Asianet Suvarna News Asianet Suvarna News

Uttar Pradesh Crime: ಟಾಯ್ಲೆಟ್‌ ಸೀಟ್‌ ಕದ್ದನೆಂದು ದಲಿತನಿಗೆ ಥಳಿತ, ಮುಖಕ್ಕೆ ಮಸಿ; ಬಿಜೆಪಿ ಮುಖಂಡ ಪರಾರಿ

ಕಳ್ಳತನದ ಆರೋಪದ ಮೇಲೆ ದಲಿತ ವ್ಯಕ್ತಿಯೊಬ್ಬನನ್ನು ಥಳಿಸಿ, ಆತನ ತಲೆ ಬೋಳಿಸಿ, ಮುಖಕ್ಕೆ ಮಸಿ ಬಳಿಯಲಾಗಿದೆ. ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಹಾರ್ದಿಯಾ ಪ್ರದೇಶದಲ್ಲಿ ಮನೆಯೊಂದರಿಂದ ಟಾಯ್ಲೆಟ್ ಸೀಟ್ ಕದ್ದ ಆರೋಪದ ಮೇಲೆ ಯುವಕನನ್ನು ಕಂಬಕ್ಕೆ ಕಟ್ಟಿ ಹಾಕಲಾಗಿದೆ.

dalit man thrashed head shaved face blackened on allegations of theft in ups bahraich ash
Author
First Published Oct 24, 2022, 10:49 AM IST

ಬಹ್ರೈಚ್‌ (ಉತ್ತರ ಪ್ರದೇಶ): ಟಾಯ್ಲೆಟ್‌ ಸೀಟ್‌ ಕದ್ದಿದ್ದಾನೆಂದು ದಲಿತನನ್ನು ಥಳಿಸಿ ಕೂದಲು ಕತ್ತರಿಸಿ, ಮುಖಕ್ಕೆ ಮಸಿ ಬಳಿದಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ನಡೆದಿದೆ. ಬಿಜೆಪಿ ಮುಖಂಡ ರಾಧೇಶ್ಯಾಮ ಮಿಶ್ರಾ ಹಾಗೂ ಆತನ ಬೆಂಬಲಿಗರು ರಾಜೇಶ್‌ ಎಂಬ ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿಮುಖಕ್ಕೆ ಮಸಿ ಬಳಿಯುತ್ತಿರುವ ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿದೆ. ವಿಡಿಯೋದಲ್ಲಿ ಮಿಶ್ರಾ ಬೆಂಬಲಿಗರು ಕೃತ್ಯಕ್ಕೆ ಸಾಥ್‌ ನೀಡುತ್ತಿರುವುದು ಕಂಡುಬಂದಿದೆ. ಘಟನೆ ಎಲ್ಲೆಡೆ ವೈರಲ್‌ ಆಗುತ್ತಿದ್ದಂತೆ ಬಿಜೆಪಿ ಮುಖಂಡ ಮಿಶ್ರಾ ಪರಾರಿಯಾಗಿದ್ದಾನೆ. ಆದರೆ ಆತನ ಇಬ್ಬರು ಸಹಾಯಕರನ್ನು ಪೊಲೀಸರು ಬಂಧಿಸಿದ್ದಾರೆ.

ಕಳ್ಳತನದ ಆರೋಪದ ಮೇಲೆ ದಲಿತ ವ್ಯಕ್ತಿಯೊಬ್ಬನನ್ನು ಥಳಿಸಿ, ಆತನ ತಲೆ ಬೋಳಿಸಿ, ಮುಖಕ್ಕೆ ಮಸಿ ಬಳಿಯಲಾಗಿದೆ. ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಹಾರ್ದಿಯಾ ಪ್ರದೇಶದಲ್ಲಿ ಮನೆಯೊಂದರಿಂದ ಟಾಯ್ಲೆಟ್ ಸೀಟ್ ಕದ್ದ ಆರೋಪದ ಮೇಲೆ ಯುವಕನನ್ನು ಕಂಬಕ್ಕೆ ಕಟ್ಟಿ ಹಾಕಲಾಗಿದೆ. ಅಲ್ಲದೆ, ಮೂವರು ಯುವಕರು ಈತನ ಮೇಲೆ ಹಲ್ಲೆ ನಡೆಸಿದ್ದಾರೆ.

ಇದನ್ನು ಓದಿ: ದಲಿತ ಮೇಯರ್‌’ ಮೇಲೆ ಕಾಂಗ್ರೆಸ್‌ ಗೂಂಡಾವರ್ತನೆ!

ದಿನಗೂಲಿ ರಾಜೇಶ್ ಕುಮಾರ್ ಮೇಲೆ ಗುಂಪೊಂದು ಹಲ್ಲೆ ಮಾಡಿರುವ ದೃಶ್ಯಗಳು ವೈರಲ್ ಆಗಿವೆ. ವಿಡಿಯೋದಲ್ಲಿ, ಆತನ ತಲೆ ಬೋಳಿಸುತ್ತಿದ್ದು ಮತ್ತು ಆತನ ಮುಖಕ್ಕೆ ಮಸಿ ಬಳಿಯುತ್ತಿದ್ದಂತೆ ಪ್ರೇಕ್ಷಕರು ಹರ್ಷೋದ್ಗಾರ ಮಾಡುವುದನ್ನು ಮತ್ತು ವಿಡಿಯೊ ರೆಕಾರ್ಡ್ ಮಾಡುವುದನ್ನು ಕಾಣಬಹುದು. ರಾಜೇಶ್ ಕುಮಾರ್‌ನನ್ನು ಪೊಲೀಸರಿಗೆ ಒಪ್ಪಿಸುವ ಬದಲು ಜನಸಮೂಹವು ಥಳಿಸಿ ಹಲ್ಲೆ ನಡೆಸಿದೆ. ಯುವಕರ ಹುಬ್ಬು ಮತ್ತು ಮೀಸೆಯ ಒಂದು ಭಾಗವನ್ನೂ ಬೋಳಿಸಿದ್ದಾರೆ.

ಇನ್ನು, ದಲಿತನಿಗೆ ಹಲ್ಲೆ ಮಾಡಿ, ಮಸಿ ಬಳಿದಿರುವ ಸಂಬಂಧ ಕೋಟ್ಯಾ ಗ್ರಾಮದ ನಿವಾಸಿಗಳಾದ ಮೂವರ ವಿರುದ್ಧ ಹಲ್ಲೆ ಮತ್ತು ಕ್ರಿಮಿನಲ್ ಬೆದರಿಕೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ಕಾಯ್ದೆ ಅಡಿಯಲ್ಲೂ ಆರೋಪಿಗಳ ವಿರುದ್ಧ ಕೇಸ್‌ ದಾಖಲಿಸಲಾಗಿದೆ.

ಇದನ್ನೂ ಓದಿ: ದಲಿತ ಕಾರ್ಮಿಕರ ಮೇಲೆ ಹಲ್ಲೆ ಪ್ರಕರಣ; ಪ್ರತಿದೂರು ದಾಖಲಿಸಿದ ಜಗದೀಶಗೌಡ ಪತ್ನಿ ಅಶ್ವಿನಿ

ಸ್ಥಳೀಯ ಬಿಜೆಪಿ ಮುಖಂಡರಾದ ರಾಧೇಶ್ಯಾಮ್ ಮಿಶ್ರಾ, ಅವರ ಸಹಾಯಕರಾದ ರೇಣು ವಾಜಪೇಯ್ ಮತ್ತು ರಾಕೇಶ್ ತಿವಾರಿ ಅವರು ಹಲ್ಲೆಯಲ್ಲಿ ಭಾಗಿಯಾಗಿರುವ ಅಪರಾಧಿಗಳು ಎಂದು ಗುರುತಿಸಲಾಗಿದೆ. ಪೊಲೀಸರು ಇಬ್ಬರು ಸಹಾಯಕರನ್ನು ಬಂಧಿಸಿದ್ದು, ಬಿಜೆಪಿ ಮುಖಂಡ ಮಿಶ್ರಾ ಪರಾರಿಯಾಗಿದ್ದಾರೆ.

ಈ ಸಂಬಂಧ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಈಗಾಗಲೇ ಇಬ್ಬರನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕುಮಾರ್ ತಿಳಿಸಿದ್ದಾರೆ. ರಾಜೇಶ್ ಕಳ್ಳತನ ಮಾಡಲು ಬಂದಿದ್ದ ಎಂದು ಆರೋಪಿಗಳು ಪೊಲೀಸರಿಗೆ ತಿಳಿಸಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: Chikkamagaluru; ದಲಿತ ಕಾರ್ಮಿಕರನ್ನ ಕೂಡಿ ಹಾಕಿ ಹಲ್ಲೆ ಪ್ರಕರಣ, ಹಲ್ಲೆಯಿಂದ ನಡೀತಾ ಗರ್ಭಪಾತ!?

Follow Us:
Download App:
  • android
  • ios