'ಪಾಕ್‌ನಲ್ಲಿ ಅಣುಬಾಂಬ್ ಇದೆ' ಎಂಬ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದಾರೆ. ಅದರೊಂದಿಗೆ ಪಾಕಿಸ್ತಾನದ ಆರ್ಥಿಕತೆಯ ಬಗ್ಗೆಯೂ ಗೇಲಿ ಮಾಡಿದ್ದಾರೆ.
ನವದೆಹಲಿ (ಮೇ.11): ಕಾಂಗ್ರೆಸ್‌ನ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಅವರು ಪಾಕ್ ಬಳಿ ಅಣುಬಾಂಬ್ ಇದೆ ಎನ್ನುವ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಟೀಕಾಪ್ರಹಾರ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಪ್ರತಿ ದಿನ ಒಂದಲ್ಲಾ ಒಂದು ರೀತಿಯಲ್ಲಿ ದೇಶದ ಜನರನ್ನು ಹೆದರಿಸುವ ಮಾರ್ಗಗಳನ್ನು ಹುಡುಕುತ್ತಿದೆ ಎಂದು ಆರೋಪ ಮಾಡಿದ್ದಾರೆ. ಇನ್ನು ಪಾಕಿಸ್ತಾನದ ಬಳಿ ಅಣು ಬಾಂಬ್ ಇದೆ ಎನ್ನುವ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ವೇಳೆ ಪ್ರಧಾನಿ ಮೋದಿ ಪಾಕಿಸ್ತಾನದ ಆರ್ಥಿಕತೆಯ ಬಗ್ಗೆಯೂ ಗೇಲಿ ಮಾಡಿದ್ದಾರೆ. ತನ್ನ ಅಣು ಬಾಂಬ್‌ಅನ್ನು ಮಾರಾಟ ಮಾಡಲು ಪಾಕಿಸ್ತಾನ ಜನರನ್ನು ಹುಡುಕುತ್ತಿದೆ. ಆದರೆ, ಅದರ ಗುಣಮಟ್ಟ ಎಷ್ಟು ಕಳಪೆಯಾಗಿದೆ ಎಂದರೆ, ಅದನ್ನೂ ಈವರೆಗೂ ಯಾರೂ ಖರೀದಿ ಮಾಡಲು ಸಾಧ್ಯವಾಗಲಿಲ್ಲ ಎಂದಿದ್ದಾರೆ. ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರ ಹಳೆದ ಸಂದರ್ಶನವೊಂದು ಇತ್ತೀಚೆಗೆ ವೈರಲ್ ಆಗಿತ್ತು. ಇದರಲ್ಲಿ ಭಾರತವು ಪಾಕಿಸ್ತಾನದ ಜೊತೆ ಮಾತುಕತೆಯಲ್ಲಿ ತೊಡಗಬೇಕು. ಅವರ ಮಿಲಿಟರಿ ಸಾಮರ್ಥ್ಯವನ್ನು ಪ್ರಶ್ನೆ ಮಾಡೋಕೆ ಹೋಗಬಾರದು ಎಂದು ಹೇಳುವ ಮೂಲಕ ವಿವಾದ ಹುಟ್ಟುಹಾಕಿದ್ದರು. ಹಾಗೇನಾದರೂ ಆದಲ್ಲಿ ಪಾಕಿಸ್ತಾನವು ಭಾರತದ ವಿರುದ್ಧ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡಬಹುದು ಎಂದಿದ್ದರು.
ಒಡಿಶಾದ ಕಂಧಮಾಲ್‌ನಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, "ಕಾಂಗ್ರೆಸ್ ಪದೇ ಪದೇ ತನ್ನದೇ ದೇಶವನ್ನು ಹೆದರಿಸಲು ಪ್ರಯತ್ನಿಸುತ್ತದೆ. ಅವರು 'ಸಂಭಾಲ್ ಕೆ ಚಲೋ ಪಾಕಿಸ್ತಾನ್ ಕೆ ಪಾಸ್ ಆಟಂ ಬಾಂಬ್ ಹೇ ಎಂದು ಹೇಳುತ್ತಾರೆ. ಯೇ ಮಾರೆ ಪಡೆ ಲೋಗ್, ದೇಶ್ ಕೆ ಮನ್ ಕೋ ಭಿ ಮಾರ್ ರಹೇ ಹೈ' ಎಂದು ಹೇಳಿದರು. (ಈ ಜನರು ನಮಗೆ ಎಚ್ಚರಿಕೆಯಿಂದ ಇರಿ ಎಂದು ಹೇಳುತ್ತಾರೆ, ಪಾಕಿಸ್ತಾನದಲ್ಲಿ ಅಣುಬಾಂಬ್ ಇದೆ. ಅವರು ನಮ್ಮ ದೇಶದ ಮೇಲೆ ದಾಳಿ ಮಾಡುವ ಬಗ್ಗೆ ಮಾತನಾಡುತ್ತಿದ್ದಾರೆ).
"ಅವರು ಪಾಕಿಸ್ತಾನದ ಬಾಂಬ್ ಬಗ್ಗೆ ಮಾತನಾಡುತ್ತಾರೆ, ಆದರೆ ಪಾಕಿಸ್ತಾನದ ಸ್ಥಿತಿಯು ಅವರಿಗೆ ಅದನ್ನು ಹೇಗೆ ಇಟ್ಟುಕೊಳ್ಳಬೇಕು ಅನ್ನೋದೇ ತಿಳಿದಿಲ್ಲ ಮತ್ತು ಅವರು ತಮ್ಮ ಬಾಂಬ್‌ಗಳನ್ನು ಮಾರಾಟ ಮಾಡಲು ಖರೀದಿದಾರರನ್ನು ಹುಡುಕುತ್ತಿದ್ದಾರೆ ಆದರೆ ಜನರಿಗೆ ಗುಣಮಟ್ಟದ ಬಗ್ಗೆ ತಿಳಿದಿರುವುದರಿಂದ ಯಾರೂ ಖರೀದಿಸಲು ಬಯಸುವುದಿಲ್ಲ." ಹೇಳಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ಸರ್ಕಾರವು ಇಸ್ಲಾಮಾದ್ ಜೊತೆ ಬಯಸಿದಲ್ಲಿ ಕಠಿಣವಾಗಿ ಮಾತನಾಡಬಹುದು. ಆದರೆ, ನೆರೆಯ ದೇಶವನ್ನು ಗೌರವಿಸದಿದ್ದರೆ, ಅದಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಅಯ್ಯರ್ ಹೇಳಿದ್ದರು. "ಅವರ ಬಳಿ ಪರಮಾಣು ಬಾಂಬುಗಳಿವೆ. ನಮ್ಮ ಬಳಿಯೂ ಇವೆ, ಆದರೆ ಯಾರೋ ಒಬ್ಬ ಹುಚ್ಚು ವ್ಯಕ್ತಿ ಲಾಹೋರ್ ಮೇಲೆ ಬಾಂಬ್ ಹಾಕಲು ನಿರ್ಧರಿಸಿದರೆ, ವಿಕಿರಣವು ಅಮೃತಸರವನ್ನು ತಲುಪಲು 8 ಸೆಕೆಂಡುಗಳು ಸಾಕಾಗುತ್ತದೆ" ಅವರು ಎಚ್ಚರಿಸಿದ್ದಾರೆ.
ಪಾಕಿಸ್ತಾನಕ್ಕೆ ಗೌರವ ನೀಡೋದನ್ನ ಭಾರತ ಕಲಿಯಬೇಕು ಅಂದ್ರಲ್ಲ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್
ನಾವು ಅವರಿಗೆ ಗೌರವ ನೀಡಿದರೆ, ಅವರೂ ಕೂಡ ನಮ್ಮೊಂದಿಗೆ ಶಾಂತವಾಗಿ ವರ್ತಿಸುತ್ತಾರೆ. ಆದರೆ, ನಾವು ಅವರನ್ನು ಧಿಕ್ಕರಿಸಲು ತೀರ್ಮಾನ ಮಾಡಿದರೆ, ಒಬ್ಬ ಹುಚ್ಚು ವ್ಯಕ್ತಿ ಬಂದು ಬಾಂಬ್‌ಗಳನ್ನು ಉಡಾಯಿಸಲು ನಿರ್ಧಾರ ಮಾಡಿದರೆ ಏನಾಗುತ್ತದೆ ಎಂದು ಅಯ್ಯರ್ ಪ್ರಶ್ನೆ ಮಾಡಿದ್ದಾರೆ. ಅಯ್ಯರ್ ಅವರ ಹೇಳಿಕೆಗಳಿಂದ ದೂರ ಸರಿದ ಕಾಂಗ್ರೆಸ್, ಇದು ಪಕ್ಷದ ನಿಲುವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಹೇಳಿದೆ. ರಾಜಕೀಯ ಅಂಕಗಳನ್ನು ಗಳಿಸಲು ಬಿಜೆಪಿ ಉದ್ದೇಶಪೂರ್ವಕವಾಗಿ ಅಯ್ಯರ್ ಅವರ ಹಳೆಯ ಸಂದರ್ಶನವನ್ನು ತರಾಟೆಗೆ ತೆಗೆದುಕೊಂಡಿದೆ ಎಂದು ಅದು ಆರೋಪಿಸಿದೆ.
'ದೇಶದ ಕ್ಷಮೆ ಕೇಳಿ, ಇಲ್ಲವೇ ಸ್ಥಳ ಖಾಲಿ ಮಾಡಿ..' ಮಣಿಶಂಕರ್ ಅಯ್ಯರ್ ಪುತ್ರಿಗೆ ಸೊಸೈಟಿಯಿಂದ ನೋಟಿಸ್!
