Asianet Suvarna News Asianet Suvarna News

PM Security Breach: ಮೋದಿಗೆ ಸಹಾಯ ಮಾಡ್ಬೇಡಿ, ಸುಪ್ರೀಂ ವಕೀಲರಿಗೆ ಖಲಿಸ್ತಾನಿ ಬೆಂಬಲಿಗರ ಬೆದರಿಕೆ!

* ಮೋದಿ ಭದ್ರತೆಯಲ್ಲಿ ಲೋಪ

* ಭದ್ರತಾ ಲೋಪದ ವಿಚಾರಣೆ ನಡೆಸದಿರಲು ಬೆದರಿಕೆ ಕರೆ

* ಸುಪ್ರೀಂ ವಕೀಲರಿಗೆ ಖಲಿಸ್ತಾನಿ ಬೆಂಬಲಿಗರ ಬೆದರಿಕೆ

 

Khalistani Group Threatens Supreme Court On PM Security Threat Hearing pod
Author
Bangalore, First Published Jan 10, 2022, 2:04 PM IST

ನವದೆಹಲಿ(ನ.10): ಖಲಿಸ್ತಾನ್ ಬೆಂಬಲಿಗರು ಸುಪ್ರೀಂ ಕೋರ್ಟ್‌ನ ವಕೀಲರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಸುಮಾರು ಒಂದು ಡಜನ್ ವಕೀಲರು ಬೆದರಿಕೆ ಕರೆಗಳನ್ನು ಸ್ವೀಕರಿಸಿದ್ದಾರೆ ಎಂದು ಹೇಳಲಾಗಿದೆ. ನ್ಯಾಯಕ್ಕಾಗಿ ಇಂಗ್ಲೆಂಡ್‌ನಲ್ಲಿರುವ ಸಿಖ್ಖರ ಸಂಖ್ಯೆಯಿಂದ ಈ ಕರೆಗಳು ಬಂದಿವೆ ಎಂದು ವಕೀಲರ ಪರವಾಗಿ ಹೇಳಲಾಗುತ್ತಿದೆ. ಇವೆಲ್ಲವೂ ಸ್ವಯಂಚಾಲಿತ ದೂರವಾಣಿ ಕರೆಗಳು. ಪಂಜಾಬ್‌ನ ರೈತರು ಮತ್ತು ಸಿಖ್ಖರ ವಿರುದ್ಧ ದಾಖಲಾಗಿರುವ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಧಾನಿ ಮೋದಿಗೆ ಸಹಾಯ ಮಾಡಬಾರದು ಎಂದು ಕರೆಯ ಮೂಲಕ ಹೇಳಲಾಗಿದೆ.

ಸುಮಾರು ಒಂದು ಡಜನ್ ವಕೀಲರು ಬೆದರಿಕೆ ಕ್ಲಿಪ್ ಪಡೆದಿರುವುದಾಗಿ ಹೇಳಿದ್ದಾರೆ. ಸುಪ್ರೀಂ ಕೋರ್ಟ್ ವಕೀಲ ವಿಷ್ಣು ಶಂಕರ್ ಜೈನ್ ಅವರಿಗೂ ಈ ಬೆದರಿಕೆ ಕರೆಗಳು ಬಂದಿವೆ. ಪ್ರಸ್ತುತ, ಈ ಕರೆ ರೆಕಾರ್ಡಿಂಗ್‌ಗಳ ತನಿಖೆ ನಡೆಸಲಾಗುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ಜನವರಿ 5 ರಂದು ಪಂಜಾಬ್‌ನಲ್ಲಿ ಪ್ರಧಾನಿ ಮೋದಿಯವರ ಭದ್ರತಾ ಲೋಪದ ಹೊಣೆಯನ್ನು ಈ ಸಂಸ್ಥೆ ವಹಿಸಿಕೊಂಡಿದೆ.

ಪ್ರಧಾನಿ ಮೋದಿಯವರ ಭದ್ರತೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ಭಾಗವಹಿಸಬಾರದು ಎಂದು ಕರೆಯಲ್ಲಿ ಹೇಳಲಾಗಿದೆ. 1984 ರ ಸಿಖ್ ದಂಗೆ ಮತ್ತು ನರಮೇಧದಲ್ಲಿ ಒಬ್ಬನೇ ಒಬ್ಬ ಅಪರಾಧಿಗೆ ಶಿಕ್ಷೆಯಾಗಿಲ್ಲ ಎಂದು ಅವರು ವಾದಿಸುತ್ತಾರೆ. ಆದ್ದರಿಂದ, ಈ ವಿಷಯದ ಬಗ್ಗೆ ವಿಚಾರಣೆ ನಡೆಯಬಾರದೆಂದು ಎಚ್ಚರಿಸಿದ್ದಾರೆ.

ಭದ್ರತಾ ವೈಫಲ್ಯ ಗಂಭೀರ ಪ್ರಕರಣವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್

ದೇಶದಲ್ಲಿ ಭಾರಿ ಸದ್ದು ಮಾಡಿರುವ ಪ್ರಧಾನಿ ನರೇಂದ್ರ ಮೋದಿ  ಭದ್ರತಾ ಲೋಪ(PM Modi Security lapse) ಪಕರಣದ ಕುರಿತು ಇದೀಗ ಸುಪ್ರೀಂ ಕೋರ್ಟ್‌(Supreme Court) ಮಹತ್ವದ ಸೂಚನೆ ನೀಡಿದೆ. ಇಂದು(ಜ.10 ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಯಿತು. ಈ ವೇಳೆ ಗಂಭೀರ ಪ್ರಕರಣವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್, ಪ್ರಕರಣದ ತನಿಖೆಗೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದ ತ್ರಿಸದಸ್ಯರ(3 member Committee) ಸಮಿತಿ ರಚಿಸಿದೆ.

ಪಂಜಾಬ್‌ನಲ್ಲಿ ನಡೆದ ಪ್ರಧಾನಿ ಮೋದಿ ಭದ್ರತಾ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್‌ವಿ ರಮಣ, ಜಸ್ಟೀಸ್ ಸೂರ್ಯಕಾಂತ್, ಜಸ್ಟಿಸ್ ಹಿಮಾ ಕೊಹ್ಲಿ ನೇತೃತ್ವದ ಪೀಠ, ಸಮಿತಿ ರಚನೆಗೆ ಆದೇಶ ಹೊರಡಿಸಿದೆ.  ಪ್ರಧಾನಿ ಮೋದಿ ಭೇಟಿಯಲ್ಲಿ ನಡೆದ ಭದ್ರತಾ ಲೋಪ, ಸಾಕ್ಷ ಸಂರಕ್ಷಣೆ ಹಾಗೂ ತಪ್ಪೆಸಗಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕೋರಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪೀಠ ಈ ಮಹತ್ವದ ಆದೇಶ ನೀಡಿದೆ.

PM Modi Security Breach: ಎಲ್ಲಾ ದಾಖಲೆ ಸುರಕ್ಷಿತವಾಗಿಡಲು ಸುಪ್ರಿಂ ಆದೇಶ!

ಪಂಜಾಬ್ ಸರ್ಕಾರದ ಪರ ಅಡ್ವೋಕೇಟ್ ಜನರಲ್ ಡಿಎಸ್ ಪಟ್ವಾಲಿಯಾ ವಾದ ಮಂಡಿಸಿದ್ದಾರೆ. ಈ ವೇಳೆ ಪ್ರಧಾನಿ ಪ್ರಯಾಣದ ವಿವರ ಹಾಗೂ ದಾಖಲೆಗಳನ್ನು ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಮುಂದೆ ದಾಖಲಿಸಲಾಗಿದೆ. ರಾಜ್ಯದ ಪೊಲೀಸ್ ಅಧಿಕಾರಿಗಳಿಗೆ 7 ಶೋಕಾಸ್ ನೊಟೀಸ್ ನೀಡಲಾಗಿದೆ. ಈಗಾಗಲೇ ದಾಖಲೆ ಸಂರಕ್ಷಣೆ ಸೇರಿದಂತೆ ಹಲವು ವಿಚಾರಗಳ ಕುರಿತು ಕೋರ್ಟ್ ಸ್ಪಷ್ಟ ಸೂಚನೆ ನೀಡಿದೆ. ಇದರ ನಡುವೆ ಶೋಕಾಸ್ ನೊಟೀಸ್ ನೀಡಿ ವಿಚಾರಣೆಗೂ ಅವಕಾಶ ನೀಡದಂತೆ ಮಾಡಲಾಗಿದೆ ಎಂದು ಪಟ್ವಾಲಿಯಾ ವಾದ ಮಂಡಿಸಿದ್ದಾರೆ.

ಪ್ರಧಾನಿ ಭದ್ರತಾ ಲೋಪ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಅಧಿಕಾರ ಬಳಸಿಕೊಳ್ಳುತ್ತಿದೆ. ಇದರಿಂದ  ಪಂಜಾಬ್ ಪೊಲೀಸ್(Punjab Police) ಹಾಗೂ ಅಧಿಕಾರಿಗಳಿಗೆ ನ್ಯಾಯ ಸಿಗುವ ಸಾಧ್ಯತೆಗಳಿಲ್ಲ. ಹೀಗಾಗಿ ಸುಪ್ರೀಂ ಕೋರ್ಟ್ ಸ್ವತಂತ್ರ ತನಿಖೆಗೆ(independent probe) ನಿರ್ದೇಶಿಸಬೇಕು ಎಂದು ಆಗ್ರಹಿಸಿದರು. 

PM Security Lapse 11 ತಿಂಗಳ ಹಿಂದೆ ಮೋದಿ ದಾಳಿಗೆ ಸ್ಕೆಚ್, ಪಂಜಾಬ್ ಕುತಂತ್ರ ವಿಡಿಯೋ ವೈರಲ್!

ಪಟ್ವಾಲಿಯಾ ವಾದಕ್ಕೆ ಪ್ರತಿಯಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದ್ದರು. ಈ ವೇಳೆ ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್(SPG) ಬ್ಲೂ ಬುಕ್ (Blue Book) ನಿಯಮ ಕುರಿತು ಉಲ್ಲೇಖಿಸಿದ್ದಾರೆ. ಪ್ರಧಾನಿ ಮೋದಿ ಹಾಗೂ ಬೆಂಗಾವಲು ವಾಹನ ಫ್ಲೈವರ್ ಮೇಲೆ ತುಲುಪಿದಾಗ ಪ್ರತಿಭಟನಾಕಾರರು ಕೇವಲ 100 ಮೀಟರ್ ಅಂತರದಲ್ಲಿದ್ದರು. ಪ್ರಧಾನಿ ಮೋದಿ ಸಂಚರಿಸುವ ರಸ್ತೆ ಸೇರಿದಂತೆ ಭದ್ರತೆಯನ್ನು ಸಂಪೂರ್ಣವಾಗಿ ಕಟ್ಟು ನಿಟ್ಟಾಗಿ ರಾಜ್ಯ ಪೊಲೀಸ್ ಪಡೆ ಮಾಡಬೇಕು. ಯಾವುದೇ ಅಹಿತಕರ ಘಟನೆ ನಡೆಯದಂತೆ ಅನಾನುಕೂಲ ಆಗದಂತೆ ನೋಡಿಕೊಳ್ಳಬೇಕು. ಆದರೆ ಇಲ್ಲಿ ಬ್ಲೂ ಬೂಕ್ ನಿಯಮ ಉಲ್ಲಂಘನೆಯಾಗಿದೆ. ಪ್ರಧಾನಿ ಆಗಮಿಸುತ್ತಿರುವ ಮಾಹಿತಿ ಇದ್ದರೂ ರಸ್ತೆಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಅಥವಾ SPGಗೆ ಮುನ್ಸೂಚನೆ ನೀಡುವ ಪ್ರಯತ್ನಗಳು ಆಗಿಲ್ಲ ಎಂದು ತುಷಾರ್ ಮೆಹ್ತಾ ವಾದಿಸಿದ್ದಾರೆ.

Follow Us:
Download App:
  • android
  • ios