ನಾಸಿಕ್‌ನ ಟಾಟಾ ಕನ್ಸಲ್ಟೆನ್ಸಿ (ಟಿಸಿಎಸ್) ಕಚೇರಿಯಲ್ಲಿ ನಡೆದ ಲವ್ ಜಿಹಾದ್ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಮಹಿಳಾ ಕಾನ್ಸ್‌ಟೇಬಲ್‌ಗಳು ಹೌಸ್ ಕೀಪಿಂಗ್ ಸಿಬ್ಬಂದಿಯ ಮಾರುವೇಷದಲ್ಲಿ ಸಾಕ್ಷ್ಯ ಸಂಗ್ರಹಿಸಿ, ಹಿಂದೂ ಯುವತಿಯರನ್ನು ಮತಾಂತರಕ್ಕೆ ಪ್ರೇರೇಪಿಸುತ್ತಿದ್ದ ಜಾಲವನ್ನು ಬಯಲಿಗೆಳೆದಿದ್ದಾರೆ. ಈ ಜಾಲದ ಕಿಂಗ್‌ಪಿನ್ ನಿದಾ ಖಾನ್ ತಲೆಮರೆಸಿಕೊಂಡಿದ್ದಾಳೆ.

ಲವ್​ ಜಿಹಾದ್​ ಎನ್ನೋದು ಇದೀಗ ಭಾರಿ ಮಟ್ಟದಲ್ಲಿ ಚರ್ಚೆಯನ್ನು ಹುಟ್ಟುಹಾಕುತ್ತಿದೆ. ದಿ ಕೇರಳ ಸ್ಟೋರಿಯಲ್ಲಿ ತೋರಿದ ಪ್ರತಿಯೊಂದು ಅಂಶದಂತೆ, ಅದೇ ಮಾದರಿಯಲ್ಲಿ ಪ್ರತಿಯೊಂದು ಲವ್ ಜಿಹಾದ್​ (Love Jihad) ನಡೆಯುತ್ತಿದೆ. ಅದೇ ಒಬ್ಬಳು ಹುಡುಗಿ, ಅದೇ ಬುದ್ಧಿ ಇಲ್ಲದ ಹಿಂದೂ ಹುಡುಗಿಯರು, ಅದೇ ರೀತಿಯ ಬ್ರೈನ್​ ವಾಷ್​, ಅಲ್ಲೊಬ್ಬ ಸ್ಮಾರ್ಟ್​ ಹುಡುಗ, ಹುಡುಗನನ್ನು ಪರಿಚಯ ಮಾಡಿಸುವ ಅವನ ಗ್ಯಾಂಗ್​ನವರು, ಆ ಹುಡುಗನ ಶ್ರೀಮಂತಿಕೆಗೋ, ಲವ್​ ಮಾಡುವ ವಿಧಾನಕ್ಕೋ ಇನ್ನಾವುದಕ್ಕೋ ಮನಸೋಲುವ ಹಿಂದೂ ಹುಡುಗಿಯರು... ಎಲ್ಲವೂ ಸೇಮ್​ ಟು ಸೇಮ್​. ಅದೂ ಸೋ ಕಾಲ್ಡ್​ ಎಜುಕೇಟೆಡ್​ ಎನ್ನುವ ಹುಡುಗಿಯರು ಎನ್ನುವುದು ಮಾತ್ರ ತೀವ್ರ ಅಚ್ಚರಿ ತರುವಂಥ ಹಾಗೂ ಅಷ್ಟೇ ನಿಗೂಢವಾಗಿರುವ ವಿಷಯವಾಗಿದೆ.

ಟಾಟಾ ಕನ್ಸಲ್​ಟೆನ್ಸಿಯ ಲವ್​ ಜಿಹಾದ್​

ಇದೀಗ ಮಹಾರಾಷ್ಟ್ರದ ನಾಸಿಕ್​ನಲ್ಲಿ ಟಾಟಾ ಕನ್ಸಲ್​ಟೆನ್ಸಿಯ ಲವ್​ ಜಿಹಾದ್​ ಪ್ರಕರಣ ಮಾತ್ರ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಹಿಂದೂ ಅಪ್ಪ-ಅಮ್ಮ ತಮ್ಮ ಹೆಣ್ಣುಮಕ್ಕಳು ಉದ್ಯೋಗಕ್ಕೇ ಕಳುಹಿಸಲು ಬೆದರುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಕಿಂಗ್​ಪಿನ್​ ನಿದಾ ಖಾನ್​ (Nida Khan- Love Jihad). ಅಷ್ಟಕ್ಕೂ ಈ ಪ್ರಕರಣವನ್ನು ಭೇದಿಸಲು ಪೊಲೀಸರು ಸಿನಿಮಾ ಸ್ಟೋರಿಯನ್ನೂ ಮೀರುವ ರೀತಿಯಲ್ಲಿ ಕಾರ್ಯಾಚರಣೆ ಮಾಡಿರುವ ಸಂಗತಿ ಇದೀಗ ಬಯಲಿದೆ ಬಂದಿದೆ.

ಪೊಲೀಸರು ಮಾಡಿದ್ದೇನು?

ಮೊದಲಿಗೆ ನಾಲ್ಕು ಜನ ಫೀಮೇಲ್ ಕಾನ್​ಸ್ಟೆಬಲ್​ಗಳನ್ನು ಟಿಸಿಎಸ್ ನ ಒಳಗಡೆ ಕೆಲಸಕ್ಕೆ ಅಂತ ಸೇರಿಸಿದರು, ಅದೂ ಮಾರುವಷದಲ್ಲಿ. ಹೌಸ್ ಕೀಪಿಂಗ್ ಕೆಲಸವದು. ಅಷ್ಟಕ್ಕೂ ಈ ಕಂಪೆನಿಯಲ್ಲಿ ಜಾಬ್ ತಗೊಳ್ಬೇಕು ಅಂತಂದ್ರೆ ಅದಕ್ಕೆ ಅದರದೇ ಆದ ಕ್ವಾಲಿಫಿಕೇಶನ್ ಇರುತ್ತದೆ. ಆದರೆ ಹೌಸ್​ ಕೀಪಿಂಗ್​ ಔಟ್​ ಸೋರ್ಸ್​ ಮಾಡುವ ಕಾರಣ ಆ ಏಜೆನ್ಸಿಗೆ ಹೋದ ಪೊಲೀಸರು ನಮ್ಮವರು ನಾಲ್ಕು ಜನ ಅಲ್ಲಿ ಕೆಲಸಕ್ಕೆ ಕಳಿಸಿ ಎಂದರು. ಪಾಪ ಅಲ್ಲಿ ಅವರ ಕೆಲಸ ಕಸ ಗುಡಿಸುವುದು, ಟಾಯ್ಲೆಟ್ ಕ್ಲೀನ್ ಮಾಡುವುದು, ನೆಲ ಒರೆಸುವುದು, ಕಾಫಿ ಟೀ ಕೊಡುವುದು ಇತ್ಯಾದಿ.

ಕೊನೆಗೆ ಒಂದೊಂದೇ ಸಾಕ್ಷ್ಯ ಸಂಗ್ರಹ ಮಾಡಿದರು. ಅಲ್ಲಿಯ ಲವ್​ ಜಿಹಾದ್​ನ ದೊಡ್ಡ ಪ್ರಪಂಚವೇ ತೆರೆದುಕೊಂಡಿತು. ಒಂದೊಂದೇ ಸಾಕ್ಷ ಸಂಗ್ರಹ ಮಾಡಿದ ಬಳಿಕ ಕೊನೆಗೆ ಒಬ್ಬ ಸಿಕ್ಕ. ಪೊಲೀಸರು ಅವನನ್ನು ಅರೆಸ್ಟ್ ಮಾಡಿಕೊಂಡು ಬಂದರು. ಅವನು ನನಗೇನೂ ಗೊತ್ತಿಲ್ಲ ಎಂದ, ಇನ್ನೊಬ್ಬನ ಹೆಸರು ಹೇಳಿದ. ಅವನ ಮೊಬೈಲ್ ತೆಗೆದರೆ ಹಿಂದೂ ಹುಡುಗಿಯರು ಹಿಜಾಬ್ ಹಾಕೊಂಡು ನಿಕಾಬ್ ಹಾಕೊಂಡು ಕಳಿಸಿರುವ ಫೋಟೋಗಳು ಸೆಲ್ಫಿಗಳು ಅವನ ಮೊಬೈನ್​ನಲ್ಲಿ ಕಂಡವು. ಹಿಂದೂ ಹುಡುಗಿಯರನ್ನು ಮರಳು ಮಾಡುವ ಹಿಂದೆ ನಿದಾ ಖಾನ್ ಕೈವಾಡ ಇರುವುದು ತಿಳಿಯಿತು. ಪೊಲೀಸರು ತನ್ನ ಚೇಲಾಗಳನ್ನು ಅರೆಸ್ಟ್​ ಮಾಡುತ್ತಿದ್ದಂತೆಯೇ ಆಕೆ ಎಸ್ಕೇಪ್​ ಆಗಿದ್ದಾಳೆ.

ಬುರ್ಖಾ ನಮಾಜ್​

ಅಷ್ಟಕ್ಕೂ ಈ ಹಿಂದೂ ಹುಡುಗಿಯರು ಇವರ ಬಲೆಗೆ ಬಿದ್ದು, ಮನೆಯಲ್ಲಿ ಯಾರಿಗೂ ತಿಳಿಯದಂತೆ ಬುರ್ಖಾ ಹಾಕಿಕೊಂಡು ನಮಾಜ್​ ಮಾಡುತ್ತಾ, ತಾನು ಇದೆಲ್ಲಾ ಮಾಡುತ್ತಿದ್ದೇನೆ ಎಂದು ಈ ಅರೆಸ್ಟ್​ ಆದ ಆಸಾಮಿಗೆ ಫೋಟೋ ಕಳಿಸುತ್ತಿದ್ದುದು ತಿಳಿಯಿತು. ಇವೆಲ್ಲರೂ ಶ್ರೀಮಂತ ಮನೆತನದವರಾಗಿದ್ದರಿಂದ ಅವರಿಗೇ ಆದ ಸೆಪೆರೇಟ್​ ರೂಮ್​ಗಳು ಇರುತ್ತಿದ್ದುದರಿಂದ ಅಪ್ಪ-ಅಮ್ಮನಿಗೆ ತಮ್ಮ ಮಗಳು ಹೀಗೆಲ್ಲಾ ಮಾಡುತ್ತಿದ್ದಾಳೆ ಎನ್ನೋದು ಅರಿವೇ ಇರಲಿಲ್ಲ. ಕೊನೆಗೆ ಒಬ್ಬಳ ಪೋಷಕರಿಗೆ ಮಗಳ ಸ್ವಭಾವದ ಬಗ್ಗೆ ಡೌಟ್​ ಬರುತ್ತಲೇ ವಿಷಯ ಬೆಳಕಿಗೆ ಬಂದು, ಪೊಲೀಸರು ಮಾರುವೇಷದ ಕಾರ್ಯಾಚರಣೆ ನಡೆಸಿದ್ದಾರೆ.

ನಿದಾ ಖಾನ್​ ಮುಂಬೈನಲ್ಲಿ ತಲೆಮರೆಸಿಕೊಂಡಿದ್ದಾಳೆ. ಅದು ಎಷ್ಟು ವ್ಯವಸ್ಥಿತ ಪ್ರದೇಶ ಎಂದರೆ ಎಲ್ಲರೂ ಮುಸ್ಲಿಂಮರು, ಎಲ್ಲರೂ ಬುರ್ಖಾ ಹಾಕಿಕೊಂಡವರು. ಆದ್ದರಿಂದ ಪೊಲೀಸರಿಗೆ ಅವಳನ್ನು ಹಿಡಿಯುವುದೇ ದೊಡ್ಡ ತಲೆನೋವಾಗಿದೆ.