ಮೇಲ್ವರ್ಗದ ಬಾಲಕಿಯೊಂದಿಗೆ ಸ್ನೇಹ ಬೆಳೆಸಿದ್ದಕ್ಕೆ ದಲಿತ ಯುವಕನೊಬ್ಬನನ್ನು ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿದೆ. ಬಾಲಕಿಯ ಮನೆಯವರು ಯುವಕ ಮತ್ತು ಅವನ ಸ್ನೇಹಿತನನ್ನು ಕೋಣೆಯಲ್ಲಿ ಕೂಡಿಹಾಕಿ ಹಲ್ಲೆ ನಡೆಸಿದ್ದು, ಈ ಸಂಬಂಧ ಬಾಲಕಿಯ ತಂದೆ ಹಾಗೂ ಅಜ್ಜನನ್ನು ಬಂಧಿಸಲಾಗಿದೆ.

ತೆಹ್ರಿ ಗರ್ವಾಲ್‌: ಮೇಲ್ವರ್ಗದ ಬಾಲಕಿಯೊಬ್ಬಳ ಸ್ನೇಹ ಮಾಡಿದ್ದಕ್ಕೆ ದಲಿತ ಸಮುದಾಯಕ್ಕೆ ಸೇರಿದ 18 ವರ್ಷದ ಯುವಕನೊಬ್ಬನಿಗೆ ಚಿತ್ರಹಿಂಸೆ ನೀಡಲಾಗಿದ್ದು, ಆತ ಮೃತಪಟ್ಟಿರುವ ಘಟನೆ ತೆಹ್ರಿ ಗರ್ವಾಲ್‌ ಜಿಲ್ಲೆಯಲ್ಲಿ ನಡೆದಿದೆ. ಬಾಲಕಿಯ ಮನೆಯವರ ಹಿಂಸೆಯಿಂದ ಕೇತನ್‌ ಲಾಲ್‌ ಮೃತಪಟ್ಟಿರುವುದಾಗಿ ಅವನ ಕುಟುಂಬ ಆರೋಪಿಸಿದ್ದು, ನ್ಯಾಯಕ್ಕೆ ಆಗ್ರಹಿಸಿದೆ.

ಆಗಿದ್ದೇನು?

6 ತಿಂಗಳ ಹಿಂದೆ ಕೇತನ್‌ಗೆ ಅಪ್ರಾಪ್ತೆಯ ಪರಿಚಯವಾಗಿತ್ತು. ಆಕೆ ಭಾನುವಾರ ಕರೆ ಮಾಡಿ ಕರೆದಳೆಂದು ಕೇತನ್‌ ತನ್ನ ಸ್ನೇಹಿತ ದಿವಾಕರ್ ದಿಮ್ರಿ ಜತೆ ಅವಳ ಹಳ್ಳಿಗೆ ಹೋಗಿದ್ದ. ಅಲ್ಲಿ ಬಾಲಕಿಯ ಮನೆಯವರು ಕೇತನ್‌ ಮತ್ತು ದಿವಾಕರ್‌ನನ್ನು ಕೋಣೆಯೊಂದರಲ್ಲಿ ಕೂಡಿಹಾಕಿ ಹಲ್ಲೆ ನಡೆಸಿದ್ದಾರೆ. ಕೇತನ್‌ ಮೃತಪಟ್ಟಿದ್ದು, ದಿವಾಕರ್‌ ಚಿಕಿತ್ಸೆ ಪಡೆಯುತ್ತಿದ್ದಾನೆ.

ಜಾಲತಾಣದಲ್ಲಿ ಹರಿದಾಡುತ್ತಿರುವ ಹಲ್ಲೆಯ ವಿಡಿಯೋ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿ ಬಾಲಕಿಯ ತಂದೆ ಹಾಗೂ ಅಜ್ಜನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ ಮರ್ಯಾದಾ ಹತ್ಯೆ: ಮಾಲೀಕ ಜೈಲಲ್ಲಿ, ಗುಳೆ ಹೋದ ಮನೆಯವರು, ಬಾಗಿಲ ಬಳಿ ಹೆಜ್ಜೆ ಸಪ್ಪಳಕ್ಕೆ ಇಣುಕುವ ದನ-ಕರುಗಳು!

ಅತ್ತ, ‘ಇಕ್ಕಳದಿಂದ ಮಗನ ಉಗುರು ಕಿತ್ತು, ಪಾದಕ್ಕೆ ಮೊಳೆ ಹೊಡೆದಿದ್ದಾರೆ. ಜನನಾಂಗಗಳಿಗೆ ತೀವ್ರ ಗಾಯ ಮಾಡಿದ್ದಾರೆ’ ಎಂದು ಕೇತನ್‌ ತಂದೆ ದೂರಿದ್ದಾರೆ.

ಇದನ್ನೂ ಓದಿ: ಇಚ್ಛೆಗೆ ವಿರೋಧವಾಗಿ ಮದುವೆ ಸಿದ್ಧತೆ: ತಂದೆ ವಿರುದ್ಧ ಕೋರ್ಟ್‌ಗೆ ಮೊರೆ ಹೋದ ಮೈಸೂರಿನ ಯುವತಿ