ನೀರು ಕುಡಿಯಲು ಬಂದ ಹಾವು ಮುಂಗುಸಿ ಮಧ್ಯೆ ಘನಘೋರ ಕಾಳಗ

ಹಾವು ಹಾಗೂ ಮುಂಗುಸಿ ಪರಸ್ಪರ ಕಾದಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

mongoose and King Cobra terrible fighting video goes viral akb

ಹಾವು ಮುಂಗುಸಿ ಪರಸ್ಪರ ಕಾದಾಡುವುದರಲ್ಲಿ ಸಖತ್ ಫೇಮಸ್ ಇದೇ ಕಾರಣಕ್ಕೆ ಯಾರಾದರೂ ಪರಸ್ಪರ ದ್ವೇಷದಿಂದ ಕಾದಾಡುತ್ತಿದ್ದಾರೆ ಅವರು ಹಾವು ಮುಂಗುಸಿಗಳು ಎಂದು ಹೇಳುವುದನ್ನು ನೀವು ಕೇಳಿರಬಹುದು. ಅದೇ ರೀತಿ ಈಗ ಹಾವು ಹಾಗೂ ಮುಂಗುಸಿ ಪರಸ್ಪರ ಕಾದಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಕಾಣಿಸುವಂತೆ ಕೆಸರು ನೀರೊಂದರ ಬಳಿ ಹಾವು ನೀರು ಕುಡಿಯಲು ಹೋಗಿದ್ದು, ಅದೇ ವೇಳೆ ಮುಂಗುಸಿಯೂ ಅಲ್ಲಿಗೆ ತಲುಪಿದ್ದು, ಪರಸ್ಪರ ಕಾದಾಡಲು ಶುರು ಮಾಡಿದ್ದಾರೆ. 

ಸಣ್ಣ ಕಾಲುಗಳನ್ನು ಹೊಂದಿರುವ ಈ ಸಣ್ಣ ಗಾತ್ರದ ಮುಂಗುಸಿ ಪ್ರಾಣಿಯೂ ಹಾವಿನ ಬದ್ಧ ದ್ವೇಷಿಯಾಗಿದ್ದು, ಎಂತಹ ವಿಷಕಾರಿ ಹಾವೇ ಆಗಲಿ ಅದು ಅವುಗಳನ್ನು ಸುಮ್ಮನೇ ಬಿಡುವುದಿಲ್ಲ. ಮನುಷ್ಯರನ್ನು ಕೆಲವು ನಿಮಿಷಗಳಲ್ಲಿ ತಮ್ಮ ಕರ್ಕೋಟಕ ವಿಷದಿಂದ ಕೊಲ್ಲಬಲ್ಲ ವಿಷಕಾರಿ ಹಾವುಗಳು (poisonous snakes) ಮುಂಗುಸಿಗಳ ಮುಂದೆ ಮಾತ್ರ ವಿಲ ವಿಲ ಒದ್ದಾಡುತ್ತವೆ. ಹಾವು ಮುಂಗುಸಿಗಳ ನಡುವಿನ ಬಹುತೇಕ ಹೋರಾಟಗಳಲ್ಲಿ ಮುಂಗುಸಿಗಳೇ ಜಯ ಸಾಧಿಸುತ್ತವೆ. ಹಾವಿನ ವಿಷ ಮುಂಗುಸಿಯನ್ನು (Mongoose) ಏನು ಮಾಡಲಾಗದು. ಭಾರತದ ಬೂದು ಬಣ್ಣದ ಮುಂಗುಸಿಗಳು ಹಾವುಗಳೊಂದಿಗೆ ಹೋರಾಡುವುದರ ಜೊತೆಗೆ ಅವುಗಳನ್ನು ಸಾಯಿಸಿ ತಿನ್ನುವುದರಲ್ಲಿ ಬಹಳಷ್ಟು ಹುಷಾರಾಗಿರುತ್ತವೆ. 

ಹಾವು ಮುಂಗುಸಿಯ ನಡುವಿನ ಸಮರ : ವಿಡಿಯೋ ವೈರಲ್‌

ವಿಡಿಯೋದಲ್ಲಿರುವಂತೆ ಕೆಸರು ನೀರಿನಿಂದ ಕೂಡಿದ ಸ್ಥಳದಲ್ಲಿ ಹಾವು ಹಾಗೂ ಮುಂಗುಸಿ ಪರಸ್ಪರ ಕಚ್ಚಾಡುತ್ತಿವೆ. ಹಾವಿನ ಸುತ್ತ ಸುತ್ತ ಬಂದು ಮುಂಗುಸಿ ಹಾವಿಗೆ ಕಚ್ಚಿ ಕಚ್ಚಿ ದಾಳಿ ಮಾಡುತ್ತಿದೆ. ಇತ್ತ ಹಾವು ನೀರಲ್ಲಿ ಮುಳುಗಲು ಕೂಡ ಆಗದೇ ಅತ್ತ ನೀರು ಬಿಟ್ಟು ಹೋಗಲು ಆಗದೆ ಬುಸುಗುಡುತ್ತಾ ಹೆಡೆ ಎತ್ತಿ ಮುಂಗುಸಿ ಮೇಲೆ ದಾಳಿ ಮಾಡಿಕೊಂಡು ತನ್ನ ರಕ್ಷಣೆಗೆ ಯತ್ನಿಸುತ್ತಿದೆ. ಈ ವಿಡಿಯೋವನ್ನು wildanimalia ಎಂಬ ಇನ್ಸ್ಟಾಗ್ರಾಮ್‌ನಲ್ಲಿ (Instagram) ಪೋಸ್ಟ್ ಮಾಡಲಾಗಿದೆ. ಈ ವಿಡಿಯೋವನ್ನು ಲಕ್ಷಾಂತರ ಜನ ವೀಕ್ಷಿಸಿದ್ದು, ಅನೇಕರು ಈ ಕಾಳಗದಲ್ಲಿ ಹಾವು ಎಷ್ಟೇ ವಿಷ ಹೊಂದಿದ್ದರೂ ಗೆಲ್ಲುವುದು ಮುಂಗುಸಿಯೇ ಎಂದು ಕಾಮೆಂಟ್ ಮಾಡಿದ್ದಾರೆ. ವಿಷಕಾರಿ ಹಾವುಗಳನ್ನು ಕೊಲ್ಲುವುದರಲ್ಲಿ ಮುಂಗುಸಿ ಎತ್ತಿದ ಕೈ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಜಿದ್ದಾ ಜಿದ್ದಿನ ಘೋರ ಕಾಳಗದಲ್ಲಿ ಗೆದ್ದಿದ್ದು 'ಸಾವು': ಶ್ವಾನ, ಸರ್ಪದ ವಿಡಿಯೋ ವೈರಲ್‌..!

Latest Videos
Follow Us:
Download App:
  • android
  • ios