ಏಕರೂಪ ವಿವಾಹ ವಯೋಮಿತಿ: ಕೇಂದ್ರದ ಅನಿಸಿಕೆ ಕೇಳಿದ ಸುಪ್ರೀಂಕೋರ್ಟ್‌

ಮುಸ್ಲಿಂ ವೈಯಕ್ತಿಕ ಕಾನೂನು ಹೊರತುಪಡಿಸಿ ಉಳಿದ ಧರ್ಮಗಳ ವೈಯಕ್ತಿಕ ಕಾನೂನಿನಲ್ಲಿ ವಿವಾಹದ ಕನಿಷ್ಠ ವಯಸ್ಸು ಕಾನೂನಿಗೆ ಅನುಗುಣವಾಗಿದೆ. ಆದರೆ ಮುಸ್ಲಿಂ ಬಾಲಕಿಯರು ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದು ಅರ್ಜಿಯಲ್ಲಿ ಕೋರಲಾಗಿದೆ.

supreme courts notice to centre on uniform marriage age for muslims plea ash

ನವದೆಹಲಿ: ಏಕರೂಪ ನಾಗರಿಕ ಸಂಹಿತೆ (Uniform Civil Code) ವಿವಾದ ಉಂಟಾಗಿರುವ ಬೆನ್ನಲ್ಲೇ ಏಕರೂಪ ವಿವಾಹ ವಯೋಮಿತಿ (Uniform Marriage Age) ಕುರಿತಾಗಿ ಕೇಂದ್ರ ಸರ್ಕಾರದ (Central Government) ಅಭಿಪ್ರಾಯ ಕೇಳಿ ಸುಪ್ರೀಂಕೋರ್ಟ್‌ (Supreme Court) ನೋಟಿಸ್‌ ಜಾರಿ ಮಾಡಿದೆ. ಎಲ್ಲಾ ಧರ್ಮದ (Religion) ಪುರುಷ ಮತ್ತು ಮಹಿಳೆಯರ ಮದುವೆಯ ವಯಸ್ಸನ್ನು ಕನಿಷ್ಠ 18 ವರ್ಷಕ್ಕೆ ನಿಗದಿಪಡಿಸಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗ (National Women Commission) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಮತ್ತು ನ್ಯಾಯಮೂರ್ತಿ ಪಿ.ಎಸ್‌. ನರಸಿಂಹ ಅವರಿದ್ದ ಪೀಠ ಕೇಂದ್ರದ ಅಭಿಪ್ರಾಯ ಕೋರಿದೆ. ಅಲ್ಲದೆ ಅಪ್ರಾಪ್ತ ಮುಸ್ಲಿಂ ಬಾಲಕಿಯರ ವಿವಾಹವನ್ನು ಕಾನೂನಿನಡಿಯಲ್ಲಿ ಶಿಕ್ಷಾರ್ಹ ಅಪರಾಧ ಮಾಡುವ ಕುರಿತಾಗಿ ಕಾನೂನು ಆಯೋಗದ (Law Commission) ಪ್ರತಿಕ್ರಿಯೆಯನ್ನು ಕೇಳಿದೆ.

ಮುಸ್ಲಿಂ ವೈಯಕ್ತಿಕ ಕಾನೂನಿನಡಿ ಅಪ್ರಾಪ್ತ ಮುಸ್ಲಿಂ ಬಾಲಕಿಯರಿಗೆ (15 ವರ್ಷ ಆದವರಿಗೆ) ವಿವಾಹವಾಗಲು ದೆಹಲಿ ಹೈಕೋರ್ಟ್‌ ನೀಡಿದ್ದ ಅನುಮತಿಯನ್ನು ಪ್ರಶ್ನಿಸಿ ಈ ಅರ್ಜಿ ಸಲ್ಲಿಸಲಾಗಿತ್ತು. ಮುಸ್ಲಿಂ ವೈಯಕ್ತಿಕ ಕಾನೂನು ಹೊರತುಪಡಿಸಿ ಉಳಿದ ಧರ್ಮಗಳ ವೈಯಕ್ತಿಕ ಕಾನೂನಿನಲ್ಲಿ ವಿವಾಹದ ಕನಿಷ್ಠ ವಯಸ್ಸು ಕಾನೂನಿಗೆ ಅನುಗುಣವಾಗಿದೆ. ಆದರೆ ಮುಸ್ಲಿಂ ಬಾಲಕಿಯರು ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಇದನ್ನು ಓದಿ: ಏಕರೂಪ ವಿವಾಹ ಸಂಹಿತೆಗೆ ಕೇಂದ್ರ ಸರ್ಕಾರಕ್ಕೆ ಕೇರಳ ಹೈಕೋರ್ಟ್‌ ಸಲಹೆ

ಏಕರೂಪ ನಾಗರಿಕ ಸಂಹಿತೆ ಜಾರಿಗೆ ಕೇರಳ ರಾಜ್ಯಪಾಲ ಬೆಂಬಲ
ಕೇರಳ ರಾಜ್ಯಪಾಲ (Kerala Governor) ಆರಿಫ್‌ ಖಾನ್‌ (Arif Mohammed Khan) ಅವರು ಏಕರೂಪ ನಾಗರಿಕ ಸಂಹಿತೆಯ ಅನುಷ್ಠಾನ ಬೆಂಬಲಿಸಿದ್ದಾರೆ. ಆಜ್‌ತಕ್‌ ಸುದ್ದಿವಾಹಿನಿಯ ಸಂವಾದ ಕಾರ‍್ಯಕ್ರಮದಲ್ಲಿ ಮಾತನಾಡಿದ ಅವರು, ಸಂವಿಧಾನವನ್ನು ಗೌರವಿಸುವ ಎಲ್ಲ ವ್ಯಕ್ತಿಗಳೂ ಸಂಹಿತೆಯನ್ನು ಬೆಂಬಲಿಸುತ್ತಾರೆ. ಏಕರೂಪ ನಾಗರಿಕ ಸಂಹಿತೆಯು ಮದುವೆ ಆಚರಣೆಗಳಲ್ಲದೆ, ಎಲ್ಲರಿಗೂ ಸಮಾನ ನ್ಯಾಯವನ್ನು ಒದಗಿದುತ್ತದೆ. ಜನರು ಹಲವು ಮದುವೆ ಆಗಲು ಮತಾಂತರ ಆಗುತ್ತಿರುವ ಪ್ರಕರಣಗಳು ಸಾಕಷ್ಟಿವೆ’ ಎಂದರು.

ಈ ಮಧ್ಯೆ ಹಿಜಾಬ್‌ (Hijab) ಗಲಾಟೆ ಬಗ್ಗೆ ಮಾತನಾಡಿದ ಅವರು, ‘ಹಿಜಾಬ್‌ ಧರಿಸಬೇಡಿ ಎಂದು ಯಾರು ಹೇಳುತ್ತಾರೆ? ಇದು ಸ್ವತಂತ್ರ ದೇಶ ಇಲ್ಲಿ ಯಾರು ಏನನ್ನು ಬೇಕಾದರೂ ಧರಿಸುವ ಹಕ್ಕಿದೆ. ಆದರೆ ಅದು ಶಿಕ್ಷಣ ಸಂಸ್ಥೆಯಲ್ಲಿ ಅಲ್ಲ. ನೀವು ಹಾಗೆ ಧರಿಸಲೇಬೇಕು ಎಂದರೆ ಬೇರೆ ಶಿಕ್ಷಣ ಸಂಸ್ಥೆಗಳಿವೆ. ಅಲ್ಲಿಗೆ ಹೋಗಬಹುದು’ ಎಂದರು.

ಇದನ್ನೂ ಓದಿ: ನಾಲ್ವರು ಹುಡುಗಿಯರ ಮದುವೆ ಆಗುವುದು ಅಸ್ವಾಭಾವಿಕ: ನಿತಿನ್‌ ಗಡ್ಕರಿ

ಇನ್ನೊಂದೆಡೆ, ಏಕರೂಪ ನಾಗರಿಕ ಸಂಹಿತೆ ಜಾರಿಗೆ ದೇಶಾದ್ಯಂತ ಚರ್ಚೆ ನಡೆದಿರುವ ನಡುವೆಯೇ ಏಕರೂಪ ನಾಗರಿಕ ಸಂಹಿತೆಯ ಭಾಗಗಳ ಪೈಕಿ ಒಂದಾದ ‘ಏಕರೂಪ ವಿವಾಹ ಸಂಹಿತೆ’ ಜಾರಿಗೊಳಿಸುವಂತೆ ಸ್ವತಃ ಕೇರಳ ಹೈಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ. ‘ಪ್ರಸಕ್ತ ಜಾರಿಯಲ್ಲಿರುವ ವೈವಾಹಿಕ ಕಾಯ್ದೆಗಳು, ಜನರನ್ನು ಧರ್ಮದ ಆಧಾರದಲ್ಲಿ ಪ್ರತ್ಯೇಕಿಸುತ್ತವೆ. ಜಾತ್ಯತೀತ ದೇಶವೊಂದರಲ್ಲಿ ಕಾನೂನು ಜಾರಿಯು ಎಲ್ಲರ ಸಮಾನ ಹಿತಾಸಕ್ತಿ ಕಾಯುವಂತಿರಬೇಕೇ ವಿನಃ ಧರ್ಮ ಆಧಾರದಲ್ಲಿ ಅಲ್ಲ. ಹೀಗಾಗಿ ಹಾಲಿ ಇರುವ ನಿಯಮಗಳನ್ನು ಬದಲಿಸಿ, ಎಲ್ಲರಿಗೂ ಅನ್ವಯವಾಗುವ ಕಾನೂನು ಬೇಕು. ಏಕರೂಪ ವೇದಿಕೆ ಜಾರಿಗೆ ಸಮಯ ಸನ್ನಿಹಿತವಾಗಿದೆ’ ಎಂದು ಮಹತ್ವದ ಅಭಿಪ್ರಾಯ ಪಟ್ಟಿದೆ.

ಕ್ರೈಸ್ತ ದಂಪತಿಯ ವಿಚ್ಛೇದನ ಪ್ರಕರಣದಲ್ಲಿ 1 ವರ್ಷ ಕಾಯುವಿಕೆ ಅವಧಿಯನ್ನು ರದ್ದುಗೊಳಿಸಿ ಆದೇಶ ನೀಡುವ ವೇಳೆ ನ್ಯಾಯಮೂರ್ತಿ ಮುಹಮ್ಮದ್‌ ಮುಷ್ತಾಕ್‌ ಮತ್ತು ನ್ಯಾಯಮೂರ್ತಿ ಶೋಭಾ ಅನ್ನಮ್ಮ ಎಪೆನ್‌ ಅವರನ್ನೊಳಗೊಂಡ ಪೀಠ ಸಾಕಷ್ಟು ದೂರಗಾಮಿ ಪರಿಣಾಮಗಳನ್ನು ಒಳಗೊಂಡಿರುವ ಈ ಸಲಹೆಗಳನ್ನು ನೀಡಿದೆ.

ಇದನ್ನೂ ಓದಿ: ಸಂಸತ್ತಲ್ಲೂ ಈಗ ಏಕರೂಪ ನಾಗರಿಕ ಸಂಹಿತೆ ಬಗ್ಗೆ ಚರ್ಚೆ: ಖಾಸಗಿ ಮಸೂದೆ ಮಂಡಿಸಿದ ಬಿಜೆಪಿಗ

Latest Videos
Follow Us:
Download App:
  • android
  • ios