Asianet Suvarna News Asianet Suvarna News

ಬೈಕ್ ಮೇಲೆ ಪಟಾಕಿ ಶಾಟ್ಸ್‌ ಇಟ್ಟು ಸ್ಪೋಟಿಸುತ್ತಾ ವ್ಹೀಲಿಂಗ್ : ಭಯಾನಕ ವೀಡಿಯೋ ವೈರಲ್: ಬೈಕರ್ ಅಂದರ್

ಕೆಲ ಯುವಕರು  ಬೈಕ್ ಮೇಲೆ ಪಟಾಕಿ ಶಾಟ್‌ಗಳನ್ನು ಇರಿಸಿ ಸ್ಫೋಟಿಸುತ್ತಾ ಸ್ಟಂಟ್ ಮಾಡಿದ್ದಾರೆ. ಈ ಭಯಾನಕ ಹಾಗೂ ಅಪಾಯಕಾರಿ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯುವಕರನ್ನು ಪೊಲೀಸರು ಕಂಬಿ ಹಿಂದೆ ಕೂರಿಸಿದ್ದಾರೆ. 

Tamilnadu Bike stunt with fire crackers Dangerous and Horrifying stunt video goes viral police arrested Biker in Trichy akb
Author
First Published Nov 15, 2023, 8:03 AM IST

ಚೆನ್ನೈ:  ರಸ್ತೆಗಳಲ್ಲಿ ವಾಹನಗಳ ಮೇಲೆ ಸ್ಟಂಟ್ ಮಾಡುವುದೇ ಅಪರಾಧ ಆದರೆ ಇಲ್ಲಿ ಕೆಲ ಯುವಕರು ಬರೀ ಸ್ಟಂಟ್ ಮಾತ್ರವಲ್ಲದೇ ಇದರ ಜೊತೆ ಜೊತೆಗೆ ಬೈಕ್ ಮೇಲೆ ಪಟಾಕಿ ಶಾಟ್‌ಗಳನ್ನು ಇರಿಸಿ ಸ್ಫೋಟಿಸುತ್ತಾ ಸ್ಟಂಟ್ ಮಾಡಿದ್ದಾರೆ. ಈ ಭಯಾನಕ ಹಾಗೂ ಅಪಾಯಕಾರಿ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯುವಕರನ್ನು ಪೊಲೀಸರು ಕಂಬಿ ಹಿಂದೆ ಕೂರಿಸಿದ್ದಾರೆ. 

ತಮಿಳುನಾಡಿನ ತಿರುಚಿರಪಲ್ಲಿಯಲ್ಲಿ ಈ ಘಟನೆ ನಡೆದಿದ್ದು, ಬಂಧಿತ  24 ವರ್ಷದ ಯುವಕನಾಗಿದ್ದಾನೆ.  ತನ್ನ ದ್ವಿಚಕ್ರ ವಾಹನದ ಮುಂಭಾಗದಲ್ಲಿ ಶಾಟ್ಸ್‌ ಪಟಾಕಿಗಳನ್ನು (ನೆಲದಿಂದ ರಾಕೆಟ್‌ನಂತೆ ಆಕಾಶಕ್ಕೆ ಚಿಮ್ಮಿಅಲ್ಲಿ ಬೆಳಕಿನ ಚಿತ್ತಾರ ಮೂಡಿಸುವ ಶಾಟ್ಸ್‌) ಅಂಟಿಸಿ ಬಳಿಕ ಬೈಕ್‌ನ್ನು ಆಕಾಶಕ್ಕೆ ಮುಖ ಮಾಡಿ ವ್ಹೀಲಿಂಗ್ ಮಾಡುತ್ತಾ ಓಡಿಸಲು ಆರಂಭಿಸಿದ್ದಾನೆ. ಈ ವೇಳೆ ಬೈಕ್‌ನ ಚಲನೆಯಿಂದ ಬರುವ ಗಾಳಿಯಿಂದಾಗಿ ಈ ಪಟಾಕಿ ಶಾಟ್ಸ್‌ಗಳು ಈತನ ಮುಖದತ್ತ ಬರುವಂತೆ ಭಾಸವಾಗಿ ಬಳಿಕ ಮೇಲೆ ಆಕಾಶಕ್ಕೆ ಹಾರಿ ಸ್ಫೋಟಗೊಳ್ಳುತ್ತಿವೆ. 

ಏರ್‌ಪೋರ್ಟ್ ರಸ್ತೆಯಲ್ಲಿ ಸ್ಟಂಟ್‌: ಪೊಲೀಸರ ಅತಿಥಿಯಾದ ಕ್ರೇಜಿ ಬೈಕ್ ರೈಡರ್!

ತಮಿಳುನಾಡಿನ ತಿರುಚಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಯುವಕ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಪೊಲೀಸರ ಪ್ರಕಾರ ಈತ ಸರ್ಮರುತುರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಬೆಂಕಿಯಾಟದ ಸಾಹಸ ಮಾಡಿದ್ದಾನೆ. ನವಂಬರ್ 9 ರಂದು ಈತ ತನ್ನ ಇನ್ಸ್ಟಾಗ್ರಾಮ್ ಖಾತೆ ಡೆವಿಲ್ ರೈಡರ್‌ನಲ್ಲಿ (Devil Rider) ಈ ವೀಡಿಯೋ ಅಪ್‌ಲೋಡ್ ಮಾಡಿದ್ದು, ಸ್ವಲ್ಪ ಹೊತ್ತಿನಲ್ಲೇ ಇದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈತನಿಗೆ ಇನ್ಸ್ಟಾಗ್ರಾಮ್‌ನಲ್ಲಿ 71 ಸಾವಿರ ಫಾಲೋವರ್ಸ್‌ಗಳಿದ್ದಾರೆ. 

ಇನ್ನು ಹೀಗೆ ಸ್ಟಂಟ್ ಮಾಡಿದ ಯುವಕನನ್ನು ತಂಜಾವೂರಿನ ನಿವಾಸಿ 24 ವರ್ಷದ ಅಜಯ್ (Ajay) ಎಂದು ಗುರುತಿಸಲಾಗಿದೆ. ಇನ್ನು ವೈರಲ್  ಆದ ಸ್ಟಂಟ್ ವೀಡಿಯೋದಲ್ಲಿ ತಮಿಳು ಸಿನಿಮಾ ಡೈಲಾಗ್ ಇದ್ದು, ಜೊತೆಗೆ ಹಿನ್ನೆಲೆ ಸಂಗೀತಾ ಹಾಗೂ ಪಟಾಕಿಗಳ ಸದ್ದಿದೆ.  ಪಟಾಕಿಗಳನ್ನು (Fire crackers) ಬೈಕ್‌ನ ಚಕ್ರದ ಮೇಲ್ಭಾಗದ ಜಾಗದಲ್ಲಿ ಕಟ್ಟಿ ಬೆಂಕಿ ಕೊಟ್ಟು ಈತ ಅತೀ ವೇಗದಲ್ಲಿ ಬೈಕ್ ವ್ಹೀಲಿಂಗ್ ಮಾಡಿದ್ದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. 

ರೀಲ್ಸ್‌ ಮಾಡ್ತಿದ್ದವರ ಹುಚ್ಚಾಟಕ್ಕೆ ಬಲಿಯಾಯ್ತು ಅಮಾಯಕ ಜೀವ: ಫ್ಲೈಒವರ್ ಮೇಲೆ ಆಗಿದ್ದೇನು?

ಈಗ ಈ ಬಗ್ಗೆ ಪ್ರಕರಣದ ದಾಖಲಿಸಿಕೊಂಡಿರುವ ಪೊಲೀಸರು ಅಜಯ್ ವಿರುದ್ಧ ಭಾರತೀಯ ದಂಡ ಸಂಹಿತೆ ಹಾಗೂ ಮೋಟಾರ್‌ ವಾಹನ ಕಾಯ್ದೆಯಡಿ ಹಲವು ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿದ್ದಾರೆ. ಈತನ ಜೊತೆ ಇನ್ನು ಕೆಲ ಹುಡುಗರಿದ್ದು ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ.  ಈ ರೀತಿ ಅಪಾಯಕಾರಿ ಸ್ಟಂಟ್ ಮಾಡಿ ಇತರರಿಗೂ ಹಾನಿ ಮಾಡುವ ಇಂತಹವರ ಕೃತ್ಯಗಳಿಗೆ ಕಡಿವಾಣ ಹಾಕಲು ವಿಶೇಷ ತಂಡ ರಚನೆ ಮಾಡಲಾಗುವುದು ಹಾಗೂ ಈ ರೀತಿ ಕೃತ್ಯವೆಸಗಿದವರ ಚಾಲನಾ ಪರವಾನಗಿಯನ್ನು ರದ್ದು ಮಾಡಲಾಗುವುದು ಎಂದು ಹೇಳಿದ್ದಾರೆ. 


 

Follow Us:
Download App:
  • android
  • ios