ಅಬ್ಬಬ್ಬಾ..ಏನೆಲ್ಲಾ ಮಾಡ್ತಾರಪ್ಪಾ, ಸರ್ಜರಿ ಮೂಲಕ ದೇಹದ ಮೇಲೆ ನಾಲ್ಕು ನಿಪ್ಪಲ್ ಸೇರಿಸಿಕೊಂಡ ವ್ಯಕ್ತಿ!
ಮನುಷ್ಯನ ದೇಹದಲ್ಲಿ ಸಾಮಾನ್ಯವಾಗಿ ಎರಡು ನಿಪ್ಪಲ್ ಇರೋದು ಸಾಮಾನ್ಯ.ಆದ್ರೆ ಇಲ್ಲೊಂದೆಡೆ ವ್ಯಕ್ತಿಯೊಬ್ಬರು ಸರ್ಜರಿ ಮೂಲಕ ನಾಲ್ಕು ಹೆಚ್ಚುವರಿ ಸಿಲಿಕೋನ್ ಮೊಲೆತೊಟ್ಟುಗಳನ್ನು ಸರ್ಜರಿ ಮೂಲಕ ದೇಹಕ್ಕೆ ಸೇರಿಸಿಕೊಂಡಿದ್ದಾರೆ. ಆ ಬಗ್ಗೆ ಮಾಹಿತಿ ಇಲ್ಲಿದೆ.
ವ್ಯಕ್ತಿಯೊಬ್ಬರು ಇತ್ತೀಚೆಗೆ ನಾಲ್ಕು ಹೆಚ್ಚುವರಿ ಸಿಲಿಕೋನ್ ಮೊಲೆತೊಟ್ಟುಗಳನ್ನು ಸರ್ಜರಿ ಮೂಲಕ ದೇಹಕ್ಕೆ ಸೇರಿಸಿಕೊಂಡಿರುವ ಘಟನೆ ಅಮೇರಕಾದಲ್ಲಿ ನಡೆದಿದೆ. ಹ್ಯಾರಿ ಹೂಫ್‌ಕ್ಲೋಪೆನ್ ದೇಹ ಮಾರ್ಪಾಡು ತಜ್ಞ ಸ್ಟೀವ್ ಹಾವರ್ತ್ ನೆರವಿನೊಂದಿಗೆ ದೇಹಕ್ಕೆ ಹೆಚ್ಚುವರಿ ಮೊಲೆತೊಟ್ಟನ್ನು ಸೇರಿಸಿಕೊಂಡರು. ನೈಸರ್ಗಿಕ ಪುರುಷ ಮೊಲೆತೊಟ್ಟುಗಳ ಆಕಾರದಲ್ಲಿರುವ ನಾಲ್ಕು ಸಬ್ಡರ್ಮಲ್ ಸಿಲಿಕೋನ್ ಇಂಪ್ಲಾಂಟ್‌ಗಳನ್ನು ಸರ್ಜರಿ ಮೂಲಕ ಹ್ಯಾರಿ ದೇಹಕ್ಕೆ ಸೇರಿಸಲಾಯತು. ಸರ್ಜರಿಯಾದ ಬಳಿಕ ಸಂಪೂರ್ಣವಾಗಿ ಗುಣಮುಖರಾಗಲು ಹ್ಯಾರಿ ಬರೋಬ್ಬರಿ ನಾಲ್ಕು ತಿಂಗಳ ಕಾಲ ಕಾದಿದ್ದಾರೆ ಎಂದು ತಿಳಿದುಬಂದಿದೆ.
ಸರ್ಜರಿಯ ತಿಂಗಳುಗಳ ನಂತರ ಅವರು ಕೊಲೊರಾಡೋ ಮೂಲದ ಟ್ಯಾಟೂ ಕಲಾವಿದ ಏಂಜೆಲ್‌ನ ಬಳಿಗೆ ಹೋಗಿ ಸಿಲಿಕೋನ್ ಇಂಪ್ಲಾಂಟ್‌ಗಳನ್ನು ನೈಸರ್ಗಿಕವಾಗಿ ಕಾಣುವ ರೀತಿಯಲ್ಲಿ ಹಚ್ಚೆ ಹಾಕುವಂತೆ ಕೇಳಿಕೊಂಡರು. ಕಳೆದ ತಿಂಗಳು ಈ ವೀಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಯಿತು. ನಿಪ್ಪಲ್‌ನ್ನು ಮರುಸೃಷ್ಟಿಸುವ ವಿಧಾನ ಸುಲಭವೆಂದು ಜನರಿಗೆ ತಿಳಿಯಪಡಿಸಲು ಹ್ಯಾರಿ ಈ ರೀತಿ ಮಾಡಿದರು. ಸ್ತನಛೇದನಕ್ಕೆ ಒಳಗಾಗುವ ಜನರಿಗೆ ಅಥವಾ ಲಿಂಗ-ದೃಢೀಕರಣ ಶಸ್ತ್ರಚಿಕಿತ್ಸೆಗಳನ್ನು ಬಯಸುವ ಟ್ರಾನ್‌ಜೆಂಡರ್ ಜನರಿಗೆ ಈ ವಿಧಾನವು ಸಹಾಯಕವಾಗಿರುತ್ತದೆ.
4 ವರ್ಷದ ಮಗುವಿಗೆ ಬೆರಳಿನ ಬದಲಿಗೆ ನಾಲಿಗೆಗೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು!
'ವೈದ್ಯಕೀಯ ಕ್ಷೇತ್ರವು ಇಂಥಾ ಹೊಸ ಸರ್ಜರಿಗಳನ್ನು ಅಳವಡಿಸಿಕೊಳ್ಳಲು ಸಿದ್ಧವಾಗಿದೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಇದು ನಾನು ಮಾಡಿದ ಅತ್ಯುತ್ತಮ ಫಲಿತಾಂಶವನ್ನು ಹೊರತಂದ ಸರ್ಜರಿಯಾಗಿದೆ' ಎಂದು ತಿಳಿಸಿದ್ದಾರೆ. ಏಂಜೆಲ್ ಮತ್ತು ಸ್ಟೀವ್ ಮಾಡಿದ ಸರ್ಜರಿಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಈ ಕಾರ್ಯವಿಧಾನಕ್ಕೆ ಒಳಗಾಗಿದ್ದಕ್ಕಾಗಿ ಮತ್ತು ಅದರ ಬಗ್ಗೆ ಜಾಗೃತಿ ಮೂಡಿಸಿದ್ದಕ್ಕಾಗಿ ಹ್ಯಾರಿಯನ್ನು ಹೊಗಳಿದರು.
ಇನ್‌ಸ್ಟಾಗ್ರಾಂನ ಒಬ್ಬ ಬಳಕೆದಾರರು, 'ಬಹಳಷ್ಟು ಟ್ರಾನ್ಸ್ ಜನರು ಇಂಪ್ಲಾಂಟ್ಸ್ ಮತ್ತು ಅಥವಾ ಹಚ್ಚೆಯಿಂದ ಪ್ರಯೋಜನ ಪಡೆಯಬಹುದು' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, 'ಇಂಥಾ ಸರ್ಜರಿ ಸಂಪೂರ್ಣವಾಗಿ ನಂಬಲಾಗದವು. ಮತ್ತು ಪುನರ್ನಿರ್ಮಾಣ ಔಷಧದಲ್ಲಿ ಈ ಕಸ್ಟಮ್ ಮೋಡ್ ಎಲ್ಲಿಗೆ ಹೋಗಬಹುದು ಎಂಬುದನ್ನು ನೋಡಲು ನಾನು ತುಂಬಾ ಉತ್ಸುಕನಾಗಿದ್ದೇನೆ. ಸ್ಟೀವ್ ಮತ್ತು ನಿಮ್ಮಿಂದ ಅದ್ಭುತ ಕೆಲಸವಾಗಿದೆ' ಎಂದು ಹೊಗಳಿದ್ದಾರೆ.
ಕೋಲಾರ ಸರ್ಕಾರಿ ಆಸ್ಪತ್ರೆ ನಿರ್ಲಕ್ಷ್ಯ, ಹೆರಿಗೆ ಶಸ್ತ್ರಚಿಕಿತ್ಸೆ ಬಳಿಕ ಹೊಟ್ಟೆಯಲ್ಲಿ 3 ಅಡಿ ಬಟ್ಟೆ ಬಿಟ್ಟ ವೈದ್ಯೆ!