ಮತಾಂತರಕ್ಕೆ ಯತ್ನಿಸಿದ್ದ ಹಾಸ್ಟಲ್ ವಾರ್ಡನ್ಬಲವಂತದ ಮತಾಂತರ ಬಗ್ಗೆ ಆರೋಪ ಮಾಡಿದ್ದ ವಿಡಿಯೋ ವೈರಲ್ಜ. 9 ರಂದು ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ  ಜ. 19 ರಂದು ಸಾವು ಕಂಡಿದ್ದರು

ಚೆನ್ನೈ (ಜ. 23): ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವಂತೆ ( convert to Christianity ) ಹಾಸ್ಟಲ್ ವಾರ್ಡನ್ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದ 12ನೇ ತರಗತಿಯ ಯುವತಿಯ ಪೋಷಕರಿಗೆ ಮದ್ರಾಸ್ ಹೈಕೋರ್ಟ್ ನ ಮಧುರೈ ಪೀಠವು ಮೃತದೇಹ ಸ್ವೀಕರಿಸಿ, ಅಂತಿಮ ಸಂಸ್ಕಾರ (Bury) ನಡೆಸುವಂತೆ ಸೂಚನೆ ನೀಡಿದೆ. ನ್ಯಾಯಾಲಯದ ಆದೇಶದ ಬೆನ್ನಲ್ಲಿಯೇ ಶವವನ್ನು ಪಡೆದುಕೊಂಡಿರುವ ಪೋಷಕರು ಅಂತ್ಯಸಂಸ್ಕಾರ ನಡೆಸಿದ್ದಾರೆ.

ಶಾಲೆ (School)ಹಾಗೂ ಹಾಸ್ಟೆಲ್ (Hostel) ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದ 17 ವರ್ಷದ ಬಾಲಕಿಯ ಕುಟುಂಬಸ್ಥರು, ಇವರ ವಿರುದ್ಧ ಕ್ರಮ ದಾಖಲಾಗದ ಹೊರತು ಹುಡುಗಿಯ ಶವವನ್ನೂ ಸ್ವೀಕರಿಸುವುದಿಲ್ಲ ಹಾಗೂ ಅಂತ್ಯ ಸಂಸ್ಕಾರವನ್ನೂ ಮಾಡುವುದಿಲ್ಲ ಎಂದು ಪಟ್ಟುಹಿಡಿದು ಕುಳಿತಿತ್ತು. ಪ್ರಕರಣವನ್ನು ಸಿಬಿಸಿಐಡಿಗೆ ವರ್ಗಾಯಿಸಲು ಆದೇಶ ನೀಡುವಂತೆ ಕೋರಿ ವಿದ್ಯಾರ್ಥಿಯ ತಂದೆ ಮದ್ರಾಸ್ ಹೈಕೋರ್ಟ್‌ನ (Madras High Court)ಮಧುರೈ ಶಾಖೆಯಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು ಪ್ರಕರಣದ ತನಿಖೆ ನಡೆಸುವಂತೆ ತಿರುಕಟ್ಟುಪಲ್ಲಿ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಅರ್ಜಿದಾರರು ಮರು ಮೇಲ್ಮನವಿ ಸಲ್ಲಿಸಿದ ನಂತರ ನ್ಯಾಯಾಧೀಶ ಜಿಆರ್ ಸ್ವಾಮಿನಾಥನ್, ಶನಿವಾರ ತುರ್ತು ವಿಷಯವಾಗಿ ಕೈಗಿತ್ತಿಕೊಂಡರು. ಮೊದಲ ಹಂತವಾಗಿ ವಿದ್ಯಾರ್ಥಿನಿಯ ಕುಟುಂಬಸ್ಥರು ಆಕೆಯ ಶವವನ್ನು ಸ್ವೀಕರಿಸಿ ಅಂತ್ಯ ಸಂಸ್ಕಾರ ನೆರವೇರಿಸಬೇಕು ಎಂದು ನ್ಯಾಯಾಧೀಶರು ತಿಳಿಸಿದ್ದಾರೆ. ಸಾವಿಗೂ ಮುನ್ನ ಬಾಲಕಿ ವಿಡಿಯೋವೊಂದನ್ನು ರೆಕಾರ್ಡ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಶಾಲೆಯ ಆಡಳಿತ ಮಂಡಳಿ ತನ್ನನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸುವಂತೆ ಒತ್ತಾಯಿಸಿದೆ ಎಂದು ಆರೋಪಿಸಿದ್ದಾಳೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.

“ವೀಡಿಯೊ ತೆಗೆದವರ ಪತ್ತೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಂಜಾವೂರು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ತಂಜಾವೂರು ವೈದ್ಯಕೀಯ ಕಾಲೇಜಿನ ಫೋರೆನ್ಸಿಕ್ ವೈದ್ಯರು ಈಗಾಗಲೇ ವಿದ್ಯಾರ್ಥಿನಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ಲೈಂಗಿಕ ಕಿರುಕುಳದ ಶಂಕೆ ಇಲ್ಲ. ಆದ್ದರಿಂದ ಮರು ಪರೀಕ್ಷೆಯ ಅಗತ್ಯವಿಲ್ಲ. ಮೃತದೇಹವನ್ನು ಪಡೆದುಕೊಂಡು, ಅಂತ್ಯಸಂಸ್ಕಾರ ಮಾಡುವಂತೆ ವಿದ್ಯಾರ್ಥಿಯ ಪೋಷಕರಲ್ಲಿ ಮನವಿ ಮಾಡುತ್ತೇನೆ' ಎಂದು ನ್ಯಾಯಾಲಯ ಹೇಳಿದೆ. ವಿದ್ಯಾರ್ಥಿನಿಯ ಮೃತದೇಹವನ್ನು ಸ್ವಗ್ರಾಮಕ್ಕೆ ಸಾಗಿಸಲು ಅಗತ್ಯ ವ್ಯವಸ್ಥೆ ಮಾಡಬೇಕು ಎಂದು ನ್ಯಾಯಾಧೀಶರು ಸೂಚಿಸಿದರು. ಈ ವಿಚಾರದಲ್ಲಿ ಪೊಲೀಸರು ಮತ್ತೆ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಘೋಷಿಸಿ ಪ್ರಕರಣವನ್ನು ಸೋಮವಾರಕ್ಕೆ ಮುಂದೂಡಿದರು.

Covid Crisis: ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಮದುವೆ ರದ್ದು!
ಏನಿದು ಪ್ರಕರಣ?: ತಮಿಳುನಾಡಿನ ತಂಜಾವೂರು ಜಿಲ್ಲೆಯ ಕ್ರಿಶ್ಚಿಯನ್ ಮಿಷನರಿ ಶಾಲೆಯಲ್ಲಿ ಓದುತ್ತಿದ್ದ 17 ವರ್ಷದ ಬಾಲಕಿಗೆ ನಿರಂತರವಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗುವಂತೆ ಒತ್ತಾಯಿಸಲಾಗಿದೆ ಇದಕ್ಕೆ ನಿರಾಕರಿಸಿದ ಆಕೆಯಲ್ಲಿ ಅಲ್ಲಿನ ವಾರ್ಡನ್ ಹಾಸ್ಟೆಲ್ ನಲ್ಲಿ ಮನೆಗೆಲಸದವಳ ರೀತಿ ನೋಡಿಕೊಳ್ಳುತ್ತಿದ್ದರು ಎನ್ನುವುದು ಆರೋಪ. ಈ ನಿಟ್ಟಿನಲ್ಲಿ ಸ್ವತಃ ಹುಡುಗಿಯೇ ಮಾಡಿರುವ ವಿಡಿಯೋ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ. ಈ ಕಿರುಕುಳದಿಂದ ಬೇಸತ್ತ ಯುವತಿ ಜನವರಿ 9 ರಂದದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಬಳಿಕ ಆಕೆಯನ್ನು ತಂಜಾವೂರು ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಜನವರಿ 19 ರಂದು ಕೊನೆಯುಸಿರೆಳೆದಿದ್ದಾಳೆ. ಈ ಕುರಿತಂತೆ ಶಾಕೆಯ ವಾರ್ಡನ್ ಅನ್ನು ಬಂಧನ ಮಾಡಲಾಗಿದೆ.

India Smartphone Market: 2021ರಲ್ಲಿ ಭಾರತದಲ್ಲಿ ದಾಖಲೆಯ 17 ಕೋಟಿ ಮೊಬೈಲ್‌ ಮಾರಾಟ!
ವಾರ್ಡನ್ ವಿರುದ್ಧ ಐಪಿಸಿ ಸೆಕ್ಷನ್ 305 (ಮಗುವಿನ ಆತ್ಮಹತ್ಯೆಗೆ ಪ್ರಚೋದನೆ) ಮತ್ತು ಸೆಕ್ಷನ್ 75 (ಮಗುವಿನ ಮೇಲಿನ ಕ್ರೌರ್ಯಕ್ಕೆ ಶಿಕ್ಷೆ) ಮತ್ತು ಬಾಲಾಪರಾಧ ನ್ಯಾಯ ಕಾಯಿದೆ 82 (1) (ಶಿಸ್ತಿನ ಗುರಿಯೊಂದಿಗೆ ದೈಹಿಕ ಶಿಕ್ಷೆಗೆ ಒಳಗಾಗುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.