ಭಕ್ತನಂತೆ ಬಂದು ದೇವಸ್ಥಾನದ ಹುಂಡಿ ಕಳವು; ಖತರ್ನಾಕ್ ಕಳ್ಳ ಕುಣಿಗಲ್ ಸಿದ್ದಿಕ್ ಬಂಧನ

ಇವನು ಫಿಲ್ಡ್‌ಗಿಳಿದ್ರೆ ಸಾಕು, ಒಂದು  ದೇವಸ್ಥಾನದ ಹುಂಡಿ ಕಳ್ಳತಮವಾಗುತ್ತೆ ಇಲ್ಲ ಪ್ರಯಾಣಿಕರ ಚಿನ್ನಾಭರಣ ಕಾಣೆಯಾಗಿತ್ತೆ. ಅಂತಹ ನಟೋರಿಯಸ್ ಕ್ರಿಮಿನಲ್‌ನನ್ನು ಉಪ್ಪಾರ್ ಪೇಟೆ ಪೊಲೀಸರು ಬಂಧಿಸಿದ್ದಾರೆ. ಸಿದ್ದಿಕ್@ ಕುಣಿಗಲ್ ಸಿದ್ದಿಕ್ ಎಂಬುವವನೇ ಖತರ್ನಾಕ್ ಖದೀಮ.

Police have arrested the accused in two separate theft cases bengaluru rav

ಬೆಂಗಳೂರು (ಅ.30) : ಇವನು ಫಿಲ್ಡ್‌ಗಿಳಿದ್ರೆ ಸಾಕು, ಒಂದು  ದೇವಸ್ಥಾನದ ಹುಂಡಿ ಕಳ್ಳತಮವಾಗುತ್ತೆ ಇಲ್ಲ ಪ್ರಯಾಣಿಕರ ಚಿನ್ನಾಭರಣ ಕಾಣೆಯಾಗಿತ್ತೆ. ಅಂತಹ ನಟೋರಿಯಸ್ ಕ್ರಿಮಿನಲ್‌ನನ್ನು ಉಪ್ಪಾರ್ ಪೇಟೆ ಪೊಲೀಸರು ಬಂಧಿಸಿದ್ದಾರೆ. ಸಿದ್ದಿಕ್@ ಕುಣಿಗಲ್ ಸಿದ್ದಿಕ್ ಎಂಬ ಈ ಆರೋಪಿ, ದೇವಸ್ಥಾನದಲ್ಲಿ ಭಕ್ತನಂತೆ ಬಂದು ದೇವಸ್ಥಾನದ ಹುಂಡಿಯನ್ನ ಖಾಲಿ ಮಾಡುತ್ತಿದ್ದ ಖತರ್ನಾಕ್ ಕಳ್ಳ. ಹುಂಡಿ ಕಳ್ಳತನ ಮಾಡ್ತಿದ್ದಂತೆ ಸುಳಿವು ಸಿಗದಂತೆ ಪರಾರಿಯಾಗಿಬಿಡ್ತಿದ್ದ. ದೇವಸ್ಥಾನದ ಹುಂಡಿ ಕಳ್ಳತನದ ಬಗ್ಗೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ಬೆನ್ನು ಹತ್ತಿದ ಪೊಲೀಸರಿಗೆ ಈ ಖದೀಮ ಸಿಕ್ಕಿಬಿದ್ದಿದ್ದಾನೆ. 

ಬೆಂಗಳೂರು: ಪಬ್‌, ಬಾರ್‌ ಖರ್ಚಿಗಾಗಿ 30 ಬೈಕ್‌ ಎಗರಿಸಿದ್ದ ಖದೀಮರ ಬಂಧನ

ಉಪ್ಪಾರಪೇಟೆ ಪೊಲೀಸರು ಖದೀಮನನ್ನ ಬಂಧಿಸಿ ಕರೆತಂದು ವಿಚಾರಿಸಿದಾಗ ಕಳ್ಳತನ ಬಯಲಾಗಿದೆ. ಇವನು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನ ಹಿಂಬಾಲಿಸಿ ಅವರ ಬಳಿ ಇದ್ದ ಚಿನ್ನಾಭರಣವನ್ನ ಕದಿಯುತ್ತಿದ್ದ ಅಷ್ಟೇ ಅಲ್ಲ, ಅಕ್ಕ ಪಕ್ಕದ ದೇವಸ್ಥಾನದಲ್ಲಿ ಜನಜಂಗುಳಿ ನೋಡಿಕೊಂಡು ಭಕ್ತನಂತೆ ನುಗ್ಗಿ ಹುಂಡಿ ಹಣ ಕಳುವು ಮಾಡುತ್ತಿದ್ದ. 

ಸದ್ಯ ಪೊಲೀಸರು ಖದೀಮನನ್ನ ಬಂಧಿಸಿದ್ದಾರೆ. 3ಲಕ್ಷ 75 ಸಾವಿರ ಮೌಲ್ಯದ  77 ಗ್ರಾಂ ಚಿನ್ನಾಭರಣವನ್ನ ವಶಕ್ಕೆ ಪಡೆಯಲಾಗಿದೆ. ಇನ್ನಷ್ಟು ಪ್ರಕರಣಗಳಲ್ಲಿ ಇವನ ಕೈಚಳಕ ಇರುವ ಬಗ್ಗೆ ಸಂಶಯ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಬೀಗ ಹಾಕಿದ ಮನೆಗಳೇ ಇವನ ಟಾರ್ಗೆಟ್!

 ಬೀಗ ಹಾಕಿರುವ ಮನೆಗಳನ್ನ ಟಾರ್ಗೆಟ್ ಮಾಡಿ ಕಳ್ಳತನ ಮಾಡ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಮ್ರಾನ್ ಖಾನ್ @ಕೀಡ್ ಹಾಗೂ ಸಲ್ಮಾನ್ ಖಾನ್ ಬಂಧಿತ ಆರೋಪಿಗಳು. ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಹಿನ್ನಲೆ, ತನಿಖೆಗಿಳಿದ ಪೊಲೀಸರು ಆರೋಪಿಗಳನ್ನ ಪತ್ತೆ ಹಚ್ಚಿ ಬಂಧಿಸಿದ್ದಾರೆ. ಆರೋಪಿಗಳಿಂದ 5 ಲಕ್ಷ ಮೌಲ್ಯದ 100 ಗ್ರಾಂ ಚಿನ್ನಾಭರಣವನ್ನ ವಶಕ್ಕೆ ಪಡೆಯಲಾಗಿದೆ. ಇನ್ನು ಇವರನ್ನ ವಿಚಾರಣೆ ನಡೆಸಿದಾಗ ಈ ಹಿಂದೆ ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೂಡ ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಿದ್ಯುತ್‌ ಕಂಬಗಳಲ್ಲಿದ್ದ ಅ​ಲ್ಯೂಮಿನಿಯಂ ಪಟ್ಟಿಗಳೇ ಕಳವು

Latest Videos
Follow Us:
Download App:
  • android
  • ios