Viral Video: ಮಹಿಳೆಯ ಕಿವಿಯಲ್ಲಿ ಸಿಕ್ಕಿಹಾಕಿಕೊಂಡ ಹಾವು: ಹೊರತೆಗೆಯೋಕೆ ವೈದ್ಯರ ಪ್ರಯತ್ನ ಹೇಗಿದೆ ನೋಡಿ..!

ಮನೆಯೊಳಗೆ ಹಾವು ನುಗ್ಗಿರುವುದನ್ನು ನೀವು ನೋಡಿರಬಹುದು ಅಥವಾ ನಿಮ್ಮ ಮನೆಯೊಳಗೇ ಹಾವು ನುಗ್ಗಿರಬಹುದು. ಆದರೆ, ಇಲ್ಲಿ ಮಹಿಳೆಯ ಕಿವಿಯೊಳಗೆ ಹಾವೊಂದು ನುಗ್ಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. 

snake gets trapped in womans ear hole doctor tries to pull out with tongs in viral video ash

ಕೆಲವೊಮ್ಮೆ ನಾವು ಸಾಮಾಜಿಕ ಮಾಧ್ಯಮದಲ್ಲಿ (Social Media) ವಿಚಿತ್ರ ಘಟನೆಗಳನ್ನು ನೋಡುತ್ತಿರುತ್ತೇವೆ, ಅದನ್ನು ನಂಬಲು ಕಷ್ಟವಾಗಿರುತ್ತದೆ. ಏಕೆಂದರೆ ಅವು ತುಂಬಾ ಅಸಾಮಾನ್ಯ ಸಂಗತಿಗಳು. ಆದರೂ, ಒಮ್ಮೊಮ್ಮೆ ಇಂತಹ ಹಲವು ಘಟನೆಗಳನ್ನು ನಾವು ನಂಬಬೇಕಾಗಿದೆ. ಇಂತಹದ್ದೇ ಒಂದು ವೈರಲ್‌ ವಿಡಿಯೋ (Viral Video) ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಇದರಲ್ಲಿ ಮಹಿಳೆಯೊಬ್ಬರ (Lady) ಕಿವಿಯ (Ear) ಒಳಗೆ ಹಾವು (Snake) ನುಗ್ಗಿದೆ. ಹೌದು, ಇದು ನಂಬಲು ಅಸಾಧ್ಯವಾದರೂ, ಸತ್ಯ. ಇದು ವಿಚಿತ್ರವೆನಿಸಿದರೂ, ಹಾವುಗಳು ಮಾನವನ ಕಿವಿಗೂ ಪ್ರವೇಶಿಸಬಹುದು ಎಂದು ಈ ವಿಡಿಯೋ ಜನರಿಗೆ ಅರಿವು ಮೂಡಿಸಿದೆ.

ಈ ಆಘಾತಕಾರಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ತಲ್ಲಣ ಸೃಷ್ಟಿಸುತ್ತಿದೆ. ಜನರು ತಮ್ಮ ಕುಟುಂಬ ಹಾಗೂ ಸ್ನೇಹಿತರನ್ನು ಎಚ್ಚರಿಸಲು ಅದನ್ನು ಶೇರ್‌ ಮಾಡಿಕೊಳ್ಳುತ್ತಿದ್ದಾರೆ. ತನ್ನ ಕಿವಿಗೆ ಏನೋ ಬಿದ್ದಿದೆ ಎಂದು ತಿಳಿದ ತಕ್ಷಣ ಹುಡುಗಿ ವೈದ್ಯರ ಬಳಿಗೆ ಹೋದಳು. ನಂತರ ಯುವತಿಯ ಕಿವಿಯಲ್ಲಿ ಹಾವು ಇರುವುದನ್ನು ನೋಡಿದರು. ಇನ್ನು, ಈ ದೃಶ್ಯ ನೋಡಿದ ವೈದ್ಯರು (Doctor) ಸಹ ಗಾಬರಿಗೊಂಡಿರಬಹುದು. ಆದರೆ ಅವರು ತಾಳ್ಮೆಯಿಂದ ತನ್ನ ಕರ್ತವ್ಯ ನಿರ್ವಹಿಸಿದ್ದು, ಯುವತಿಯ ಕಿವಿಯಿಂದ ಹಾವನ್ನು ತೆಗೆಯಲು ಸಹಾಯ ಮಾಡಿದರು. 

ಇದನ್ನು ಓದಿ: Instagram Reels ಮಾಡಲು ಹೋಗಿ ರೈಲು ಅಪಘಾತದಲ್ಲಿ ತೀವ್ರ ಗಾಯಗೊಂಡ ಯುವಕ

 
 
 
 
 
 
 
 
 
 
 
 
 
 
 

A post shared by Shilpa Roy (@shilparoy9933)

ಈ ವೀಡಿಯೊದಲ್ಲಿ, ವೈದ್ಯರು ಯುವತಿಯ ಕಿವಿಯಿಂದ ಹಾವನ್ನು ಹೊರತೆಗೆಯಲು ಪ್ರಯತ್ನಿಸುತ್ತಿದ್ದಾರೆ. ವೈದ್ಯರು ಕೈಗವಸುಗಳನ್ನು ಹಾಕಿದರು ಮತ್ತು ಮೆಡಿಕಲ್‌ ಟಾಂಗ್ಸ್ ನೆರವಿನಿಂದ ಹಾವನ್ನು ಹೊರತೆಗೆದರು. ಈ ಘಟನೆ ಎಲ್ಲಿ, ಯಾವಾಗ ನಡೆದಿದೆ ಎಂಬುದು ನಿಖರವಾಗಿ ತಿಳಿದು ಬಂದಿಲ್ಲ. ಆದರೆ, ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೋ ನೋಡಿದರೆ ನಿಮಗೆ ಕೆಲವು ಕ್ಷಣಗಳಾದರೂ ಗಾಬರಿಯಾಗುತ್ತದೆ. ಅಲ್ಲದೆ, ಬಾಯಿ ಬಿಟ್ಟುಕೊಂಡು ವಿಡಿಯೋ ನೋಡುವಂತಾಗುತ್ತದೆ. ಏಕೆಂದರೆ ಕಿವಿಯಲ್ಲಿದ್ದ ಚಿಕ್ಕ ಹಾವು ತುಂಬಾ ಅಪಾಯಕಾರಿಯಾಗಿ ಕಾಣಿಸುತ್ತಿತ್ತು. ಏಕೆಂದರೆ ಹಳದಿ ಬಣ್ಣದ ಮತ್ತು ದೇಹದ ಮೇಲೆ ಮಚ್ಚೆಗಳಿರುವ ಈ ಪುಟ್ಟ ಹಾವು ನಿಧಾನವಾಗಿ ಕಿವಿಯಿಂದ ತನ್ನ ಬಾಯಿ ತೆಗೆಯುತ್ತಿದೆ. ಆ ಹಾವಿನ ದೇಹ ಆ ಯುವತಿಯ ಕಿವಿಯೊಳಗೆ ಸಿಕ್ಕಿಹಾಕಿಕೊಂಡಂತೆ ಅನಿಸುತ್ತಿದೆ. 

ಇದನ್ನೂ ಓದಿ: ಫೋಟೋ ತೆಗೆಸಿಕೊಳ್ಳಲು ಹೋಗಿ ಜಲಪಾತಕ್ಕೆ ಬಿದ್ದ ಯುವಕ: ರಕ್ಷಣಾ ಪಡೆಯಿಂದ ಶೋಧ ಕಾರ್ಯಾಚರಣೆ

ಇನ್ನು, ಇನ್ಸ್ಟಾಗ್ರಾಮ್‌ನಲ್ಲಿ (Instagram) ಶಿಲ್ಪಾ ರಾಯ್‌ (shilparoy9933) ಎಂಬ ಮಹಿಳೆ 3 ನಿಮಿಷ 49 ಸೆಕೆಂಡ್‌ಗಳಷ್ಟು ಇರುವ ಈ ವಿಡಿಯೋವನ್ನು ಶೇರ್‌ ಮಾಡಿಕೊಂಡಿದ್ದು, ಇದಕ್ಕೆ ನೂರಾರು ಲೈಕ್‌ಗಳು, ಹಲವು ಕಮೆಂಟ್‌ಗಳು ಸಹ ಬಂದಿವೆ. ಅಲ್ಲದೆ, ಇತರೆ ಸಾಮಾಜಿಕ ಮಾಧ್ಯಮದಲ್ಲೂ ಈ ವಿಡಿಯೋವನ್ನು ಶೇರ್‌ (Share) ಮಾಡಿಕೊಳ್ಳಲಾಗುತ್ತಿದೆ.  ಈ ಮಹಿಳೆಯ ಕಿವಿಯೊಳಗೆ ಹಾವು ಹೋಗಿದ್ದು ಹೇಗೆ ಎಂಬ ಪ್ರಶ್ನೆ ಬಹುತೇಕರಲ್ಲಿ ವ್ಯಕ್ತವಾಗುತ್ತಿದೆ. ಆದರೆ, ಯಾರಿಗೂ ಈ ಪ್ರಶ್ನೆಗೆ ಸರಿಯಾದ ಉತ್ತರ ಸಿಕ್ಕಿಲ್ಲ ಬಿಡಿ. ಆದರೆ, ಈ ವಿಡಿಯೋವನ್ನು ನೀವು ನೋಡಿದರೆ ವಿಚಲಿತರಾಗಬಹುದು ಎಚ್ಚರ..!

Latest Videos
Follow Us:
Download App:
  • android
  • ios