ಪಂಜಾಬ್ ಭೇಟಿಯಲ್ಲಿ ನಡೆದ ಪ್ರಧಾನಿ ಭದ್ರತಾ ಲೋಪ ಪ್ರಕರಣ ಅರ್ಜಿ ವಿಚಾರಣೆಯಲ್ಲಿ ತನಿಖೆಗೆ ಸ್ವತಂತ್ರ ಸಮಿತಿ ನೇಮಿಸಿದ್ದ ಸುಪ್ರೀಂಕೋರ್ಟ್ ಈ ತನಿಖಾ ಸಮಿತಿ ಮುಖ್ಯಸ್ಥರಾಗಿ ನಿ.ನ್ಯಾಮೂರ್ತಿ ಇಂದು ಮಲ್ಹೋತ್ರ

ನವದೆಹಲಿ(ಜ.12); ಪ್ರಧಾನಿ ನರೇಂದ್ರ ಮೋದಿ(PM Narendra Modi) ಪಂಜಾಬ್ ಭೇಟಿ ವೇಳೆ ನಡೆದಿದ್ದ ಭದ್ರತಾ ಲೋಪ ಪ್ರಕರಣ(PM security lapse) ತನಿಖೆಗೆ ಸುಪ್ರೀಂ ಕೋರ್ಟ್ ಸ್ವತಂತ್ರಾ ತನಿಖಾ ಸಮಿತಿ ರಚನೆ ಮಾಡಿತ್ತು. ಇದೀಗ ಸುಪ್ರೀಂ ಕೋರ್ಟ್ ನಿವೃತ್ಯ ನ್ಯಾಯಮೂರ್ತಿ ಇಂದು ಮಲ್ಹೋತ್ರ(Indu Malhotra) ಅವರನ್ನು ತನಿಖಾ ಸಮಿತಿಗೆ ಮುಖ್ಯಸ್ಥರನ್ನಾಗಿ ನೇಮಕ ಮಾಡಿದೆ. ನಾಲ್ವರು ಸದಸ್ಯರ ತನಿಖಾ ಸಮಿತಿಗೆ ಇಂದು ಮಲ್ಹೋತ್ಪ ಮುಖ್ಯಸ್ಥರಾಗಿದ್ದಾರೆ.

ಜನವರಿ 5 ರಂದು ಮೋದಿ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಶಿಲನ್ಯಾಸ ಕಾರ್ಯಕ್ರಮಕ್ಕೆ ಪಂಜಾಬ್‌ಗೆ(Punjab) ಭೇಟಿ ನೀಡಿದ್ದರು. ಈ ವೇಳೆ ಫಿರೋಜ್‌ಪುರ್ ತೆರಳುವ ಮಾರ್ಗ ಮದ್ಯದಲ್ಲಿ ಪ್ರಧಾನಿ ಮೋದಿ ಅತೀ ದೊಡ್ಡ ಗಂಡಾಂತರ ಎದುರಿಸಿದ್ದರು. ಪ್ರತಿಭಟನಾಕಾರರಿಂದ ಮೋದಿ ಫ್ಲೈ ಓವರ್ ರಸ್ತೆ ಮೇಲೆ 20 ನಿಮಿಷ ಸಿಲುಕಿದ್ದರು. ಪ್ರತಿಭಟನಾ ಕಾರರು ಪ್ರಧಾನಿ ಮೋದಿ 100 ಮೀಟರ್ ಅಂತರದಲ್ಲಿ ಇದ್ದರು. ಈ ಭದ್ರತಾ ಲೋಪ ಪ್ರಕರಣದ ಅರ್ಜಿಯನ್ನು ಸೋಮವಾರ(ಜ.10) ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್(Supreme Court) ಸ್ವತಂತ್ರ ತನಿಖೆ ರಚಿಸಲು ಆದೇಶಿಸಿತ್ತು.

PM Security Breach: ಮೋದಿಗೆ ಸಹಾಯ ಮಾಡ್ಬೇಡಿ, ಸುಪ್ರೀಂ ವಕೀಲರಿಗೆ ಖಲಿಸ್ತಾನಿ ಬೆಂಬಲಿಗರ ಬೆದರಿಕೆ!

ಸುಪ್ರೀಂ ಕೋರ್ಟ್ ಚೀಫ್ ಜಸ್ಟೀಸ್ ಎನ್‌ವಿ ರಮಣ(Chief Justice of India NV Ramana) ನೇತೃತ್ವದ ಪೀಠ ವಿಚಾರಣೆ ನಡೆಸಿ ಸ್ವತಂತ್ರ ತನಿಖೆಗೆ ಸಮಿತಿ ರಚಿಸಿತ್ತು. ಸುಪ್ರೀಂ ಕೋರ್ಟ್ ನೇಮಿಸಿತ ತನಿಖಾ ಸಮಿತಿಗೆ ನಿವೃತ್ತ ಜಸ್ಟೀಸ್ ಇಂದು ಮಲ್ಹೋತ್ರ ಮುಖ್ಯಸ್ಥರಾಗಿದ್ದರೆ, ಸಮಿತಿಯಲ್ಲಿ ರಾಷ್ಟ್ರೀಯ ತನಿಖಾ ದಳದ ಡೈರೆಕ್ಟರ್ ಜನರಲ್, ಚಂಡೀಘಡ ಪೊಲೀಸ್ ಮಹಾನಿರ್ದೇಶಕ(DGP), ಪಂಜಾಬ್ ಹರ್ಯಾಣ ಕೋರ್ಟ್ ರಿಜಿಸ್ಟ್ರಾರ್ ಜನರಲ್ ಈ ಸಮಿತಿಯ ಸದಸ್ಯರಾಗಿದ್ದಾರೆ.

ಸೋಮವಾರ ಚೀಫ್ ಜಸ್ಟೀಸ್ ಎನ್‌ವಿ ರಣಣ ನೇತೃತ್ವದ ಪೀಠ ನಡೆಸಿದ ವಿಚಾರಣೆಯಲ್ಲಿ ಇತರ ಎಲ್ಲಾ ತನಿಖೆಗಳನ್ನು ತಾತ್ಕಾಲಿಕ ಸ್ಥಗಿತಗೊಳಿಸುವಂತೆ ಕೇಂದ್ರ ಹಾಗೂ ಪಂಜಾಬ್ ಸರ್ಕಾರಕ್ಕೆ ಸೂಚನೆ ನೀಡಲಾಗಿದೆ. ಪ್ರಕರಣದ ತನಿಖೆ ನಡೆಯುವ ಮೊದಲೇ ಪಂಜಾಬ್ ಪೊಲೀಸ್ ಅಧಿಕಾರಿಗಳಿಗೆ ಶೋಕಾಸ್ ನೊಟೀಸ್ ನೀಡಿರುವ ಕ್ರಮಕ್ಕೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಪ್ರಕರಣ ಸ್ವತಂತ್ರ ತನಿಖೆಗೆ ಆಗ್ರಹ ಹೆಚ್ಚಾಗಿ ಕೇಳಿಬಂದಿತ್ತು. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಸ್ವತಂತ್ರ ತನಿಖೆ ಸೂಕ್ತ ಎಂದು ಆದೇಶ ನೀಡಿತ್ತು.

PM Security Lapse 11 ತಿಂಗಳ ಹಿಂದೆ ಮೋದಿ ದಾಳಿಗೆ ಸ್ಕೆಚ್, ಪಂಜಾಬ್ ಕುತಂತ್ರ ವಿಡಿಯೋ ವೈರಲ್!

ಪಂಜಾಬ್ ಭೇಟಿಯಲ್ಲಿ ಪ್ರಧಾನಿ ಮೋದಿ ಭದ್ರತಾ ಲೋಪವಾಗಿದೆ ಎಂದು ಲಾಯರ್ಸ್ ವಾಯ್ಸ್ ಎನ್‌ಜಿಒ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯಲ್ಲಿ ಲೋಪವೆಸಗಿದೆ ಪಂಜಾಬ್ ಮುಖ್ಯ ಕಾರ್ಯದರ್ಶಿ ಹಾಗೂ ಪಂಜಾಬ್ ಡೈರೆಕ್ಟರ್ ಜನರಲ್ ಪೊಲೀಸ್ ಸಿದ್ದಾರ್ಥ್ ಚಟ್ಟೋಪಾಧ್ಯಯ ಅವರನ್ನು ಅಮಾನತು ಮಾಡುವಂತೆ ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.

42,000 ಕೋಟಿ ರೂಪಾಯಿ ಅಭಿವೃದ್ಧಿ ಯೋಜನೆಗಳ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಪಂಜಾಬ್‌ಗೆ ಭೇಟಿ ನೀಡಿದ್ದ ವೇಳೆ ಈ ಭದ್ರತಾ ಲೋಪ ಸಂಭವಿಸಿದೆ. ಹವಾಮಾನ ವೈಪರಿತ್ಯದಿಂದ ಮೋದಿ ವಾಯುಮಾರ್ಗದಲ್ಲಿ ಸಂಚರಿಸುವ ಬದಲು ರಸ್ತೆ ಮಾರ್ಗದಲ್ಲಿ ಸಂಚರಿಸಿದ್ದಾರೆ. ಈ ವೇಳೆ ಪಂಜಾಬ್ ಪೊಲೀಸರು ರಸ್ತೆಯನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಂಡಿಲ್ಲ. ಮೋದಿ ಸಂಚರಿಸುವ ರಸ್ತೆಯಲ್ಲಿ ಪ್ರತಿಭಟನಕಾರರು ಜಮಾಯಿಸಿದ್ದರು. ಹೀಗಾಗಿ ಮೋದಿ 20 ನಿಮಿಷಗಳ ಕಾಲ ಪ್ರತಿಭಟನಾಕಾರರ ನಡುವೆ ಸಿಲುಕಬೇಕಾಯಿತು. ಭದ್ರತಾ ಕಾರಣದಿಂದ ಮೋದಿ ಪಂಜಾಬ್ ಕಾರ್ಯಕ್ರಮ ಮೊಟಕುಗೊಳಿಸಿ ನೇರವಾಗಿ ದೆಹಲಿಗೆ ವಾಪಾಸ್ ಆಗಿದ್ದರು. ಈ ಪ್ರಕರಣ ದೇಶದಲ್ಲಿ ಭಾರಿ ಚರ್ಚೆಗೆ ಒಳಗಾಗಿದೆ. ಇತ್ತ ಪಂಜಾಬ್ ಸರ್ಕಾರ ಯಾವುದೇ ಭದ್ರತಾ ಲೋಪವಾಗಿಲ್ಲ ಎಂದಿತ್ತು.