- Home
- Sports
- Cricket
- Vaibhav Suryavanshi... ಸಿಕ್ಸ್ ಮಳೆ ಸುರಿಸೋದು ಓಕೆ! ಹುಡುಗಿಯರಿಗೆ ಹೀಗೆ ಮಾಡೋದು ನಾಟ್ ಓಕೆ ಬೇಬಿ!
Vaibhav Suryavanshi... ಸಿಕ್ಸ್ ಮಳೆ ಸುರಿಸೋದು ಓಕೆ! ಹುಡುಗಿಯರಿಗೆ ಹೀಗೆ ಮಾಡೋದು ನಾಟ್ ಓಕೆ ಬೇಬಿ!
Vaibhav Suryavanshi Instagram: ಈಗ IPL ಮ್ಯಾಚ್ ನಡೆಯುತ್ತಿದೆ. ಸದ್ಯ ಕ್ರಿಕೆಟ್ ಲೋಕದಲ್ಲಿ 15 ವರ್ಷದ ವೈಭವ್ ಸೂರ್ಯವಂಶಿ ಹೆಸರು ಭಾರೀ ಸೌಂಡ್ ಮಾಡ್ತಿದೆ. ಜಸ್ಪ್ರೀತ್ ಬೂಮ್ರಾ ಬೌಲಿಂಗ್ ಹಾಕಿದರೂ, ಈ ಹುಡುಗ ಸಿಕ್ಸ್ ಬಾರಿಸಿಯೇ ಬಾರಿಸುತ್ತಾನೆ. ಈಗ ಇವನ ಒಂದು ನಡೆ ಚರ್ಚೆ ಹುಟ್ಟು ಹಾಕಿದೆ.

ಕೋಟಿ ರೂಪಾಯಿಗೆ ಹರಾಜಾದ ಹುಡುಗ!
Vaibhav Suryavanshi: ಐಪಿಎಲ್ (IPL) ಇತಿಹಾಸದಲ್ಲೇ ಕಿರಿಯ ವಯಸ್ಸಿಗೆ ಈ ಹುಡುಗ ಕೋಟಿ ರೂಪಾಯಿಗೆ ಈ ಹುಡುಗ ಹರಾಜಾಗಿದ್ದಾನೆ, ಅಷ್ಟೇ ಅಲ್ಲದೆ 40-50 ಬಾಲ್‌ಗೆ 97 ರನ್ ಹೊಡೆದು ಇತಿಹಾಸ ನಿರ್ಮಿಸಿದ್ದಾನೆ. ಇನ್ನೂ ಈ ಹುಡುಗ 100 ರನ್ ಗಳಿಸಲು ಮಾತ್ರ ಆಗಿಲ್ಲ, ಆದರೆ ಈ ವಯಸ್ಸಿಗೆ ಮಾತ್ರ ಅವನು 100ರ ಹತ್ತಿರ ಹೋಗಿ ಔಟ್ ಆಗುತ್ತಿರೋದು ಸಣ್ಣ ವಿಷಯವಲ್ಲ.
ಇನ್‌ಸ್ಟಾಗ್ರಾಮ್‌ನಲ್ಲೂ ಚರ್ಚೆ
ಬಿಹಾರದ ಹುಡುಗನ ಕ್ರಿಕೆಟ್ ಒಂದೇ ಅಲ್ಲದೆ, ಇನ್‌ಸ್ಟಾಗ್ರಾಮ್ ಕೂಡ ಚರ್ಚೆಯಲ್ಲಿದೆ. ಇವನಿಗೆ ಆರು ಮಿಲಿಯನ್ ಫಾಲೋವರ್ಸ್ ಇದ್ದಾರೆ. ಈ ಹುಡುಗ 335 ಜನರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡುತ್ತಿದ್ದಾನೆ. ಆದರೆ ಅಲ್ಲೊಂದು ಅಚ್ಚರಿಯ ನಡೆ ಮಾತ್ರ ಎದ್ದು ಕಾಣುತ್ತಿದೆ.
ಸ್ವಾರಸ್ಯಕರ ವಿಷಯ ಬಯಲು
ವೈಭವ್ ಸೂರ್ಯವಂಶಿ ಇನ್‌ಸ್ಟಾಗ್ರಾಮ್ ಖಾತೆಯನ್ನು ಅನೇಕರು ಗಮನಿಸಿದ್ದು, ಅಲ್ಲಿ ಸ್ವಾರಸ್ಯಕರ ವಿಷಯವೊಂದು ಬಯಲಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ವೈಭವ್ ಸೂರ್ಯವಂಶಿ ಒಂದೇ ಒಂದು ಹುಡುಗಿ ಅಥವಾ ಮಹಿಳೆಯನ್ನು ಫಾಲೋ ಮಾಡುತ್ತಿಲ್ಲ!
ಪ್ರೊಫೆಶನಲ್ ಅಲ್ಲ
ವೈಭವ್ ಸೂರ್ಯವಂಶಿ ಈಗಲೂ ಮಗು, ನನ್ನ ಮನೆಗೆ ಬಂದು ಐಸ್‌ಕ್ರೀಂ ತಿನ್ನುತ್ತಾನೆ, ಸಿನಿಮಾ ನೋಡುತ್ತಾನೆ, ಅವನು ಪ್ರೊಫೆಶನಲ್ ಅಲ್ಲ ಎಂದು ಕ್ರಿಕೆಟರ್ ಜಿತೇಶ್ ಶರ್ಮಾ ಅವರೇ ಹೇಳಿದ್ದರು. ಅಂದಹಾಗೆ ಈಗ ಇನ್ನೂ ಕಿಡ್ ಎಂದು ಹೇಳುವ ನಡೆ ಕೂಡ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತಿರುತ್ತದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

