ಫ್ರಾನ್ಸ್(ಮಾ. 15)  ಕೊರೋನಾ ಎಲ್ಲ ಕ್ಷೇತ್ರಗಳ ಮೇಲೆ ತನ್ನ ಪರಿಣಾಮ ಬೀರಿದೆ. ಮನರಂಜನಾ ಕ್ಷೇತ್ರಗಳನ್ನು ಬಿಟ್ಟಿಲ್ಲ. ಇಲ್ಲೊಬ್ಬ ನಟಿ ವಿಭಿನ್ನವಾಗಿ ಪ್ರತಿಭಟನೆ ಮಾಡಿದ್ದಾರೆ. 

ಸೆಸರ್  ಅವಾರ್ಡ್ ಪಂಕ್ಷನ್ ನಲ್ಲಿ ಸಂಪೂರ್ಣವಾಗಿ  ಬಟ್ಟೆ ಬಿಚ್ಚಿ ಪ್ರತಿಭಟನೆ ಮಾಡಿದ್ದಾರೆ. ನಟಿ ಕೊರಿನೆ ಮಾಸಿರೋ ಬಟ್ಟೆ ಬಿಚ್ಚಿ  ನಗ್ನರಾಗಿ ಅಲ್ಲಿನ ಪ್ರಧಾನಿಗೆ ಮನವಿ ಮಾಡಿದ್ದಾರೆ.

ಆನೆ ಮೇಲೆ ಬೆತ್ತಲೆ ಹೊರಟ ನಟಿ ಮಣಿ

ಕತ್ತೆ ಚರ್ಮ ಹೊತ್ತು ಬಂದಿದ್ದ ನಟಿ ವೇದಿಕೆಯಲ್ಲೇ ಸಂಪೂರ್ಣ ಬೆತ್ತಲಾದರು.  ನೋ ಕಲ್ಚರ್, ನೋ ಪ್ಯೂಚರ್.. ಗಿವ್ ಅಸ ಅವರ್ ಆರ್ಟ್ ಬ್ಯಾಕ್ ಎಂದು   ಕೇಳಿಕೊಂಡಿದ್ದು ದೊಡ್ಡ ಸುದ್ದಿಯಾಗುತ್ತಿದೆ.

ನಟಿ ಇಷ್ಟೆಲ್ಲ ಮಾಡಿದ್ದು ಅಲ್ಲಿನ ಪ್ರಧಾನಿ ಜೀನ್ ಕಾಸ್ಟೆಕ್ಸ್ ಅವರ ಗಮನ ಸೆಳೆಯಲು ಈ ಕ್ರಮ  ತೆಗೆದುಕೊಂಡಿದ್ದಾಳೆ. ಈ ವರ್ಷದ ಅಕ್ಟೋಬರ್ 30 ರಿಂದ ದೇಶದ ಸಿನಿಮಾ ಮಂದಿರಗಳನ್ನು ಕ್ಲೋಸ್ ಮಾಡಲು ಆದೇಶ ಕೊಟ್ಟಿದ್ದು ಅವು ಸದ್ಯಕ್ಕೆ ಆರಂಭವಾಗುವ ಲಕ್ಷಣಗಳು  ಇಲ್ಲ ಎಂದು ಹೇಳಲಾಗಿದೆ. 

ಸಿನಿಮಾ ಮಂದಿರಗಳು ಮತ್ತು ರಂಗ ಚಟುವಟಿಕೆ ಕಳೆದ ಕೆಲವು ತಿಂಗಳಿನಿಂದ ತೀವ್ರ ಪೆಟ್ಟು ತಿಂದಿದ್ದು ಮತ್ತೆ ಇಂಥ ಆದೇಶ ಮಾರಕವಾಗಲಿದೆ ಎನ್ನುವುದು ನಟಿಯ ಪ್ರತಿಭಟನೆಗೆ ಕಾರಣ. ಸಾಮಾಜಿಕ ಅಂತರ ಕಾಪಾಡಿಕೊಂಡು, ಕೊರೋನಾ ನಿಯಮ ಪಾಲನೆ ಮಾಡಿಕೊಂಡು ಸಿನಿ ಚಟುವಟಿಕೆಗಳ ಆರಂಭಕ್ಕೆ ಅವಕಾಶ ಮಾಡಿಕೊಡಬೇಕು ಎಂಬುದು ನಟಿಯ ಬೇಡಿಕೆ.