ಷದ ಒಳಗಾಗಿ ಮೋದಿಯನ್ನು ಹತ್ಯೆ ಮಾಡುವುದಾಗಿ ಇದರಲ್ಲಿ ಹೇಳಲಾಗಿದೆ.

threat from Punjab farmer Modi Assassination  in 2-3 years san
Author
First Published Feb 17, 2024, 7:46 PM IST

ನವದೆಹಲಿ (ಫೆ.17): ನರೇಂದ್ರ ಮೋದಿ ಸರ್ಕಾರ ದೇಶದಲ್ಲಿ ಬೆಳೆಯುವ ಎಲ್ಲಾ ಬೆಳೆಗಳಿಗೆ ಎಂಎಸ್‌ಪಿ ನೀಡಬೇಕು ಈ ನಿಟ್ಟಿನಲ್ಲಿ ಕಾನೂನು ಜಾರಿ ಮಾಡಬೇಕು ಎನ್ನುವುದು ಸೇರಿದಂತೆ ಹತ್ತು ಹಲವು ಬೇಡಿಕೆಗಳೊಂದಿಗೆ ಪಂಜಾಬ್‌ ಹಾಗೂ ಹರಿಯಾಣದಲ್ಲಿ ಭಾರೀ ಪ್ರತಿಭಟನೆ ನಡೆಯುತ್ತಿದೆ. ಆದರೆ, ರೈತರು ನೀಡುತ್ತಿರುವ ಹೇಳಿಕೆಗಳು ಪ್ರತಿಭಟನೆಗಳ ದಾರಿ ತಪ್ಪಿಸುತ್ತಿದೆ ಎನ್ನುವುದು ಗೋಚರವಾಗುತ್ತಿದೆ. ದೇಶದ ಸರ್ಕಾರ, ಭಾರತದ ಅಖಂಡತೆ ಹಾಗೂ ಪ್ರಧಾನಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಸಾಕಷ್ಟು ವಿಡಿಯೋಗಳು ಬಂದಿವೆ. ರೈತರ ದೆಹಲಿ ಚಲೋ ಪ್ರತಿಭಟನೆಯನ್ನು ಇಲ್ಲಿಯವರೆಗೂ ಪೊಲೀಸರು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಅವರ ಕೆಲವು ವಲಯದ ರೈತರಲ್ಲಿ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿರುವುದು ಗೋಚರವಾಗುತ್ತಿದೆ. ಇದು ಎಲ್ಲಿಯವರೆಗೆ ಹೋಗಿ ತಲುಪಿದೆಯೆಂದರೆ, ಇನ್ನು ಕೆಲವೇ ವರ್ಷಗಳಲ್ಲಿ ಮೋದಿಯನ್ನು ಹತ್ಯೆ ಮಾಡುವ ಹೇಳಿಕೆ ನೀಡುವಲ್ಲಿಯವರೆಗೆ ಹೋಗಿದೆ.

ಪ್ರಧಾನಿ ಮೋದಿ ಅವರಿಗೆ ಜೀವ ಬೆದರಿಕೆ ಒಡ್ಡಿರುವ ಸಾಕಷ್ಟು ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಕೆಲ ದಿನಗಳ ಹಿಂದೆ ಒಬ್ಬ ರೈತ, ಹಿಂದೆ ಪಂಜಾಬ್‌ಗೆ ಬಂದಿದ್ದಾಗ ಮೋದಿ ಸುಲಭವಾಗಿ ಪಾರಾಗಿ ಹೋಗಿದ್ದರು. ಇನ್ನೊಮ್ಮೆ ಪಂಜಾಬ್‌ಗೆ ಕಾಲಿಟ್ಟಲ್ಲಿ ಪರಿಸ್ಥಿತಿ ಹಾಗಿರೋದಿಲ್ಲ. ಅವರಿಗೆ ಪಾಠ ಕಲಿಸುತ್ತೇವೆ ಎಂದು ಹೇಳಿದ್ದರು. ಆದರೆ, ಈಗ ಪ್ರಧಾನಿ ನರೇಂದ್ರ ಮೋದಿಗೆ ಜೀವ ಬೆದರಿಕೆ ಒಡ್ಡುವ ಪ್ರಮಾಣದಲ್ಲಿ ಇನ್ನಷ್ಟು ಏರಿಕೆಯಾಗಿದೆ. ಹೊಸ ವಿಡಿಯೋದಲ್ಲಿ, ಪಂಜಾಬ್‌ನ ರೈತರು ಪ್ರಧಾನಿ ಮೋದಿಗೆ ಮುಕ್ತವಾಗಿಯೇ ಬೆದರಿಕೆ ಹಾಕಿದ್ದು, ಮುಂದಿನ 2-3 ವರ್ಷಗಳಲ್ಲಿ ಮೋದಿಯನ್ನು ಹತ್ಯೆ ಮಾಡುವುದಾಗಿ ತಿಳಿಸಿದ್ದಾರೆ.

‘ಮುಂಬರುವ 2-3 ವರ್ಷಗಳಲ್ಲಿ ನಿಮಗೆ ‘ಮೋದಿ ಜೀ ಕೊಲ್ಲಲ್ಪಟ್ಟರು’ ಎಂಬ ಸುದ್ದಿ ಬರಲಿದೆ’ ಎಂದು ಪ್ರತಿಭಟನಾಕಾರರೊಬ್ಬರು ಹೇಳುತ್ತಿರುವುದನ್ನು ವಿಡಿಯೋದಲ್ಲಿ ಕೇಳಬಹುದು. ವೀಡಿಯೊದ ಸತ್ಯಾಸತ್ಯತೆ ಇನ್ನೂ ತಿಳಿದುಬಂದಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಧಾನಿ ವಿರುದ್ಧ ಬೆದರಿಕೆಗಳು ಬರುತ್ತಿರುವ ರೀತಿಗೆ ಬಳಕೆದಾರರು ಕೋಪಗೊಂಡಿದ್ದಾರೆ.

Farmers Protest in Delhi: ಡ್ರೋನ್ ಮೇಲೆ ಟೆನಿಸ್ ಬಾಲ್ ದಾಳಿ: ಪೊಲೀಸರ ತಂತ್ರಗಳಿಗೆ ಅನ್ನದಾತರ ಪ್ರತಿತಂತ್ರ..!

ಪಂಜಾಬ್‌ನ ಆಮ್ ಆದ್ಮಿ ಪಕ್ಷದ ಸರ್ಕಾರವು ರಾಜ್ಯದಲ್ಲಿ ಪ್ರತ್ಯೇಕತಾವಾದಿ ಸಿದ್ಧಾಂತಕ್ಕೆ ಮುಕ್ತ ಅವಕಾಶ ನೀಡುತ್ತಿದೆ ಎಂದು ಜನರು ಟೀಕಿಸಿದ್ದಾರೆ. ಈ ವಿಚಾರದಲ್ಲಿ ಅವರ ಮೌನದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಹಿಂದೆ ರೈತನೊಬ್ಬ ಪ್ರಧಾನಿ ನರೇಂದ್ರ ಮೋದಿಗೆ ಬಹಿರಂಗವಾಗಿ ಬೆದರಿಕೆ ಹಾಕಿದ ದಿನಗಳ ಕೆಲಚೇ ದಿನಗಳಲ್ಲಿ ಹೊಸ ವಿಡಿಯೋ ಬಂದಿದೆ. ಪ್ರಧಾನಿ ಮತ್ತೊಮ್ಮೆ ಪಂಜಾಬ್‌ಗೆ ಬಂದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹಿಂದಿನ ವಿಡಿಯೋದಲ್ಲಿ ತಿಳಿಸಲಾಗಿತ್ತು. ಪಂಜಾಬ್ ನಿಂದ ದೆಹಲಿಗೆ ಪ್ರತಿಭಟನೆಗೆ ತೆರಳುತ್ತಿದ್ದ ರೈತರನ್ನು ಹರಿಯಾಣದ ಗಡಿಯಲ್ಲಿ ಪೊಲೀಸರು ತಡೆದಿದ್ದಾರೆ.  ಇದರಿಂದಾಗಿ ಈ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

Farmers Protest: 'ದೆಹಲಿ ಚಲೋ'ಗೆ ಬೆಸ್ತು ಬಿದ್ದ ಪೊಲೀಸ್‌ ಪಡೆ: ಖಾಕಿ ಡ್ರೋನ್‌ಗೆ ಟಕ್ಕರ್‌ ಕೊಟ್ಟ ರೈತರ ಗಾಳಿಪಟಗಳು !

Follow Us:
Download App:
  • android
  • ios