Asianet Suvarna News Asianet Suvarna News

ಬಸ್ ಪ್ರಯಾಣ ನಿಯಮದಲ್ಲಿ ಬದಲಾವಣೆ, ಮಹಿಳೆಯರ ದಿಟ್ಟಿಸಿ ನೋಡಿದರೂ ಬಂಧನ ಖಚಿತ!

ಬಸ್ ಪ್ರಯಾಣದಲ್ಲಿ ಮಹಿಳೆಯ ಮೇಲೆ  ಕಿರುಕುಳ ನಡೆಯುತ್ತದೆ. ಹಲವು ಪ್ರಕರಣಗಳು ಬೆಳಕಿಗೆ ಬಂದರೆ ಮತ್ತೆ ಕೆಲ ಪ್ರಕರಣಗಳು ಬೆಳಕಿಗೆ ಬರುವುದಿಲ್ಲ. ಇದೀಗ ಬಸ್‌ನಲ್ಲಿ ಮಹಿಳೆಯರ ಸುರಕ್ಷಿತ ಪ್ರಯಾಣಕ್ಕೆ ನಿಯಮದಲ್ಲಿ ತಿದ್ದುಪಡಿ ಮಾಡಲಾಗಿದೆ. ಇನ್ನು ಮುಂದೆ ಮಹಿಳೆಯರ ನೋಡುತ್ತಾ ನಿಂತು ಮುಜುಗರ ತಂದರೂ ಅರೆಸ್ಟ್ ಖಚಿತವಾಗಿದೆ.

Staring at women on bus is offence in Tamil Nadu Govt has amended Motor Vehicles Rules for safe travel ckm
Author
Bengaluru, First Published Aug 20, 2022, 9:51 PM IST

ಚೆನ್ನೈ(ಆ.20):  ಬಸ್ ಪ್ರಯಾಣದಲ್ಲಿ ಮಹಿಳೆಯರ ಸುರಕ್ಷತೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇದಕ್ಕಾಗಿ ಹಲವು ನಿಯಮಗಳನ್ನು ತರಲಾಗಿದೆ. ಆದರೂ ಬಸ್‌ನಲ್ಲಿ ಮಹಿಳೆಯ ಮೇಲೆ ಕಿರುಕುಳ ಪ್ರಕರಣಗಳು ವರದಿಯಾಗುತ್ತಲೇ ಇದೆ. ಇದಕ್ಕಾಗಿ ಮೋಟಾರು ವಾಹನ ಕಾಯ್ದೆಯಲ್ಲಿ ತಿದ್ದುಪಡಿ ತರಲಾಗಿದೆ. ಹೊಸ ಕಾಯ್ದೆ ಪ್ರಕಾರ ಬಸ್‌ನಲ್ಲಿ ಮಹಿಳಾ ಪ್ರಯಾಣಿಕರನ್ನು ದಿಟ್ಟಿಸಿ ನೋಡಿದರೆ, ಸನ್ನೆ ಮಾಡಿದರೆ, ನೋಡುತ್ತಾ ನಿಂತು ಮಹಿಳೆಯರಿಗೆ ಮಜುಗರವಾಗುವಂತೆ, ಆತಂಕವಾಗವಂತೆ ಮಾಡಿದರೆ, ಸನ್ನೆ ಮಾಡಿದರೆ, ಅಶ್ಲೀಲ ವರ್ತನೆ, ಶಿಳ್ಳೆ ಹೊಡೆಯುವುದು, ಕಮೆಂಟ್ ಮಾಡಿದರೆ ವ್ಯಕ್ತಿಯನ್ನು ಬಂಧಿಸುವ ಅವಕಾಶವಿದೆ. ಬಸ್ ಕಂಡಕ್ಟರ್ ವ್ಯಕ್ತಿಯನ್ನು ಸಮೀಪದ ಪೊಲೀಸ್ ಠಾಣೆಗೆ ಹಸ್ತಾಂತರಿಸಬೇಕು ಎಂದು ಕಾಯ್ದೆಯಲ್ಲಿ ತಿದ್ದುಪಡಿ ತರಲಾಗಿದೆ. ಈ ಹೊಸ ನಿಯಮ ಜಾರಿಗೆ ಬಂದಿರುವುದು ತಮಿಳುನಾಡಿನಲ್ಲಿ.

ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುವುದು, ಹಾಸ್ಯ ಮಾಡುವುದು, ಅಪಹಾಸ್ಯ ಮಾಡುವುದು, ಕಮೆಂಟ್ ಪಾಸ್ ಮಾಡುವುದು ಸೇರಿದಂತೆ ಮಹಿಳೆಯ ವಿರುದ್ಧ ಯಾವುದೇ ರೀತಿಯ ಅಹಿತಕರ ಘಟನೆಯನ್ನು ಸಹಿಸಲು ಸಾಧ್ಯವಿಲ್ಲ. ಹೀಗಾಗಿ ಬಸ್ ಕಂಡಕ್ಟರ್‌ಗೆ ಮಹಿಳೆಯರು ಮಾಹಿತಿ ನೀಡಬಹುದು. ಇಷ್ಟೇ ಅಲ್ಲ ಬಸ್ ನೇರವಾಗಿ ಹತ್ತಿರದ ಪೊಲೀಸ್ ಠಾಣೆಗೆ ತಿರುಗಿಸಿ ವ್ಯಕ್ತಿಯನ್ನು ಪೊಲೀಸರಿಗೆ ಹಸ್ತಾಂತರ ಮಾಡಬೇಕು ಎಂದು ತಿದ್ದುಪಡಿ ಮಾಡಲಾಗಿದೆ.

"ಯುವತಿ ಬಟ್ಟೆ ನೋಡಿದರೆ ಕಾಮೋದ್ರೇಕಗೊಳ್ಳುತ್ತದೆ" ಎಂಬ ಕಾರಣ ನೀಡಿ ಲೈಂಗಿಕ ಕಿರುಕುಳ ಆರೋಪಿಗೆ ಜಾಮೀನು

ಈ ತಿದ್ದುಪಡಿಯಲ್ಲಿ ಮತ್ತೊಂದು ವಿಚಾರವನ್ನು ಸೇರಿಸಲಾಗಿದೆ. ಬಸ್‌ನಲ್ಲಿ ಮಹಿಳಾ ಪ್ರಯಾಣಿಕರ ಜೊತೆ ಅನುಚಿತವಾಗಿ ವರ್ತಿಸುವ ಬಸ್ ಕಂಡಕ್ಟರ್ ವಿರುದ್ದವೂ ಕ್ರಮ ಕೈಗೊಳ್ಳುವ ಅವಕಾಶವಿದೆ ಬಸ್ ಪ್ರಯಾಣದ ವೇಳೆ, ಬಸ್ ಹತ್ತುವಾಗ ಅಥವಾ ಇಳಿಯುವಾಗ ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸಿದರೆ, ಮಹಿಳೆಯರಿಗೆ ನೆರವು ನೀಡುವ ನೆಪದಲ್ಲಿ ಅನುಚಿತವಾಗಿ ವರ್ತಿಸಿದರೂ ಕಂಡಕ್ಟರ್‌ಗೂ ಶಿಕ್ಷೆ ವಿಧಿಸಲಾಗುತ್ತದೆ. 

ಯಾವುದೇ ರೀತಿಯ ಲೈಂಗಿಕ ಪ್ರಚೋದನೆ, ಪ್ರಲೋಭಗಳಿಗೆ ಒಳಪಡಿಸುವ ಪ್ರಯತ್ನಗಳು ನಡೆದರೂ ಶಿಕ್ಷಾರ್ಹ ಅಪರಾಧವಾಗಿದೆ. ತಮಿಳುನಾಡಿನಲ್ಲಿ ಈ ನಿಯಮ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ. ಬಸ್‌ನಲ್ಲಿ ಮಹಿಳೆ ಸುರಕ್ಷಿತವಾಗಿ ಓಡಾಡುವಂತಾಗಬೇಕು ಎಂದು ತಮಿಳುನಾಡು ಸರ್ಕಾರ ಹೇಳಿದೆ

ಮೆಟ್ರೋದಲ್ಲಿ ಸೀಟಿಗಾಗಿ ಮಹಿಳೆಯರ ಕಿತ್ತಾಟ: ವಿಡಿಯೋ ವೈರಲ್‌

ಹೊಸ ನೀತಿಗೆ ತಮಿಳುನಾಡು ಮಹಿಳಾ ಒಕ್ಕೂಟಗಳು ಮೆಚ್ಚುಗೆ ವ್ಯಕ್ತಪಡಿಸಿದೆ. ಗ್ರಾಮೀಣ ಭಾಗದಿಂದ ಹಿಡಿದು ನಗರ ಭಾಗದಲ್ಲಿ ಬಸ್‌ನಲ್ಲಿ ಓಡಾಡುವ ಮಹಿಳೆಯರು ಪ್ರತಿನಿತ್ಯ ಕಿರುಕುಳ ಅನುಭವಿಸುತ್ತಿದ್ದಾರೆ. ಯಾರಲ್ಲೂ ಹೇಳಲೂ ಸಾಧ್ಯವಾಗದೆ, ನೋವನ್ನು ಅನುಭವಿಸುತ್ತಿದ್ದಾರೆ. ಈ ನಿಯಮದಿಂದ ಮಹಿಳೆಗೆ ಶಕ್ತಿ ಬಂದಿದೆ. ಇದರಿಂದ ಬಸ್‌ನಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ಕಿರುಕುಳ ಪ್ರಕರಣ ಗಣನೀಯವಾಗಿ ಕಡಿಮೆಯಾಗುವ ವಿಶ್ವಾಸವಿದೆ ಎಂದು ಮಹಿಳಾ ಒಕ್ಕೂಟಗಳು ಹೇಳಿವೆ.

Follow Us:
Download App:
  • android
  • ios