Asianet Suvarna News Asianet Suvarna News

ದೇಗುಲದಿಂದ ಕದ್ದ ವಸ್ತುಗಳನ್ನು ಕ್ಷಮಾಪಣೆ ಪತ್ರದೊಂದಿಗೆ ವಾಪಸ್‌ ನೀಡಿದ ಕಳ್ಳ..!

ಶಾಂತಿನಾಥ ದಿಗಂಬರ್‌ ಜೈನ ಮಂದಿರದಿಂದ 10 ಬೆಳ್ಳಿ ವಸ್ತುಗಳನ್ನು ಕಳ್ಳತನ ಮಾಡಿದ್ದ ಕಳ್ಳ, ಶುಕ್ರವಾರ ಆ ವಸ್ತುಗಳನ್ನು ದೇವಸ್ಥಾನದ ಕಚೇರಿ ಎದುರು ವಾಪಸ್‌ ಇಟ್ಟಿದ್ದಾನೆ. ಬ್ಯಾಗ್‌ನಲ್ಲಿ ಕ್ಷಮಾಪಣಾ ಪತ್ರವನ್ನೂ ಇಟ್ಟಿದ್ದು, ‘ಕೃತ್ಯದ ಬಳಿಕ ತೀವ್ರ ಕಷ್ಟಗಳನ್ನು ಅನುಭವಿಸಿದ್ದೇನೆ, ನನ್ನನ್ನು ಕ್ಷಮಿಸಿ’ ಎಂದು ಪತ್ರದಲ್ಲಿ ಬರೆದಿದ್ದಾನೆ.

thief returns valuables stolen from madhya pradesh temple with apology note ash
Author
First Published Oct 31, 2022, 3:15 PM IST

ದೇವಸ್ಥಾನದಿಂದ (Temple) ಬೆಳ್ಳಿ (Silver) ಹಾಗೂ ತಾಮ್ರದ (Brass) ವಸ್ತುಗಳನ್ನು ಕದ್ದಿದ್ದ ಕಳ್ಳ (Thief) ಕ್ಷಮಾಪಣಾ ಪತ್ರದೊಂದಿಗೆ (Apology Letter) ದೇವಸ್ಥಾನಕ್ಕೆ ಮರಳಿಸಿರುವ ಅಚ್ಚರಿ ಘಟನೆ ಮಧ್ಯಪ್ರದೇಶದಲ್ಲಿ (Madhya Pradesh) ನಡೆದಿದೆ. ಕಳ್ಳತನದ ಬಳಿಕವೂ ತಾನು ಕಷ್ಟಗಳನ್ನು ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ದೇವಸ್ಥಾನದ ವಸ್ತುಗಳನ್ನು ಮರಳಿಸುತ್ತಿದ್ದೇನೆ ಎಂದು ಹೇಳಿದ್ದಾನೆ. ಅಕ್ಟೋಬರ್‌ 24ರಂದು ಇಲ್ಲಿನ ಶಾಂತಿನಾಥ ದಿಗಂಬರ್‌ ಜೈನ ಮಂದಿರದಿಂದ (Shantinath Digambar Jain Temple) 10 ಬೆಳ್ಳಿ ವಸ್ತುಗಳನ್ನು ಕಳ್ಳತನ ಮಾಡಿದ್ದ. ಶುಕ್ರವಾರ ಕಳ್ಳತನ ಮಾಡಿದ್ದ ವಸ್ತುಗಳನ್ನು ದೇವಸ್ಥಾನದ ಕಚೇರಿ ಎದುರು ಇಟ್ಟಿದ್ದಾನೆ. ಬ್ಯಾಗ್‌ನಲ್ಲಿ ಕ್ಷಮಾಪಣಾ ಪತ್ರ ಇಟ್ಟಿದ್ದು, ‘ಕೃತ್ಯದ ಬಳಿಕ ತೀವ್ರ ಕಷ್ಟಗಳನ್ನು ಅನುಭವಿಸಿದ್ದೇನೆ, ನನ್ನನ್ನು ಕ್ಷಮಿಸಿ’ ಎಂದು ಪತ್ರದಲ್ಲಿ ಬರೆದಿದ್ದಾನೆ.

ಮಧ್ಯ ಪ್ರದೇಶದ ಬಾಲಾಘಾಟ್‌ ಜಿಲ್ಲೆಯ ದೇವಸ್ಥಾನವೊಂದರಿಂದ ಕದ್ದಿದ್ದ ಬೆಳ್ಳಿ ಹಾಗೂ ತಾಮ್ರದ ವಸ್ತುಗಳನ್ನು ಹಿಂತಿರುಗಿಸಿದ್ದು, ಇದರೊಂದಿಗೆ ಕ್ಷಮಾಪಣಾ ಪತ್ರವನ್ನು ಸಹ ಬರೆದಿದ್ದಾರೆ. ತನ್ನ ಕೃತ್ಯದಿಂದ ಸಂಕಟದಿಂದ ಅನುಭವಿಸಿದೆ ಎಂದು ಪತ್ರದಲ್ಲಿ ಅವರು ಬರೆದುಕೊಂಡಿದ್ದಾರೆ ಎಂದೂ ಪೊಲೀಸರು ಭಾನುವಾರ ತಿಳಿಸಿದ್ದಾರೆ. 

ಇದನ್ನು ಓದಿ: ಭಕ್ತನಂತೆ ಬಂದು ದೇವಸ್ಥಾನದ ಹುಂಡಿ ಕಳವು; ಖತರ್ನಾಕ್ ಕಳ್ಳ ಕುಣಿಗಲ್ ಸಿದ್ದಿಕ್ ಬಂಧನ

ಅಕ್ಟೋಬರ್ 24 ರಂದು ಲ್ಯಾಮ್ಟಾ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಿನಾಥ ದಿಗಂಬರ ಜೈನ ದೇವಸ್ಥಾನದಿಂದ 10 ಅಲಂಕಾರಿಕ ಬೆಳ್ಳಿಯ ತುಂಡುಗಳು ಮತ್ತು 3 ಹಿತ್ತಾಳೆ ವಸ್ತುಗಳನ್ನು ಅಪರಿಚಿತ ಕಳ್ಳ ಕದ್ದಿದ್ದಾನೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ದಾಬರ್ ತಿಳಿಸಿದ್ದು, ಅಂದಿನಿಂದ ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ ಎಂದೂ ಅವರು ಹೇಳಿದರು.

ಆದರೆ, ಶುಕ್ರವಾರ, ಜೈನ್‌ ಕುಟುಂಬದ ಸದಸ್ಯರು ಲ್ಯಾಮ್ಟಾದ ಪಂಚಾಯತ್ ಕಚೇರಿ ಬಳಿಯ ಹೊಂಡದಲ್ಲಿ ಬ್ಯಾಗ್‌ವೊಂದು ಬಿದ್ದಿರುವುದನ್ನು ಗಮನಿಸಿದ ನಂತರ ಅವರು ಪೊಲೀಸರು ಮತ್ತು ಸಮುದಾಯದ ಸದಸ್ಯರಿಗೆ ಮಾಹಿತಿ ನೀಡಿದರು ಎಂದೂ ಈ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. ಆ ಬ್ಯಾಗ್‌ನಿಂದ ಕದ್ದ ಮಾಲನ್ನು ವಶಪಡಿಸಿಕೊಳ್ಳಲಾಗಿದ್ದು, ಕಳ್ಳ ಕ್ಷಮಾಪಣೆ ಪತ್ರವನ್ನು ಸಹ ಬರೆದಿದ್ದಾನೆ ಎಂದೂ ಅವರು ಹೇಳಿದರು.

ಇದನ್ನೂ ಓದಿ: ಮಸೀದಿಯಲ್ಲಿ ಆಶ್ರಯ ಪಡೆದ ಅಪರಿಚಿತರು; ಕಳ್ಳರೆಂದು ಭಾವಿಸಿ ಮುತ್ತಿಗೆ ಹಾಕಿದ ಗ್ರಾಮಸ್ಥರು!

“ನನ್ನ ಕೃತ್ಯಕ್ಕಾಗಿ ನಾನು ಕ್ಷಮೆಯಾಚಿಸುತ್ತಿದ್ದೇನೆ. ನಾನು ತಪ್ಪು ಮಾಡಿದೆ, ಕ್ಷಮಿಸಿ. ಕಳ್ಳತನದ ನಂತರ ನಾನು ತುಂಬಾ ಸಂಕಟ ಅನುಭವಿಸಿದೆ’’ ಎಂದು ಕಳ್ಳ ಬರೆದ ಪತ್ರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಕಾಣಿಸಿಕೊಮಡಿದ್ದು, ವೈರಲ್‌ ಆಗಿದೆ.

ಇನ್ನು, ಕದ್ದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಮತ್ತು ಕಳ್ಳನನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದೂ ವಿಜಯ್ ದಾಬರ್ ಹೇಳಿದರು.

ಇದನ್ನೂ ಓದಿ: Uttar Pradesh Crime: ಟಾಯ್ಲೆಟ್‌ ಸೀಟ್‌ ಕದ್ದನೆಂದು ದಲಿತನಿಗೆ ಥಳಿತ, ಮುಖಕ್ಕೆ ಮಸಿ; ಬಿಜೆಪಿ ಮುಖಂಡ ಪರಾರಿ

Follow Us:
Download App:
  • android
  • ios