ಹೊಸ ಸಂಸತ್ ಭವನಕ್ಕೆ ಶಿಲಾನ್ಯಾಸ, ಶೃಂಗೇರಿ ಪುರೋಹಿತರಿಂದ ನಡೆಯಲಿದೆ ಭೂಮಿ ಪೂಜೆ!
ಹೊಸ ಸಂಸತ್ ಭವನಕ್ಕೆ ಇಂದು ಶಿಲಾನ್ಯಾಸ| ಪಿಎಂ ಮೋದಿಯಿಂದ ಶಿಲಾನ್ಯಾಸ| ಭೂಮಿ ಪೂಜಾ ಕಾರ್ಯಕ್ರಮದ ಹೊಣೆ ಶೃಂಗೇರಿ ಮಠದ ಪುರೋಹಿತರಿಗೆ
ನವದೆಹಲಿ(ಡಿ.10): ರಾಷ್ಟ್ರ ರಾಜಧಾನಿಯಲ್ಲಿ ನಿರ್ಮಿಸಲಿರುವ 971 ಕೋಟಿ ರು. ವೆಚ್ಚದ ನೂತನ ಸಂಸತ್ ಕಟ್ಟಡಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ಬುಧವಾರ ಮಧ್ಯಾಹ್ನ 1 ಗಂಟೆಗೆ ಶಂಕುಸ್ಥಾಪನೆ ನೆರವೇರಿಸಿ ಭೂಮಿ ಪೂಜೆ ಮಾಡಲಿದ್ದಾರೆ. ವಿಶೇಷವೆಂದರೆ ಭೂಮಿ ಪೂಜಾ ಕಾರ್ಯಕ್ರಮದ ಹೊಣೆ ಶೃಂಗೇರಿ ಮಠದ ಪುರೋಹಿತರಿಂದ ನಡೆಯಲಿದೆ.
"
ಡಿ.10ಕ್ಕೆ ಹೊಸ ಸಂಸತ್ ಭವನದ ಶಿಲಾನ್ಯಾಸ, ಇದು ಆತ್ಮನಿರ್ಭರ್ ಭಾರತದ ಧ್ಯೋತಕ ಎಂದ ಸ್ಪೀಕರ್!
ಹೌದು ಹೊಸ ಸಂಸತ್ ಭವನದ ಭೂಮಿ ಪೂಜೆ ನೆರವೇರಿಸಿದ ಹೆಮ್ಮೆ ಕರ್ನಾಟಕಕ್ಕೆ ಸಿಗಲಿದೆ. ಹಿರಿಯ ಪುರೋಹಿತ ನಾಗರಾಜ ಅಡಿಗ ನೇತೃತ್ವದಲ್ಲಿ ಆರು ಮಂದಿ ಯ ತಂಡ ದೆಹಲಿಗೆ ತಲುಪಿದ್ದು, ಇಂದು ಬೆಳಗ್ಗೆಯಿಂದಲೇ ಪೂಜಾ ಕಾರ್ಯಕ್ರಮಗಳು ಶುರುವಾಗಲಿವೆ. ಮಧ್ಯಾಹ್ನ 12:40 ರಿಂದ 1:15 ಗಂಟೆಗೆ ಯೊಳಗೆ ಶಿಲಾನ್ಯಾಸ ಕಾರ್ಯಕ್ರಮ ಜರುಗಲಿದೆ.
ಕಾರ್ಯಕ್ರಮದಲ್ಲಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿ ಹಲವು ಗಣ್ಯರು ಭಾಗಿಯಾಗಲಿದ್ದಾರೆ. ಇಡೀ ಕಟ್ಟಡ ಭೂಕಂಪ ನಿರೋಧಕ ಶಕ್ತಿ ಹೊಂದಿರಲಿದೆ. ನಿರ್ಮಾಣ ಕಾಮಗಾರಿಯಲ್ಲಿ ಪ್ರತ್ಯಕ್ಷವಾಗಿ 2000, ಪರೋಕ್ಷವಾಗಿ 9000 ಜನ ಭಾಗಿಯಾಗಲಿದ್ದಾರೆ.
ಎರಡು ವರ್ಷದೊಳಗೆ ಹೊಸ ಸಂಸತ್ ಭವನ ನಿರ್ಮಾಣ ಪೂರ್ಣಗೊಳಿಸಿ 75ನೇ ಸ್ವಾತಂತ್ರ್ಯೋತ್ಸವವನ್ನು ಅಲ್ಲೇ ಆಚರಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಹೊಸ ಸಂಸತ್ ಭವನ ಒಟ್ಟು 64,500 ಚದರ ಮೀಟರ್ ವಿಸ್ತೀರ್ಣ ಹೊಂದಿರಲಿದೆ.
ಭಾರತ ಬಂದ್‌ಗೆ ಭಾರೀ ಬೆಂಬಲ: ರೈತರ ಹೋರಾಟಕ್ಕೆ 15 ವಿಪಕ್ಷಗಳ ಸಾಥ್!
ಸಂಸತ್ ಭವನದ ಕಟ್ಟಡದ ವಿಶೇಷತೆಗಳು
* ಹೊಸ ಕಟ್ಟಡ ಪಾರ್ಲಿಮೆಂಟ್ ಎಸ್ಟೇಟ್ ಪ್ಲಾಟ್ ನಂಬರ್ 118 ರಲ್ಲಿ ನಡೆಯಲಿದೆ
* 861.90 ಕೋಟಿ ವೆಚ್ಚದಲ್ಲಿ ನಿರ್ಮಾಣ. ಟಾಟಾ ಪ್ರಾಜೆಕ್ಟ್ ಗೆ ಗುತ್ತಿಗೆ ಸಿಕ್ಕಿದೆ
* ಗುಜರಾತಿನ ಎಚ್ ಸಿಪಿ ಡಿಸೈನ್ಸ್ ಸಂಸ್ಥೆಯು ಕಟ್ಟಡದ ವಿನ್ಯಾಸದ ಹೊಣೆ ಹೊತ್ತಿದೆ
* ಪ್ರಧಾನಿಗಳ ನಿವಾಸ ಸೌತ್ ಬ್ಲಾಕ್, ಉಪರಾಷ್ಟ್ರಪತಿಯವರ ನಿವಾಸ ನಾತ್೯ ಬ್ಲಾಕ್ ನಲ್ಲಿ ನಿರ್ಮಾಣ ವಾಗಲಿವೆ
* 2022 ರದ 75 ನೇ ಸ್ವಾತಂತ್ರೋತ್ಸವ ವಜ್ರಮಹೋತ್ಸವದ ಸಂಸತ್ ಕಲಾಪ ಇದೇ ಕಟ್ಟಡದಲ್ಲಿ ನಡೆಯಬೇಕು ಎನ್ನುವ ಉದ್ದೇಶ
* 2022ರ ಹೊತ್ತಿಗೆ ಹೊಸ ಕಟ್ಟಡ ನಿರ್ಮಾಣ ಪೂರ್ಣಗೊಳ್ಳಲಿದೆ
* ಕಾನ್ಸಿಟಿಟೂಷನ್ ಹಾಲ್, 888 ಸಂಸದರಿಗೆ ಆಸನದ ವ್ಯವಸ್ಥೆ
* ಪ್ರತಿ ಸಂಸದರಿಗೂ ಪ್ರತ್ಯೇಕ ಕಚೇರಿ
* ಕಾಗದರಹಿತ ಸಂವಹನಾ ವ್ಯವಸ್ಥೆ ಹೊಸ ಕಟ್ಟಡದಲ್ಲಿ ಇರಲಿದೆ
* ವಾಯು ಮತ್ತು ಶಬ್ದ ಮಾಲಿನ್ಯ ತಡೆಯುವ ತಂತ್ರಜ್ಞಾನ ಅಳವಡಿಕೆ
* 64,500 ಸಾವಿರ ಚದರ ಮೀಟರ್ ಗಳಲ್ಲಿ ಕಟ್ಟಡ ನಿರ್ಮಾಣ