ಮಾಸ್ಕೋ( ಫೆ.  20)  ಬೆತ್ತಲೆ ಪೋಸ್ ನೀಡುವುದರಲ್ಲಿ ಈಕೆ ಒಂದು ಕೈ ಮುಂದು.. ಆದರೆ ಈಗ ಸೋಶಿಯಲ್ ಮೀಡಿಯಾದಲ್ಲಿ  ಹಾಕಿಕೊಂಡಿರುವ ವಿಡಿಯೋ ಒಂದು ಟೀಕೆಗಳ ಸುರಿಮಳೆಗೆ ಕಾರಣವಾಗಿದೆ.

ಸೋಶಿಯಲ್ ಮೀಡಿಯಾ ಸೆಲೆಬ್ರಿಟಿ, ಮಾಡೆಲ್ ಅಲೆಸ್ಯಾ ಕಫೆಲ್ನಿಕೋವಾ(22) ಆನೆ ಮೇಲೆ ಬೆತ್ತಲೆ ಪೋಸ್ ಕೊಟ್ಟಿದ್ದಾರೆ. ಅಳಿವಿನ ಅಂಚಿನಲ್ಲಿರುವ ಸುಮಾತ್ರನ್ ಆನೆ ಮೇಲೆ ಮಾಡೆಲ್ ಬೆತ್ತಲೆಯಾಗಿ ಮಲಗಿದ್ದಾರೆ.

ಆನೆ ಮೇಲೆ ಬೆತ್ತಲೆ ಮಲಗಿದ್ದ ವಿಡಿಯೋ ತುಣುಕನ್ನು ಶೇರ್  ಮಾಡಿಕೊಂಡಿದ್ದರು. ಟೀಕೆಗಳು ಬಂದ ಮೇಲೆ ಅದನ್ನು ಡಿಲೀಟ್ ಮಾಡಿದ್ದಾರೆ.

ಕಮೆಂಟಿಗರು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದು ನೀವು ಆನೆ ಬದಲು ನಿರ್ಜೀವ ವಸ್ತು ಬಳಸಬಹುದಿತ್ತು. ಬೆತ್ತಲೆಯಾಗಿ ನಿಮ್ಮನ್ನು ನೋಡುವ ಆಸಕ್ತಿ ಇದ್ದರೂ ಈ ರೀತಿ ಮಾಡುವುದು ತರವಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಗ್ರಾಮದ ಸಮುದಾಯವೊಂದಕ್ಕೆ ದೇಣಿಗೆ ನೀಡಲು ಈ ಪೋಸ್ ನೀಡಬೇಕಾಯಿತು ಎಂದು ಮಾಡೆಲ್ ತಮ್ಮ ನಡೆ ಸಮರ್ಥನೆ  ಮಾಡಿಕೊಂಡಿದ್ದಾರೆ.