ಪಹಲ್ಗಾಮ್‌ನಲ್ಲಿ 26 ಜನರನ್ನು ಬಲಿಪಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಬದುಕುಳಿದವರು ಅಲ್ಲಿ ನಡೆದ ಕ್ರೌರ್ಯವನ್ನು ಎಳೆ ಎಳೆಯಾಗಿ ವಿವರಿಸಿದ್ದು, ಕೇಳುಗರ ರಕ್ತ ಬೆಚ್ಚಗಾಗಿಸುತ್ತಿದೆ. ಮಹಾರಾಷ್ಟ್ರದ ಪುಣೆ ಮೂಲದ ಸಂತೋಷ್ ಜಗದಾಳೆ ಕೂಡ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದವರಲ್ಲಿ ಒಬ್ಬರಾಗಿದ್ದು, ಅವರ ಜೊತೆಗಿದ್ದ ಕುಟುಂಬ ಭಯೋತ್ಪಾದಕರ ಕ್ರೌರ್ಯವನ್ನು ಬಿಚ್ಚಿಟ್ಟಿದೆ.
ನವದೆಹಲಿ: ಪಹಲ್ಗಾಮ್‌ನಲ್ಲಿ 26 ಜನರನ್ನು ಬಲಿಪಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಬದುಕುಳಿದವರು ಅಲ್ಲಿ ನಡೆದ ಕ್ರೌರ್ಯವನ್ನು ಎಳೆ ಎಳೆಯಾಗಿ ವಿವರಿಸಿದ್ದು, ಕೇಳುಗರ ರಕ್ತ ಬೆಚ್ಚಗಾಗಿಸುತ್ತಿದೆ. ಮಹಾರಾಷ್ಟ್ರದ ಪುಣೆ ಮೂಲದ ಸಂತೋಷ್ ಜಗದಾಳೆ ಕೂಡ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದವರಲ್ಲಿ ಒಬ್ಬರಾಗಿದ್ದು, ಅವರ ಜೊತೆಗಿದ್ದ ಕುಟುಂಬ ಭಯೋತ್ಪಾದಕರ ಕ್ರೌರ್ಯವನ್ನು ಬಿಚ್ಚಿಟ್ಟಿದೆ. ಪ್ರವಾಸಿ ತಾಣದಲ್ಲಿದ್ದ ಅವರಿಗೆ ಇದ್ದಕ್ಕಿದ್ದಂತೆ ಸಹಾಯಕ್ಕಾಗಿ ಕೂಗುಗಳು ಮತ್ತು ಗುಂಡಿನ ಚಕಮಕಿಗಳು ಕೇಳಿಬರುತ್ತಿದ್ದಂತೆ ಪುಣೆ ಮೂಲದ ಉದ್ಯಮಿ ಸಂತೋಷ್ ಜಗದಾಳೆ ಮತ್ತು ಅವರ ಕುಟುಂಬವು ಟೆಂಟ್‌ನೊಳಗೆ ಅಡಗಿಕೊಂಡಿತ್ತು.
ಸ್ಥಳೀಯ ಪೊಲೀಸರ ಬಟ್ಟೆಗಳನ್ನು ಹೋಲುವ ಬಟ್ಟೆಗಳನ್ನು ಧರಿಸಿದ ಜನರು ಗುಂಡು ಹಾರಿಸುತ್ತಾ ಬೆಟ್ಟದಿಂದ ಇಳಿಯುವುದನ್ನು ನೋಡಿದಾಗ ಭಯ ಪ್ರಾರಂಭವಾಯಿತು ಎಂದು ಈ ದುರಂತದಲ್ಲಿ ಸಾವನ್ನಪ್ಪಿದ್ದ ಸಂತೋಷ್ ಜಗದಾಳೆ ಅವರ ಮಗಳು ಅಸವರಿ ವಿವರಿಸಿದ್ದಾರೆ. ಕೂಗಾಟ ಕೇಳಿ ಬರುತ್ತಿದ್ದಂತೆ ನಾನು, ತಾಯಿ ಪ್ರಗತಿ ಮತ್ತು ತಂದೆ ಸಂತೋಷ್ ಇತರ ಪ್ರವಾಸಿಗರೊಂದಿಗೆ ಹತ್ತಿರದ ಟೆಂಟ್‌ಗೆ ಓಡಿ ಬಂದೆವು. ಹೊರಗಿನ ಗುಂಡಿನ ದಾಳಿ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವಿನ ಗುಂಡಿನ ಚಕಮಕಿ ಎಂದು ನಾವು ಭಾವಿಸಿದ್ದೆವು. ಆದರೆ ಹತ್ತಿರದ ಟೆಂಟ್‌ನ ಮೇಲೆ ಗುಂಡು ಹಾರಿಸುತ್ತಿದ್ದಂತೆ ದಾಳಿಕೋರರ ಶಬ್ದ ಟೆಂಟ್‌ಗೆ ಸಮೀಪವಾಯ್ತು.
ಚೌಧರಿ ತು ಬಾಹರ್ ಆ ಅಂತ ಹೇಳಿ ಅವರು ನಮ್ಮ ತಂದೆಯನ್ನು ಟೆಂಟ್‌ನಿಂದ ಹೊರಗೆಳೆದರು. ಈ ವೇಳೆ ಅವರು ಪ್ರಧಾನಿ ನರೇಂದ್ರ ಮೋದಿಗೆ ಬೆಂಬಲಿಸುವಿರಾ ಎಂದು ಹೇಳಿ ದಾಳಿ ಮಾಡಿದರು. ನಮ್ಮ ಸುತ್ತಲೂ ಹಲವು ಉಗ್ರರಿದ್ದರು. ಅವರು ಮೊದಲಿಗೆ ಹಿಂದೂವಾ, ಮುಸಲ್ಮಾನರ ಅಂತ ಕೇಳಿ ಬರೀ ಗಂಡಸರನ್ನೇ ಟಾರ್ಗೆಟ್ ಮಾಡುತ್ತಿದ್ದರು. ನಂತರ ಅವರು ನನ್ನ ತಂದೆಯ ಬಳಿ ಇಸ್ಲಾಮಿಕ್ ಮಂತ್ರ(Kalma)ವನ್ನು ಹೇಳಲು ಕೇಳಿದರು. ಆದರೆ ನಮ್ಮ ತಂದೆಗೆ ಅದು ತಿಳಿದಿರಲಿಲ್ಲ, ನಂತರ ಅವರು ನಮ್ಮ ತಂದೆಯ ಮೇಲೆ ಮೂರು ಬಾರಿ ಗುಂಡಿಕ್ಕಿದ್ದರು. ಒಂದು ಹಣೆಗೆ , ಕಿವಿ ಹಿಂಭಾಗ ಹಾಗೂ 3ನೇಯದ್ದು ಬೆನ್ನಿಗೆ ಗುಂಡಿಕ್ಕಿದರು ಎಂದು 26 ವರ್ಷದ ಅಸವರಿ ಅವರು ಅಲ್ಲಿ ಭಯೋತ್ಪಾದಕರು ನಡೆಸಿದ ಕ್ರೌರ್ಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ನಂತರ ಬಂಧೂಕುಧಾರಿ ನನ್ನ ಚಿಕ್ಕಪ್ಪನತ್ತ ತಿರುಗಿದ್ದರು ನಂತರ ಅವರ ಮೇಲೂ ಗುಂಡು ಹಾರಿಸಿದ್ದರು. ಘಟನೆ ನಡೆದ 20 ನಿಮಿಷಗಳ ನಂತರ ಅಲ್ಲಿಗೆ ಭದ್ರತಾ ಸಿಬ್ಬಂದಿ ಆಗಮಿಸಿದರು ಎಂದು ಅಸವರಿ ಹೇಳಿದ್ದಾರೆ.
ತನ್ನ ತಂದೆ ಮತ್ತು ಚಿಕ್ಕಪ್ಪ ಜೀವಂತವಾಗಿದ್ದಾರೆಯೇ ಎಂದು ತಿಳಿಯುವ ಮೊದಲೇ ಸ್ಥಳೀಯರು ಮತ್ತು ಭದ್ರತಾ ಪಡೆಗಳು ತಮ್ಮನ್ನು ತಮ್ಮ ತಾಯಿ ಪ್ರಗತಿ ಮತ್ತು ಸಂಬಂಧಿಕರನ್ನು ಪಹಲ್ಗಾಮ್‌ನ ಬೈಸರನ್ ಕಣಿವೆಯಿಂದ ಬೇರೆಡೆ ಸ್ಥಳಾಂತರಿಸಿದರು ಎಂದು ಅಸಾವರಿ ಹೇಳಿದ್ದಾರೆ. ಮಂಗಳವಾರ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ 26 ಜನರಲ್ಲಿ ಮಹಾರಾಷ್ಟ್ರದ ಆರು ಜನರಲ್ಲಿ ಜಗದಾಳೆ ಕೂಡ ಒಬ್ಬರು. ಥಾಣೆ ನಿವಾಸಿಗಳಾದ ಅತುಲ್ ಮಾನೆ, ಸಂಜಯ್ ಲೆಲೆ ಮತ್ತು ಹೇಮಂತ್ ಜೋಶಿ, ಪುಣೆಯ ಕೌಸ್ತುಭ್ ಗನ್ಬೋಟೆ ಮತ್ತು ನವಿ ಮುಂಬೈನ ದಿಲೀಪ್ ದೋಸಲೆ ಈ ದಾಳಿಯಲ್ಲಿ ಸಾವಿಗೀಡಾದ ಮಹಾರಾಷ್ಟ್ರದ ಇತರ ಆರು ಜನರಾಗಿದ್ದಾರೆ.
45 ವರ್ಷದ ಅತುಲ್ ಮಾನೆ, ಕೇಂದ್ರ ರೈಲ್ವೆಯಲ್ಲಿ ಹಿರಿಯ ವಿಭಾಗ ಎಂಜಿನಿಯರ್ ಆಗಿದ್ದರು. ಅವರ ಸ್ನೇಹಿತ ವಿವೇಕಾನಂದ್ ಸಮಂತ್ ಅವರು ಸ್ಥಳೀಯ ರೈಲಿನಲ್ಲಿ ಒಟ್ಟಿಗೆ ಪ್ರಯಾಣಿಸುತ್ತಿದ್ದರು ಮತ್ತು ಒಟ್ಟಿಗೆ ಪಹಲ್ಗಾಮ್‌ಗೆ ಭೇಟಿ ನೀಡಲು ಯೋಜಿಸಿದ್ದರು ಎಂದು ನೆನಪಿಸಿಕೊಂಡರು.
ಇದನ್ನೂ ಓದಿ:ಕಣ್ಣೆದುರೇ ಭಗ್ನಗೊಂಡ ಕನಸು: ಮೇ.1ರಂದು 27ನೇ ಹುಟ್ಟುಹಬ್ಬ ಆಚರಿಸಬೇಕಿದ್ದ ಲೆಫ್ಟಿನೆಂಟ್
ಇದನ್ನೂ ಓದಿ:ಹಿಂದೂ ಗಂಡಸರೇ ಟಾರ್ಗೆಟ್: TCS ಉದ್ಯೋಗಿ US ಟೆಕ್ಕಿ, IB ಅಧಿಕಾರಿಯೂ ಪಹಲ್ಗಾಮ್ ದಾಳಿಗೆ ಬಲಿ
ಇದನ್ನೂ ಓದಿ:ಪಹಲ್ಗಾಮ್ ದುರಂತ: ಬಾರಾಮುಲ್ಲಾದಲ್ಲಿ ಇಬ್ಬರು ಉಗ್ರರ ಹೆಡೆಮುರಿ ಕಟ್ಟಿದ ಭಾರತೀಯ ಸೇನೆ
ಇದನ್ನೂ ಓದಿ:ಪಹಲ್ಗಾಮ್ ಉಗ್ರ ದಾಳಿ ಪ್ರಕರಣ: ಹನಿಮೂನ್‌ಗೆ ಹೋಗಿದ್ದ ಹಲವರ ದುರಂತ ಸಾವು
