ಹಿಂದೂಗಳಲ್ಲಿ ಆತಂಕ ಹುಟ್ಟಿಸಲು PFI ನಿಂದಲೇ ಪ್ರವೀಣ್ ನೆಟ್ಟಾರು‌ ಹತ್ಯೆ: ಎನ್ಐಎ ಆರೋಪ ಪಟ್ಟಿಯಲ್ಲಿ ಉಲ್ಲೇಖ!

ಸಮಾಜದಲ್ಲಿ ಭಯೋತ್ಪಾದನೆ, ಕೋಮು ದ್ವೇಷ ಮತ್ತು ಅಶಾಂತಿಯನ್ನು ಸೃಷ್ಟಿಸಲು ಪಿಎಫ್‌ಐ ಸಂಘಟನೆಯಿಂದ  ಪ್ರವೀಣ್ ನೆಟ್ಟಾರು ಹತ್ಯೆ ಮಾಡಲಾಗಿದೆ. 2047 ರ ವೇಳೆಗೆ ಇಸ್ಲಾಮಿಕ್ ಆಳ್ವಿಕೆಯನ್ನು ಸ್ಥಾಪಿಸುವ ತನ್ನ ಕಾರ್ಯಸೂಚಿಯ ಭಾಗವಾಗಿ ಹತ್ಯೆಯಾಗಿದೆ. ಪ್ರವೀಣ್ ನೆಟ್ಟಾರು ಹತ್ಯೆ ನಡೆಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ದಳ ಕೋರ್ಟ್ ಗೆ ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದೆ.

Praveen Nettaru was murdered by PFI organization NIA submitted charge sheet report to the court rav

ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

ಮಂಗಳೂರು (ಜ.21) : ಹಿಂದೂ ಸಮುದಾಯದಲ್ಲಿ ಆತಂಕ ಹುಟ್ಟಿಸಲೆಂದೇ ಪ್ರವೀಣ್ ನೆಟ್ಟಾರು ಹತ್ಯೆ ನಡೆಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ದಳ ಕೋರ್ಟ್ ಗೆ ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದೆ.

 ಮಂಗಳೂರಿನ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು(Praveen nettaru) ಹತ್ಯೆ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳ(NIA) ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಹಲವು ಅಂಶಗಳನ್ನು ಉಲ್ಲೇಖಿಸಲಾಗಿದೆ.  ಹಿಂದೂ ಸಮುದಾಯ(Hindu community)ದವರಲ್ಲಿ ಆತಂಕ ಹುಟ್ಟಿಸಲೆಂದೇ ಪ್ರವೀಣ್ ನೆಟ್ಟಾರು ಹತ್ಯೆ ಮಾಡಲಾಗಿತ್ತು. ಈ ಕೃತ್ಯವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯ ಸದಸ್ಯರೇ ನಡೆಸಿದ್ದಾರೆ ಎಂದು ಪ್ರಕರಣದ ತನಿಖೆ ನಡೆಸಿರುವ ರಾಷ್ಟ್ರೀಯ ತನಿಖಾ ದಳದಿಂದ(ಎನ್‌ಐಎ) ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. 

Praveen Nettaru murder case: ಮತ್ತಿಬ್ಬರು ಪಿಎಫ್ಐ ಮುಖಂಡರ ಸುಳಿವು ನೀಡಿದ್ರೆ ₹5 ಲಕ್ಷ ಬಹುಮಾನ!

ದ‌.ಕ ಜಿಲ್ಲೆಯ ಸುಳ್ಯ ತಾಲ್ಲೂಕಿನ ಬೆಳ್ಳಾರೆಯಲ್ಲಿ 2022ರ ಜುಲೈ 26ರಂದು ಹತ್ಯೆ ನಡೆದಿತ್ತು. ಪ್ರಕರಣದಲ್ಲಿ ಎನ್‌ಐಎ ಒಟ್ಟು 20 ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ. ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ನಿನ್ನೆ ಆರೋಪಪಟ್ಟಿ ಸಲ್ಲಿಕೆ ಮಾಡಲಾಗಿದೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ 120ಬಿ, 153ಎ, 302, 34, 1967ರ ಕಾನೂನುಬಾಹಿರ ಚಟುವಟಿಕೆ ತಡೆ (ಯುಎಪಿ) ಕಾಯ್ದೆಯ ಸೆಕ್ಷನ್ 16, 18 ಮತ್ತು 20 ಸಶಸ್ತ್ರ ಕಾಯ್ದೆಯ ಸೆಕ್ಷನ್ 25 (1) (ಎ) ಅಡಿ ಮೊಕದ್ದಮೆಗಳನ್ನು ದಾಖಲಿಸಲಾಗಿದೆ. 

ಆರೋಪಿಗಳಾದ 20 ಜನರಲ್ಲಿ 15 ಜನರ ಬಂಧನವಾಗಿದ್ದು, 5 ಮಂದಿ ತಲೆ ಮರೆಸಿಕೊಂಡಿದ್ದಾರೆ. ಆರೋಪಿಗಳಲ್ಲಿ ನಾಲ್ಕನೇ ಆರೋಪಿ ಮುಸ್ತಾಫಾ ಪೈಚಾರು(Mustafa Paicharu), ಆರನೇ ಆರೋಪಿ ಕೊಡಾಜೆ ಮೊಹಮ್ಮದ್ ಷರೀಫ್(Kodaje Mohammad Sharif), ಐದನೇ ಆರೋಪಿ ಮಸೂದ್ ಕೆ.ಎ, ಏಳನೇ ಆರೋಪಿ ಅಬೂಬಕ್ಕರ್ ಸಿದ್ದಿಕ್ ಹಾಗೂ 20ನೇ ಆರೋಪಿ ತುಫಾಯಿಲ್ ಎಂ.ಎಚ್. ತಲೆಮರೆಸಿಕೊಂಡಿದ್ದಾರೆ. ಇವರ ಕುರಿತು ಸುಳಿವು ನೀಡಿದವರಿಗೆ ಎನ್‌ಐಎ ಬಹುಮಾನ ಘೋಷಣೆ ಮಾಡಿದೆ. ಎನ್.ಐ.ಎ 1500 ಪುಟಗಳ ಸುದೀರ್ಘ ಚಾರ್ಜ್ ಶೀಟ್(Chargesheet) ಸಲ್ಲಿಕೆ ಮಾಡಿದೆ‌. 240 ಸಾಕ್ಷಿದಾರರ ಹೇಳಿಕೆ ಇರೋ ಬೃಹತ್ ಚಾರ್ಜ್ ಶೀಟ್ ಇದಾಗಿದೆ.

ಪ್ರಕರಣದ 20 ಮಂದಿ ಆರೋಪಿಗಳ ವಿವರ

1. ಮಹಮ್ಮದ್ ಸಯ್ಯದ್ (ಒಂದನೇ ಆರೋಪಿ), ಮಹಮ್ಮದ್ ಸಾಜಿದ್ ಅವರ ಮಗ, ಸುಳ್ಯ, ದಕ್ಷಿಣ ಕನ್ನಡ

2. ಅಬ್ದುಲ್ ಬಷೀರ್ (ಎರಡನೇ ಆರೋಪಿ) (29 ವರ್ಷ), ಮಹಮ್ಮದ್ ಕುಣಿ ಅವರ ಮಗ, ಎತ್ತಿನಹೊಳೆ, ಎಲಿಮಲೆ ಸುಳ್ಯ ತಾಲ್ಲೂಕು, ದಕ್ಷಿಣ ಕನ್ನಡ, (ಅಡ್ಯಾರು ಗ್ರಾಮದಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ)

3. ರಿಯಾಜ್ (ಮೂರನೇ ಆರೋಪಿ) (28 ವರ್ಷ), ಅಬ್ದುಲ್ ಲತೀಫ್ ಅವರ ಮಗ, ಅಂಕತಡ್ಕ ಹೌಸ್, ಪಾಲ್ತಾಡಿ ಗ್ರಾಮ, ಪುತ್ತೂರು ತಾಲ್ಲೂಕು, ದಕ್ಷಿಣ ಕನ್ನಡ.

4. ಮುಸ್ತಾಫ ಫೈಚಾರ್ (ನಾಲ್ಕನೇ ಆರೋಪಿ) ಅಲಿಯಾಸ್ ಮಹಮ್ಮದ್ ಮುಸ್ತಾಫ ಎಸ್. (48 ವರ್ಷ), ಉಮರ್ ಅವರ ಮಗ, ಶಾಂತಿನಗರ, ಸುಳ್ಯ ಕಸಬಾ, ಸುಳ್ಯ ತಾಲ್ಲೂಕು, ದಕ್ಷಿಣ ಕನ್ನಡ

5. ಮಸೂದ್ ಕೆ.ಎ. (ಐದನೇ ಆರೋಪಿ), (40 ವರ್ಷ), ಅಬೂಬಕ್ಕರ್ ಕೆ.ಎ. ಅವರ ಮಗ, ಅಂಗಡಿ ಹೌಸ್, 34 ನೆಕ್ಕಿಲಾಡಿ, ದಕ್ಷಿಣ ಕನ್ನಡ

6. ಕೊಡಾಜೆ ಮಹಮ್ಮದ್ ಶರೀಫ್ (ಆರನೇ ಆರೋಪಿ), (53 ವರ್ಷ), ಕೊಡಾಜೆ ಅದ್ದ ಅವರ ಮಗ, ಕೊಡಾಝ್, ಬಂಟ್ವಾಳ ತಾಲ್ಲೂಕು, ದಕ್ಷಿಣ ಕನ್ನಡ

7. ಅಬೂಬಕ್ಕರ್ ಸಿದ್ದಿಕ್ (ಏಳನೇ ಆರೋಪಿ) (38 ವರ್ಷ), ಅಲಿ ಕುಞ ಅವರ ಮಗ, ಬೆಳ್ಳಾರೆ ಹೌಸ್, ಮುಖ್ಯ ರಸ್ತೆ, ಬೆಳ್ಳಾರೆ, ಸುಳ್ಯ ತಾಲ್ಲೂಕು, ದಕ್ಷಿಣ ಕನ್ನಡ

8. ನೌಫಾಲ್ ಎಂ (ಎಂಟನೇ ಆರೋಪಿ) (38 ವರ್ಷ), ಮೊಹಮ್ಮದ್ ಟಿ.ಎ. ಅವರ ಮಗ, ತಂಬಿನಮಕ್ಕಿ ಹೌಸ್, ಬೆಳ್ಳಾರೆ ಅಂಚೆ, ಸುಳ್ಯ ತಾಲ್ಲೂಕು, ದಕ್ಷಿಣ ಕನ್ನಡ.

9. ಇಸ್ಮಾಯಿಲ್ ಶಾಫಿ ಕೆ. (ಒಂಬತ್ತನೇ ಆರೋಪಿ), ಆಡಂ ಕುಞ ಕೆ. ಅವರ ಮಗ, ಕುಣಗುಡ್ಡೆ, ಬೆಳ್ಳಾರೆ,

10. ಕೆ.ಮಹಮ್ಮದ್ ಇಕ್ವಾಲ್ (ಹತ್ತನೇ ಆರೋಪಿ), ಆಡಂ ಕುಞ ಕೆ. ಅವರ ಮಗ, ಕುಣಿಗುಡ್ಡೆ, ಬೆಳ್ಳಾರೆ, ಸುಳ್ಯ ತಾಲ್ಲೂಕು, ದಕ್ಷಿಣ ಕನ್ನಡ,

11. ಶಹೀದ್ ಎಂ (11ನೇ ಆರೋಪಿ) (38 ವರ್ಷ), ಅಬ್ದುಲ್ ಕರಿಂಗಾಡ್ ಅವರ ಮಗ, ಕಲ್ಕಟ್ಟ ಮಂಗಳಂತಿ, ಮಂಜನಾಡಿ, ದ.ಕ ಜಿಲ್ಲೆ

12. ಮಹಮ್ಮದ್ ಶಫೀಕ್ (12ನೇ ಆರೋಪಿ) (28 ವರ್ಷ), ದರ್ಖಾಸ್ ಹೌಸ್, ಸುಳ್ಯ ತಾಲ್ಲೂಕು, ದಕ್ಷಿಣ ಕನ್ನಡ

13. ಉಮರ್ ಫಾರೂಕ್ ಎಂ.ಆರ್. (13ನೆ ಆರೋಪಿ), ರಫೀಕ್ ಎಂ.ಆರ್. ಅವರ ಮಗ, (22 ವರ್ಷ) ಕಲ್ಲುಮುಟ್ಟು ಹೌಸ್, ಸುಳ್ಯ, ದಕ್ಷಿಣ ಕನ್ನಡ.

14. ಅಬ್ದುಲ್ ಕಬೀರ್ ಸಿ.ಎ (14ನೇ ಆರೋಪಿ) ಅಬ್ಬಾಸ್ ಅವರ ಮಗ, (33 ವರ್ಷ), ಜಟ್ಟಿಪಳ್ಳ ಹೌಸ್, ಮಸೀದಿ ಬಳಿ, ಸುಳ್ಯ, ದಕ್ಷಿಣ ಕನ್ನಡ.

15. ಮುಹಮ್ಮದ್ ಇಬ್ರಾಹಿಂ ಷಾ (15ನೇ ಆರೋಪಿ), ಮುಹಮ್ಮದ್ ಎಂ.ಎ. ಅರ ಮಗ, (23 ವರ್ಷ), ಜೀರ್ಮುಖಿ ಹೌಸ್, ನೆಲ್ಲೂರು ಕೆಮ್ರಾಜೆ, ಸುಳ್ಯ ತಾಲ್ಲೂಕು, ದಕ್ಷಿಣ ಕನ್ನಡ

16. ಸೈನುಲ್ ಆಬೀದ್ (16ನೇ ಆರೋಪಿ) (23 ವರ್ಷ), ಯಾಕೂಬ್ ಅವರ ಮಗ, ಗಾಂಧಿನಗರ ಹೌಸ್, ನಾವೂರು, ಸುಳ್ಯ ತಾಲ್ಲೂಕು, ದಕ್ಷಿಣ ಕನ್ನಡ

17 ಶೇಖ್ ಸದ್ದಾಂ ಹುಸ್ಸೇನ್ (17ನೇ ಆರೋಪಿ) (28 ವರ್ಷ), ಶೇಖ್ ಅಬ್ದುಲ್ ರಷೀದ್ ಅವರ ಮಗ, ಬೀಡು ಹೌಸ್, ಬೆಳ್ಳಾರೆ, ಸುಳ್ಯ ತಾಲ್ಲೂಕು, ದಕ್ಷಿಣ ಕನ್ನಡ

18. ಝಾಕೀರ್ ಎ (18ನೇ ಆರೋಪಿ), (30 ವರ್ಷ), ಹನೀಫ್ ಅವರ ಮಗ, ಅತ್ತಿಕೆರೆ ಹೌಸ್, ಪುತ್ತೂರು ತಾಲ್ಲೂಕು, ದಕ್ಷಿಣ ಕನ್ನಡ

19. ಎನ್.ಅಬ್ದುಲ್ ಹ್ಯಾರಿಸ್ (19ನೇ ಆರೋಪಿ) (40 ವರ್ಷ), ಎನ್.ಇಸ್ಮಾಯಿಲ್ ಅವ ಮಗ, ಬೋಡು ಹೌಸ್, ಬೆಳ್ಳಾರೆ, ಸುಳ್ಯ ತಾಲ್ಲೂಕು, ದಕ್ಷಿಣ ಕನ್ನಡ

20. ತುಫಾಯಿಲ್ ಎಂ.ಎಚ್. (20ನೇ ಆರೋಪಿ) (36 ವರ್ಷ), ಬೆಹಂದ್,ಗದ್ದಿಗೆ, ಮಡಿಕೇರಿ, ಕೊಡಗು ಜಿಲ್ಲೆ.

ರಾಷ್ಟ್ರೀಯ ತನಿಖಾ ದಳ ಕೋರ್ಟ್ ಗೆ ಸಲ್ಲಿಸಿದ ಚಾರ್ಜ್ ಶೀಟ್ ನ ಪ್ರಮುಖ ಅಂಶಗಳು

ಸಮಾಜದಲ್ಲಿ ಭಯೋತ್ಪಾದನೆ, ಕೋಮು ದ್ವೇಷ ಮತ್ತು ಅಶಾಂತಿಯನ್ನು ಸೃಷ್ಟಿಸಲು ಪ್ರವೀಣ್ ನೆಟ್ಟಾರು ಹತ್ಯೆ ಮಾಡಲಾಗಿತ್ತು. 2047 ರ ವೇಳೆಗೆ ಇಸ್ಲಾಮಿಕ್ ಆಳ್ವಿಕೆಯನ್ನು ಸ್ಥಾಪಿಸುವ ತನ್ನ ಕಾರ್ಯಸೂಚಿಯ ಭಾಗವಾಗಿ ಹತ್ಯೆಯಾಗಿದೆ. ಇದಕ್ಕಾಗಿ ಪಿಎಫ್ ಐ ಹತ್ಯೆಗಳನ್ನು ನಡೆಸಲು ಸರ್ವೀಸ್ ಟೀಂ ಮತ್ತು ಕಿಲ್ಲರ್ ಸ್ಕ್ವಾಡ್‌ಗಳನ್ನು ರಚಿಸಿತ್ತು. ಪಿಎಫ್ ಐನ ಈ ತಂಡಗಳು ಶತ್ರುಗಳು ಮತ್ತು ಗುರಿಗಳನ್ನು ಖಾತ್ರಿ ಪಡಿಸಿ ಹತ್ಯೆ. ಕೆಲವು ಸಮುದಾಯಗಳು ಮತ್ತು ಗುಂಪುಗಳಿಗೆ ಸೇರಿದ ವ್ಯಕ್ತಿಗಳು/ನಾಯಕರನ್ನು ಗುರುತಿಸಲು ಮತ್ತು ಅವರ ಪಟ್ಟಿ ಮಾಡಲು ಮತ್ತು ಕಣ್ಗಾವಲು ಹಾಕಲು ಈ ಸರ್ವೀಸ್ ಟೀಂ ಸದಸ್ಯರಿಗೆ ತರಬೇತಿ ನೀಡಲಾಗಿತ್ತು. 

ವೈದ್ಯರ ಗಾಂಜಾಲೋಕ: ವಿದ್ಯಾರ್ಥಿಗಳು ಅಮಾನತು, ವೈದ್ಯರಿಗೆ ಗೇಟ್ ಪಾಸ್ ಕೊಟ್ಟ ಕೆಎಂಸಿ ಆಸ್ಪತ್ರೆ!

ಶಸ್ತ್ರಾಸ್ತ್ರಗಳ ಜೊತೆಗೆ ದಾಳಿ ತರಬೇತಿ ಮತ್ತು ಕಣ್ಗಾವಲು ತಂತ್ರಗಳಲ್ಲಿ ತರಬೇತಿ ನೀಡಲಾಗಿತ್ತು. ಈ ಸರ್ವೀಸ್ ಟೀಂ ಸದಸ್ಯರು ಹಿರಿಯ PFI ನಾಯಕರ ಸೂಚನೆಯ ಮೇರೆಗೆ ಗುರುತಿಸಲಾದ ಗುರಿಗಳ ಮೇಲೆ ದಾಳಿ ಮತ್ತು ಕೊಲ್ಲಲು ತರಬೇತಿ ಪಡೆದಿದ್ದರು. ಬೆಂಗಳೂರು ನಗರ, ಸುಳ್ಯ ಟೌನ್ ಮತ್ತು ಬೆಳ್ಳಾರೆ ಗ್ರಾಮದಲ್ಲಿ ಪಿಎಫ್ ಐ ಸಭೆಗಳಾಗಿತ್ತು. ಈ ಸಭೆಗಳಲ್ಲಿ ಜಿಲ್ಲಾ ಸೇವಾ ತಂಡದ ಮುಖ್ಯಸ್ಥ ಮುಸ್ತಫಾ ಪೈಚಾರ್ ಗೆ ನಿರ್ದಿಷ್ಟ ಸಮುದಾಯದ ಪ್ರಮುಖರನ್ನು ಗುರುತಿಸಿ, ಗುರಿಯಾಗಿಸಲು ಸೂಚಿಸಲಾಗಿತ್ತು. ಅಂತಿಮವಾಗಿ ನಾಲ್ವರನ್ನು ಸರ್ವೀಸ್ ಟೀಂ ಗುರುತಿಸಿತ್ತು. ಅದರಲ್ಲಿ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರುವನ್ನು ಜುಲೈ 26, 2022 ರಂದು ಹತ್ಯೆ ಮಾಡಲಾಯಿತು.

Latest Videos
Follow Us:
Download App:
  • android
  • ios