Asianet Suvarna News Asianet Suvarna News

2022ರಲ್ಲಿ ತಲೆ ಎತ್ತಲಿದೆ ನೂತನ ಸಂಸತ್‌ ಭವನ; ಇದರ ವಿಶೇಷತೆಳೇನು? ನೋಡೋಣ ಬನ್ನಿ!

ರಾಷ್ಟ್ರರಾಜಧಾನಿ ಪ್ರದೇಶ ಮರು ನಿರ್ಮಾಣ ಯೋಜನೆ (ಸೆಂಟ್ರಲ್‌ ವಿಸ್ತಾ ಪ್ರಾಜೆಕ್ಟ್) ಯೋಜನೆಯ ಅಡಿಯಲ್ಲಿ ಸಂಸತ್‌ ಭವನವನ್ನು ನಿರ್ಮಾಣ ಮಾಡಲಾಗುತ್ತಿದೆ. 64,500 ಚದರ ಮೀಟರ್‌ ಪ್ರದೇಶದಲ್ಲಿ ತ್ರಿಭುಜಾಕೃತಿಯ ಸಂಸತ್‌ ಆವರಣ ನಿರ್ಮಾಣ ಆಗಲಿದೆ. 

 

structure of Parliament new Building hls
Author
bengaluru, First Published Dec 10, 2020, 10:51 AM IST

ನವದೆಹಲಿ (ಡಿ. 10): ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್‌ ಭವನಕ್ಕೆ ಡಿ.10ರಂದು ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸ ಸಂಸತ್‌ ಭವನ ಹೇಗಿರಲಿದೆ? ಈ ಕಟ್ಟಡದ ವಿಶೇಷತೆಗಳೇನು? ಎಂಬಿತ್ಯಾದಿ ಸಂಕ್ಷಿಪ್ತ ಮಾಹಿತಿ ಇಲ್ಲಿವೆ.

"

ಹೊಸ ಸಂಸತ್‌ ಭವನ ಏಕೆ ಬೇಕು?

ಈಗಿರುವ ಸಂಸತ್‌ ಭವನವನ್ನು 1921ರಲ್ಲಿ ನಿರ್ಮಿಸಲಾಗಿತ್ತು. 2021ರಲ್ಲಿ ಈಗಿನ ಸಂಸತ್‌ ಭವನಕ್ಕೆ 100 ವರ್ಷಗಳು ತುಂಬಲಿದೆ. ಸಂಸತ್‌ ಕಟ್ಟಡ ಹಳೆಯದಾಯಿತು ಎಂಬುದಷ್ಟೇ ಅಲ್ಲ. ಭವಿಷ್ಯದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಸಂಸದರ ಸಂಖ್ಯೆ ಹೆಚ್ಚಾದಂತೆ ಅವರಿಗೆ ಸ್ಥಾಳವಕಾಶದ ಕೊರತೆ ಎದುರಾಗಲಿದೆ. 2026ರಲ್ಲಿ ಜನಸಂಖ್ಯೆಯ ಆಧಾರದ ಮೇಲೆ ಸಂಸದರ ಕ್ಷೇತ್ರ ಮರುವಿಂಗಡಣೆಯಾದರೆ, ಇನ್ನಷ್ಟುಸಂಸದರ ಸಂಖ್ಯೆ ಹೆಚ್ಚಾಗಲಿದೆ. ಆಗ ಹಳೆಯ ಕಟ್ಟಡದಲ್ಲಿ ಜಾಗದ ಅಭಾವ ಉಂಟಾಗಲಿದೆ. ಜೊತೆಗೆ ಹೊಸ ಕಟ್ಟಡ ಆಧುನಿಕ ತಂತ್ರಜ್ಞಾನ, ಹೆಚ್ಚಿನ ಸುರಕ್ಷತಾ ವ್ಯವಸ್ಥೆ ಹಾಗೂ ಭೂಕಂಪವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರಲಿದೆ.

ಹೊಸ ಸಂಸತ್ ಭವನಕ್ಕೆ ಶಿಲಾನ್ಯಾಸ, ಶೃಂಗೇರಿ ಪುರೋಹಿತರಿಂದ ನಡೆಯಲಿದೆ ಭೂಮಿ ಪೂಜೆ!

ವೆಚ್ಚ ಎಷ್ಟು?

ರಾಷ್ಟ್ರರಾಜಧಾನಿ ಪ್ರದೇಶ ಮರು ನಿರ್ಮಾಣ ಯೋಜನೆ (ಸೆಂಟ್ರಲ್‌ ವಿಸ್ತಾ ಪ್ರಾಜೆಕ್ಟ್) ಯೋಜನೆಯ ಅಡಿಯಲ್ಲಿ ಸಂಸತ್‌ ಭವನವನ್ನು ನಿರ್ಮಾಣ ಮಾಡಲಾಗುತ್ತಿದೆ. 64,500 ಚದರ ಮೀಟರ್‌ ಪ್ರದೇಶದಲ್ಲಿ ತ್ರಿಭುಜಾಕೃತಿಯ ಸಂಸತ್‌ ಆವರಣ ನಿರ್ಮಾಣ ಆಗಲಿದೆ. ಈ ಯೋಜನೆಗೆ 971 ಕೋಟಿ ರು. ವೆಚ್ಚವಾಗುವ ನಿರೀಕ್ಷೆ ಇದೆ. ಟಾಟಾ ಪ್ರಾಜೆಕ್ಟ್ ಲಿಮಿಟೆಡ್‌ 861.90 ಕೋಟಿ ರು.ಗೆ ಸಂಸತ್‌ ಭವನ ನಿರ್ಮಾಣ ಗುತ್ತಿಗೆ ಕಾಮಗಾರಿಯ ಬಿಡ್‌ ಅನ್ನು ಗೆದ್ದುಕೊಂಡಿದೆ. ಈ ಕಟ್ಟಡ ಹಳೆಯ ಕಟ್ಟಡದಷ್ಟೇ ಎತ್ತರ ಇರಲಿದ್ದು, ನೆಲ ಮಹಡಿ, ಮೊದಲ ಹಾಗೂ 2ನೇ ಅಂತಸ್ತನ್ನು ಹೊಂದಿರಲಿದೆ.

ಎಂದು ಪೂರ್ಣ?

ನೂತನ ಸಂಸತ್‌ ಭವನ ನಿರ್ಮಾಣ ಯೋಜನೆಯನ್ನು ಮುಂದಿನ 21 ತಿಂಗಳಿನಲ್ಲಿ ಪೂರ್ಣಗೊಳಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಭಾರತದ 75ನೇ ಸ್ವಾತಂತ್ರ್ಯೋತ್ಸವದ ವೇಳೆಗೆ ನೂತನ ಸಂಸತ್‌ ಭವನದಲ್ಲಿ ಕಲಾಪಗಳು ಆರಂಭವಾಗುವ ನಿರೀಕ್ಷೆ ಇದೆ. ಈ ಕಟ್ಟಡ ನಿರ್ಮಾಣ ಕಾರ್ಯದಲ್ಲಿ 2000 ಮಂದಿ ನೇರವಾಗಿ ಹಾಗೂ 9000 ಮಂದಿ ಪರೋಕ್ಷವಾಗಿ ಕಾರ್ಯನಿರ್ವಹಿಸಲಿದ್ದಾರೆ.

ಪ್ರಧಾನಿ ವಿದೇಶಿ ಪ್ರವಾಸ ಮಾಹಿತಿ ಬಹಿರಂಗಕ್ಕೆ ವಾಯುಪಡೆ ನಕಾರ!

ಆಸನ ಸಾಮರ್ಥ್ಯ ಎಷ್ಟು?

ಭವಿಷ್ಯದಲ್ಲಿ ಸಂಸತ್‌ ಸದಸ್ಯರ ಸಂಖ್ಯೆಯನ್ನು ಗಮನದಲ್ಲಿ ಇಟ್ಟುಕೊಂಡು ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತದೆ. ಈ ಕಟ್ಟಡದಲ್ಲಿ 1224 ಸಂಸದರು ಒಟ್ಟಿಗೆ ಕುಳಿತುಕೊಳ್ಳಬಹುದಾಗಿದೆ. ಲೋಕಸಭೆಯಲ್ಲಿ 888 ಹಾಗೂ ರಾಜ್ಯಸಭೆಯಲ್ಲಿ 384 ಆಸನ ವ್ಯವಸ್ಥೆ ಇರಲಿದೆ. ಸದ್ಯ ಲೋಕಸಭೆಯಲ್ಲಿ 543 ಹಾಗೂ ರಾಜ್ಯಸಭೆಯಲ್ಲಿ 245 ಸಂಸದರಿಗೆ ಆಸನ ವ್ಯವಸ್ಥೆ ಇದೆ.

ಈಗಿರುವ ಕಟ್ಟಡ ಏನಾಗಲಿದೆ?

ನೂತನ ಸಂಸತ್‌ ಭವನ ನಿರ್ಮಾಣವಾದ ಬಳಿಕ ಹಳೆಯ ಕಟ್ಟಡವನ್ನು ಮ್ಯೂಸಿಯಂ ಆಗಿ ಪರಿವರ್ತಿಸಲಾಗುತ್ತದೆ. ಹೊಸ ಸಂಸತ್‌ ಭವನ ಕಾರ್ಯಾರಂಭಿಸುವವರೆಗೂ ಸಂಸತ್ತಿನ ಚಟುವಟಿಕೆಗಳು ಹಳೆಯ ಕಟ್ಟಡದಲ್ಲೇ ನಡೆಯಲಿವೆ. ಬಳಿಕ ಅದನ್ನು ಮ್ಯೂಸಿಯಂ ಆಗಿ ಪರಿವರ್ತಿಸಿ ದೇಶದ ಪುರಾತತ್ವ ಸಂಪತ್ತು ಎಂದು ಪರಿಗಣಿಸಲಾಗುತ್ತದೆ.

ಹೊಸದಾಗಿ ಕೆಲಸಕ್ಕೆ ಸೇರುವವರ ಪಿಎಫ್ ಭರಿಸುವ ಸ್ಕೀಂಗೆ ಒಪ್ಪಿಗೆ!

ವಿಶೇಷತೆಗಳು

50 ಮೀಟರ್‌: ನೂತನ ಸಂಸತ್‌ ಭವನದ ಎತ್ತರ

971 ಕೋಟಿ ರು.: ಸಂಸತ್‌ ಭವನದ ಒಟ್ಟು ನಿರ್ಮಾಣ ವೆಚ್ಚ

83 ಲಕ್ಷ ರು.: ಈಗಿರುವ ಕಟ್ಟಡ ನಿರ್ಮಾಣಕ್ಕೆ ತಗುಲಿದ್ದ ವೆಚ್ಚ

64,500 ಚದರ್‌ ಮೀಟರ್‌: ಸಂಸತ್‌ ಭವನದ ವಿಸ್ತೀರ್ಣ

888: ಲೋಕಸಭೆಯಲ್ಲಿ ಇಷ್ಟುಸದಸ್ಯರಿಗೆ ಆಸನ ವ್ಯವಸ್ಥೆ

384: ರಾಜ್ಯಸಭೆಯಲ್ಲಿ ಇಷ್ಟುಸದಸ್ಯರಿಗೆ ಆಸನ ವ್ಯವಸ್ಥೆ

1,224: ಹೊಸ ಕಟ್ಟಡದಲ್ಲಿ ಸಂಸದರ ಆಸನ ಸಾಮರ್ಥ್ಯ

5000 ಸಿಬ್ಬಂದಿ: ಹಾಲಿ ಸಂಸತ್‌ ಭವನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ

9500 ಸಿಬ್ಬಂದಿ: ಹಳೆಯ ಮತ್ತು ಹೊಸ ಕಟ್ಟಡದಲ್ಲಿ ಕಾರ್ಯನಿರ್ವಹಿಸಲಿರುವ ಸಿಬ್ಬಂದಿ ಸಂಖ್ಯೆ

326: ನೂತನ ಕಟ್ಟಡದಲ್ಲಿ ಆವರಣದಲ್ಲಿ ಬೆಳೆಯಲಿರುವ ಮರಗಳು

 

Follow Us:
Download App:
  • android
  • ios