Air India Flight: ಕುಡಿದ ಮತ್ತಲ್ಲಿ ವೃದ್ಧೆ ಮೇಲೆ ಮೂತ್ರ ವಿಸರ್ಜಿಸಿದ ಭೂಪ..!

ಏರ್ ಇಂಡಿಯಾದ ಗ್ರೂಪ್ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರಿಗೆ ಮಹಿಳೆ ಪತ್ರ ಬರೆದ ನಂತರ ಈ ಘಟನೆ ಬಹಿರಂಗಗೊಂಡಿದ್ದು, ಈ ಬಗ್ಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು ವಿಮಾನಯಾನ ಸಂಸ್ಥೆಯ ವರದಿ ಕೇಳಿದೆ.

drunk man urinates on woman in new york delhi air india flight ash

ನವೆಂಬರ್‌ನಲ್ಲಿ ಏರ್ ಇಂಡಿಯಾ (Air India) ವಿಮಾನದ (Flight) ಬ್ಯುಸಿನೆಸ್‌ ಕ್ಲಾಸ್‌ನಲ್ಲಿ (Business Class) ಪಾನಮತ್ತ ವ್ಯಕ್ತಿಯೊಬ್ಬ (Drunk Man) ಮಹಿಳಾ ಸಹ ಪ್ರಯಾಣಿಕರೊಬ್ಬರ (Woman Co - Passenger) ಮೇಲೆ ಮೂತ್ರ ವಿಸರ್ಜನೆ (Urinated) ಮಾಡಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಲ್ಲದೆ, ಇಂತಹ ಘಟನೆ ನಡೆದರೂ ಆತನ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದೂ ತಿಳಿದು ಬಂದಿತ್ತು. ಘಟನೆ ನಡೆದು ಒಂದೂವರೆ ತಿಂಗಳ ಬಳಿಕ ಎಚ್ಚೆತ್ತ ಏರ್ ಇಂಡಿಯಾ, ಈಗ ಆತನ ವಿರುದ್ಧ ಪ್ರಕರಣ ದಾಖಲಿಸಿದೆ ಮತ್ತು ಅಶಿಸ್ತಿನ ವಿಮಾನ ಪ್ರಯಾಣಿಕನನ್ನು ನೋ-ಫ್ಲೈ ಪಟ್ಟಿಗೆ (No - Fly List) ಸೇರಿಸಲು ಶಿಫಾರಸು ಮಾಡಿದೆ. 

ಏರ್ ಇಂಡಿಯಾದ ಗ್ರೂಪ್ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರಿಗೆ ಮಹಿಳೆ ಪತ್ರ ಬರೆದ ನಂತರ ಈ ಘಟನೆ ಬಹಿರಂಗಗೊಂಡಿದ್ದು, ಈ ಬಗ್ಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು ವಿಮಾನಯಾನ ಸಂಸ್ಥೆಯ ವರದಿ ಕೇಳಿದೆ. ಹಾಗೂ, ನಿರ್ಲಕ್ಷ್ಯ ತೋರಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದೂ ನಿಯಂತ್ರಕರು ತಿಳಿಸಿದ್ದಾರೆ.

ಇದನ್ನು ಓದಿ: ಬ್ಯಾಂಕಾಕ್-ಕೋಲ್ಕತ್ತಾ ವಿಮಾನದಲ್ಲಿ ಪ್ರಯಾಣಿಕರ ನಡುವೆ ಮಾರಾಮಾರಿ: ವಿಡಿಯೋ ವೈರಲ್‌

ನವೆಂಬರ್ 26 ರಂದು, ಪಾನಮತ್ತ ಪ್ರಯಾಣಿಕ ನ್ಯೂಯಾರ್ಕ್‌ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದ ಬಿಸಿನೆಸ್ ಕ್ಲಾಸ್‌ನಲ್ಲಿ 70 ವರ್ಷದ ಆಸುಪಾಸಿನಲ್ಲಿದ್ದ ವೃದ್ಧೆಯ ಸಹ-ಪ್ರಯಾಣಿಕನ ಮೇಲೆ ಜಿಪ್ ತೆಗೆದು ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಊಟದ ನಂತರ ವಿಮಾನದ ದೀಪಗಳನ್ನು ಡಿಮ್‌ ಮಾಡಲಾಗಿತ್ತು. ಈ ವೇಳೆ ಮೂತ್ರ ವಿಸರ್ಜನೆಯ ನಂತರ, ವ್ಯಕ್ತಿ ತನ್ನ ಖಾಸಗಿ ಅಂಗವನ್ನು ಬಹಿರಂಗಪಡಿಸುತ್ತಲೇ ಇದ್ದ ಮತ್ತು ಇನ್ನೊಬ್ಬ ಪ್ರಯಾಣಿಕರು ತನ್ನ ಸೀಟಿಗೆ ಹಿಂತಿರುಗುವಂತೆ ಕೇಳುವವರೆಗೂ ಆತ ಕದಲಲಿಲ್ಲ ಎಂದೂ ದೂರಿನಲ್ಲಿ ಹೇಳಲಾಗಿದೆ.

ತನ್ನ ಬಟ್ಟೆ, ಬೂಟುಗಳು ಮತ್ತು ಬ್ಯಾಗ್ ಮೂತ್ರಕ್ಕೆ ಒದ್ದೆಯಾಗಿ ಹೋಗಿದೆ ಎಂದೂ ಮಹಿಳೆ ಸಿಬ್ಬಂದಿಗೆ ದೂರು ನೀಡಿದ್ದರು. ಆದರೆ,  ಸಿಬ್ಬಂದಿ ಆಕೆಗೆ ಪೈಜಾಮಾ ಮತ್ತು ಚಪ್ಪಲಿಗಳನ್ನು ನೀಡಿದರು ಮತ್ತು ಬೇರೆ ಯಾವುದೇ ಸೀಟು ಲಭ್ಯವಿಲ್ಲ ಎಂದು ಹೇಳಿ ತನ್ನ ಸೀಟಿಗೆ ಮರಳುವಂತೆ ಹೇಳಿದರು ಎಂದೂ ತಿಳಿದುಬಂದಿದೆ. ಅಲ್ಲದೆ, ಪ್ರಯಾಣಿಕನು ತನ್ನ ಅತಿರೇಕದ ವರ್ತನೆಗಾಗಿ ಯಾವುದೇ ಕ್ರಮವನ್ನು ಎದುರಿಸದೆ ಹೊರಟುಹೋಗಿದ್ದಾನೆ ಎಂದೂ ಆರೋಪಿಸಲಾಗಿದೆ. 

ಇದನ್ನೂ ಓದಿ:  Indigo Airlines ಪ್ರಯಾಣಿಕರು -ಗಗನಸಖಿ ನಡುವೆ ವಾಗ್ವಾದ: ವಿಡಿಯೋ ವೈರಲ್‌

ಘಟನೆಯ ಏರ್‌ಲೈನ್‌ನ ನಿರ್ವಹಣೆಯಿಂದ ನಿರಾಶೆಗೊಂಡ ಮಹಿಳೆ ಮರುದಿನ ಏರ್ ಇಂಡಿಯಾದ ಗ್ರೂಪ್ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರಿಗೆ  ಪತ್ರ ಬರೆದು "ನಾನು ಅನುಭವಿಸಿದ ಅತ್ಯಂತ ಆಘಾತಕಾರಿ ವಿಮಾನ" ಎಂದು ವಿವರಿಸಿದ್ದಾರೆ. ಏರ್ ಇಂಡಿಯಾ ಇದೀಗ ವ್ಯಕ್ತಿಯ ವಿರುದ್ಧ ಪೊಲೀಸ್ ದೂರು ದಾಖಲಿಸಿದೆ. ಹಾಗೆ, ಏರ್ ಇಂಡಿಯಾ ಆಂತರಿಕ ಸಮಿತಿಯನ್ನು ರಚಿಸಿದೆ ಮತ್ತು ಆ ಪುರುಷ ಪ್ರಯಾಣಿಕನನ್ನು 'ನೋ-ಫ್ಲೈ ಲಿಸ್ಟ್'ಗೆ ಸೇರಿಸಲು ಶಿಫಾರಸು ಮಾಡಿದೆ. ಈ ವಿಷಯವು ಸರ್ಕಾರದ ಸಮಿತಿಯ ಅಡಿಯಲ್ಲಿದೆ ಮತ್ತು ನಿರ್ಧಾರಕ್ಕಾಗಿ ಕಾಯುತ್ತಿದೆ" ಎಂದು ಮೂಲಗಳು ತಿಳಿಸಿವೆ. ಈ ಘಟನೆ ಸಂಬಂಧ ಪಾನಮತ್ತ ಪ್ರಯಾಣಿಕನಿಗೆ ವಿಮಾನದಲ್ಲಿ ಸಂಚರಿಸದಂತೆ 30 ದಿನಗಳ ಕಾಲ ನಿಷೇಧ ಹೇರಿದೆ ಎಂದು ವರದಿಯಾಗಿದೆ.

ಇನ್ನು, ವಿಮಾನದಲ್ಲಿ ಈ ರೀತಿ ಅಶಿಸ್ತಿನ ವರ್ತನೆ ಆಗಾಗ್ಗೆ ವರದಿಯಾಗುತ್ತಿರುತ್ತದೆ. ಡಿಸೆಂಬರ್ 26 ರಂದು, ಥಾಯ್ ಸ್ಮೈಲ್‌ ವಿಮಾನದಲ್ಲಿ ಬ್ಯಾಂಕಾಕ್‌ನಿಂದ ಕೋಲ್ಕತ್ತಾ ವಿಮಾನದಲ್ಲಿ ಸಹ-ಪ್ರಯಾಣಿಕನಿಗೆ ಟೇಕಾಫ್ ಮಾಡುವ ಮೊದಲು ತನ್ನ ಆಸನವನ್ನು ನೇರವಾಗಿ ಮಾಡಲು ನಿರಾಕರಿಸಿದ ನಂತರ ಪ್ರಯಾಣಿಕರ ಗುಂಪೊಂದು ಥಳಿಸಿದ ಘಟನೆ ನಡೆದಿತ್ತು. ಇದಕ್ಕೂ ಮುನ್ನ, ಡಿಸೆಂಬರ್ 16 ರಂದು, ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರು - ಗಗನಸಖಿಯ ನಡುವೆ ಗಲಾಟೆಯ ವಿಡಿಯೋ ವೈರಲ್‌ ಆಗಿತ್ತು. 

ಇದನ್ನೂ ಓದಿ: ವಿಮಾನಗಳು ಏಕೆ ಬಿಳಿ ಬಣ್ಣದಲ್ಲಿರುತ್ತೆ?
 
ಈ ಮಧ್ಯೆ, 2018ರ ಆಗಸ್ಟ್‌ನಲ್ಲಿ ನ್ಯೂಯಾರ್ಕ್-ದೆಹಲಿಯ ಏರ್‌ ಇಂಡಿಯಾ ವಿಮಾನದಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ಸೀಟಿನ ಮೇಲೆ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿದ ಘಟನೆ ನಡೆದಿತ್ತು. ಈ ವೇಳೆ, ಏರ್ ಇಂಡಿಯಾ ತೀವ್ರ ಖಂಡನೆ ವ್ಯಕ್ತಪಡಿಸಿತ್ತು ಮತ್ತು ಕ್ಷಮೆಯಾಚಿಸಿತ್ತು.

Latest Videos
Follow Us:
Download App:
  • android
  • ios