ಗೆಳೆಯನೊಂದಿಗೆ ಬೆತ್ತಲೆ ವಿಡಿಯೋ ವೈರಲ್ ಅದು ನಾನಲ್ಲ ಎನ್ನುತ್ತಿದ್ದಾರೆ ಫೇಮಸ್ ನಟಿ

ಭೋಜ್‌ಪುರಿ ನಟಿ ನಂತರ ತ್ರಿಷಾ ಕಾರ್ ಮಧು ತನ್ನ ಗೆಳೆಯನೊಂದಿಗಿನ ಇಂಟಿಮೇಟ್ ವಿಡಿಯೋ ವೈರಲ್ ಆಗಿದೆ. ಅಂತದ್ದೇ ಕ್ಲಿಪಿಂಗ್ ಅಂತರ್ಜಾಲದಲ್ಲಿ ಹರಿದಾಡಿದ್ದು, ಇದು ಇನ್ನೊಬ್ಬ ಭೋಜ್‌ಪುರಿ ತಾರೆ ಪ್ರಿಯಾಂಕಾ ಪಂಡಿತ್ ಎಂದು ಅನೇಕರು ಆರೋಪಿಸಿದ್ದಾರೆ. ಆದರೂ ಇದನ್ನು ನಟಿ ಸಂಪೂರ್ಣವಾಗಿ ನಿರಾಕರಿಸಿದ್ದಾರೆ.

ನ್ಯೂಡ್ ವಿಡಿಯೋ ಕ್ಲಿಪಿಂಗ್ ವೈರಲ್ ಆದ ಕೆಲ ದಿನಗಳ ನಂತರ, ಭೋಜ್‌ಪುರಿ ನಟಿ ಪ್ರಿಯಾಂಕಾ ಪಂಡಿತ್ ಈ ವಿಷಯದಲ್ಲಿ ಮೌನ ಮುರಿದ್ದಾರೆ. ವಿಡಿಯೋದಲ್ಲಿರುವ ಹುಡುಗಿ ತಾನಲ್ಲ ಎಂದು ಆಕೆ ಸಮರ್ಥಿಸಿಕೊಂಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದು ತ್ರಿಷಾ ಅವರ ಎಂಎಂಎಸ್ ಹಗರಣದ ನಂತರ ಮತ್ತೆ ಮರುಕಳಿಸಿದ ಹಳೆಯ ವಿಡಿಯೋ ಎಂದು ಹೇಳಿದ್ದಾರೆ.

ರಾಖಿ ಸಾವಂತ್‌ನ ಬಾಯ್ತುಂಬ ಹೊಗಳಿದ ಬಾಲಿವುಡ್ ನಿರ್ದೇಶಕಿ

ಪ್ರಿಯಾಂಕಾ ಯಾರೋ ತನ್ನ ಇಮೇಜ್ ಹಾಳುಮಾಡಲು ಯತ್ನಿಸುತ್ತಿರುವುದರಿಂದ ಅದು ತನ್ನ ಸಿನಿಮಾ ವೃತ್ತಿಜೀವನಕ್ಕೆ ತೊಂದರೆಯಾಗುತ್ತಿದೆ. ಅದಕ್ಕಾಗಿಯೇ ಈ ನಿರ್ದಿಷ್ಟ ವಿಡಿಯೋ ವೈರಲ್ ಆಗಿದೆ ಎಂದು ಆರೋಪಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಆಕೆ ಲಿಖಿತ ದೂರು ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಪ್ರಿಯಾಂಕಾ ಪಂಡಿತ್ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಅವರ ಪೋಸ್ಟ್‌ಗಳನ್ನು ನಿಯಮಿತವಾಗಿ ಹಂಚಿಕೊಳ್ಳುತ್ತಾರೆ.

View post on Instagram
View post on Instagram
View post on Instagram