ತಮಿಳುನಾಡಿನ ವಿರುಧುನಗರ ಜಿಲ್ಲೆಯ ಪಟಾಕಿ ಕಾರ್ಖಾನೆಯೊಂದರಲ್ಲಿ ಭಾನುವಾರ ಸಂಭವಿಸಿದ ಭೀಕರ ಸ್ಫೋಟದಲ್ಲಿ 23 ಕಾರ್ಮಿಕರು ಸಾವನ್ನಪ್ಪಿದ್ದಾರೆ. ದುರಂತದಲ್ಲಿ 6 ಮಂದಿ ಗಾಯಗೊಂಡಿದ್ದು, ಈ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ. 

ವಿರುಧನಗರ (ಏ.20): ತಮಿಳುನಾಡಿನ ವಿರುಧುನಗರ ಜಿಲ್ಲೆಯ ಪಟಾಕಿ ಕಾರ್ಖಾನೆಯೊಂದರಲ್ಲಿ ಭಾನುವಾರ ಸಂಭವಿಸಿದ ಭೀಕರ ಸ್ಫೋಟದಲ್ಲಿ 23 ಕಾರ್ಮಿಕರು ಸಾವನ್ನಪ್ಪಿದ್ದಾರೆ. ದುರಂತದಲ್ಲಿ 6 ಮಂದಿ ಗಾಯಗೊಂಡಿದ್ದು, ಈ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ. ಜೊತೆಗೆ ಘಟನೆ ನಡೆದ ಕಟ್ಟಡದ ಅವಶೇಷಗಳಗಡಿ ಇನ್ನೂ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ ಏರಿಕೆಯ ಭೀತಿ ಇದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಟ್ಟನಾರಪಟ್ಟಿಯಲ್ಲಿರುವ ವನಜಾ ಪಟಾಕಿ ಕಾರ್ಖಾನೆ

ಕಟ್ಟನಾರಪಟ್ಟಿಯಲ್ಲಿರುವ ವನಜಾ ಪಟಾಕಿ ಕಾರ್ಖಾನೆಯಲ್ಲಿ 100ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಸ್ಫೋಟ ಸಂಭವಿಸಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಆದರೆ ಪಟಾಕಿ ತಯಾರಿಕೆಯ ಸಮಯದಲ್ಲಿ ಸುರಕ್ಷತಾ ಮಾನದಂಡಗಳನ್ನು ನಿರ್ಲಕ್ಷಿಸುವುದರಿಂದ ಅಪಘಾತ ಸಂಭವಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಸ್ಫೋಟದ ಸುದ್ದಿ ತಿಳಿಯುತ್ತಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರಾದರೂ, ಮುಖ್ಯ ಸ್ಫೋಟದ ಹಲವು ಗಂಟೆಗಳ ಬಳಿಕವೂ ಸ್ಥಳದಲ್ಲಿ ಪಟಾಕಿ ಸಿಡಿಯುತ್ತಲೇ ಇದ್ದ ಕಾರಣ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಸ್ಫೋಟದ ತೀವ್ರತೆಗೆ ಸ್ಥಳದಲ್ಲೇ 23 ಜನರು ಸುಟ್ಟುಕರಕಲಾಗಿದ್ದು, ಹಲವರ ಗುರುತು ಪತ್ತೆ ಹಿಡಿಯುವುದು ಕಷ್ಟವಾಗಿದೆ. ಕಳೆದ ತಿಂಗಳು ಜಿಲ್ಲೆಯಲ್ಲಿ ಇಂತಹದ್ದೇ ಘಟನೆ ನಡೆದು ನಾಲ್ವರು ಸಾವನ್ನಪ್ಪಿದ್ದರು.

ಆಗಿದ್ದೇನು?

  • ಭಾನುವಾರ ವಿರುಧುನಗರ ವಜನಾ ಪಟಾಕಿ ಕಾರ್ಖಾನೆಯಲ್ಲಿ 100 ಕಾರ್ಮಿಕರ ಕೆಲಸ
  • ಈ ವೇಳೆ ಏಕಾಏಕಿ ಭಾರಿ ಸ್ಫೋಟ, ಪಟಾಕಿ ಕಾರ್ಖಾನೆಯ ಕಟ್ಟಡ ದಿಢೀರ್‌ ಕುಸಿತ
  • ಅವಶೇಷಗಳ ಅಡಿ ಇನ್ನಷ್ಟು ಜನ ಸಿಲುಕಿರುವ ಶಂಕೆ. ಶೋಧ ಕಾರ್ಯ ಮುಂದುವರಿಕೆ
  • ಸ್ಫೋಟ ಘಟನೆಗೆ ನಿಖರ ಕಾರಣ ಇನ್ನೂ ನಿಗೂಢ. ಸುರಕ್ಷತಾ ಲೋಪವಾಗಿರುವ ಶಂಕೆ