Asianet Suvarna News Asianet Suvarna News

Forced Conversion : ವಿದ್ಯಾರ್ಥಿನಿ ಆತ್ಮಹತ್ಯೆ ವಿಚಾರದಲ್ಲಿ ಬಿಜೆಪಿ ದ್ವೇಷ ಬಿತ್ತುತ್ತಿದೆ ಎಂದ ಡಿಎಂಕೆ ಮಿತ್ರಪಕ್ಷ!

ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಯತ್ನದ ಕಿರುಕುಳ
ಆತ್ಮಹತ್ಯೆ ಮಾಡಿಕೊಂಡಿದ್ದ ವಿದ್ಯಾರ್ಥಿನಿ
ಕ್ರಮ ಕೈಗೊಳ್ಳಿ ಎಂದ ಬಿಜೆಪಿ ವಿರುದ್ಧವೇ ತಿರುಗಿಬಿದ್ದ ಡಿಎಂಕೆ ಮಿತ್ರಪಕ್ಷ

Tamil Nadu BJP of using the Class 12 students suicide for promoting hate propaganda says DMK allies Viduthalai Chirithaigal Katchi san
Author
Bengaluru, First Published Jan 23, 2022, 5:45 PM IST

ಚೆನ್ನೈ (ಜ. 23): ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವಂತೆ ( convert to Christianity ) ಹಾಸ್ಟಲ್ ವಾರ್ಡನ್ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದ 12ನೇ ತರಗತಿಯ ಯುವತಿಯ ವಿಚಾರವಾಗಿ ತಮಿಳುನಾಡು ಬಿಜೆಪಿ ರಾಜಕೀಯ ಮಾಡುತ್ತಿದೆ. ಸಮಾಜದ ನಡುವೆ ದ್ವೇಷ ಬಿತ್ತಲು ಇದನ್ನು ಬಳಕೆ ಮಾಡುತ್ತಿದೆ ಎಂದು ತಮಿಳುನಾಡಿನ ಆಡಳಿತ ಪಕ್ಷ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮಿತ್ರಪಕ್ಷವಾಗಿರುವ ವಿದುತಲೈ ಚಿರಿತೈಗಲ್ ಕಚ್ಚಿ (Viduthalai Chirithaigal Katchi ) ಪಕ್ಷದ ನಾಯಕ ತೋಳ್ ತಿರುಮಲವನ್ (Thol Thirumalavan) ಆರೋಪಿಸಿದ್ದಾರೆ.

"ವಿದ್ಯಾರ್ಥಿ ಆತ್ಮಹತ್ಯೆಗೆ ಕಾರಣರಾದವರನ್ನು ಕಾನೂನಿನ ಮುಂದೆ ತರಬೇಕು. ಮ್ಯಾಜಿಸ್ಟ್ರೇಟ್‌ಗೆ ನೀಡಿದ ತಪ್ಪೊಪ್ಪಿಗೆಯಲ್ಲಿ, ವಿದ್ಯಾರ್ಥಿನಿ ತನ್ನನ್ನು ಅತಿಯಾಗಿ ಕೆಲಸಕ್ಕೆ ಒಡ್ಡಿದ ವಾರ್ಡನ್ ಅವರ ಕಿರುಕುಳದ ಬಗ್ಗೆ ಮಾತನಾಡಿದ್ದಾಳೆ. ಈ ಆಧಾರದಲ್ಲಿ ವಾರ್ಡನ್ ಅನ್ನು ಬಂಧನ ಮಾಡಲಾಗಿದೆ. ಆದರೆ ಆಕೆಯ ವಿಡಿಯೋ ಕ್ಲಿಪ್ ಅನ್ನು ಬಳಕೆ ಮಾಡಿಕೊಂಡು, ಬಲವಂತವಾಗಿ ಆಕೆಯನ್ನು ಕ್ರೈಸ್ಟ್ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿತ್ತು ಎಂದು ಬಿಂಬಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಈ ಅಪಪ್ರಚಾರದಿಂದಲೇ ಆಕೆ ಖಿನ್ನತೆಗೆ ತೆರಳಿದ್ದು ಮಾತ್ರವಲ್ಲದೆ, ಕೊನೆಗೆ ಆಕೆಯ ಸಾವಿಗೂ ಕಾರಣವಾಗಿದೆ ಎಂದು ಎಂದು ದಲಿತ ಕೇಂದ್ರಿತ ಪಕ್ಷವಾಗಿರುವ (Dalit-centric party) ವಿಸಿಕೆಯ ನಾಯಕ ತಿರುಮಲವನ್ ಹೇಳಿದ್ದಾರೆ. ವಿಷಯವನ್ನು ದಾರಿತಪ್ಪಿಸುತ್ತಿರುವ ಕೆಲ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ತಮಿಳುನಾಡು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ನಡುವೆ ತಮಿಳುನಾಡು ಸಿಪಿಎಂ ನಾಯಕ ಬಾಲಕೃಷ್ಣನ್ (CPM Tamil Nadu leader Balakrishnan )ಕೂಡ ಪ್ರಕರಣದ ಕುರಿತಾಗಿ ತಮ್ಮ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಯುವತಿಯ ಆತ್ಮಹತ್ಯೆ ವಿಚಾರದಲ್ಲಿ ಬಿಜೆಪಿಯ ರಾಜಕೀಯ ಕುತಂತ್ರವನ್ನು ಖಂಡನೆ ಮಾಡುವುದಾಗಿ ಹೇಳಿದ್ದಾರೆ.

Forced Conversion : ಮೃತದೇಹ ಸ್ವೀಕರಿಸಿ, ಅಂತ್ಯ ಸಂಸ್ಕಾರ ಮಾಡಿ ಎಂದ ಹೈಕೋರ್ಟ್
"ವಿದ್ಯಾರ್ಥಿನಿಯ ಹೇಳಿಕೆಯ ಆಧಾರದ ಮೇಲೆ, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ, ಪೊಲೀಸರು ಐಪಿಸಿಯ ಸೆಕ್ಷನ್ 307, 511, 75 ಮತ್ತು 82 (1) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ" ಎಂದು ಬಾಲಕೃಷ್ಣನ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ‘ಹಾಸ್ಟೆಲ್‌ನಲ್ಲಿ ಅನುಭವಿಸಿದ ಚಿತ್ರಹಿಂಸೆಯಿಂದ ಖಿನ್ನತೆಗೆ ಒಳಗಾಗಿದ್ದೆ’ ಎಂದು ವಿದ್ಯಾರ್ಥಿನಿ ಹೇಳಿಕೊಂಡಿದ್ದಾಳೆ, ಇದರಿಂದ ಈ  ನಿರ್ಧಾರ ಕೈಗೊಂಡಿದ್ದೇನೆ ಎಂದೂ ಹೇಳಿದ್ದಾಳೆ. ಆದರೆ ಬಿಜೆಪಿಯು ರಾಜಕೀಯ ಲಾಭಕ್ಕಾಗಿ ಈ ವಿಷಯವನ್ನು ಧಾರ್ಮಿಕ ನಿವೇದನೆಯಿಂದ ಉಂಟಾದ ಸಾವಿನ ಕಡೆಗೆ ತಿರುಗಿಸುತ್ತಿದೆ ಎಂದು ಸಿಪಿಎಂ ಆರೋಪಿಸಿದೆ. ಧರ್ಮ ಪ್ರೇರಿತವಾಗಿ ದ್ವೇಷ ಹಂಚುವುದನ್ನು ಸಿಪಿಎಂ ಖಂಡಿಸಲಿದ್ದು, ತಮಿಳುನಾಡಿನಲ್ಲಿ ಅಸಂಗತತೆಯನ್ನು ಉಂಟುಮಾಡಲು ಪ್ರಯತ್ನಿಸುವವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದೇವೆ' ಬಾಲಕೃಷ್ಣನ್ ಹೇಳಿದ್ದಾರೆ.

Hate Speech: ಸುಪ್ರೀಂ ಮೆಟ್ಟಿಲೇರಿದ ಹಿಂದೂ ಸಂಘಟನೆ, ಮುಸ್ಲಿಂ ನಾಯಕರ ಬಂಧನಕ್ಕೆ ಆಗ್ರಹ!
ಏನಿದು ಪ್ರಕರಣ?:  
ತಮಿಳುನಾಡಿನ ತಂಜಾವೂರು (Thanjavur) ಜಿಲ್ಲೆಯ ಕ್ರಿಶ್ಚಿಯನ್ ಮಿಷನರಿ ಶಾಲೆಯಲ್ಲಿ ಓದುತ್ತಿದ್ದ 17 ವರ್ಷದ ಬಾಲಕಿಗೆ ನಿರಂತರವಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗುವಂತೆ ಒತ್ತಾಯಿಸಲಾಗಿದೆ ಇದಕ್ಕೆ ನಿರಾಕರಿಸಿದ ಆಕೆಯಲ್ಲಿ ಅಲ್ಲಿನ ವಾರ್ಡನ್ ಹಾಸ್ಟೆಲ್ ನಲ್ಲಿ ಮನೆಗೆಲಸದವಳ ರೀತಿ ನೋಡಿಕೊಳ್ಳುತ್ತಿದ್ದರು ಎನ್ನುವುದು ಆರೋಪ. ಈ ನಿಟ್ಟಿನಲ್ಲಿ ಸ್ವತಃ ಹುಡುಗಿಯೇ ಮಾಡಿರುವ ವಿಡಿಯೋ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ. ಈ ಕಿರುಕುಳದಿಂದ ಬೇಸತ್ತ ಯುವತಿ ಜನವರಿ 9 ರಂದದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಬಳಿಕ ಆಕೆಯನ್ನು ತಂಜಾವೂರು ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಜನವರಿ 19 ರಂದು ಕೊನೆಯುಸಿರೆಳೆದಿದ್ದಾಳೆ. ಈ ಕುರಿತಂತೆ ಶಾಕೆಯ ವಾರ್ಡನ್ ಅನ್ನು ಬಂಧನ ಮಾಡಲಾಗಿದೆ.

ವಾರ್ಡನ್ ವಿರುದ್ಧ ಐಪಿಸಿ ಸೆಕ್ಷನ್ 305 (ಮಗುವಿನ ಆತ್ಮಹತ್ಯೆಗೆ ಪ್ರಚೋದನೆ) ಮತ್ತು ಸೆಕ್ಷನ್ 75 (ಮಗುವಿನ ಮೇಲಿನ ಕ್ರೌರ್ಯಕ್ಕೆ ಶಿಕ್ಷೆ) ಮತ್ತು ಬಾಲಾಪರಾಧ ನ್ಯಾಯ ಕಾಯಿದೆ 82 (1) (ಶಿಸ್ತಿನ ಗುರಿಯೊಂದಿಗೆ ದೈಹಿಕ ಶಿಕ್ಷೆಗೆ ಒಳಗಾಗುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Follow Us:
Download App:
  • android
  • ios