ಮತ್ತೊಂದು ಸ್ವದೇಶೀ ಲಸಿಕೆ: 30 ಕೋಟಿ ಡೋಸ್ ಆರ್ಡರ್ ಮಾಡಿದ ಕೇಂದ್ರ!
* ದೇಶಕ್ಕೆ ಮತ್ತೊಂದು ಸ್ವದೇಶೀ ಲಸಿಕೆ
* ಬಯೋಲಾಜಿಕಲ್ ಇ ಕಂಪನಿಯ ಲಸಿಕೆಗೆ ಕೇಂದ್ರದ ಆರ್ಡರ್
* 30 ಕೋಟಿ ಲಸಿಕೆ ಕಾಯ್ದಿರಿಸಿದ ಕೇಂದ್ರ ಸರ್ಕಾರ
ನವದೆಹಲಿ(ಜೂ.03): ಕೊರೋನಾ ಸೋಂಕಿನ ಎರಡನೇ ಅಲೆಯಿಂದ ತತ್ತರಿಸಿರುವ ಭಾರತಕ್ಕೆ ಮತ್ತೊಂದು ಲಸಿಕೆ ಬರಲಿದೆ. ಹೈದರಾಬಾದ್‌ನ Biological-E ನಿರ್ಮಿಸಿದ ಕೋವಿಡ್ 19 ಲಸಿಕೆ ಮೊದಲ ಹಾಗೂ ಎರಡನೇ ಹಂತದ ಪ್ರಯೋಗದಲ್ಲಿ ಯಶಸ್ವಿಯಾಗಿದೆ. ಸದ್ಯಕ್ಕೀಗ ಮೂರನೇ ಹಂತದ ಪ್ರಯೋಗ ನಡೆಯುತ್ತಿದೆ. ಕೇಂದ್ರವು ಕಂಪನಿಗೆ 1,500 ಕೋಟಿ ಅಡ್ವಾನ್ಸ್ ಪೇಮೆಂಟ್ ಮಾಡಿದೆ. ಈ ಲಸಿಕೆ ಆಗಸ್ಟ್‌ನಿಂದ ಡಿಸೆಂಬರ್ ಒಳಗೆ ಲಭ್ಯವಾಗಲಿದೆ. ಕಂಪನಿ ಸರ್ಕಾರಕ್ಕೆ ಮೂವತ್ತು ಕೋಟಿ ಡೋಸ್ ನೀಡಲಿದೆ.
ಪ್ರಯೋಗ ನಡೆಸಲು ಸಹಾಐ ನೀಡಿದ ಆರೋಗ್ಯ ಸಚಿವಾಲಯ
ಕೇಂದ್ರ ಸರ್ಕಾರ ಈ ವ್ಯಾಕ್ಸಿನ್‌ನ ಪ್ರೀಕ್ಲಿನಿಕಲ್ ಸ್ಟೇಜ್‌ನಿಂದ ಹಿಡಿದು ಮೂರನೇ ಹಂತದವರೆಗೆ ಬಯೋಲಾಜಿಕಲ್ ಇಗೆ ಸಹಾಯ ನೀಡಿದೆ. ಜೈವಿಕ ತಂತ್ರಜ್ಞಾನ ಇಲಾಖೆ ಕಂಪನಿಗೆ 100 ಕೋಟಿ ರೂ.ಗಿಂತ ಹೆಚ್ಚಿನ ಆರ್ಥಿಕ ನೆರವು ನೀಡಿದೆ. ಈ ಲಸಿಕೆ ಆರ್ಬಿಡಿ ಪ್ರೋಟೀನ್ ಸಬ್ ಯೂನಿಟ್ ಲಸಿಕೆಯಾಗಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಟ್ವೀಟ್ ಮಾಡಿ ಮೂಲಕ ಮಾಹಿತಿ ನೀಡಿದ್ದಾರೆ.
ಮೊದಲನೇ ಡೋಸ್ ಲಸಿಕೆ ಮಹತ್ವ ತೆರೆದಿಟ್ಟ ಹಿರಿಯ ಅಧಿಕಾರಿ, ಹೊಸ ಗುರಿ
ರಾಜ್ಯಗಳಿಗೆ / ಕೇಂದ್ರಾಡಳಿತ ಪ್ರದೇಶಗಳಿಗೆ 23 ಕೋಟಿಗಿಂತ ಹೆಚ್ಚಿನ ಪ್ರಮಾಣದ ಲಸಿಕೆ
ಏತನ್ಮಧ್ಯೆ, ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಅಭಿಯಾನದ ಭಾಗವಾಗಿ, ಕೇಂದ್ರ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತ COVID ಲಸಿಕೆಗಳನ್ನು ನೀಡುವ ಮೂಲಕ ಸಹಾಯ ಮಾಡುತ್ತಿದೆ. ಲಸಿಕೆಗಳನ್ನು ನೇರವಾಗಿ ಖರೀದಿಸುವ ಸೌಲಭ್ಯವನ್ನೂ ಇದು ಒದಗಿಸುತ್ತಿದೆ. ಕೇಂದ್ರ ಸರ್ಕಾರವು ಈವರೆಗೆ 23 ಕೋಟಿಗಿಂತ ಹೆಚ್ಚು (23,35,86,960) COVID ಲಸಿಕೆಯನ್ನು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತ ಹಾಗೂ ರಾಜ್ಯಗಳ ನೇರ ಖರೀದಿಯ ಮೂಲಕ ಒದಗಿಸಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona