'ದೇಶದ ಕ್ಷಮೆ ಕೇಳಿ, ಇಲ್ಲವೇ ಸ್ಥಳ ಖಾಲಿ ಮಾಡಿ..' ಮಣಿಶಂಕರ್‌ ಅಯ್ಯರ್‌ ಪುತ್ರಿಗೆ ಸೊಸೈಟಿಯಿಂದ ನೋಟಿಸ್‌!

ರಾಮ ಮಂದಿರದ ಕುರಿತಾಗಿ ಆಕ್ಷೇಪಾರ್ಹ ಪದಗಳನ್ನು ಬಳಸಿದ್ದ ಮಣಿಶಂಕರ್‌ ಅಯ್ಯರ್‌ ಅವರ ಪುತ್ರಿಗೆ ದೇಶದ ಕ್ಷಮೆ ಕೇಳಬೇಕು ಇಲ್ಲವೇ ಸ್ಥಳ ಖಾಲಿ ಮಾಡಬೇಕು ಎಂದು ಆಗ್ರಹಿಸಿ ಅವರು ವಾಸವಿರುವ ಹೌಸಿಂಗ್‌ ಸೊಸೈಟಿ ನೋಟಿಸ್‌ ಜಾರಿ ಮಾಡಿದೆ.
 

Congress leader Mani Shankar Aiyar daughter kept fast in protest against Ram temple society people says apologize san

ನವದೆಹಲಿ (ಜ.31): ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರ ಪುತ್ರಿ ಸುರಣ್ಯಾ ಅಯ್ಯರ್ ಅವರು ರಾಮಮಂದಿರ ನಿರ್ಮಾಣ ಹಾಗೂ ಪ್ರಾಣ ಪ್ರತಿಷ್ಠಾಪನೆ ಸಮಾರಂಭವನ್ನು ವಿರೋಧಿಸಿ ಮೂರು ದಿನಗಳ ಉಪವಾಸವನ್ನು ಆಚರಣೆ ಮಾಡಿದ್ದರು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಸನಾತನ ಧರ್ಮದ ವಿರುದ್ಧ ನಿಂದನಾತ್ಮಕ ಪದಗಳನ್ನು ಪೋಸ್ಟ್ ಮಾಡಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಅವರು ವಾಸವಿದ್ದ ಹೌಸಿಂಗ್‌ ಸೊಸೈಟಿ, ಸುರಣ್ಯಾ ಅಯ್ಯರ್ ಮತ್ತು ಮಣಿಶಂಕರ್ ಅಯ್ಯರ್ ಅವರಿಗೆ ಪತ್ರ ಬರೆದಿದ್ದು, ತಮ್ಮ ಹೇಳಿಕೆಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು, ಇಲ್ಲದಿದ್ದರೆ ಇಲ್ಲಿನ ಸೊಸೈಟಿ ತೊರೆಯಬೇಕು ಎಂದು ಕೇಳಿದೆ. ಸುರಣ್ಯಾ ಅಯ್ಯರ್ ದೆಹಲಿಯ ಜಂಗ್ಪುರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.

ಇನ್ನೊಂದೆಡೆ, ಸುರಣ್ಯಾ ಅಯ್ಯರ್ ಈ ವಿಷಯಕ್ಕೆ ಸಂಬಂಧಿಸಿದಂತೆ ಸೋಶಿಯಲ್‌ ಮೀಡಿಯಾ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಸುರಣ್ಯಾ, 'ನಾನು ಈ ಸಂಬಂಧಪಟ್ಟ ರೆಸಿಡೆಂಟ್ಸ್‌ ವೆಲ್ಫೇರ್‌ ಅಸೋಸಿಯೇಷನ್‌ (ಆರ್‌ಡಬ್ಲ್ಯೂಎ) ಸೇರಿರುವ ಕಾಲೋನಿಯಲ್ಲಿ ವಾಸ ಮಾಡುತ್ತಿಲ್ಲ. ಇನ್ನೊಂದು ವಿಚಾರ ಏನೆಂದರೆ, ನಾನು ಸದ್ಯಕ್ಕೆ ಮಾಧ್ಯಮಗಳಲ್ಲಿ ವಿಚಾರದ ಬಗ್ಗೆ ಮಾತನಾಡದೇ ಇರಲು ನಿರ್ಧಾರ ಮಾಡಿದ್ದೇನೆ. ಏಕೆಂದರೆ ಇದೀಗ ಭಾರತದಲ್ಲಿ ಮಾಧ್ಯಮಗಳು ವಿಷ ಮತ್ತು ಗೊಂದಲವನ್ನು ಹರಡುತ್ತಿವೆ. ನಿಮಗೆಲ್ಲ ನಾನು ಗೊತ್ತು. ನಾನು ಬೆಳೆದಿದ್ದೇನೆ, ಅಧ್ಯಯನ ಮಾಡಿದ್ದೇನೆ, ಕೆಲಸ ಮಾಡಿದ್ದೇನೆ ಮತ್ತು ಭಾರತದಲ್ಲಿನ ಎಲ್ಲಾ ರಾಜಕೀಯ ದೃಷ್ಟಿಕೋನಗಳ ಜನರೊಂದಿಗೆ ನನ್ನ ಇಡೀ ಜೀವನದಲ್ಲಿ ಸುಮಾರು 50 ವರ್ಷಗಳವರೆಗೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. ಸದ್ಯಕ್ಕೆ, ನಾನು ನನ್ನ ಫೇಸ್‌ಬುಕ್ ಮತ್ತು ಯೂಟ್ಯೂಬ್ ಪುಟಗಳಲ್ಲಿ ಮಾತ್ರ ನನ್ನ ಅಭಿಪ್ರಾಯಗಳನ್ನು ಹಾಕುತ್ತೇನೆ ಇದರಿಂದ ನೀವು ಅದರ ಬಗ್ಗೆ ಶಾಂತಿಯುತವಾಗಿ ಯೋಚಿಸಬಹುದು. ನಾನು ಮೀಡಿಯಾ ಸರ್ಕಸ್‌ ಅನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದೇನೆ. ಏಕೆಂದರೆ ಭಾರತದಲ್ಲಿ ನಮಗೆ ಉತ್ತಮ ರೀತಿಯ ಸಾರ್ವಜನಿಕ ವಿಚಾರಗಳು ಬೇಕು ಎಂದು ನಾನು ನಂಬುತ್ತೇನೆ. ದುರುಪಯೋಗಪಡಿಸಿಕೊಳ್ಳುವ ಬದಲು ಯೋಚಿಸಲು ಪ್ರಯತ್ನಿಸೋಣ. ಜೈ ಹಿಂದ್!' ಎಂದು ಬರೆದಿದ್ದಾರೆ.

ದೆಹಲಿಯ ಜಂಗ್ಪುರ ಪ್ರದೇಶದಲ್ಲಿ ವಾಸಿಸುತ್ತಿರುವ ಸುರಣ್ಯಾ ಅಯ್ಯರ್‌, ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ಬೆನ್ನಲ್ಲಿಯೇ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದ ಅವರು, ತಾಯಿಯ ಕೈಯಿಂದ ಒಂದು ಚಮಚ ಜೇನುತುಪ್ಪವನ್ನು ಕುಡಿದು ಉಪವಾಸ ವೃತವನ್ನು ಮುರಿದಿದ್ದೇನೆ ಎಂದು ಹೇಳಿದ್ದರು. ಸುರಣ್ಯಾ ಅವರ ಈ ಮಾತುಗಳು ಅವರ ಸೊಸೈಟಿಯ ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಈ ವಿಚಾರವಾಗಿ ಕಾಂಗ್ರೆಸ್‌ ಮುಖಂಡರ ಪುತ್ರಿ ಕ್ಷಮೆ ಯಾಚನೆ ಮಾಡಬೇಕು ಎಂದು ಆಗ್ರಹಿಸಿವೆ.

15 ದಿನಗಳ ಹಿಂದೆ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರ ಮತ್ತೊಬ್ಬ ಪುತ್ರಿ ಯಾಮಿನಿ ಅಯ್ಯರ್ ವಿಚಾರ ಕೂಡ ಸುದ್ದಿಯಾಗಿತ್ತು. ಕೇಂದ್ರ ಗೃಹ ಸಚಿವಾಲಯವು ಯಾಮಿನಿ ಅಯ್ಯರ್ ನೇತೃತ್ವದ ಪ್ರಸಿದ್ಧ ಥಿಂಕ್‌ ಟ್ಯಾಂಕ್‌  ಸೆಂಟರ್ ಫಾರ್ ಪಾಲಿಸಿ ರಿಸರ್ಚ್ (ಸಿಪಿಆರ್), ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆಯನ್ನು (ಎಫ್‌ಸಿಆರ್‌ಎ) ಉಲ್ಲಂಘನೆ ಮಾಡಿದ್ದ ಕಾರಣಕ್ಕಾಗಿ ಲೈಸೆನ್ಸ್‌ಅನ್ನು ರದ್ದು ಮಾಡಿತ್ತು. ಎಫ್‌ಸಿಆರ್‌ಎ ನಿಯಮಗಳನ್ನು ಸಿಪಿಆರ್‌ ಉಲ್ಲಂಘನೆ ಮಾಡುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸೆಂಟರ್ ಫಾರ್ ಪಾಲಿಸಿ ರಿಸರ್ಚ್ ಈ ಹಿಂದೆಯೂ ಕೇಂದ್ರ ಸರ್ಕಾರದ ರಾಡಾರ್‌ನಲ್ಲಿತ್ತು. ಈ ಥಿಂಕ್‌ ಟ್ಯಾಂಕ್‌ನ ಆದಾಯ ತೆರಿಗೆ ಸಮೀಕ್ಷೆಗಳನ್ನು ನಡೆಸಲಾಗಿತ್ತು. ಕಳೆದ ವರ್ಷ ಮಾರ್ಚ್‌ನಲ್ಲಿ ಗೃಹ ಸಚಿವಾಲಯವು ಸಿಪಿಆರ್‌ನ ಎಫ್‌ಸಿಆರ್‌ಎ ಪರವಾನಗಿಯನ್ನು ಅಮಾನತುಗೊಳಿಸಿತ್ತು. ಈಗ MHA ಯ FCRA ವಿಭಾಗವು ಅದರ ಪರವಾನಗಿಯನ್ನು ರದ್ದುಗೊಳಿಸಿದೆ.

Congress Tweet ಮೋದಿ ಭಾಷಣದ ಬೆನ್ನಲ್ಲೇ ಮಣಿಶಂಕರ್ ಅಯ್ಯರ್ ಫೋಟೋ ಟ್ವೀಟ್ ಮಾಡಿ ಗೊಂದಲ ಸೃಷ್ಟಿಸಿದ ಕಾಂಗ್ರೆಸ್!

82 ವರ್ಷದ ಮಣಿಶಂಕರ್ ಅಯ್ಯರ್ ಅವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ಮತ್ತು ಆಡಳಿತಾಧಿಕಾರಿ. ಕಾಂಗ್ರೆಸ್ ನಾಯಕ ಅಯ್ಯರ್ ಅವರು ತಮಿಳುನಾಡಿನ ಮೈಲಾಡುತುರೈ ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿದ್ದಾರೆ. ಇದಲ್ಲದೇ ರಾಜ್ಯಸಭಾ ಸಂಸದರೂ ಆಗಿದ್ದರು. ಪಾಕಿಸ್ತಾನದ ಲಾಹೋರ್‌ನಲ್ಲಿ ಜನಿಸಿದ ಮಣಿಶಂಕರ್ ಅಯ್ಯರ್ ಅವರ ಪತ್ನಿಯ ಹೆಸರು ಸುನೀತಾ ಮಣಿ ಅಯ್ಯರ್. ದಂಪತಿಗೆ ಯಾಮಿನಿ, ಸುರಣ್ಯಾ,  ಮತ್ತು ಸನಾ ಅಯ್ಯರ್ ಎಂಬ ಮೂವರು ಪುತ್ರಿಯರಿದ್ದಾರೆ.

 

 

 

‘ಮೋದಿ ನೀಚ’ ಹೇಳಿಕೆ ಮತ್ತೆ ಸಮರ್ಥಿಸಿಕೊಂಡ ಅಯ್ಯರ್‌

Latest Videos
Follow Us:
Download App:
  • android
  • ios