ಪಕ್ಷಿಧಾಮದಲ್ಲಿ ವಿದೇಶಿ ಹಕ್ಕಿಗಳ ಕಲರವ ಕೊಡಿಯಾಕರೈ ಪಕ್ಷಿಧಾಮದ ವಿಡಿಯೋ ವೈರಲ್‌ ಫ್ಲೆಮಿಂಗೋ ಹಕ್ಕಿಗಳ ಸುಂದರ ದೃಶ್ಯ ಈಗ ಕ್ಯಾಮರಾದಲ್ಲಿ ಸೆರೆ

ತಮಿಳುನಾಡು(ಡಿ.29): ಇವರಾರು ಭಾರತೀಯರಲ್ಲ. ದೇಶಕ್ಕೆ ಬರಲು ಇವರ ಬಳಿ ವೀಸಾ ಪಾಸ್‌ಪೋರ್ಟ್‌ಗಳಿಲ್ಲ. ಹಾಗಂತ ಯಾರೂ ಇವರನ್ನು ಬಂಧಿಸಿಲ್ಲ. ಹೌದು ಎಲ್ಲಿಂದಲೋ ಹಾರಿ ಬಂದಿರುವ ಇವರು ಈಗ ತಮಿಳುನಾಡಿನ ಪಕ್ಷಿಧಾಮದಲ್ಲಿ ಸ್ವಚ್ಛಂದವಾಗಿ ತಿರುಗಾಡುತ್ತಿದ್ದು, ಈ ಪಕ್ಷಧಾಮಕ್ಕೆ ಬಂದ ಪ್ರವಾಸಿಗರು ಈ ವಿದೇಶಿಗರ ಸೌಂದರ್ಯ ನೋಡಿ ಅಲ್ಲೇ ಮೈ ಮರೆಯುತ್ತಿದ್ದಾರೆ..!

Add Asianetnews Kannada as a Preferred SourcegooglePreferred

ಹೌದು ಸ್ವಚ್ಛಂದವಾಗಿ ಆಕಾಶದಲ್ಲಿ ಹಾರುವ ಹಕ್ಕಿಗೆ ಗಡಿಯ ಮಿತಿ ಎಲ್ಲಿ... ತಮಿಳುನಾಡಿನ (Tamil Nadu) ಕೊಡಿಯಾಕರೈ (Kodiakarai) ನಲ್ಲಿರುವ ಪಾಯಿಂಟ್ ಕ್ಯಾಲಿಮೆರ್ ವನ್ಯಜೀವಿ (Calimere Wildlife)ಮತ್ತು ಪಕ್ಷಿಧಾಮ (Bird Sanctuary)ದಲ್ಲಿ ವಿದೇಶಿ ಹಕ್ಕಿಗಳು ಕಾಣಿಸಿಕೊಂಡಿವೆ. ಆಳವಿಲ್ಲದ ನೀರಿನಲ್ಲಿ ಅಲೆದಾಡುವ ಈ ಫ್ಲೆಮಿಂಗೋಗಳ ಹಿಂಡಿನ ಸುಂದರ ದೃಶ್ಯ ಈಗ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 

Scroll to load tweet…

ಈ ವೈರಲ್ ವೀಡಿಯೊದಲ್ಲಿ, ವಲಸೆ ಹಕ್ಕಿಗಳು ಒಂದರ ನಂತರ ಒಂದರಂತೆ ಸಾಲಿನಲ್ಲಿ ಚಲಿಸುತ್ತಿರುವುದನ್ನು ಕಾಣಬಹುದು. ಸುಂದರವಾದ ಪರಿಸರದಲ್ಲಿ ಹೊಂದಿಸಿದಂತೆ ಕಾಣುವ ಈ ಪಕ್ಷಿಗಳ ಚಲನೆಯು ಒಂದು ದೃಶ್ಯ ಕಾವ್ಯದಂತೆ ಕಾಣಿಸುತ್ತಿದೆ. ವಿಡಿಯೋದಲ್ಲಿ ನೋಡಿದಂತೆ ಆ ಸ್ಥಳದಲ್ಲಿ ಗಾಳಿ ಬೀಸುತ್ತಿರುವಂತೆ ತೋರುತ್ತಿದ್ದು, ಇದು ಇಲ್ಲಿನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. 

ತಮಿಳುನಾಡಿನ ಪರಿಸರ ಹವಾಮಾನ ಬದಲಾವಣೆ ಮತ್ತು ಅರಣ್ಯ ವಿಭಾಗದ ಪ್ರಧಾನ ಕಾರ್ಯದರ್ಶಿ (Principal Secretary) ಸುಪ್ರಿಯಾ ಸಾಹು(Supriya Sahu) ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿದ್ದಾರೆ. ತಮಿಳುನಾಡಿನ ಪಾಯಿಂಟ್ ಕ್ಯಾಲಿಮೆರೆ (ಕೋಡಿಯಾಕರೈ) ವನ್ಯಜೀವಿ ಮತ್ತು ಪಕ್ಷಿಧಾಮವು ಸಾವಿರಾರು ವಲಸೆ ಹಕ್ಕಿಗಳಿಂದ ತುಂಬಿ ತುಳುಕುತ್ತಿದೆ #TNForest ಎಂದು ಐಎಎಸ್ ಅಧಿಕಾರಿ ಈ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ.

Spain: ಆಗಸದಿಂದ ಏಕಾಏಕಿ ಬಿದ್ದ 200 ಮೃತ ಪಕ್ಷಿಗಳು, ಈ ನಿಗೂಢ ಘಟನೆಗೆ ಕಾರಣ ಇದೇನಾ?

ಡಿಸೆಂಬರ್ 25 ರಂದು ಈ ವಿಡಿಯೋ ಶೇರ್‌ ಆಗಿದ್ದು, 8,000 ಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಕೆಲವು ನೆಟ್ಟಿಗರು ಈ ವಿಡಿಯೋ ನೋಡಿ ವಾವ್‌ ಎಂದು ಉಲ್ಲೇಖಿಸುತ್ತಿದ್ದಾರೆ. ಹಾಗೆಯೇ ಅನೇಕರು ಇದು ಅದ್ಭುತವಾಗಿದೆ ಎಂದು ಹೇಳಿದ್ದಾರೆ. 'ಫ್ಲೆಮಿಂಗೋಸ್ ಪ್ರಕೃತಿಗೆ ಯಾವುದೇ ಗಡಿಗಳಿಲ್ಲ' ಎಂದು ಮತ್ತೂ ಕೆಲವರು ಕಾಮೆಂಟ್ ಮಾಡಿದ್ದಾರೆ.

Climate Change: ಪಕ್ಷಿಗಳಲ್ಲೂ ಡೈವೋರ್ಸ್: ಹೊಸ ಸಂಗಾತಿ ಹುಡುಕುತ್ತಿರುವ ಕಡಲು ಕೋಳಿಗಳು!

ಅಮೆರಿಕಾ ಖಂಡದಲ್ಲಿ ನಾಲ್ಕು ರೀತಿಯ ಫ್ಲೆಮಿಂಗೊ ಪಕ್ಷಿ ​​ಜಾತಿಗಳು ಕಂಡುಬರುತ್ತವೆ ಮತ್ತು ಇದರ ಇನ್ನೆರಡು ಜಾತಿಯ ಪಕ್ಷಿಗಳು ಆಫ್ರಿಕಾ, ಏಷ್ಯಾ ಮತ್ತು ಯುರೋಪ್‌ ಮೂಲದ್ದಾಗಿವೆ. ಪಾಯಿಂಟ್ ಕ್ಯಾಲಿಮೆರ್ ವನ್ಯಜೀವಿ ಮತ್ತು ಪಕ್ಷಿಧಾಮಕ್ಕೆ ಆಗಮಿಸುವ ವಲಸೆ ಹಕ್ಕಿಗಳ ಸಂಖ್ಯೆಯಲ್ಲಿ ಈಗ ಇಳಿಮುಖವಾಗಿದೆ ಎಂದು ವರದಿಯಾಗಿದೆ. ಅಭಯಾರಣ್ಯದಲ್ಲಿರುವ ನೀರಿನಿಂದ ಆವೃತವಾದ ಪ್ರದೇಶಗಳು ಈ ವಲಸೆ ಹಕ್ಕಿಗಳ ಪ್ರಮುಖ ಆಕರ್ಷಣೆಯಾಗಿದೆ. 

ಗುಬ್ಬಚ್ಚಿ ದಿನ
ಎಲ್ಲರಿಗೂ ಒಂದು ದಿನ ಇರೋ ಹಾಗೆ ಗುಬ್ಬಚ್ಚಿಗಳಿಗೂ ಒಂದು ದಿನವಿದೆ. ಮಾರ್ಚ್ 20ನ್ನು ವಿಶ್ವ ಗುಬ್ಬಚ್ಚಿ ದಿನವಾಗಿ ಆಚರಿಸಲಾಗುತ್ತದೆ. ಸುಮಧುರ ಸ್ವರ ಮಾಡುವ ಈ ಹಕ್ಕಿಗಳನ್ನು ಮನುಷ್ಯ ಸ್ನೇಹಿ ಎಂದೇ ಹೇಳಲಾಗುತ್ತದೆ. ಒಂದು ಸಮಯದಲ್ಲಿ ಈ ಗುಬ್ಬಚ್ಚಿಗಳು ಎಲ್ಲೆಲ್ಲೂ ಕಾಣಸಿಗುತ್ತಿದ್ದವು. ಅಂಗಡಿ, ಕಟ್ಟಡ, ಮನೆ, ವಠಾರ ಎಲ್ಲ ಕಡೆಗಳಲ್ಲಿಯೂ ಈ ಗುಬ್ಬಚ್ಚಿಗಳಿರುತ್ತಿದ್ದವು. ಆದರೆ ಈಗೀಗ ಈ ಪಕ್ಷಿಗಳನ್ನು ಕಾಣುವುದೇ ಅಪರೂಪ, ಇಲ್ಲವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಈ ಹಕ್ಕಿಗಳು ಮಾಯವಾಗಿವೆ. ಉಳಿದ ಹಕ್ಕಿಗಳ ಸಂತತಿ ನಶಿಸುವುದಕ್ಕಿಂತ ವೇಗವಾಗಿ ಈ ಹಕ್ಕಿಗಳ ಸಂತತಿ ನಶಿಸುತ್ತಾ ಬಂದಿದೆ. ಈ ಪುಟ್ಟ ಗುಬ್ಬಚ್ಚಿಗಳಿಗೆ ವಾಸಿಸೋ ಗೂಡಿಲ್ಲ, ಮೊಬೈಲ್ ಟವರ್ ರೇಡಿಯೇಷನ್ ಈ ಹಕ್ಕಿಯನ್ನು ಬದುಕಲು ಬಿಡುತ್ತಿಲ್ಲ.