Asianet Suvarna News Asianet Suvarna News

Hate Speech: ಸುಪ್ರೀಂ ಮೆಟ್ಟಿಲೇರಿದ ಹಿಂದೂ ಸಂಘಟನೆ, ಮುಸ್ಲಿಂ ನಾಯಕರ ಬಂಧನಕ್ಕೆ ಆಗ್ರಹ!

* ಪ್ರಚೋದನಕಾರಿ ಭಾಷಣ, ಸುಪ್ರೀಂ ಮೆಟ್ಟಿಲೇರಿದ ಹಿಂದೂ ಸಂಘಟನೆಗಳು

* ಮುಸ್ಲಿಂ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹ

Arrest Muslim Leaders For Hate Speech Right Wing Groups To Supreme Court pod
Author
Bangalore, First Published Jan 23, 2022, 1:41 PM IST

ನವದೆಹಲಿ(ಜ.23): ಈ ಹಿಂದೆ ಮುಸ್ಲಿಂ ನಾಯಕರು ಹಿಂದೂಗಳ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಸಮಾನ ರಕ್ಷಣೆಗೆ ಆಗ್ರಹಿಸಿ ಹಿಂದೂ ಸಂಘಟನೆಯೊಂದು ನ್ಯಾಯಾಲಯದ ಬಾಗಿಲು ತಟ್ಟಿದೆ. ಹಿಂದೂ ಫ್ರಂಟ್ ಫಾರ್ ಜಸ್ಟಿಸ್ ದ್ವೇಷದ ಭಾಷಣಗಳ ಪಟ್ಟಿಯನ್ನು ಸಿದ್ಧಪಡಿಸಿದೆ ಎಂದು ಹೇಳಲಾಗುತ್ತಿದೆ. ನ್ಯಾಯವಾದಿ ವಿಷ್ಣು ಶಂಕರ್ ಜೈನ್ ಅವರು ಸಲ್ಲಿಸಿದ ಅರ್ಜಿಯಲ್ಲಿ ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಸಮಾನವಾಗಿ ಕಾನೂನಿನ ರಕ್ಷಣೆಗೆ ಅರ್ಹರಾಗಿದ್ದಾರೆ ಮತ್ತು ಆದ್ದರಿಂದ ದ್ವೇಷ ಭಾಷಣದ ಘಟನೆಗಳನ್ನು ವಿಶ್ಲೇಷಿಸುವಾಗ ಬಹುಸಂಖ್ಯಾತ ಅಥವಾ ಅಲ್ಪಸಂಖ್ಯಾತ ಪರಿಕಲ್ಪನೆಯನ್ನು ಪರಿಚಯಿಸಬಾರದು ಎಂದು ಹೇಳಿದ್ದಾರೆ.

ದ್ವೇಷದ ಮಾತುಗಳಿಂದ ಸಮಾಜದಲ್ಲಿ ಅಶಾಂತಿ ಹರಡುತ್ತಿದೆ

ವಿಷ್ಣು ಶಂಕರ್ ಜೈನ್ ಅವರು, ಆತ್ಮರಕ್ಷಣೆಯ ವಿಷಯದೊಂದಿಗೆ ನಿರ್ದಿಷ್ಟ ಸಮುದಾಯದ ಸದಸ್ಯರನ್ನು ರಕ್ಷಿಸಲು ಉದ್ದೇಶಿಸಿರುವ ಭಾಷಣವು ದ್ವೇಷ ಭಾಷಣದ ವ್ಯಾಪ್ತಿಗೆ ಬರುವುದಿಲ್ಲ. ಸಮಾಜದಲ್ಲಿ ಗಲಭೆ ಸೃಷ್ಟಿಸುವ, ಹಿಂಸಾಚಾರ ಮತ್ತು ಕೋಮು ಉದ್ವಿಗ್ನತೆಯನ್ನು ಪ್ರಚೋದಿಸುವ ಉದ್ದೇಶದಿಂದ ವ್ಯಕ್ತಿಗಳು ದ್ವೇಷಪೂರಿತ ಭಾಷಣಗಳನ್ನು ಮಾಡುತ್ತಾರೆ ಎಂದು ಸಂಸ್ಥೆ ಮತ್ತು ಅದರ ಇಬ್ಬರು ಸದಸ್ಯರು ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಲಾಗಿದೆ.

ಎಸ್‌ಐಟಿ ತನಿಖೆಗೆ ಆಗ್ರಹ

ಹಿಂದೂ ಫ್ರಂಟ್ ಫಾರ್ ಜಸ್ಟಿಸ್ ತನ್ನ ಅಧ್ಯಕ್ಷ ಮತ್ತು ಇತರರ ಮೂಲಕ ಅರ್ಜಿಯನ್ನು ಸಲ್ಲಿಸಿದೆ. ಪ್ರಸ್ತುತ ಅರ್ಜಿಯ ಮೂಲಕ ಅರ್ಜಿದಾರರು ಹಿಂದೂ ಸಮುದಾಯದ ಸದಸ್ಯರು, ಅವರ ದೇವತೆಗಳ ವಿರುದ್ಧ ಮಾಡಿದ ದ್ವೇಷ ಭಾಷಣಗಳ ತನಿಖೆಗೆ ಎಸ್‌ಐಟಿಗೆ ನಿರ್ದೇಶಿಸುವಂತೆ ಈ ನ್ಯಾಯಾಲಯವನ್ನು ಪ್ರಾರ್ಥಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಮುಸ್ಲಿಂ ಸಮುದಾಯದ ಕೆಲವು ಮುಖಂಡರು ಮತ್ತು ಬೋಧಕರು ಹಿಂದೂ ಧರ್ಮದ ವಿರುದ್ಧ ಮತ್ತು ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಯ ವಿರುದ್ಧ ಪ್ರಚಾರ ಮಾಡುತ್ತಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಮುಸ್ಲಿಂ ಮುಖಂಡರ ಬಂಧನಕ್ಕೆ ಆಗ್ರಹ

(ಎಐಎಂಐಎಂ) ನಾಯಕರಾದ ಅಕ್ಬರುದ್ದೀನ್ ಓವೈಸಿ, ಎಎಪಿ ನಾಯಕರಾದ ಅಮಾನತುಲ್ಲಾ ಖಾನ್ ಮತ್ತು ವಾರಿಸ್ ಪಠಾಣ್ ಅವರನ್ನು ದ್ವೇಷದ ಭಾಷಣದ ಆರೋಪ ಹೊರಿಸಿ ಅವರ ಬಂಧನಕ್ಕೆ ಒತ್ತಾಯಿಸಲಾಗಿದೆ. ಇತ್ತೀಚೆಗೆ ಹರಿದ್ವಾರ ಮತ್ತು ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಹಿಂದೂ ಧಾರ್ಮಿಕ ಮುಖಂಡರ ದ್ವೇಷದ ಭಾಷಣದ ವಿರುದ್ಧ ನ್ಯಾಯಾಲಯವು ಉತ್ತರಾಖಂಡ, ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರಿಂದ ಪ್ರತಿಕ್ರಿಯೆಯನ್ನು ಕೋರಿರುವುದು ಉಲ್ಲೇಖನೀಯವಾಗಿದೆ.

Follow Us:
Download App:
  • android
  • ios