ಕೇಂದ್ರ ಸರ್ಕಾರ ಶಿಕ್ಷಣ ಯೋಜನೆಗಳಿಗೆ 2,291.30 ಕೋಟಿ ರೂ. ಅನುದಾನ ತಡೆ ಹಿಡಿದಿದೆ ಎಂದು ಆರೋಪಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.
ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡು ಸರ್ಕಾರ ಸಮರ ಮುಂದುವರಿಸಿದೆ. ಕೇಂದ್ರ ಸರ್ಕಾರ ವಿವಿಧ ಶಿಕ್ಷಣ ಯೋಜನೆಗಳಿಗೆ ಹಣವನ್ನು ತಡೆ ಹಿಡಿದಿದೆ ಎಂದು ಆರೋಪಿಸಿ ತಮಿಳುನಾಡು ಸರ್ಕಾರ ಬುಧವಾರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಕೇಂದ್ರ ಸರ್ಕಾರಕ್ಕೆ 2,291.30 ಕೋಟಿ ರು.ಗಳನ್ನು ಪಾವತಿಸಲು ನಿರ್ದೇಶನ ನೀಡಬೇಕೆಂದು ಕೋರಿದೆ.
ಪಿಎಂ ಶ್ರೀ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ 2020ಅನ್ನು ಜಾರಿಗೆ ತರದ ಕಾರಣ ಸಮಗ್ರ ಶಿಕ್ಷಾ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರವು ಹಣವನ್ನು ತಡೆ ಹಿಡಿದಿದೆ ಎಂದು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸರ್ಕಾರ ಆರೋಪಿಸಿದೆ.
ಸಂವಿಧಾನದ 131 ನೇ ವಿಧಿಯ ಅಡಿಯಲ್ಲಿ ಸಲ್ಲಿಸಲಾದ ಮೂಲ ಅರ್ಜಿಯಲ್ಲಿ, ಈ ವರ್ಷ ಮೇ 1ರಿಂದ 2,151.59 ಕೋಟಿ ರು.ಗಳ ಮೂಲ ಮೊತ್ತದ ವಾರ್ಷಿಕ 6 ಪ್ರತಿಶತ ಬಡ್ಡಿ ಸೇರಿದಂತೆ 2,291.30 ಕೋಟಿ ರು.ಗಳನ್ನು ಪಾವತಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ರಾಜ್ಯವು ಕೋರಿದೆ .
ಇದನ್ನೂ ಓದಿ: ತಮಿಳು ನಾಯಕರೇಕೆ ತಮಿಳಿನಲ್ಲಿ ಸಹಿ ಮಾಡಲ್ಲ? : ಹಿಂದಿ ಹೇರಿಕೆ ಎನ್ನುವ ಡಿಎಂಕೆ ಸ್ಟಾಲಿನ್‌ಗೆ ಮೋದಿ ಟಾಂಗ್
ವಿವಿ ಕುಲಪತಿ ನೇಮಕ ಅಧಿಕಾರ ರಾಜ್ಯಕ್ಕೆ: ಮದ್ರಾಸ್ ಹೈಕೋರ್ಟ್ ತಡೆ
ವಿಶ್ವವಿದ್ಯಾಲಯಗಳಿಗೆ ಉಪಕುಲಪತಿಗಳನ್ನು ನೇಮಿಸುವ ಅಧಿಕಾರವನ್ನು ತಮಿಳುನಾಡು ಸರ್ಕಾರಕ್ಕೆ ನೀಡುವ ನಿಬಂಧನೆಗೆ ಮದ್ರಾಸ್ ಹೈಕೋರ್ಟ್ ನೀಡಿದೆ. ಇದರಿಂದ ರಾಜ್ಯದ ಎಂ.ಕೆ. ಸ್ಟಾಲಿನ್ ಸರ್ಕಾರಕ್ಕೆ ಹಿನ್ನಡೆಯಾಗಿದೆ.
ಬಾಕಿ ಇರುವ 10 ಮಸೂದೆಗಳಿಗೆ ರಾಜ್ಯಪಾಲರು ಒಪ್ಪಿಗೆ ನೀಡದೇ ತಡೆಹಿಡಿದ ವಿರುದ್ಧ ಅರ್ಜಿ ಹಾಕಿ ಸುಪ್ರೀಂ ಕೋರ್ಟ್‌ನಲ್ಲಿ ಇತ್ತೀಚೆಗೆ ಸ್ಟಾಲಿನ್ ಸರ್ಕಾರ ಜಯಿಸಿತ್ತು. ಬಳಿಕ ವಿವಿ ಕುಲಪತಿ ನೇಮಕದ ಅಧಿಕಾರವನ್ನು ರಾಜ್ಯಪಾಲರಿಂದ ಕಿತ್ತುಕೊಂಡು ಸಿಎಂಗೆ ನೀಡುವ ಮಸೂದೆಯ ಅಧಿಸೂಚನೆ ಹೊರಡಿಸಿತ್ತು. ಆದರೆ ಈಗ ಹೈಕೋರ್ಟ್ ತಡೆ ವಿಧಿಸಿದ ಕಾರಣ ಸ್ಟಾಲಿನ್‌ಗೆ ಹಿನ್ನಡೆ ಆಗಿದೆ.
ಇದನ್ನೂ ಓದಿ: ಯಾವ ಶಾ ಬಂದ್ರೂ ತಮಿಳುನಾಡು ಆಳಲು ಸಾಧ್ಯವಿಲ್ಲ: ಕೇಂದ್ರದ ವಿರುದ್ಧ ಸ್ಟಾಲಿನ್ ಗುಡುಗು!


