ವಿಶೇಷ ಭೂಷಣಗಳನ್ನ ಧರಿಸಿ ಕೆಐಎಲ್ ಏರ್‌ಪೋರ್ಟ್ ರಸ್ತೆಯಲ್ಲಿ ಬೈಕ್ ಸ್ಟಂಟ್ ಮಾಡುತ್ತಾ ರೀಲ್ಸ್ ಮಾಡುತ್ತಿದ್ದ ಬೈಕ್ ರೈಡರ್‌ನನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಆ.10): ವಿಶೇಷ ಭೂಷಣಗಳನ್ನ ಧರಿಸಿ ಕೆಐಎಲ್ ಏರ್‌ಪೋರ್ಟ್ ರಸ್ತೆಯಲ್ಲಿ ಬೈಕ್ ಸ್ಟಂಟ್ ಮಾಡುತ್ತಾ ರೀಲ್ಸ್ ಮಾಡುತ್ತಿದ್ದ ಬೈಕ್ ರೈಡರ್‌ನನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.

Add Asianetnews Kannada as a Preferred SourcegooglePreferred

ರೀಲ್ಸ್ ಇನ್ಸ್ಟಾಗ್ರಾಮ್‌ನಲ್ಲಿ ಹೆಚ್ಚೆಚ್ಚು ಲೈಕ್ ಕಾಮೆಂಟ್ ಗಳಿಸಲು ಯುವಕ ಮಾಡುತ್ತಿದ್ದು ಅಪಾಯಕಾರಿ ಸ್ಟಂಟ್. ಚಿತ್ರ ವಿಚಿತ್ರ ವೇಷಭೂಷಣ ಹಾಕಿ ದಿನನಿನತ್ಯ ಒಂದಲ್ಲೊಂದು ಬೈಕ್ ಸ್ಟಂಟ್ ಮಾಡುತ್ತಾ ವಾಹನ ಸವಾರರಿಗೆ ತೊಂದರೆ ಕೊಡುತ್ತಿದ್ದ ಬೈಕ್ ರೈಡರ್. 

ಇತ್ತೀಚೆಗೆ ಕೆಐಎಲ್ ಏರ್‌ಪೋರ್ಟ್‌ ರಸ್ತೆಯಲ್ಲಿ ಸಿಗ್ನಲ್ ಜಂಪ್‌ ಮಾಡಿ ಬೈಕ್‌ ಗೆ ಡಿಕ್ಕಿ ಹೊಡೆದಿದ್ದ ಕಾರು. ಈ ವೇಳೆ ಒನ್‌ವೇಯಲ್ಲಿ ಕಾರನ್ನು ಹಿಂಬಾಲಿಸಿ ಕನ್ನಡಿ ಒಡೆದುಹಾಕಿ ಎಸ್ಕೇಪ್ ಆಗಿದ್ದ ಬೈಕ್ ರೈಡರ್.

ವ್ಹೀಲಿಂಗ್‌ ಹಾವಳಿಗೆ ಬ್ರೇಕ್‌ ಹಾಕಿ: ಅಲೋಕ್‌ ಕುಮಾರ್‌ ಸೂಚನೆ

ವೀಲಿಂಗ್ ಮಾಡದಂತೆ ಬೆಂಗಳೂರಿನ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ ಇವನು ಯಾವುದೇ ಭಯ ಇಲ್ಲದೆ ದಿನನಿತ್ಯ ರಸ್ತೆಯಲ್ಲಿ ಬೈಕ್ ಸ್ಟಂಟ್ ಮಾಡಿ ಅದರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದ. ವಿಡಿಯೋ ಗಮನಿಸಿ ಸಾರ್ವಜನಿಕರಿಂದ ಪೊಲೀಸರಿಗೆ ದೂರು. ವಿಡಿಯೋ ಪರಿಶೀಲನೆ ನಡೆಸಿ ಬೈಕ್‌ ರೈಡರ್‌ನ ಪತ್ತೆ ಹಚ್ಚಿದ ಯಲಹಂಕ ಸಂಚಾರ ಪೊಲೀಸರು. ಕೊನೆಗೂ ಕ್ರೇಜಿ ಬೈಕ್ ಸವಾರನ ಬೈಕ್ ಜಪ್ತಿ ಮಾಡಿದ ಪೊಲೀಸರು ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು