ಏರ್ ಇಂಡಿಯಾದ ಆಹಾರದಲ್ಲಿ ಸಿಕ್ತು ಕಲ್ಲು: ಫೋಟೋ ವೈರಲ್

ಕೆಲ ದಿನಗಳಿಂದ ಏರ್ ಇಂಡಿಯಾ ವಿಮಾನವೂ ಸಾಕಷ್ಟು ಸುದ್ದಿಯಲ್ಲಿದೆ. ವಿಮಾನದಲ್ಲಿ ಉದ್ಯಮಿಯೊಬ್ಬರು ಮೂತ್ರ ವಿಸರ್ಜನೆ ಮಾಡಿದ ನಂತರ ಸಾಕಷ್ಟು ಸುದ್ದಿಯಲ್ಲಿರುವ ಏರ್ ಇಂಡಿಯಾ ಈಗ ಅದರಲ್ಲಿ ನೀಡಿರುವ ಆಹಾರಕ್ಕಾಗಿ ಸುದ್ದಿಯಾಗಿದೆ.

Stone in food which served in  Air India flight passengers shares photos in twitter akb

ನವದೆಹಲಿ: ಕೆಲ ದಿನಗಳಿಂದ ಏರ್ ಇಂಡಿಯಾ ವಿಮಾನವೂ ಸಾಕಷ್ಟು ಸುದ್ದಿಯಲ್ಲಿದೆ. ವಿಮಾನದಲ್ಲಿ ಉದ್ಯಮಿಯೊಬ್ಬರು ಮೂತ್ರ ವಿಸರ್ಜನೆ ಮಾಡಿದ ನಂತರ ಸಾಕಷ್ಟು ಸುದ್ದಿಯಲ್ಲಿರುವ ಏರ್ ಇಂಡಿಯಾ ಈಗ ಅದರಲ್ಲಿ ನೀಡಿರುವ ಆಹಾರಕ್ಕಾಗಿ ಸುದ್ದಿಯಾಗಿದೆ.  ಏರ್ ಇಂಡಿಯಾದ ವಿಮಾನದಲ್ಲಿ  ನೀಡಿದ ಆಹಾರದಲ್ಲಿ ಕಲ್ಲು ಸಿಕ್ಕಿದ ವಿಚಾರವನ್ನು ಮಹಿಳಾ ಪ್ರಯಾಣಿಕರೊಬ್ಬರು ಟ್ವಿಟ್ಟರ್‌ನಲ್ಲಿ  ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಟ್ವಿಟ್ಟರ್ ಬಳಕೆದಾರರಾದ  ಸರ್ವಪ್ರಿಯಾ ಸಂಗ್ವಾನ್ ಎಂಬುವವರು ಅರ್ಧ ತಿಂದ ಆಹಾರ ಹಾಗೂ ಆಹಾರದಲ್ಲಿ ಸಿಕ್ಕಿದ ಪುಟ್ಟ ಕಲ್ಲಿನ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡು ಈ ರೀತಿಯ ನಿರ್ಲಕ್ಷ್ಯವನ್ನು ಸಹಿಸಲಾಗದು ಎಂದು ಏರ್ ಇಂಡಿಯಾಗೆ ಟ್ಯಾಗ್ ಮಾಡಿದ್ದಾರೆ. 

ಏರ್ ಇಂಡಿಯಾ ವಿಮಾನ 215ರಲ್ಲಿ ಈ ಘಟನೆ ನಡೆದಿದೆ ಎಂದು ಮಹಿಳೆ ಬರೆದುಕೊಂಡಿದ್ದಾರೆ.  ಏರ್ ಇಂಡಿಯಾದಲ್ಲಿ ಕಲ್ಲು ಇಲ್ಲದ ಆಹಾರ ನೀಡಲು ನಿಮಗೆ ಹಣ ಹಾಗೂ ಸಂಪತ್ತಿನ ಅಗತ್ಯ ಇಲ್ಲ.  ಇದು ಇಂದು ಏರ್ ಇಂಡಿಯಾ ವಿಮಾನ 215 ಅಲ್ಲಿ ನನಗೆ ಸಿಕ್ಕಿದ ಆಹಾರ. ಈ ಬಗ್ಗೆ ವಿಮಾನದ ಸಿಬ್ಬಂದಿ ಜಡನ್ ಎಂಬುವವರಿಗೆ ಮಾಹಿತಿ ನೀಡಲಾಗಿದೆ. ಈ ರೀತಿಯ ನಿರ್ಲಕ್ಷ್ಯವನ್ನು ಒಪ್ಪಿಕೊಳ್ಳಲಾಗದು ಎಂದು ಅವರು ಬರೆದುಕೊಂಡಿದ್ದಾರೆ.

Air India Flight: ಕುಡಿದ ಮತ್ತಲ್ಲಿ ವೃದ್ಧೆ ಮೇಲೆ ಮೂತ್ರ ವಿಸರ್ಜಿಸಿದ ಭೂಪ..!

ಈ ಪೋಸ್ಟ್ ನೋಡಿ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಏರ್ ಇಂಡಿಯಾದ ಮಾಲೀಕತ್ವವನ್ನು ಇತ್ತೀಚೆಗೆ ಟಾಟಾಗ್ರೂಪ್ ಸುಪರ್ದಿಗೆ ಪಡೆದಿದ್ದು, ಟಾಟಾ ಗ್ರೂಪ್ ಅಡಿಯಲ್ಲಿ ಬರುವ ಏರ್ ಇಂಡಿಯಾದಲ್ಲಿ ಇಂತಹ ನಿರ್ಲಕ್ಷ್ಯ ಏಕೆ ಎಂದು ಅನೇಕರು ಪ್ರಶ್ನಿಸಿದ್ದಾರೆ.  ಒಬ್ಬ ಬಳಕೆದಾರರು, ಟಾಟಾ ಗ್ರೂಪ್‌ಗೆ ಟ್ಯಾಗ್ ಮಾಡಿ, ಜೆಆರ್‌ಡಿ ಟಾಟಾ (JRD Tata) ಅವರು,  ವಾಯುಯಾನ ಉದ್ಯಮದಲ್ಲಿ ಸ್ಟ್ಯಾಂಡರ್ಡ್‌ ಅನ್ನು ಸೆಟ್ ಮಾಡಿದವರು.  ಅವರು ಏರ್ ಇಂಡಿಯಾವನ್ನು ಸರ್ಕಾರ ಖರೀದಿಸುವ ಮೊದಲು ಅದನ್ನು ಜಾಗತಿಕವಾಗಿ ಗೌರವಿಸುವ ಬ್ರಾಂಡ್ ಆಗಿ ಬೆಳೆಸಿದರು.  ಈಗ ನೀವು ಮತ್ತೆ ಏರ್ ಇಂಡಿಯಾದ ಮಾಲೀಕರಾಗಿ ಬಂದಿದ್ದು,  ಅದನ್ನು  ಕೆಳಮಟ್ಟಕ್ಕೆ ಕೊಂಡೊಯ್ಯುತ್ತಿದ್ದೀರಾ?  ನಿಮ್ಮ ಸಂಸ್ಥೆಯಲ್ಲಿ ಕಾರ್ಪೋರೇಟ್ ದೂರದರ್ಶಿತ್ವ (corporate oversight) ಇಲ್ಲವೇ? ನೀವು ಪೀಗೇಟ್( ಮೂತ್ರ ವಿಸರ್ಜನೆ ಪ್ರಕರಣ) ನ್ನು ಹೇಗೆ ನಿರ್ವಹಿಸಿದ್ದೀರಿ ಮತ್ತು ಈಗ ಇದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ನಿಮ್ಮ ಅದೃಷ್ಟ, ನೀವು ಹಲ್ಲು ಮುರಿದುಕೊಳ್ಳುವ ಸಾಧ್ಯತೆ ಇತ್ತು.  ಏರ್ ಇಂಡಿಯಾ  (air india)ಕೆಟ್ಟ ನಿರ್ವಹಣೆಯನ್ನು ಹೊಂದಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.  ಈ ಮಧ್ಯೆ ಏರ್ ಇಂಡಿಯಾ ವಿಶ್ವದ ಅತ್ಯುತ್ತಮ ಏರ್‌ಲೈನ್ಸ್ ಉದ್ಯಮಗಳ ಮಧ್ಯೆ ಸ್ಪರ್ಧೆಗಿಳಿಯಬೇಕು. ಆದರೆ ಅದರು ಭಾರತೀಯ ರೈಲ್ವೆಯೊಂದಿಗೆ (Indian railways) ಸ್ಪರ್ಧೆಗಿಳಿದಂತೆ ಕಾಣುತ್ತಿದೆ ಎಂದು ಮಗದೊಬ್ಬರು ಪ್ರತಿಕ್ರಿಯಿಸಿದ್ದಾರೆ.  ಈ ಘಟನೆಗೆ ಸಂಬಂಧಿಸಿದಂತೆ ಏರ್ ಇಂಡಿಯಾ ಟ್ವಿಟ್ಟರ್‌ನಲ್ಲೇ ಪ್ರತಿಕ್ರಿಯಿಸಿದ್ದು,  ಡಿಯರ್ ಮೇಡಮ್,  ಈ ವಿಚಾರವಾಗಿ ನಾವು ಕೂಡಲೇ ಕೇಟರಿಂಗ್ ಟೀಮ್ ಜೊತೆ ವಿಚಾರಿಸುತ್ತೇವೆ.   ದಯವಿಟ್ಟು ನಮಗೆ ಸ್ವಲ್ಪ ಸಮಯ ನೀಡಿ. ಈ ವಿಚಾರವನ್ನು ನಮ್ಮ ಗಮನಕ್ಕೆ ತಂದಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ. 

ಬೆಂಗಳೂರು to ಸ್ಯಾನ್‌ ಫ್ರಾನ್ಸಿಸ್ಕೋ, ಸಿಲಿಕಾನ್ ವ್ಯಾಲಿ ನಡುವೆ ಏರ್ ಇಂಡಿಯಾ ವಿಮಾನ ಸೇವೆ ಪುನರ್ ಆರಂಭ!

ಒಟ್ಟಿನಲ್ಲಿ ವಿಮಾನಯಾನಕ್ಕೆ ಹಾಗೂ ಆಹಾರಕ್ಕೆ ಸಾವಿರಾರು ರೂಪಾಯಿ ವಸೂಲಿ ಮಾಡುವ ವಿಮಾನಯಾನ ಸಂಸ್ಥೆಗಳು ಒಳ್ಳೆಯ ಆಹಾರ ಹಾಗೂ ಗುಣಮಟ್ಟ ನೀಡುವುದರಲ್ಲಿ ವಿಫಲಗೊಂಡಿವೆ.  ಕೆಲ ದಿನಗಳ ಹಿಂದಷ್ಟೇ ವೃದ್ಧ ಮಹಿಳೆಯೊಬ್ಬರ ಮೇಲೆ  ಏರ್ ಇಂಡಿಯಾ ವಿಮಾನದಲ್ಲಿ ಮೂತ್ರ ವಿಸರ್ಜನೆ ಮಾಡಿದ ಉದ್ಯಮಿಯನ್ನು ಪೊಲೀಸರು ಬಂಧಿಸಿದ್ದರು. ಆತನನ್ನು ಡಿಸೆಂಬರ್ 6 ರಂದು ದೆಹಲಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿ ದೆಹಲಿಗೆ ಕರೆದೊಯ್ದಿದ್ದರು.  ಈ ಘಟನೆಯ ಬಳಿಕ ವೇಲ್ಸ್ ಫಾರ್ಗೋ ಸಂಸ್ಥೆಯಿಂದ ಆತನನ್ನು ವಜಾ ಮಾಡಲಾಗಿತ್ತು.

 

Latest Videos
Follow Us:
Download App:
  • android
  • ios