ಲಸಿಕೆ ಪಡೆಯಲು ಆ್ಯಪ್ ರಿಜಿಸ್ಟ್ರೇಶನ್ ಕಡ್ಡಾಯ ಯಾಕೆ? ಕೇಂದ್ರಕ್ಕೆ ಸುಪ್ರೀಂ ತರಾಟೆ!
- ಕೊರೋನಾ ವೈರಸ್ ಲಸಿಕೆ ಕುರಿತು ಮತ್ತೊಮ್ಮೆ ಕೇಂದ್ರಕ್ಕೆ ಬಿಸಿ ಮುಟ್ಟಿಸಿದ ಸುಪ್ರೀಂ ಕೋರ್ಟ್
- ಲಸಿಕೆ ಪಡೆಯಲು ರಿಜಿಸ್ಟ್ರೇಶನ್ ಕಡ್ಡಾಯ ಮಾಡಿದ್ದೇಕೆ?
- ಈ ಪದ್ದತಿಯಿಂದ ಹಲವರು ಲಸಿಕೆ ವಂಚಿತರಾಗುವುದಿಲ್ಲವೇ?
ನವದೆಹಲಿ(ಜೂ.03): ಕೊರೋನಾ ಲಸಿಕೆ ಅಭಾವ, ಪೂರೈಕೆ ಸೇರಿದಂತೆ ಹಲವು ವಿಚಾರಗಳ ಕುರಿತು ಸುಪ್ರೀಂ ಕೋರ್ಟ್ ಈಗಾಗಲೇ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಇದೀಗ ಕೋವಿಡ್ ಲಸಿಕೆ ಪಡೆಯಲು ಆ್ಯಪ್ ಅಥವಾ ವೆಬ್‌ಸೈಟ್‌ನಲ್ಲಿ ರಿಜಿಸ್ಟ್ರೇಶನ್ ಕಡ್ಡಾಯ ಮಾಡಿದ್ದೇಕೆ? ಎಂದು ಕೇಂದ್ರಕ್ಕೆ ಸುಪ್ರೀಂ ಕೇಳಿದೆ.
ಲಸಿಕೆ ಖರೀದಿ, ನೀಡಿಕೆ, ದರದ ಬಗ್ಗೆ ವಿವರ ನೀಡಿ: ಕೇಂದ್ರಕ್ಕೆ ಸುಪ್ರೀಂ ತಾಕೀತು!
ಲಸಿಕೆ ಸಂಪೂರ್ಣ ದೇಶಕ್ಕೆ ನೀಡಬೇಕಿದೆ. ಈಗಲೂ ಹಲವು ಹಳ್ಳಿಗಳಲ್ಲಿ ಇಂಟರ್ನೆಟ್ ಸೇವೆ ಇಲ್ಲ. ಅಲ್ಲಿನ ಜನರು ಲಸಿಕೆ ರಿಜಿಸ್ಟ್ರೇಶನ್ ಹೇಗೆ ಮಾಡಿಕೊಳ್ಳುತ್ತಾರೆ? ಲಾಕ್‌ಡೌನ್, ಕೊರೋನಾ ಕಾರಣ ಇತರ ಮಾರ್ಗಗಳು ಅವರ ಮುಂದಿಲ್ಲ. ಹೀಗಿರುವಾಗಿ ರಿಜಿಸ್ಟ್ರೇಶನ್ ಕಡ್ಡಾಯ ಯಾಕೆ? ಎಂದು ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಬಿಸಿ ಮುಟ್ಟಿಸಿದೆ.
ಇದರ ಜೊತೆಗೆ ರಾಜ್ಯಗಳು ಲಸಿಕೆಗಾಗಿ ಸ್ಪರ್ಧೆ ಮಾಡುವ ಪರಿಸ್ಥಿತಿಯಾಕೆ ತಂದಿದ್ದೀರಿ. ಆಯಾ ರಾಜ್ಯಗಳು ಲಸಿಕೆಗೆ ಮುಗಿ ಬಿದ್ದಾಗ ಸ್ಪರ್ಧೆ ಏರ್ಪಡಲಿದೆ. ಹೀಗಿರುವಾಗ ಹಲವು ರಾಜ್ಯಗಳು ಲಸಿಕೆಯಿಂದ ವಂಚಿತರಾಗಲಿದೆ ಅಥವಾ ಲಸಿಕೆ ವಿಳಂಬವಾಗಲಿದೆ. ಈ ಪದ್ಧತಿಗಳು ಯಾಕೆ ಎಂದು ಕೇಳಿದೆ.
ಮತ್ತೊಂದು ಸ್ವದೇಶೀ ಲಸಿಕೆ: 30 ಕೋಟಿ ಡೋಸ್ ಆರ್ಡರ್ ಮಾಡಿದ ಕೇಂದ್ರ!
ಸದ್ಯ ಕೇಂದ್ರ ಸರ್ಕಾರ ಭಾರತದ ಜನಸಂಖ್ಯೆಯ ಶೇಕಡಾ 3 ರಷ್ಟು ಮಂದಿಗೆ ಮಾತ್ರ ಲಸಿಕೆ ನೀಡಲಾಗಿದೆ. ಲಸಿಕೆಯಲ್ಲಿ ಭಾರತ ಬಹಳಷ್ಟು ದೂರ ಸಾಗಬೇಕಿದೆ. ಇನ್ನು 18 ರಿಂದ 44 ವರ್ಷದೊಳಗಿನವರಿಗೆ ಲಸಿಕೆಗೆ ಹಣ ಪಡೆಯುವುದು ಕೂಡ ಸಮಂಜಸವಲ್ಲ. ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸವು ಹಾಗೂ ಅದಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುವ ಜವಾಬ್ದಾರಿ ಕೇಂದ್ರದ ಮೇಲಿದೆ ಎಂದು ಕೋರ್ಟ್ ಹೇಳಿದೆ.