ಕೋಚ್ ರಿಕಿ ಪಾಂಟಿಂಗ್ ಕುಟುಂಬ ಸದಸ್ಯರಿಗೆ ಕೊರೋನಾ ಪಾಸಿಟಿವ್ 5 ದಿನದ ಕಾರಂಟೈನ್‌ಗೆ ಒಳಗಾದ ರಿಕಿ ಪಾಂಟಿಂಗ್ ರಾಜಸ್ಥಾನ ರಾಯಲ್ಸ್ ವಿರುದ್ದ ಪಂದ್ಯಕ್ಕೆ ಕೋಚ್ ಅಲಭ್ಯ  

ಮುಂಬೈ(ಏ.22):  ಐಪಿಎಲ್ 2022 ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮೇಲಿಂದ ಮೇಲೆ ಆಘಾತ ಎದುರಾಗುತ್ತಿದೆ. ಇದೀಗ ಡೆಲ್ಲಿ ತಂಡದಲ್ಲಿ ಮತ್ತೊಂದು ಕೊರೋನಾ ಪ್ರಕರಣ ಪತ್ತೆಯಾಗಿದೆ. ಈ ಬಾರಿ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಕುಟುಂಬ ಸದಸ್ಯರಿಗೆ ಕೊರೋನಾ ಕಾಣಿಸಿಕೊಂಡಿದೆ. ಹೀಗಾಗಿ ರಿಕಿ ಪಾಂಟಿಂಗ್ ಕೂಡ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

ರಿಕಿ ಪಾಂಟಿಂಗ್ ಕುಟುಂಬ ಸದಸ್ಯರೊಬ್ಬರಿಗೆ ಕೋವಿಡ್ ಪತ್ತೆಯಾಗಿದೆ. ತಕ್ಷಣವೇ ಅವರನ್ನು ಕೋವಿಡ್ ಕೇರ್ ಸೆಂಟರ್‌ಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಪ್ರಾಥಮಿಕ ಸಂಪರ್ಕದಲ್ಲಿದ್ದ ಕೋಚ್ ರಿಕಿ ಪಾಂಟಿಂಗ್ ಕೂಡ ಕೋವಿಡ್ ಪರೀಕ್ಷೆ ಮಾಡಿಸಿದ್ದಾರೆ. ಎರಡು ಬಾರಿ ಪರೀಕ್ಷೆ ಮಾಡಿಸಿದ್ದು ನೆಗಟೀವ್ ವರದಿ ಬಂದಿದೆ. ಆದರೆ ಮುಂಜಾಗ್ರತಾ ಕ್ರಮವಾಗಿ ರಿಕಿ ಪಾಂಟಿಂಗ್ 5 ದಿನದ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

IPL 2022: ಡೆಲ್ಲಿ ತಂಡದಲ್ಲಿ ಮತ್ತೆ ಕೊರೋನಾ ಸ್ಪೋಟ..!

ಡೆಲ್ಲಿ ಕ್ಯಾಪಿಟಲ್ಸ್ ವೈದ್ಯಕೀಯ ತಂಡ ಸೂಕ್ಷ್ಮವಾಗಿ ಗಮನಿಸುತ್ತಿದೆ. ಕೋವಿಡ್ ಸೋಂಕಿತ ಪಾಂಟಿಂಗ್ ಕುಟುಂಬ ಸದಸ್ಯರು ಆರೋಗ್ಯವಾಗಿದ್ದಾರೆ. ಇತ್ತ ಪಾಂಟಿಂಗ್ ಕೂಡ ಆರೋಗ್ಯವಾಗಿದ್ದಾರೆ. ಆದರೆ ಇತರರಿಗೆ ಹರಡದಂತೆ ತಡೆಯಲು ಮುನ್ನಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಡೆಲ್ಲಿ ಟೀಂ ಮ್ಯಾನೇಜ್ಮೆಂಟ್ ಹೇಳಿದೆ. 

5 ದಿನದ ಕ್ವಾರಂಟನ್ ಕಾರಣ ರಾಜಸ್ಥಾನ ರಾಯಲ್ಸ್ ವಿರುದ್ಧದ ಲೀಗ್ ಪಂದ್ಯಕ್ಕೆ ರಿಕಿ ಪಾಂಟಿಂಗ್ ಅಲಭ್ಯರಾಗಿದ್ದಾರೆ. ಕೋಚ್ ನೆರವಿಲ್ಲದೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕಣಕ್ಕಿಳಿಯುತ್ತಿದೆ. ಐಪಿಎಲ್ ಟೂರ್ನಿಯಲ್ಲಿ ಮತ್ತೆ ಮತ್ತೆ ಕೋವಿಡ್ ಪ್ರಕರಣ ಕಾಣಿಸಿಕೊಳ್ಳುತ್ತಿರುವುದು ಇದೀಗ ಅತಂಕಕ್ಕೆ ಕಾರಣವಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಈಗಾಗಲೇ ಒಟ್ಟು 6 ಕೋವಿಡ್ ಪ್ರಕರಣ ಪತ್ತೆಯಾಗಿದೆ. ಆಟಗಾರರು, ಸಹಾಯಕ ಸಿಬ್ಬಂದಿ ಸೇರಿದಂತೆ 6 ಪ್ರಕರಣದ ಬೆನ್ನಲ್ಲೇ ಇದೀಗ ಮತ್ತೊಂದು ಸೇರಿಕೊಂಡಿದೆ. 

ಪಂಜಾಬ್ ವಿರುದ್ಧದ ಪಂದ್ಯಕ್ಕೂ ಮೊದಲು ಡೆಲ್ಲಿ ತಂಡದಲ್ಲಿ ಆತಂಕ ಮನೆ ಮಾಡಿತ್ತು. ಕಾರಣ ಪಂದ್ಯದ ದಿನ ಬೆಳಗ್ಗೆ ತಂಡದಲ್ಲಿ ಮತ್ತೊಂದು ಕೋವಿಡ್‌ ಪ್ರಕರಣ ಪತ್ತೆಯಾಗಿತ್ತು. ಸಂಜೆ ವರೆಗೂ ಹೋಟೆಲ್‌ ಕೊಠಡಿಯಲ್ಲೇ ಬಂಧಿ. ಒಂದೇ ದಿನ ಎರಡೆರೆಡು ಬಾರಿ ಕೋವಿಡ್‌ ಪರೀಕ್ಷೆ, ಪಂದ್ಯ ನಡೆಯುತ್ತೋ ಇಲ್ಲವೋ ಎನ್ನುವ ಗೊಂದಲ. ಹೀಗೆ ಹಲವು ಸವಾಲು, ಆತಂಕದ ನಡುವೆಯೂ ಡೆಲ್ಲಿ ಕ್ಯಾಪಿಟಲ್ಸ್‌ ಬುಧವಾರ ನಡೆದ ಪಂಜಾಬ್‌ ಕಿಂಗ್‌್ಸ ವಿರುದ್ಧದ ಪಂದ್ಯದಲ್ಲಿ 9 ವಿಕೆಟ್‌ಗಳ ಅಮೋಘ ಗೆಲುವು ದಾಖಲಿಸಿತ್ತು.

IPL 2022 ಟೂರ್ನಿಗೆ ಅಂಟಿಕೊಂಡ ಕೊರೋನಾ, ಡೆಲ್ಲಿ ತಂಡದಲ್ಲಿ ಮೊದಲ ಕೇಸ್ ಪತ್ತೆ

ತಂಡದ ಆಲ್ರೌಂಡರ್‌, ಆಸ್ಪ್ರೇಲಿಯಾದ ಮಿಚೆಲ್‌ ಮಾಷ್‌ರ್‍ ಕೋವಿಡ್‌ ವರದಿ ಮತ್ತೊಮ್ಮೆ ಪಾಸಿಟಿವ್‌ ಬಂದಿರುವುದಾಗಿ ತಂಡ ತನ್ನ ಅಧಿಕೃತ ಟ್ವೀಟರ್‌ ಖಾತೆಯಲ್ಲಿ ಸೋಮವಾರ ಪ್ರಕಟಿಸಿದೆ. ಅಲ್ಲದೇ ಇತರ ಕೆಲ ಸಹಾಯಕ ಸಿಬ್ಬಂದಿಗೂ ಸೋಂಕು ದೃಢಪಟ್ಟಿರುವುದಾಗಿ ಮಾಹಿತಿ ನೀಡಿದೆ.

‘ಮಾಷ್‌ರ್‍ ಅವರ ಆರ್‌ಟಿ-ಪಿಸಿಆರ್‌ ವರದಿ ನೆಗೆಟಿವ್‌ ಬಂದಿತ್ತು. ಆದರೆ 2ನೇ ವರದಿಯಲ್ಲಿ ಸೋಂಕು ದೃಢಪಟ್ಟಿದೆ. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದೆಲ್ಲಾ ಆಟಗಾರರ ವರದಿ ನೆಗೆಟಿವ್‌ ಬಂದಿದೆ. ಮಾಷ್‌ರ್‍ 10 ದಿನಗಳ ಕಾಲ ತಂಡದಿಂದ ದೂರ ಉಳಿಯಲಿದ್ದಾರೆ’ ಎಂದು ತಿಳಿಸಿದೆ. ಸಹಾಯಕ ಸಿಬ್ಬಂದಿಯಲ್ಲಿ ಸೋಂಕು ಪಯತ್ತೆಯಾಗಿದ್ದರೂ ಅವರಲ್ಲಿ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ. ಅವರ ಮೇಲೆ ವೈದ್ಯಕೀಯ ತಂಡ ತೀವ್ರ ನಿಗಾ ಇರಿಸಿದೆ. ನೆಗೆಟಿವ್‌ ಬಂದ ಬಾಕಿ ಎಲ್ಲಾ ಆಟಗಾರರನ್ನು ಹೋಟೆಲ್‌ನಲ್ಲೇ ಐಸೋಲೇಸನ್‌ ಮಾಡಲಾಗಿದ್ದು, ನಿರಂತರವಾಗಿ ಪರೀಕ್ಷೆ ನಡೆಸಲಾಗುತ್ತದೆ’ ಎಂದು ತಂಡ ಮಾಹಿತಿ ನೀಡಿದೆ. ಕೆಲ ದಿನಗಳ ಹಿಂದೆ ತಂಡದ ಫಿಸಿಯೋ ಪ್ಯಾಟ್ರಿಕ್‌ ಫರ್ಹಾರ್ಚ್‌ ಅವರಲ್ಲಿ ಸೋಂಕು ಪತ್ತೆಯಾಗಿತ್ತು.