ಬೆಂಗಳೂರು to ಸ್ಯಾನ್‌ ಫ್ರಾನ್ಸಿಸ್ಕೋ, ಸಿಲಿಕಾನ್ ವ್ಯಾಲಿ ನಡುವೆ ಏರ್ ಇಂಡಿಯಾ ವಿಮಾನ ಸೇವೆ ಪುನರ್ ಆರಂಭ!

ತಂತ್ರಜ್ಞಾನ ಕೇಂದ್ರಗಳಾಗಿರುವ ಮೂಲ ಸಿಲಿಕಾನ್ ವ್ಯಾಲಿ ಹಾಗೂ ಭಾರತದ ಸಿಲಿಕಾನ್ ವ್ಯಾಲಿಯನ್ನು ಸಂಪರ್ಕಿಸುವ ವಿಶೇಷ ವಿಮಾನ ಸೇವೆಯನ್ನು ಏರ್ ಇಂಡಿಯಾ ಆರಂಭಿಸುತ್ತಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
 

Bengaluru to San Francisco  Air India resumes Silicon Valley non stop air service network from India to the USA ckm

ಬೆಂಗಳೂರು(ಡಿ.02): ಟಾಟಾ ತೆಕ್ಕೆಗೆ ಬಂದ ಬಳಿಕ ಏರ್ ಇಂಡಿಯಾ ವಿಮಾನ ಸೇವೆ ಬದಲಾಗಿದೆ. ಇತ್ತೀಚೆಗೆ ಹೊಸ ಮಾರ್ಗಸೂಚಿಯನ್ನು ಏರ್ ಇಂಡಿಯಾ ಪ್ರಕಟಿಸಿದೆ. ಗ್ರಾಹಕರಿಗೆ ನೀಡುವ ಸೇವೆಯ ಗುಣಮಟ್ಟ ಹೆಚ್ಚಾಗಿದೆ. ಇದೀಗ ಏರ್ ಇಂಡಿಯಾ ತನ್ನ ವ್ಯವಾಹಾರ ವಿಸ್ತರಿಸಿದೆ. ಇದೀಗ ಬೆಂಗಳೂರಿನಿಂದ ಸ್ಯಾನ್‌ಫ್ರಾನ್ಸಿಸ್ಕೋ ಸಂಪರ್ಕಿಸುವ ನೇರ ವಿಮಾನ ಸೇವೆ ಸಂಚಾರ ಪುನರ್ ಆರಂಭಿಸಿದೆ.  ಈ ಮೂಲಕ ಜಗತ್ತಿನ ಎರಡು ತಂತ್ರಜ್ಞಾನ ಕೇಂದ್ರಗಳಾಗಿರುವ ಮೂಲ ಸಿಲಿಕಾನ್ ವ್ಯಾಲಿ ಹಾಗೂ ಭಾರತದ ಸಿಲಿಕಾನ್ ವ್ಯಾಲಿಯನ್ನು ಸಂಪರ್ಕಿಸುವ ವಿಶೇಷ ವಿಮಾನ ಸೇವೆ ಇದಾಗಿದೆ. ಶುಕ್ರವಾರ, ಭಾನುವಾರ ಮತ್ತು ಬುಧವಾರ -ಹೀಗೆ ವಾರದಲ್ಲಿ ಮೂರು ದಿನಗಳಂದು ಈ ಮಾರ್ಗದಲ್ಲಿ ಬೋಯಿಂಗ್ 777-200ಎಲ್ಆರ್ ವಿಮಾನ ಸಂಚರಿಸಲಿದೆ. 

ಮೊದಲ ವಿಮಾನ ಎಐ 175  ಡಿಸೆಂಬರ್  2ರಂದು 1420ಕ್ಕೆ (ಸ್ಥಳೀಯ ಕಾಲಮಾನ) ಬೆಂಗಳೂರಿನಿಂದ ಹೊರಟು ಅದೇ ದಿನ 1700 ಗಂಟೆಗೆ ಸ್ಯಾನ್ಫ್ರಾನ್ಸಿಸ್ಕೋ ತಲುಪಲಿದೆ. ಮೊದಲ ರಿಟರ್ನ್ ಫ್ಲೈಟ್ ಎಐ 176, 2022 ಡಿಸೆಂಬರ್ 2ರಂದು 2100 ಗಂಟೆಗೆ (ಸ್ಥಳೀಯ ಕಾಲಮಾನ) ಸ್ಯಾನ್ಫ್ರಾನ್ಸಿಸ್ಕೋದಿಂದ ಹೊರಟು 4ನೇ ಡಿಸೆಂಬರ್ 2022ರ  0425 ಗಂಟೆಗೆ (ಸ್ಥಳೀಯ ಕಾಲಮಾನ)+2 ಬೆಂಗಳೂರು ತಲುಪಲಿದೆ. 

ಏರ್ ಇಂಡಿಯಾದ ಎಲ್ಲ ಏರ್ ಲೈನ್ಸ್ ಗಳಿಗೂ ಇನ್ಮುಂದೆ ಗುರುಗ್ರಾಮ ಕೇಂದ್ರ ಕಚೇರಿ!

ಬೆಂಗಳೂರು ಮತ್ತು ಸ್ಯಾನ್ಫ್ರಾನ್ಸಿಸ್ಕೋ ನಡುವಿನ ನೇರ ಅಂತರ ಸುಮಾರು 13,993 ಕಿ.ಮೀ. ಆಗಿದೆ. ಹಾಗೂ ಈ ಎರಡೂ ನಗರಗಳು ಜಗತ್ತಿನ ಎರಡು ವಿರುದ್ಧ ದಿಕ್ಕುಗಳ ಕೊನೆಯಲ್ಲಿದ್ದು ಸುಮಾರು  13.5 ಗಂಟೆಗಳ ಟೈಮ್ ಝೋನ್ ಅಂತರವಿದೆ. ಈ ಮಾರ್ಗದಲ್ಲಿ ವಿಮಾನ ಸಂಚಾರದ ಒಟ್ಟು ಅವಧಿ ನಿರ್ದಿಷ್ಟ ದಿನದಂದು ಗಾಳಿಯ ವೇಗವನ್ನು ಆಧರಿಸಿ 17 ಗಂಟೆಗಿಂತ ಹೆಚ್ಚಿರುತ್ತದೆ. ಈ ಮಾರ್ಗದಲ್ಲಿ ವಿಮಾನ ಸಂಚಾರವು ಸುರಕ್ಷಿತ, ವೇಗ ಹಾಗೂ ಹೆಚ್ಚು ಅಗ್ಗದ್ದಾಗಿದೆ. ಇದರೊಂದಿಗೆ ಪ್ರತಿ ವಾರ ಏರ್ ಇಂಡಿಯಾದ ಭಾರತ-ಅಮೆರಿಕ ನಾನ್-ಸ್ಟಾಪ್ ವಿಮಾನಗಳ ಫ್ರೀಕ್ವೆನ್ಸಿ (ವಿಮಾನಗಳ ಹಾರಾಟ ಸಂಖ್ಯೆ) 37ಕ್ಕೆ ಏರಲಿದೆ. ಪ್ರಸ್ತುತ ಏರ್ ಇಂಡಿಯಾ ದೆಹಲಿಯಿಂದ ನ್ಯೂಯಾರ್ಕ್, ನೆವಾರ್ಕ್, ವಾಷಿಂಗ್ಟನ್ ಡಿಸಿ, ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಷಿಕಾಗೋಗೆ ಹಾಗೂ ಮುಂಬೈಯಿಂದ ನೆವಾರ್ಕ್ಗೆ ತಡೆ-ರಹಿತ ವಿಮಾನಗಳನ್ನು ಕಾರ್ಯಾಚರಿಸುತ್ತಿದೆ. ಮುಂಬೈ ಮತ್ತು ಸ್ಯಾನ್ಫ್ರಾನ್ಸಿಸ್ಕೋ ನಡುವೆ ಮತ್ತು ನ್ಯೂಯಾರ್ಕ್ಗೆ ಪ್ರಪ್ರಥಮ ತಡೆ-ರಹಿತ ವಿಮಾನ ಸಂಚಾರ ಸೇವೆಯನ್ನು ಆರಂಭಿಸುವ ಮೂಲಕ ಅಮೆರಿಕದಲ್ಲಿ ತನ್ನ ರೆಕ್ಕೆಯನ್ನು ಇನ್ನಷ್ಟು ವಿಸ್ತರಿಸಲು ಏರ್ ಇಂಡಿಯಾ ಸಜ್ಜಾಗಿದೆ. 

ಏರ್ ಇಂಡಿಯಾ ಪೈಲಟ್‌ಗಳಿಗೆ ಸಿಹಿ ಸುದ್ದಿ, ನಿವೃತ್ತಿಯ ಬಳಿಕವೂ ಉದ್ಯೋಗ!

ಏರ್ ಇಂಡಿಯಾ ಮಾರ್ಗಸೂಚಿ
ಟಾಟಾ ಒಡೆತನದ ಏರಿಂಡಿಯಾ ತನ್ನ ಕ್ಯಾಬಿನ್‌ ಸಿಬ್ಬಂದಿಗಳಿಗೆ ಹೊಸ ವಸ್ತ್ರಸಂಹಿತೆಯನ್ನು ಜಾರಿ ಮಾಡಿದೆ. ಇದರ ಪ್ರಕಾರ ಕೂದಲು ಉದುರಿರುವ ಪುರುಷ ಸಿಬ್ಬಂದಿಗಳು ಸಂಪೂರ್ಣವಾಗಿ ತಲೆ ಕೂದಲನ್ನು ತೆಗೆಸಿಕೊಂಡು ಕೆಲಸಕ್ಕೆ ಬರುವಂತೆ ಸೂಚಿಸಿದೆ. ಅಲ್ಲದೇ ಮಹಿಳೆಯರು ಮುತ್ತು ಇರುವ ಕಿವಿ ಓಲೆಗಳನ್ನು ಧರಿಸದಂತೆಯೂ ಸೂಚಿಸಿದೆ. ದಶಕಗಳ ಕಾಲದಿಂದ ವಿಮಾನ ಸೇವೆ ಒದಗಿಸುತ್ತಿರುವ ಏರಿಂಡಿಯಾ ತನ್ನ ಸಿಬ್ಬಂದಿಗಳ ವಸ್ತ್ರಸಂಹಿತೆ ಅಂತಾರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿಲ್ಲ ಎಂಬ ಕಾರಣಕ್ಕೆ ಅದನ್ನು ಬದಲಾಯಿಸಲು ತೀರ್ಮಾನಿಸಿದೆ. ತಲೆಯಲ್ಲಿ ಹೆಚ್ಚು ಕೂದಲು ಉದುರಿ ತಲೆ ಬೋಳು ಬೋಳು ಕಾಣುವ ಸಿಬ್ಬಂದಿ ಪೂರ್ಣವಾಗಿ ತಮ್ಮ ತಲೆಕೂದನ್ನು ಪ್ರತಿನಿತ್ಯ ಶೇವ್‌ ಮಾಡಬೇಕು. ಅಲ್ಲದೇ ಗುಂಪಿನಲ್ಲಿದ್ದಾಗ ಅಸಭ್ಯವಾಗಿ ವರ್ತಿಸುವುದನ್ನು ನಿಲ್ಲಿಸಬೇಕು. ಸಮವಸ್ತ್ರದಲ್ಲಿದ್ದಾಗ ಯಾವಾಗಲೂ ಅಲಂಕಾರವನ್ನು ಕಾಪಾಡಿಕೊಳ್ಳಬೇಕು ಮತ್ತು ಶಾಂತ ಸಂಭಾಷಣೆಯನ್ನು ನಡೆಸಬೇಕು ಎಂದು ಸೂಚಿಸಲಾಗಿದೆ
 

Latest Videos
Follow Us:
Download App:
  • android
  • ios