NIAಗೆ ಭಾರತದ ಪ್ರಮುಖ ನಗರಗಳಲ್ಲಿ ಭಯೋತ್ಪಾದನಾ ದಾಳಿ ಕುರಿತು ಬೆದರಿಕೆ ಇಮೇಲ್ ಬಂದಿದೆ. ಇದರ ಬೆನ್ನಲ್ಲೇ ಮುಂಬೈ ಸೇರಿದಂತೆ ಹಲವು ನಗರಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. 

ಮುಂಬೈ(ಫೆ.03):  ಕೇಂದ್ರ ಬಜೆಟ್ ಮಂಡನೆ ಬಳಿಕ ಇಡೀ ಭಾರತದಲ್ಲಿ ಇದೀಗ ಬಜೆಟ್ ಕುರಿತು ಚರ್ಚೆ ನಡೆಯುತ್ತಿದೆ. ಇದರ ನಡುವೆ ಭಾರತದ ಪ್ರಮುಖ ನಗರಗಳಲ್ಲಿ ಭಯೋತ್ಪಾದನಾ ದಾಳಿಗೆ ಸಂಚು ರೂಪಿಸಿರುವ ಮಾಹಿತಿ ಬಹಿರಂಗವಾಗಿದೆ. ಮುಂಬೈನ ರಾಷ್ಟ್ರೀಯ ತನಿಖಾ ಸಂಸ್ಥೆ( NIAಗೆ ತಾಲಿಬಾನ್ ಹೆಸರಲ್ಲಿ ಇಮೇಲ್ ಬಂದಿದೆ. ಈ ಮೇಲ್‌ನಲ್ಲಿ ಮುಂಬೈ ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಭಯೋತ್ಪಾದನಾ ದಾಳಿ ಕುರಿತು ಎಚ್ಚರಿಕೆ ನೀಡಲಾಗಿದೆ. ತಾಲಿಬಾನ್ ಮುಖ್ಯಸ್ಥ ಸಿರಾಜುದ್ದೀನ್ ಹಕ್ಕಾನಿ ಆದೇಶದಂತೆ ಈ ಮೇಲ್ ಕಳುಹಿಸುತ್ತಿರುವುದಾಗಿ ಉಲ್ಲೇಖಿಸಲಾಗಿದೆ. ಇಮೇಲ್ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆ ಆರಂಭಿಸಿದೆ. ಆದರೆ ದಾಳಿ ಎಚ್ಚರಿಕೆ ಕಾರಣ ಮುಂಬೈ ಸೇರಿದಂತೆ ಹಲವು ನಗರಗಳಲ್ಲಿ ಹೈ ಅಲರ್ಟ್ ಘೋಷಿಸಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆ ಪ್ರಾಥಮಿಕ ತನಿಖೆ ಪ್ರಕಾರ ತಾಲಿಬಾನ್ ಹೆಸರಲ್ಲಿ ಇತರರು ಇ ಮೇಲ್ ಕಳುಹಿಸಿರುವ ಸಾಧ್ಯತೆಯನ್ನು ಅಧಿಕಾರಿಗಳು ಹೇಳಿದ್ದಾರೆ. ಭಾರತದ ಜೊತೆ ಆಫ್ಘಾನಿಸ್ತಾನ ತಾಲಿಬಾನ್ ಉತ್ತಮ ಸಂಬಂಧ ಹೊಂದಿದೆ. ಹೀಗಾಗಿ ಹಕ್ಕಾನಿ ಹೆಸರಿನಲ್ಲಿ ಕಿಡಿಗೇಡಿಗಳು ಅಥವಾ ಭಯೋತ್ಪಾದಕ ಕೃತ್ಯ ಎಸಗಲು ಸಣ್ಣ ಸಣ್ಣ ಗುಂಪುಗಳು ಮಾಡಿರುವ ಸಾಧ್ಯತೆ ಇದೆ ಅನ್ನೋದನ್ನು NIA ಅಭಿಪ್ರಾಯ ಪಟ್ಟಿದೆ. ಆದರೆ ಬೆದರಿಕೆ ದಾಳಿ ಎಚ್ಚರಿಕೆ ಕಾರಣ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಈಗಾಗಲೇ ನಗರ ಹಾಗೂ ಗಡಿ ಪ್ರದೇಶದಲ್ಲಿ ಅಲರ್ಟ್ ಘೋಷಿಸಲಾಗಿದೆ.

ಪಾಕ್ ಮಸೀದಿಯಲ್ಲಿ ಬಾಂಬ್ ದಾಳಿ: 46 ಜನ ಬಲಿ, ಸುಮಾರು 150 ಮಂದಿಗೆ ಗಾಯ; ಹೊಣೆ ಹೊತ್ತ ತಾಲಿಬಾನ್‌..!

NIA ಅಧಿಕಾರಿಗಳು ಮುಂಬೈ ಪೊಲೀಸರಿಗೆ ಉಗ್ರರ ದಾಳಿ ಕುರಿತು ಮಾಹಿತಿ ಹಂಚಿಕೊಂಡಿದೆ. ಮುಂಬೈನ ಕೊಲಾಬಾ ಸೇರಿದೆ ಜಲ ಮಾರ್ಗದಲ್ಲಿ ಭದ್ರತಾ ಪಡೆ ಹದ್ದಿನ ಕಣ್ಣಿಟ್ಟಿದೆ. ಇನ್ನು ರೈಲು ನಿಲ್ದಾಣ, ವಿಮಾನ ನಿಲ್ದಾಣ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಪೊಲೀಸರು ನಾಕಾಬಂದಿ ಹಾಕಿದ್ದಾರೆ. ಇದೇ ವೇಳೆ ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ಇತರ ನಗರಕ್ಕೂ ಹೈ ಅಲರ್ಟ್ ಸೂಚಿಸಿದೆ.

ಕಾಶ್ಮೀರದಲ್ಲಿ ಪರ್ಫ್ಯೂಮ್ ಬಾಂಬ್ ಪತ್ತೆ
ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ಸಂಭವಿಸಿದ ಹಲವು ಭಯೋತ್ಪಾದಕ ದಾಳಿಗಳ ರೂವಾರಿ ಎಂದು ಹೇಳಲಾದ ಲಷ್ಕರ್‌-ಎ-ತೊಯ್ಬಾ (ಎಲ್‌ಇಟಿ) ಉಗ್ರನನ್ನು ಪೊಲೀಸರು ಬಂಧಿಸಿದ್ದು, ಆತನ ಬಳಿ ‘ಪರ್ಫ್ಯೂಮ್ ಬಾಂಬ್‌’ ಪತ್ತೆಯಾಗಿದೆ. ಈ ಮಾದರಿಯ ಬಾಂಬನ್ನು ನಾವು ನೋಡುತ್ತಿರುವುದು ಇದೇ ಮೊದಲು ಎಂದು ಪೊಲೀಸರು ಹೇಳಿದ್ದಾರೆ.

ಹಿಂದೂಗಳಲ್ಲಿ ಆತಂಕ ಹುಟ್ಟಿಸಲು PFI ನಿಂದಲೇ ಪ್ರವೀಣ್ ನೆಟ್ಟಾರು‌ ಹತ್ಯೆ: ಎನ್ಐಎ ಆರೋಪ ಪಟ್ಟಿಯಲ್ಲಿ ಉಲ್ಲೇಖ!

ಕಳೆದ ವರ್ಷದ ಮೇ ತಿಂಗಳಲ್ಲಿ ವೈಷ್ಣೋದೇವಿ ಯಾತ್ರೆಗೆ ತೆರಳುತ್ತಿದ್ದ ಬಸ್‌ನಲ್ಲಿ ಬಾಂಬ್‌ ಸ್ಫೋಟಿಸಿದ ಪ್ರಕರಣವೂ ಸೇರಿದಂತೆ ಹಲವು ಭಯೋತ್ಪಾದಕ ದಾಳಿಗಳಿಗೆ ಸಂಬಂಧಿಸಿದಂತೆ ರಿಯಾಸಿ ಜಿಲ್ಲೆಯ ಆರಿಫ್‌ ಎಂಬಾತನನ್ನು ಬಂಧಿಸಲಾಗಿದೆ. ಆತ ವೃತ್ತಿಯಲ್ಲಿ ಸರ್ಕಾರಿ ಶಾಲೆಯ ಶಿಕ್ಷಕನಾಗಿದ್ದು, ರಹಸ್ಯವಾಗಿ ಲಷ್ಕರ್‌ ಉಗ್ರನಾಗಿದ್ದ. ಆತನ ಬಳಿ ಪರ್ಫ್ಯೂಮ್ ಬಾಟಲಿಯಲ್ಲಿ ತುಂಬಿದ ಸುಧಾರಿತ ಸ್ಫೋಟಕ (ಐಇಡಿ) ಪತ್ತೆಯಾಗಿದೆ. ಕಾಶ್ಮೀರದ ಪೊಲೀಸರು ಇಂತಹ ಬಾಂಬ್‌ ಇದೇ ಮೊದಲ ಬಾರಿ ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.

ಆದರೆ ಈತ ನಡೆಸಿದ ಭಯೋತ್ಪಾದಕ ದಾಳಿಗಳಿಗೆ ಇದೇ ಬಾಂಬ್‌ ಬಳಸಿದ್ದನೇ ಎಂಬುದು ಗೊತ್ತಾಗಿಲ್ಲ. ತನಿಖೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.