ತಿರುಪ್ಪರನ್‌ಕುಂದ್ರಂ ಬೆಟ್ಟದ ಮೇಲಿರುವ ದರ್ಗಾದಲ್ಲಿ ಕಾರ್ತಿಕ ದೀಪಂ ಬೆಳಗಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಇದರ ಹಿನ್ನೆಲೆಯಲ್ಲಿ ಭದ್ರತೆಗಾಗಿ ಸಿಆರ್‌ಪಿಎಫ್ ಪಡೆಗಳನ್ನು ನಿಯೋಜಿಸಲಾಗಿದೆ.

ಚೆನ್ನೈ (ನ.27): ಮಧುರೈನ ತಿರುಪ್ಪರನ್‌ಕುಂದ್ರಂ ಬೆಟ್ಟದ ಮೇಲಿರುವ ಹಜರತ್ ಸುಲ್ತಾನ್ ಸಿಕಂದರ್ ಬಾದುಷಾ ಔಲಿಯಾ ದರ್ಗಾದಲ್ಲಿ (Hazrat Sultan Sikandar Badusha Auliya Dargah) ವಿಶೇಷ ಪ್ರಾರ್ಥನೆ ಸಲ್ಲಿಸಲು ಕೇರಳ ಸೇರಿದಂತೆ ವಿವಿಧ ಪ್ರದೇಶಗಳ ಸ್ಥಳೀಯರು ಜಮಾಯಿಸಿದ್ದಾರೆ. ಬೆಟ್ಟದ ಮೇಲಿರುವ 'ದೀಪತೂನ್‌' ಕಲ್ಲಿನ ಕಂಬದ ಮೇಲೆ ಇಂದು (ನವೆಂಬರ್ 28) ಸಾಂಪ್ರದಾಯಿಕ ಕಾರ್ತಿಕ ದೀಪಂ ದೀಪ ಬೆಳಗಿಸುವಂತೆ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನದ ಹಿನ್ನೆಲೆಯಲ್ಲಿ, ಭದ್ರತೆ ಮತ್ತು ಕಣ್ಗಾವಲು ಕರ್ತವ್ಯಕ್ಕಾಗಿ ತಮಿಳುನಾಡಿನ ತಿರುಪ್ಪರನ್‌ಕುಂದ್ರಂನಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

ವಿಶೇಷ ಪ್ರಾರ್ಥನೆಗಳಲ್ಲಿ ಪಾಲ್ಗೊಳ್ಳಲು ಪುರುಷರು, ಮಹಿಳೆಯರು ಮತ್ತು ಯುವಕರು ಸೇರಿದಂತೆ ಸಾಕಷ್ಟು ಮಂದಿ ದರ್ಗಾಕ್ಕೆ ಆಗಮಿಸಿದ್ದಾರೆ. ಸಂದರ್ಶಕರು ಬೆಳಗಿನ ಜಾವವೇ ಸ್ಥಳದಲ್ಲಿ ಸೇರಲು ಆರಂಭಿಸಿದ್ದು, ಬೆಟ್ಟದ ಮೇಲಿರುವ ದೇಗುಲದ ಕಡೆಗೆ ಅವರ ಸಂಚಾರವನ್ನು ನಿಯಂತ್ರಿಸಲು ಪೊಲೀಸ್ ಸಿಬ್ಬಂದಿ ಭದ್ರತಾ ವ್ಯವಸ್ಥೆಗಳನ್ನು ಮಾಡಿದ್ದಾರೆ.

ಬೆಳಗ್ಗೆ 6.15ರಿಂದ ತಪಾಸಣೆ ಮತ್ತು ಭದ್ರತಾ ವ್ಯವಸ್ಥೆ

ದರ್ಗಾಕ್ಕೆ ತೆರಳುವ ಭಕ್ತರು ಮತ್ತು ಸಂದರ್ಶಕರಿಗಾಗಿ ವಿಶೇಷ ಭದ್ರತಾ ಕ್ರಮ ಕೂಡ ರೂಪಿಸಲಾಗಿದೆ. ಬೆಳಗ್ಗೆ 6.15ರಿಂದ ಪೊಲೀಸ್ ಸಿಬ್ಬಂದಿ ಸಂದರ್ಶಕರನ್ನು ಸರತಿ ಸಾಲಿನಲ್ಲಿ (Queues) ನಿಲ್ಲುವಂತೆ ಸೂಚಿಸಿ, ಭದ್ರತಾ ವ್ಯವಸ್ಥೆಗಳ ಭಾಗವಾಗಿ ಅವರ ವೈಯಕ್ತಿಕ ವಿವರಗಳನ್ನು ಸಂಗ್ರಹಿಸಿದ್ದಾರೆ. ಪ್ರಾರ್ಥನೆ ಸಲ್ಲಿಸಲು ಸೇರಿದ್ದವರು ಸಮಗ್ರ ಭದ್ರತಾ ತಪಾಸಣೆಗಳಿಗೆ ಒಳಪಟ್ಟ ನಂತರವಷ್ಟೇ ಬೆಟ್ಟದ ಮೇಲೆ ಸಾಗಲು ಅವಕಾಶ ನೀಡಲಾಗಿದೆ. ಅಗತ್ಯ ಪರಿಶೀಲನೆ ಮತ್ತು ಭದ್ರತಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಸಂದರ್ಶಕರು ದರ್ಗಾ ತಲುಪುವುದನ್ನು ಖಚಿತಪಡಿಸಲು ಈ ವ್ಯವಸ್ಥೆಗಳನ್ನು ಜಾರಿಗೆ ತರಲಾಗಿದೆ. ದೊರೆತಿರುವ ಮಾಹಿತಿಯ ಪ್ರಕಾರ, ಪ್ರಾರ್ಥನೆ ಸಲ್ಲಿಸಲು ದರ್ಗಾಕ್ಕೆ ಇನ್ನೂ ಹಲವ ಉ ಜನರು ಭೇಟಿ ನೀಡುವ ನಿರೀಕ್ಷೆಯಿದೆ.

'ದೀಪತೂನ್‌' ದೀಪ ಬೆಳಗಲು ಸಿಆರ್‌ಪಿಎಫ್ ನಿಯೋಜನೆ

ಬೆಟ್ಟದ ಮೇಲಿರುವ 'ದೀಪತೂನ್‌' ಕಲ್ಲಿನ ಕಂಬದ ಮೇಲೆ ಇಂದು ಸಾಂಪ್ರದಾಯಿಕ ಕಾರ್ತಿಕ ದೀಪಂ ದೀಪ ಬೆಳಗಿಸುವಂತೆ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನದ ಬೆನ್ನಲ್ಲೇ ಭದ್ರತೆ ಹಾಗೂ ಕಣ್ಗಾವಲು ಕರ್ತವ್ಯಕ್ಕೆ ಸಿಆರ್‌ಪಿಎಫ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಕೇಂದ್ರೀಯ ಅರೆಸೇನಾ ಪಡೆಯ ಒಂದು ಕಂಪನಿಯನ್ನು (One company) ಈ ಪ್ರದೇಶದಲ್ಲಿ ನಿಯೋಜಿಸಲಾಗಿದ್ದು, ಹೆಚ್ಚಿನ ಕಾರ್ಯಾಚರಣಾ ಸೂಚನೆಗಳಿಗಾಗಿ ಕಾಯುತ್ತಿರುವುದಾಗಿ ಹಿರಿಯ ಸಿಆರ್‌ಪಿಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ಒಂದು ಕಂಪನಿ ಸಿಆರ್‌ಪಿಎಫ್ ಅನ್ನು ನಿಯೋಜಿಸಲಾಗಿದೆ. ಹಿರಿಯ ಅಧಿಕಾರಿಗಳಿಂದ ನಮಗೆ ನಿರ್ದೇಶನಗಳು ಬರಲಿವೆ" ಎಂದು ಅವರು ಹೇಳಿದ್ದಾರೆ.

ಮದುರೈನ ತಿರುಪ್ಪರನ್‌ಕುಂದ್ರಂ ಬೆಟ್ಟದ ಮೇಲಿರುವ 'ದೀಪತೂನ್‌' ಕಲ್ಲಿನ ಕಂಬದ ಮೇಲೆ ನವೆಂಬರ್ 28ರಂದು ಸಾಂಪ್ರದಾಯಿಕ ಕಾರ್ತಿಕ ದೀಪಂ ದೀಪ ಬೆಳಗಿಸುವಂತೆ ಶುಕ್ರವಾರ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು; ಪ್ರತಿಯೊಬ್ಬ ಭಕ್ತರಿಗೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿ, ಸುಗಮ ನಿರ್ವಹಣೆಗಾಗಿ ಸಿಆರ್‌ಪಿಎಫ್ ನಿಯೋಜಿಸಲು ಆದೇಶಿಸಿತ್ತು. ತಿರುಪ್ಪರನ್‌ಕುಂದ್ರಂ ಬೆಟ್ಟದ ಮೇಲಿರುವ ದೀಪತೂನ್‌ ಕಲ್ಲಿನ ಕಂಬದ ಬಳಿ ದೀಪ ಬೆಳಗುವಂತೆ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ನೀಡಿದ್ದರೂ, ಅಲ್ಲಿ ಕಾರ್ತಿಕ ದೀಪಂ ಬೆಳಗದ ವಿವಾದದ ನಡುವೆ ಈ ಬೆಳವಣಿಗೆ ನಡೆದಿದೆ. ಮಂಗಳವಾರ ನಡೆದ ವಾರ್ಷಿಕ ಕಾರ್ತಿಕ ದೀಪಂ ಹಬ್ಬದ ಅಂಗವಾಗಿ ಉಚ್ಚಿ ಪಿಳ್ಳೈಯಾರ್ ದೇವಸ್ಥಾನದ (Uchi Pillaiyar Temple) ಬಳಿ ಮಹಾ ದೀಪಂ ಬೆಳಗಲಾಗಿದ್ದು, ನಿಗದಿತ ಕಾರ್ಯಕ್ರಮಕ್ಕೆ ಮುನ್ನ ದೀಪತೂನ್‌ ಬಳಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.