ಹುಬ್ಬಳ್ಳಿ ಜಿಮ್ ಓನರ್ ಸಮೀರ್ ಮುಲ್ಲಾ, ಹಿಂದೂ ಯುವತಿಯರನ್ನು ಪ್ರೀತಿಯ ನಾಟಕವಾಡಿ ವಂಚಿಸುತ್ತಿದ್ದ ಪ್ರಕರಣ ಬಯಲಾಗಿದೆ. ಆತನ ಮೊಬೈಲ್​ನಲ್ಲಿ ಯುವತಿಯರ ಫೋಟೋಗಳು ಪತ್ತೆಯಾಗಿದ್ದು, ಇದೇ ವೇಳೆ ಆತನ ಸಹಚರನ ಮೇಲೂ ಲವ್ ಜಿಹಾದ್ ಆರೋಪ ಕೇಳಿಬಂದಿದೆ. ಈ ಪ್ರಕರಣಗಳು ಕರ್ನಾಟಕದಲ್ಲಿ 'ದಿ ಕೇರಳ ಸ್ಟೋರಿ'ಯ ವಾಸ್ತವತೆಯನ್ನು ನೆನಪಿಸುತ್ತಿವೆ.

ಹುಬ್ಬಳ್ಳಿಯ ಜಿಮ್​ ಓನರ್​ ಸಮೀರ್​ ಮುಲ್ಲಾನ ಕಾ*ಮಕಾಂಡಗಳು ಒಂದೊಂದಾಗಿ ಬಯಲಿಗೆ ಬರುತ್ತಿವೆ. ಇದಾಗಲೇ ಆತನನ್ನು ನಂಬಿ ಹಲವಾರು ಬಾರಿ ಗರ್ಭಪಾತ ಮಾಡಿಸಿಕೊಂಡ ಯುವತಿಯಿಂದಾಗಿ ಈ ಪ್ರಕರಣ ಬೆಳಕಿಗೆ ಬಂದಿದೆ. ಇಂಥ ಸಮೀರ್​ಗಳು ಅದೆಷ್ಟು ಮಂದಿ ಅಡಗಿಕುಳಿತಿದ್ದಾರೋ ಎನ್ನುವ ಬಗ್ಗೆ ಕರ್ನಾಟಕದ ಪೊಲೀಸರು ತನಿಖೆ ಮಾಡಬೇಕಿದೆಯಷ್ಟೇ. ಎಲ್ಲರಂತಲ್ಲ ನನ್ನ ಸಮೀರಾ ಎಂದು ತುಂಡುಡುಗೆ ತೊಟ್ಟು ಆತನ ಜೊತೆ ಈಜುಕೊಳದಲ್ಲಿ, ಅಕ್ಕ-ಪಕ್ಕ ನಿಂತು. ಇನ್ನೆಲ್ಲೋ ನಿಂತು ಫೋಟೋಗೇ ಪೋಸ್​ ಕೊಟ್ಟ ಹಿಂದೂ ಹುಡುಗಿಯರು ಆತನ ಮೊಬೈಲ್​ ಫೋನ್​ನಲ್ಲಿ ಸ್ಟೋರ್​ ಆಗಿ ನಿಂತಿವೆ. ಇವೆಲ್ಲವೂ ಈಗ ಬಹಿರಂಗಗೊಂಡಿದೆ. ಎಲ್ಲರ ಬಾಯಲ್ಲೂ ಒಂದೇ ಮಾತು. ನನ್ನ ಸ್ನೇಹಿತೆ ಮೂಲಕ ಈತನ ಪರಿಚಯವಾಯ್ತು, ಪರಿಚಯ ಪ್ರೀತಿಗೆ ತಿರುಗಿತು ಎನ್ನೋದು. ದಿ ಕೇರಳ ಸ್ಟೋರಿ ಎಲ್ಲಾ ಅಂತೆ ಕಂತೆಗಳು ಎಂದವರೇ ಈಗ ಖುದ್ದು ನಮ್ಮದೇ ಕರ್ನಾಟಕದಲ್ಲಿ, ಈ ರೀತಿ ಆಗ್ತಿರೋದನ್ನು ನೋಡಿ ಬೆಚ್ಚಿ ಬೀಳುವಂತಾಗಿದೆ.

ಸುಲಭದಲ್ಲಿ ಬಲೆ ಬೀಳೋ ಹಿಂದೂ ಯುವತಿಯರು!

ನೋಡಲು ಸ್ಮಾರ್ಟ್​ ಲುಕ್​, ದುಬಾರಿ ಬೈಕೋ, ದುಬಾರಿ ಕಾರೋ, ದುಬಾರಿ ವಾಚೋ, ಬಾಲಿವುಡ್​ ಸ್ಟಾರ್​​ಗಳ ರೀತಿಯಲ್ಲಿ ಹೇರ್​ಸ್ಟೈಲ್​ ಮಾಡಿಕೊಂಡೋ, ಬಟ್ಟೆ ಧರಿಸಿಕೊಂಡೋ ಬಂದು ನಿಂತುಬಿಟ್ಟರೆ ಸಾಕು ಅಂಥವರ ಬಲೆಗೆ ಸುಲಭದಲ್ಲಿ ಹಿಂದೂ ಯುವತಿಯರು ಬೀಳುತ್ತಿರುವುದು ದೊಡ್ಡ ದುರಂತ ಎಂದು ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಅದೇನೇ ಇರಲಿ. ಇದೀಗ ಈ ಸಮೀರನ ಫ್ಯಾಮಿಲಿಯ ಮತ್ತೊಂದು ಭಯಾನಕ ಕೃತ್ಯ ಬಯಲಿಗೆ ಬಂದಿದೆ. ಯಾವುದೇ ಕಾರಣಕ್ಕೂ ಇದು ಲವ್ ಜಿಹಾದ್​ ಅಲ್ಲ, ನಮ್ಮದು ಸಾಮರಸ್ಯದ ಫ್ಯಾಮಿಲಿ ಎಂದುಕೊಳ್ಳಲಿ ಎನ್ನುವ ಕಾರಣಕ್ಕೋ ಏನೋ, ಮನೆಯಲ್ಲಿ ಹಿಂದೂ ದೇವರ ಪೂಜೆ ಮಾಡ್ತೇವೆ. ನಮಗೆ ಎಲ್ಲಾ ದೇವರೂ ಒಂದೇ ಅಂತಿದೆ ಈ ಫ್ಯಾಮಿಲಿ. ಮನೆಯಲ್ಲಿಯೂ ಹಿಂದೂ ದೇವರ ಫೋಟೋ ಇದೆ ಎನ್ನಲಾಗಿದೆ.

ಹಿಂದೂ ಹಬ್ಬಗಳಲ್ಲಿ ಭಾಗಿ

ಅಷ್ಟೇ ಅಲ್ಲದೇ ಈ ಸಮೀರ ಹಿಂದೂ ಹಬ್ಬಗಳಲ್ಲಿ ಭಾಗಿಯಾಗಿರುವ ಫೋಟೋಗಳು ಇವೆ. ನಾನು ಹೆಣ್ಣುಮಕ್ಕಳ ರಕ್ಷಣೆ ಮಾಡ್ತಿರೋದೇ ತಪ್ಪಾಯ್ತು, ನನ್ನ ಮೇಲೆ ಇಲ್ಲಸಲ್ಲದ ಆರೋಪ ಹೊರಿಸ್ತಾ ಇದ್ದಾರೆ. ನೋಡಿ ನನ್ನ ಮೊಬೈಲ್​ನಲ್ಲಿ ಯಾವುದೇ ವಿಡಿಯೋಗಳು ಇಲ್ಲ, ಇನ್ನೆಲ್ಲಿ ಲೀಕ್​ ಮಾಡೋದು ಎಂದು ಅಮಾಯಕನಂತೆ ಲೈವ್​ನಲ್ಲಿ ಬಂದು ಕೇಳಿದ್ದಾನೆ ಸಮೀರ. ಆದರೆ ಡಿಲೀಟೆಡ್​ ವಿಡಿಯೋಗಳು ರಿಕವರಿ ಮಾಡಿಕೊಳ್ಳಬಹುದು ಎಂದು ಆತನಿಗೆ ಅರಿವಿಗೆ ಬಂದಿರಲಿಕ್ಕಿಲ್ಲ. ಅಥವಾ ಬಣ್ಣ ಬಣ್ಣದ ಮಾತನ್ನಾಡಿ ಹಿಂದೂ ಯುವತಿಯರನ್ನು ಸುಲಭದಲ್ಲಿ ಮರಳು ಮಾಡುವಷ್ಟು ಸುಲಭ ಇಂಥ ಮಾತು ಅಂದುಕೊಂಡಿದ್ದನೋ ಏನೋ. ಒಟ್ಟಿನಲ್ಲಿ ಕರ್ನಾಟದಲ್ಲಿ ಈ ಕೇಸ್​ ಯಾವ ರೀತಿಯ ತನಿಖೆ ಆಗುತ್ತದೆ ಎನ್ನುವುದು ಇನ್ನಷ್ಟಾ ಕಾದು ನೋಡಬೇಕಿದೆ.

ಇನ್ನೊಂದು ಪ್ರಕರಣ ಬೆಳಕಿಗೆ...

ಅದೇ ಇನ್ನೊಂದೆಡೆ, ಸಮೀರನ ಬಣ್ಣ ಬಯಲಾಗುತ್ತಿದ್ದಂತೆಯೇ ಬೇರೆ ಬೇರೆ ಕೇಸ್​ಗಳೂ ಓಪನ್​ ಆಗುತ್ತಿವೆ. ಇದಾಗಲೇ ಇನ್ನೊಂದು ಲವ್​ ಜಿಹಾದ್​ (Love Jihad) ಪ್ರಕರಣ ಬೆಳಕಿಗೆ ಬಂದಿದೆ. ಮುಫೀಸ್ ಮಿಯಾನ್ನಾವರ್ ಎಂಬಾತ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆತನ ಮೇಲೆ ಯುವತಿ ದೂರು ದಾಖಲು ಮಾಡಿದ್ದಾಳೆ. ಈತ ಕೂಡ ಸಮೀರ್​ನ ಜಿಮ್​ನಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಲಾಗುತ್ತಿದೆಯಾದರೂ ಈ ಬಗ್ಗೆ ಇನ್ನಷ್ಟೇ ವಿವರ ಬಹಿರಂಗಗೊಳ್ಳಬೇಕಿದೆ. ಯುವತಿ ಹೇಳಿರುವ ಪ್ರಕಾರ, ಈತ ತನ್ನನ್ನು ಪ್ರೀತಿಸುವುದಾಗಿ ಹೇಳಿದ್ದ. ಆಮೇಲೆ ಅದು ನಾಟಕ ಎನ್ನುವುದು ಗೊತ್ತಾಯಿತು. ಈತ ಪ್ರೀತಿಸಿರುವುದಾಗಿ ನಂಬಿಕ ರೇ*ಪ್​ ಮಾಡಿದ್ದಾನೆ ಎಂದಿದ್ದಾಳೆ. ಸ್ನೇಹಿತೆಯೊಬ್ಬಳು ಈತನನ್ನು ಪರಿಚಯ ಮಾಡಿಸಿದ್ಲು. ಅಲ್ಲಿಂದ ಲವ್​ ಶುರುವಾಯ್ತು. ಆಮೇಲೆ ಪ್ರೀತಿ ಮಾಡ್ತೇನೆ ಎಂದಿದ್ದ. ನಾನೂ ನಂಬಿದ್ದೆ ಎಂದಿದ್ದಾಳೆ ಯುವತಿ.