Asianet Suvarna News Asianet Suvarna News

Covid cases ದೆಹಲಿ, ಪಂಜಾಬ್ ಬಳಿಕ ಮತ್ತೊಂದು ರಾಜ್ಯದಲ್ಲಿ ಕೊರೋನಾ ನಿರ್ಬಂಧ ಜಾರಿ!

  • ಒಂದೊಂದೆ ರಾಜ್ಯದಲ್ಲಿ ಕೊರೋನಾ ನಿರ್ಬಂಧ ಮಾರ್ಗಸೂಚಿ ಜಾರಿ
  • ದೇಶದಲ್ಲಿ ಕೊರೋನಾ ಪ್ರಕರಣ ಸಂಖ್ಯೆ ಗಣನೀಯ ಏರಿಕೆ
  • ತಮಿಳುನಾಡಿನಲ್ಲಿ ಮಾಸ್ಕ್ ಕಡ್ಡಾಯ, ಉಲ್ಲಂಘಿಸಿದರೆ 500 ರೂ ದಂಡ
     
Tamil Nadu government directs Mask mandatory reintroduced rs 500 fine for surge of covid 19 ckm
Author
Bengaluru, First Published Apr 22, 2022, 7:39 PM IST

ಚೆನ್ನೈ(ಏ.22): ಕೊರೋನಾ ವೈರಸ್ ಪ್ರಕರಣ ಗಣನೀಯ ಏರಿಕೆಯಾಗುತ್ತಿದೆ. ಒಂದೊಂದೆ ರಾಜ್ಯಗಳಲ್ಲಿ ಕೊರೋನಾ ವೈರಸ್ ಪ್ರಕರಣ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಕೊರೋನಾ ಏರಿಕೆ ಕಾಣುತ್ತಿರುವ ರಾಜ್ಯಗಳಿಗೆ ಪತ್ರ ಬರೆದಿದೆ. ಇದೀಗ ಕೊರೋನಾ ಹರಡದಂತೆ ತಡೆಯಲು ತಮಿಳುನಾಡು ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಿದೆ.

ತಮಿಳುನಾಡು ಸರ್ಕಾರ ಮಾಸ್ಕ್ ಕಡ್ಡಾಯ ಮಾಡಿದೆ. ನಿಯಮ ಉಲ್ಲಂಘಿಸಿದರೆ 500 ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ. ಸಿನಿಮಾ ಹಾಲ್, ಸಾರ್ವಜನಿಕ ರಸ್ತೆ, ಸಭೆ ಸಮಾರಂಭ, ಕಚೇರಿ, ಒಳಾಂಗಡ ಸ್ಥಳಗಳು ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಮತ್ತೊಂದು ಕೊರೋನಾ ಕೇಸ್, ಕೋಚ್ ರಿಕಿ ಪಾಂಟಿಂಗ್ ಕ್ವಾರಂಟೈನ್!

ಅಲ್ಲದೆ ರಾಜ್ಯಾದ್ಯಂತ ಕೋವಿಡ್‌ ಮಾರ್ಗಸೂಚಿಗಳು ಕಡ್ಡಾಯವಾಗಿ ಅನುಷ್ಠಾನಗೊಳ್ಳುವಂತೆ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್‌ ಮಾರ್ಗಸೂಚಿ ಪಾಲನೆಗೆ ಜನರು ನಿರ್ಲಕ್ಷ ತೋರಿಸುತ್ತಿರುವ ಕಾರಣ ನಿಯಮ ಉಲ್ಲಂಘನೆಗೆ 500 ರು. ದಂಡ ನಿಗದಿಪಡಿಸಲಾಗಿದೆ ಎಂದು ಪ್ರಧಾನ ಆರೋಗ್ಯ ಕಾರ್ಯದರ್ಶಿ ಜೆ ರಾಧಾಕೃಷ್ಣನ್‌ ತಿಳಿಸಿದ್ದಾರೆ. ಕಳೆದ ಕೆಲ ದಿನಗಳಿಂದ ತಮಿಳುನಾಡಿನಲ್ಲಿ ಕೊರೋನಾ ಪ್ರಕರಣಗಳ ಏರಿಕೆ ಕಂಡುಬರುತ್ತಿದೆ. ಗುರುವಾರ ರಾಜ್ಯದಲ್ಲಿ 39 ಹೊಸ ಕೇಸ್‌ ದೃಢಪಟ್ಟಿವೆ. ಇತ್ತೀಚೆಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ, ಉತ್ತರ ಪ್ರದೇಶ ಹಾಗೂ ಹರಾರ‍ಯಣದ ಹಲವು ಜಿಲ್ಲೆಗಳಲ್ಲಿ ಸಹ ಮಾಸ್‌್ಕ ಕಡ್ಡಾಯ ಮಾಡಲಾಗಿತ್ತು.

ದಿಲ್ಲಿ ಶಾಲೆಗಳಲ್ಲಿ ಕೋವಿಡ್‌ ನಿಯಮ ಕಠಿಣ
ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕೊರೋನಾ ಸೋಂಕು ದಿನೇ ದಿನೇ ಆತಂಕಕಾರಿಯಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಅಲ್ಲಿನ ಸರ್ಕಾರ ಶಾಲೆಗಳಿಗೆ ನೂತನ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.ಥರ್ಮಲ್‌ ಸ್ಕಾ್ಯನಿಂಗ್‌ ಆಗದೆ ಯಾವುದೇ ವಿದ್ಯಾರ್ಥಿ ಮತ್ತು ಸಿಬ್ಬಂದಿ ಶಾಲೆ ಒಳಗೆ ಪ್ರವೇಶಿಸುವಂತಿಲ್ಲ. ಇಲ್ಲಿ ಯಾರಿಗಾದರೂ ಕೊರೋನಾ ಸೋಂಕು ದೃಢಪಟ್ಟರೆ ಸಂಸ್ಥೆಯ ಅಧಿಕಾರಿಗಳೇ ಕ್ವಾರಂಟೈನ್‌ ಬಗ್ಗೆ ಕ್ರಮ ಕೈಗಳ್ಳಬೇಕು. ವಿದ್ಯಾರ್ಥಿ ಅಥವಾ ಸಿಬ್ಬಂದಿ ನಿಯಮ ಉಲ್ಲಂಘಿಸಿದಲ್ಲಿ ಪ್ರತ್ಯೇಕ ಕೋಣೆಯಲ್ಲಿ ಇರಿಸಬೇಕು ಸೂಚಿಸಿದೆ.

ಒಂದೊಂದೇ ರಾಜ್ಯದಲ್ಲಿ ಮತ್ತೆ ಮಾಸ್ಕ್ ಕಡ್ಡಾಯ, ಜೋಪಾನ!

ಹಾಗೆಯೇ ವಿದ್ಯಾರ್ಥಿಗಳು ತಾವು ತಂದ ಊಟ ಅಥವಾ ಬರವಣಿಗೆಯ ಪರಿಕರಗಳನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ಮತ್ತು ಕುಟುಂಬದಲ್ಲಿ ಯಾರಿಗಾದರೂ ಸೋಂಕು ದೃಢಪಟ್ಟರೆ, ಅಥವಾ ಸೋಂಕಿನ ಲಕ್ಷಣಗಳಿದ್ದರೆ ಅಂಥ ಮಕ್ಕಳನ್ನು ಶಾಲೆಗೆ ಕಳುಹಿಸಕೂಡದು ಎಂದು ತಿಳಿಸಲಾಗಿದೆ.

ಹಲಿಯಲ್ಲಿ ಸೋಂಕು ಏರಿಕೆಗೆ ಒಮಿಕ್ರೋನ್‌ ಉಪತಳಿ ಕಾರಣ
ದೆಹಲಿ ಮತ್ತು ಸುತ್ತಮುತ್ತಲ ರಾಜ್ಯಗಳಲ್ಲಿ ದಿಢೀರನೆ ಕೋವಿಡ್‌ ಸೋಂಕು ಏರಿಕೆಗೆ ಒಮಿಕ್ರೋನ್‌ನ ಹೊಸ ಉಪತಳಿಗಳೇ ಕಾರಣವಿರಬಹುದು ಎಂದು ಮೂಲಗಳು ಹೇಳಿವೆ.ಏಪ್ರಿಲ್‌ ತಿಂಗಳ ಮೊದಲ 15 ದಿನದ ಅವಧಿಯಲ್ಲಿ ದೆಹಲಿ, ಉತ್ತರಪ್ರದೇಶ, ಹಯಾರ್ಣದಲ್ಲಿ ದಿಢೀರಣೆ ಹೊಸ ಕೋವಿಡ್‌ ಪ್ರಕರಣಗಳಲ್ಲಿ ಏರಿಕೆಯಾಗಿತ್ತು. ಹೀಗಾಗಿ ಇದು ವೈರಸ್‌ನ ಹೊಸ ತಳಿಯಾಗಿರಬಹುದು, ಇದು 4ನೇ ಅಲೆಗೆ ಕಾರಣವಾಗಬಹುದು ಎಂಬ ಆತಂಕಗಳು ಮೂಡಿದ್ದವು.

ಆದರೆ ಇದೀಗ ಏಪ್ರಿಲ್‌ ತಿಂಗಳ ಮೊದಲ 15 ದಿನಗಳ ಅವಧಿಯಲ್ಲಿ ಪತ್ತೆಯಾದ ಸೋಂಕಿನ ಮಾದರಿಯನ್ನು ಜಿನೋಮ್‌ ಸೀಕ್ವೆನ್ಸಿಂಗ್‌ ಒಳಪಡಿಸಿದ ವೇಳೆ ಶೇ.52ರಷ್ಟುಪ್ರಕರಣಗಳಿಗೆ ಒಮಿಕ್ರೋನ್‌ನ ಉಪತಳಿ ಬಿಎ.2.12 ಮತ್ತು ಶೇ.11 ಪ್ರಕರಣಗಳಿಗೆ ಬಿಎ.2.10 ಕಾರಣ ಎಂದು ಕಂಡುಬಂದಿದೆ. ಇದರ ಜೊತೆಗೆ ಬಿಎ.2.12.1 ಎಂಬ ಮತ್ತೊಂದು ಉಪತಳಿ ಕೂಡಾ ಕೆಲವೊಂದು ಮಾದರಿಗಳಲ್ಲಿ ಪತ್ತೆಯಾಗಿದೆ. ಬಿಎ.2 ಎಂದು ಗುರುತಿಸಲಾಗುವ ಒಮಿಕ್ರೋನ್‌ ತಳಿಗೆ ಹೋಲಿಸಿದರೆ ಬಿಎ.2.12 ಉಪತಳಿಯ ಹರಡುವಿಕೆ ಪ್ರಮಾಣ ಶೇ.30-90ರಷ್ಟುಹೆಚ್ಚಿದೆ ಎಂದು ಜಿನೋಮಿಕ್‌ ಸೀಕ್ವೆನ್ಸಿಂಗ್‌ ನಡೆಸುವ ಪ್ರಯೋಗಾಲಯಗಳ ಒಕ್ಕೂಟ ಸಂಸ್ಥೆಯ ಮೂಲಗಳು ತಿಳಿಸಿವೆ.

ಜೊತೆಗೆ ನೆರೆಯ ಉತ್ತರಪ್ರದೇಶ ಮತ್ತು ಹರ್ಯಾಣದಿಂದ ಈ ತಿಂಗಳ ಮೊದಲ 15 ದಿನಗಳಲ್ಲಿ ಸಂಗ್ರಹಿಸಿದ ಮಾದರಿಗಳಲ್ಲೂ ಬಹುತೇಕ ಇದೇ ಕೋವಿಡ್‌ ಉಪತಳಿ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios