Asianet Suvarna News Asianet Suvarna News

ಬೈಕೇರಿ ಹೆಡೆಯೇರಿಸಿ ನಿಂತ ನಾಗಪ್ಪ... ವಿಡಿಯೋ ವೈರಲ್

ಹಾವೊಂದು ಬೈಕೇರಿ ಕುಳಿತ ವೀಡಿಯೋವೊಂದು ವೈರಲ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮಿಳುನಾಡಿನ ಈರೋಡ್ ಜಿಲ್ಲೆಯ ಪೆರಿಯರ್ ನಗರದಲ್ಲಿ ಈ ಘಟನೆ ನಡೆದಿದೆ. 

Tamilnadu snake climb the bike in Erode video goes viral akb
Author
First Published Nov 2, 2022, 7:31 PM IST

ಈರೋಡ್‌: ಮಳೆಗಾಲ ಮುಗಿದರು ಮಳೆ ಮಾತ್ರ ನಿಂತಿಲ್ಲ. ಹೀಗಾಗಿ ಹಾವು ಚೇಳುಗಳು ಆಶ್ರಯ ಅರಸಿ ಸುರಕ್ಷಿತ ಜಾಗ ಹುಡುಕಿಕೊಂಡು ಮನೆ, ವಾಹನದೊಳಗೆ ಏರುತ್ತಿವೆ. ಕೆಲ ದಿನಗಳ ಹಿಂದೆ ಶೂವೊಳಗೆ ಅವಿತು ಕುಳಿತ ಹಾವೊಂದರ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಅದೇ ರೀತಿ ಈಗ ಹಾವೊಂದು ಬೈಕೇರಿ ಕುಳಿತ ವೀಡಿಯೋವೊಂದು ವೈರಲ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮಿಳುನಾಡಿನ ಈರೋಡ್ ಜಿಲ್ಲೆಯ ಪೆರಿಯರ್ ನಗರದಲ್ಲಿ ಈ ಘಟನೆ ನಡೆದಿದೆ. 

ಹಾವೊಂದು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಲ್ಲಿನ ನಿವಾಸಿಗಳು ಉರಗತಜ್ಞರಿಗೆ ಕರೆ ಮಾಡಿದ್ದಾರೆ. ಈ ವೇಳೆ ಅಲ್ಲಿಗೆ ಆಗಮಿಸಿದ ವನ್ಯಜೀವಿ ರಕ್ಷಕರು, ಹಾವನ್ನು ಹಿಡಿಯಲು ಮುಂದಾದಾಗ ಆ ಹಾವು ಅಲ್ಲೇ ಇದ್ದ ಬೈಕೇರಿ ಬೈಕ್‌ನ ಮುಂಭಾಗ ಹ್ಯಾಂಡಲ್‌ಗೆ ಸುರುಳಿ ಸುತ್ತಿಕೊಂಡು ಹೆಡೇಯೇರಿಸಿ ನಿಂತಿದೆ. ಬೈಕ್ ಮುಂಭಾಗದಲ್ಲಿ ಕುಳಿತು ದಾಳಿ ಮಾಡಲು ಸಿದ್ಧಗೊಂಡಂತೆ ಹಾವು ಪೋಸ್ ಕೊಟ್ಟಿದ್ದು, ಹಾವಿನ ಆಕ್ರಮಣಕಾರಿ ನೋಟ ನೋಡಿ ಜನ ಗಾಬರಿಯಾಗಿದ್ದರು. ಆದರೆ ಅಚ್ಚರಿಯ ವಿಚಾರವೆಂದರೆ ಅಲ್ಲೇ ಸಮೀಪದ ಪೊದೆಯೊಂದರಲ್ಲಿ ಈ ಹಾವು ಮೊಟ್ಟೆಗಳನ್ನು ಇಟ್ಟಿದ್ದು, ಇದೇ ಕಾರಣಕ್ಕೆ ಹಾವು ಆಕ್ರಮಣಕಾರಿಯಾಗಿ ನಿಂತಿತ್ತು ಎಂದು ಹಾವನ್ನು ರಕ್ಷಿಸಿದವರು ಹೇಳಿದ್ದಾರೆ. 

ನೀರು ಕುಡಿಯಲು ಬಂದ ಹಾವು ಮುಂಗುಸಿ ಮಧ್ಯೆ ಘನಘೋರ ಕಾಳಗ

ನಂತರ ಈ ಹಾವನ್ನು ಸಮೀಪದ ಕಾಡಿಗೆ ಸುರಕ್ಷಿತ ತಾಣಕ್ಕೆ ಬಿಡಲಾಗಿದೆ. ಈರೋಡ್‌ನ ಪೆರಿಯರ್ (Periyar city)ನಗರದಲ್ಲಿ ಈ ಘಟನೆ ನಡೆದಿದೆ. 

ಕೆಲ ದಿನಗಳ ಹಿಂದೆ ಮಧ್ಯಪ್ರದೇಶದಲ್ಲಿ(Madhyapradesh) ಶಾಲಾ ಬಾಲಕಿಯೊಬ್ಬಳ ಬ್ಯಾಗ್‌ ಒಳಗೆ ಹಾವೊಂದು ಪತ್ತೆಯಾಗಿತ್ತು. ಈ ಘಟನೆ ಮಾಸುವ ಮುನ್ನವೇ ಉತ್ತರಪ್ರದೇಶದ ಲಕ್ನೋದಲ್ಲಿ ಶಾಲಾ ಬಸ್ ಒಳಗೆ ಭಾರಿ ಗಾತ್ರದ ಹೆಬ್ಬಾವೊಂದು ಕಾಣಿಸಿಕೊಂಡಿತ್ತು. ಈ ಹೆಬ್ಬಾವಿನ ಗಾತ್ರವೇ ಒಂದು ಕ್ಷಣ ಭಯ ಮೂಡಿಸುವಂತಿತ್ತು. ಬಸ್ ಒಳಗಿನಿಂದ ಹೆಬ್ಬಾವವನ್ನು ರಕ್ಷಿಸುತ್ತಿರುವ ಕಾರ್ಯಾಚರಣೆಯ ವಿಡಿಯೋ ಕ್ಯಾಮರಾದಲ್ಲಿ ಸೆರೆ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಉತ್ತರಪ್ರದೇಶದ (Uttar Pradesh) ರಾಯ್‌ ಬರೇಲಿಯಲ್ಲಿ  ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಈ ಭಾರಿ ಗಾತ್ರದ ಹೆಬ್ಬಾವನ್ನು ಸೆರೆ ಹಿಡಿಯಲಾಗಿತ್ತು. 

Viral Video: ಮಹಿಳೆಯ ಕಿವಿಯಲ್ಲಿ ಸಿಕ್ಕಿಹಾಕಿಕೊಂಡ ಹಾವು: ಹೊರತೆಗೆಯೋಕೆ ವೈದ್ಯರ ಪ್ರಯತ್ನ ಹೇಗಿದೆ ನೋಡಿ..!

ರಾಯ್‌ಬರೇಲಿಯ(Raebareli)ರಾಯನ್ ಇಂಟರ್‌ನ್ಯಾಷನಲ್ ಸ್ಕೂಲ್‌ನ (Ryan International School) ಶಾಲಾ ಬಸ್‌ ಒಳಗೆ ಈ ಹಾವು ಸೇರಿಕೊಂಡಿತ್ತು ಎಂದು ನಗರದ ಮ್ಯಾಜಿಸ್ಟ್ರೇಟ್ ಪಲ್ಲವಿ ಮಿಶ್ರಾ (Pallavi Mishra) ಅವರು ಮಾಹಿತಿ ನೀಡಿದರು. ಶಾಲಾ ವಾಹನದೊಳಗೆ ಹಾವಿರುವ ವಿಚಾರ ತಿಳಿದು ಅರಣ್ಯ ಇಲಾಖೆಗೆ ಶಾಲಾ ಸಿಬ್ಬಂದಿ ಮಾಹಿತಿ ನೀಡಿದ್ದು ಅರಣ್ಯ ಇಲಾಖೆ ಸಿಬ್ಬಂದಿ ಬಂದು ಹಾವನ್ನು ರಕ್ಷಣೆ ಮಾಡಿದ್ದಾರೆ. ಭಾನುವಾರವಾದ್ದರಿಂದ ಶಾಲೆಗೆ ರಜೆ ಇದ್ದ ಕಾರಣ ಇದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಪಲ್ಲವಿ ಮಿಶ್ರಾ ಹೇಳಿದರು. ವಿಡಿಯೋದಲ್ಲಿ ಕಾಣಿಸುವಂತೆ ಹಾವೊಂದು ಬಸ್‌ ಸೀಟಿನ ಕೆಳಗೆ ಸಿಲುಕಿಕೊಂಡಿದ್ದು ಅರಣ್ಯ ಸಿಬ್ಬಂದಿ ಕಬ್ಬಿಣದ ಕೊಂಡಿಯೊಂದರ ಮೂಲಕ ಅದನ್ನು ಎಳೆದು ರಕ್ಷಿಸುತ್ತಿರುವ ದೃಶ್ಯವಿದೆ.

ಇದಲ್ಲದೇ ಮೈಸೂರಿನ ಮನೆಯೊಂದರಲ್ಲಿ ಹಾವೊಂದು ಶೂವೊಳಗೆ ಸೇರಿಕೊಂಡ ವಿಡಿಯೋವೊಂದು ಸಾಕಷ್ಟು ವೈರಲ್ ಆಗಿತ್ತು. ಟ್ವಿಟ್ಟರ್‌ನಲ್ಲಿ (Twitter) ಈ ವಿಡಿಯೋವನ್ನು ಭಾರತಿ ರಾಜನ್ (BharatiRajan) ಎಂಬುವವರು ಪೋಸ್ಟ್ ಮಾಡಿದ್ದರು. ವ್ಯಕ್ತಿಯೊಬ್ಬರು ಮನೆಯಲ್ಲಿ ಇರಿಸಿದ್ದ ಶೂವೊಂದನ್ನು(Shoe) ಕಾಲಿಗೆ ಧರಿಸಲು ಹೊರಗೆ ತೆಗೆದಿದ್ದು, ಈ ವೇಳೆ ಶೂ ಎಂದಿಗಿಂತ ತುಸು ಹೆಚ್ಚೆ ಭಾರ ಎನಿಸಿದೆ. ಜೊತೆಗೆ ಏನು ಮಿಸುಕಾಡಿದ ಅನುಭವವಾಗಿದೆ. ಹೀಗಾಗಿ ಕೂಡಲೇ ಶೂವನ್ನು ಅವರು ಕೆಳಗೆ ಬಿಟ್ಟಿದ್ದಾರೆ. ಅಷ್ಟರಲ್ಲಾಗಲೇ ಶೂ ಒಳಗೆ ಬೆಚ್ಚಗೆ ಮುದುಡಿ ಮಲಗಿದ್ದ ಹಾವು ಹೆದರಿ ಹೆಡೆಯೇರಿಸಿ ನಿಂತಿದ್ದು, ಶೂ ಮಾಲೀಕರು ಈ ದೃಶ್ಯ ನೋಡಿ ದಂಗಾಗಿದ್ದಾರೆ. ಒಂದು ವೇಳೆ ಸ್ವಲ್ಪವೂ ಗಮನಿಸದೇ ಶೂ ಧರಿಸಿದ್ದರೆ ಪರಲೋಕ ಸೇರುವ ಪರಿಸ್ಥಿತಿ ಬರ್ತಿದ್ದಿದ್ದಂತು ಸತ್ಯ. 
 

Follow Us:
Download App:
  • android
  • ios