Asianet Suvarna News Asianet Suvarna News

ಮನೆಯಿಂದ ಮತ ಚಲಾಯಿಸಿದ ಅಡ್ವಾಣಿ, ಮನಮೋಹನ್ ಸಿಂಗ್

80 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಚುನಾವಣಾ ಆಯೋಗ ಜಾರಿಗೆ ತಂದಿರುವ ಮನೆಯಿಂದಲೇ ಮತದಾನ ಯೋಜನೆ ಅಡಿಯಲ್ಲಿ ದೆಹಲಿಯ ಮತದಾರರಾದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಮಾಜಿ ಉಪಪ್ರಧಾನಿ ಎಲ್‌.ಕೆ ಅಡ್ವಾಣಿ ಶನಿವಾರ ತಮ್ಮ ಮನೆಗಳಲ್ಲಿಯೇ ಮತ ಚಲಾಯಿಸಿದ್ದಾರೆ. 

Lok sabha chunav 2024 LK Advani and Manmohan Singh who voted from home rav
Author
First Published May 19, 2024, 8:00 AM IST

ನವದೆಹಲಿ: 80 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಚುನಾವಣಾ ಆಯೋಗ ಜಾರಿಗೆ ತಂದಿರುವ ಮನೆಯಿಂದಲೇ ಮತದಾನ ಯೋಜನೆ ಅಡಿಯಲ್ಲಿ ದೆಹಲಿಯ ಮತದಾರರಾದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಮಾಜಿ ಉಪಪ್ರಧಾನಿ ಎಲ್‌.ಕೆ ಅಡ್ವಾಣಿ ಶನಿವಾರ ತಮ್ಮ ಮನೆಗಳಲ್ಲಿಯೇ ಮತ ಚಲಾಯಿಸಿದ್ದಾರೆ. 

ಸಿಂಗ್ ಮತ್ತು ಅಡ್ವಾಣಿಯವರಂತೆಯೇ , ಮಾಜಿ ಉಪ ಪ್ರಧಾನಿ ಮೊಹಮ್ಮದ್ ಹಮೀದ್ ಅನ್ಸಾರಿ ಮತ್ತು ಕೇಂದ್ರದ ಮಾಜಿ ಸಚಿವ ಮುರುಳಿ ಮನೋಹರ್ ಜೋಷಿ ಕೂಡ ದೆಹಲಿಯಲ್ಲಿ ತಮ್ಮ ನಿವಾಸದಲ್ಲಿಯೇ ಮತ ಚಲಾಯಿಸಿದ್ದಾರೆ. ದೆಹಲಿಯಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ.25ರಂದು ಮತದಾನ ನಡೆಯಲಿದೆ

ಆಂಧ್ರಪ್ರದೇಶದಲ್ಲಿ ಚುನಾವಣೆ ಮುಗಿದ ಬೆನ್ನಲ್ಲೇ ತಿರುಪತಿಯಲ್ಲಿ ಭಕ್ತ ಪ್ರವಾಹ 

ನಾಳೆ 5 ನೇ ಹಂತದ ಚುನಾವಣೆ

ಲೋಕಸಭೆಯ 5ನೇ ಹಂತದ ಚುನಾವಣೆ ಮೇ 20 ರಂದು ನಡೆಯಲಿದೆ. ಈ ಹಂತದಲ್ಲಿ 8 ರಾಜ್ಯಗಳ 49 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಒಟ್ಟು 695 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಶನಿವಾರಕ್ಕೆ ಅಂತ್ಯವಾಗಿದೆ.

ಉತ್ತರ ಪ್ರದೇಶದ 14 ಕ್ಷೇತ್ರಗಳು, ಮಹಾರಾಷ್ಟ್ರದ 13, ಪಶ್ಚಿಮ ಬಂಗಾಳದ 7, ಬಿಹಾರದ 5, ಒಡಿಶಾದ 5, ಜಾರ್ಖಂಡ್‌ 3 ಹಾಗೂ ಲಡಾಖ್‌ ಹಾಗೂ ಜಮ್ಮ ಮತ್ತು ಕಾಶ್ಮೀರದಲ್ಲಿ ತಲಾ ಒಂದು ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ರಾಹುಲ್‌ ಗಾಂಧಿ ಹಿಡಿದಿರುವುದು ಭಾರತ ಅಲ್ಲ, ಚೀನಾ ಸಂವಿಧಾನ ಪುಸ್ತಕ : ಹಿಮಂತ

ರಾಹುಲ್ ಗಾಂಧಿ, ಸ್ಮೃತಿ ಇರಾನಿ, ಲಾಲು ಪ್ರಸಾದ್‌, ರಾಜ್‌ನಾಥ್‌ ಸಿಂಗ್‌, ಓಮರ್‌ ಅಬ್ದುಲ್ಲಾ, ಪಿಯೂಷ್‌ ಗೋಯಲ್‌, ರಾಜೀವ್‌ ಪ್ರತಾಪ್ ರೂಢಿ, ರೋಹಿಣಿ ಅಚಾರ್ಯ, ಚಿರಾಸ್‌ ಪಾಸ್ವಾನ್‌, ಸೇರಿದಂತೆ ಹಲವು ಅಭ್ಯರ್ಥಿಗಳು ಕಣದಲ್ಲಿದ್ದಾರೆ.

Latest Videos
Follow Us:
Download App:
  • android
  • ios