Asianet Suvarna News Asianet Suvarna News

15ರ ಹುಡುಗಿಗೆ ಬೆತ್ತಲೆ ಫೋಟೋ ಕ್ರೇಝ್; ಮಗಳ ಅವತಾರ ನೋಡಿ ಪೋಷಕರಿಗೆ ಹೃದಯಾಘಾತ!

  • 15ರ ಹರೆಯದ ಹುಡುಗಿಗೆ ಸೋಶಿಯಲ್ ಮೀಡಿಯಾ ಕ್ರೇಜ್
  • ಲೈಕ್ಸ್, ಕಮೆಂಟ್, ಫಾಲೋವರ್ಸ್‌ಗಾಗಿ ಬೆತ್ತಲೇ ಫೋಟೋ 
  • ಸೋಶಿಯಲ್ ಮೀಡಿಯಾದಲ್ಲಿ ಖಾಸಗಿ ಅಂಗಗಳ ಫೋಟೋ
  • ಮಗಳ ಅವತಾರ ನೋಡಿ ಪೋಷಕರಿಗೆ ಹೃದಯಾಘಾತ, ಆಸ್ಪತ್ರೆ ದಾಖಲು
Teenage girl post nudes on social media parents hospitalized after suffered heart attack Gujarat ckm
Author
Bengaluru, First Published Aug 29, 2021, 8:28 PM IST
  • Facebook
  • Twitter
  • Whatsapp

ಅಹಮ್ಮದಾಬಾದ್(ಆ.29): ಸೋಶಿಯಲ್ ಮೀಡಿಯಾದ ಅದೆಷ್ಟು ಅಪಾಯಕಾರಿ ಅನ್ನೋದು ಹಲವು ಬಾರಿ ಸಾಬೀತಾಗಿದೆ. ಅದರಲ್ಲೂ ಕೊರೋನಾ ಬಳಿಕ ಈ ಸೋಶಿಯಲ್ ಮೀಡಿಯಾ ಪುಟ್ಟ ಮಕ್ಕಳನ್ನು ಹಿಡಿದು ಹದಿ ಹರೆಯದ ಯುವ ಜನತೆಯ ಬದುಕನ್ನೇ ಕಸಿದುಕೊಂಡಿದೆ. ಹೀಗೆ 15ರ ಯುವತಿಯ ಸೋಶಿಯಲ್ ಮೀಡಿಯಾದಲ್ಲಿನ ಬೆತ್ತಲೆ ಅವತಾರ ನೋಡಿ ಪೋಷಕರಿಗೆ ಹೃದಯಾಘಾತವಾಗಿ ಆಸ್ಪತ್ರೆ ದಾಖಲಾಗಿದ್ದಾರೆ.

ಗೆಳೆಯನೊಂದಿಗೆ ಯುವತಿಯ ಬೆತ್ತಲೆ ವಿಡಿಯೋ: ಅದು ನಾನಲ್ಲ ಎಂದ ನಟಿ

ಈ ಘಟನೆ ನಡೆದಿರುವುದು ಗುಜರಾತ್‌ನ ಅಹಮ್ಮದಾಬಾದ್‌ನಲ್ಲಿ. ಕೊರೋನಾ ಕಾರಣ 15ರ ಹುಡುಗಿಗೆ ಆನ್‌ಲೈನ್ ಕ್ಲಾಸ್. ಹೀಗಾಗಿ ಪೋಷಕರು ಹೊಚ್ಚ ಹೊಸ ಸ್ಮಾರ್ಟ್ ಫೋನ್ ನೀಡಿದ್ದಾರೆ. ಜೊತೆಗೆ ಒಂದು ಕೊಠಡಿಯಲ್ಲಿ ಮಗಳ ವಿದ್ಯಾಭ್ಯಾಸಕ್ಕೆ ಎಲ್ಲಾ ಸೌಲಭ್ಯ ಮಾಡಿಕೊಟ್ಟಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ನಿರಂತರ ಸ್ಮಾರ್ಟ್ ಫೋನ್ ಬಳಸುತ್ತಿರುವ 15ರ ಬಾಲಕಿ ಸೋಶಿಯಲ್ ಮೀಡಿಯಾದಲ್ಲಿ ಸಕ್ರೀಯವಾಗಿದ್ದಾಳೆ. 

ಹೆಚ್ಚು ಲೈಕ್ಸ್, ಕಮೆಂಟ್ಸ್ ಹಾಗೂ ಫಾಲೋವರ್ಸ್‌ಗಾಗಿ ಈ ಹುಡುಗಿ ಬೆತ್ತಲೆ ಫೋಟೋ ಹಾಕಲು ಆರಂಭಿಸಿದ್ದಾಳೆ. ಖಾಸಗಿ ಅಂಗಗಳ ಬೆತ್ತಲೆ ಫೋಟೋ ಮೂಲಕ ಅತ್ಯಧಿಕ ಫಾಲೋವರ್ಸ್ ಪಡೆದುಕೊಂಡಿದ್ದಾಳೆ. ಇನ್ನು ಈಕೆಗೆ ಬರುತ್ತಿರುವ ಕರೆಗಳ ಸಂಖ್ಯೆ ಕೂಡ ಹೆಚ್ಚಾಗತೊಡಗಿದೆ.

ಪ್ರಧಾನಿ ಗಮನ ಸೆಳೆಯಲು ವೇದಿಕೆಯಲ್ಲೇ ನಟಿ ಸಂಪೂರ್ಣ ಬೆತ್ತಲೆ.. ಒಂದೊಳ್ಳೆ ಕಾರಣ

15ರ ಹುಡುಗಿ ಆಕೆಯ ಸಂಬಂಧಿಯೊಬ್ಬಳಿಗೆ ಈ ರೀತಿ ಬೆತ್ತಲೆ ಫೋಟೋ ಹಾಕಲು ಒತ್ತಾಯ ಮಾಡಿದ್ದಾಳೆ. ಆರಂಭದಲ್ಲಿ 15ರ ಹುಡುಗಿಯ ಒತ್ತಾಯ ನಿರ್ಲಕ್ಷಿಸಿದ್ದ ಸಂಬಂಧಿಗೆ ತಲೆನೋವು ಹೆಚ್ಚಾಗತೊಡಗಿದೆ. ಹೀಗಾಗಿ ಸಂಬಂಧಿ 15ರ ಹುಡುಗಿಯ ಪೋಷಕರಿಗೆ ಈ ಕುರಿತು ವಿವರಿಸಿದ್ದಾಳೆ.

ಪೋಷಕರು ಸೋಶಿಯಲ್ ಮೀಡಿಯಾ ನೋಡಿದಾಗ ಮಗಳ ಬೆತ್ತಲೆ ಅವತಾರ ನೋಡಿ ಬೆಚ್ಚಿಬಿದ್ದಿದ್ದಾರೆ.  ಮಗಳ ಈ ಮುಖ ನೋಡಿದ ತಂದೆ ಹಾಗೂ ತಾಯಿಗೆ ಲಘು ಹೃದಯಾಘಾತವಾಗಿದೆ. ತಕ್ಷಣವೇ ಅವರನ್ನು ಆಸ್ಪತ್ರೆ ದಾಖಲಿಸಲಾಗಿದೆ. ಇದೀಗ ಪೋಷಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆನೆ ಬಂತೊಂದು ಆನೆ.. ಜೊತೆಗೆ ಬೆತ್ತಲೆ ರಾಣಿನೂ ಬಂದ್ರು!

ಆಸ್ಪತ್ರೆಯಲ್ಲಿರುವ ಪೋಷಕರ ಸೂಚನೆಯಂತೆ ಹುಡುಗಿಗೆ ಕೌನ್ಸಲಿಂಗ್ ನೀಡಲಾಗಿದೆ. ಕಾನೂನು ಬಾಹಿರ ಚಟುವಟಿಕೆ, ಅದರ ಪರಿಣಾಮ ಕುರಿತು ಕೌನ್ಸಲಿಂಗ್ ಮೂಲಕ ವಿವರಿಸಲಾಗಿದೆ. ಇದೀಗ ಹುಡುಗಿ ಸ್ಮಾಟ್ ಫೋನ್ ಕೇವಲ ವಿದ್ಯಾಭ್ಯಾಸಕ್ಕಾಗಿ ಬಳಸುವುದಾಗಿ ಹೇಳಿದ್ದಾಳೆ. ಇತ್ತ ಕುಟುಂಬಸ್ಥರಿಗೆ ಆಕೆಯ ಮೇಲೆ ದಿನದ 24 ಗಂಟೆಯೂ ನಿಗಾ ಇಡಲು ಸೂಚಿಸಲಾಗಿದೆ. ಅನಾಹುತ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು ಎಂದು ಎಚ್ಚರಿಕೆ ನೀಡಿದ್ದಾರೆ.

Follow Us:
Download App:
  • android
  • ios