ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಜನತೆಗೆ ಭರ್ಜರಿ ಉಡುಗೊರೆ ಪ್ರಕಟಿಸಿದ್ದಾರೆ. ಪಡಿತರ ಚೀಟಿ ಹೊಂದಿರುವ ಮತ್ತು ಪುನರ್ವಸತಿ ಶಿಬಿರಗಳಲ್ಲಿ ವಾಸಿಸುವ 2.22 ಕೋಟಿ ಅರ್ಹರಿಗೆ ಪೊಂಗಲ್ ಹಬ್ಬಕ್ಕಾಗಿ 3,000 ರು. ನಗದು, ಸೇರಿ ವಿವಿಧ ಉಡುಗೊರೆ ನೀಡುವುದಾಗಿ ಹೇಳಿದ್ದಾರೆ.
ಚೆನ್ನೈ: ಚುನಾವಣೆ ಹೊಸ್ತಿಲಿನಲ್ಲಿರುವ ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಜನತೆಗೆ ಭರ್ಜರಿ ಉಡುಗೊರೆ ಪ್ರಕಟಿಸಿದ್ದಾರೆ. ಪಡಿತರ ಚೀಟಿ ಹೊಂದಿರುವ ಮತ್ತು ಪುನರ್ವಸತಿ ಶಿಬಿರಗಳಲ್ಲಿ ವಾಸಿಸುವ 2.22 ಕೋಟಿ ಅರ್ಹರಿಗೆ ಪೊಂಗಲ್ ಹಬ್ಬಕ್ಕಾಗಿ 3,000 ರು. ನಗದು, ಸೇರಿ ವಿವಿಧ ಉಡುಗೊರೆ ನೀಡುವುದಾಗಿ ಅವರು ಹೇಳಿದ್ದಾರೆ.
ತಮಿಳರ ಪವಿತ್ರ ಹಬ್ಬಗಳಲ್ಲಿ ಒಂದಾದ ಪೊಂಗಲ್
ತಮಿಳರ ಪವಿತ್ರ ಹಬ್ಬಗಳಲ್ಲಿ ಒಂದಾದ ಪೊಂಗಲ್ ಅನ್ನು ಜ.15ರಂದು ಆಚರಿಸಲಾಗುತ್ತಿದೆ. ಪ್ರತಿವರ್ಷವೂ ಸರ್ಕಾರ ಹಣ ಸೇರಿದಂತೆ ವಿವಿಧ ಉಡುಗೊರೆಯನ್ನು ನೀಡುತ್ತಾ ಬಂದಿದೆ. ಆದರೆ ಚುನಾವಣೆ ವರ್ಷವೆನ್ನುವ ಕಾರಣಕ್ಕೆ ಈ ವರ್ಷ ನಗದಿನ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ ಎನ್ನಲಾಗಿದೆ.
ಒಂದು ಕೇಜಿ ಅಕ್ಕಿ, ಸಕ್ಕರೆ, ಕಬ್ಬು , ಗಿಫ್ಟ್ ಹ್ಯಾಂಪರ್,ನಗದು
ಸರ್ಕಾರದ ಘೋಷಣೆ ಪ್ರಕಾರ, ಅರ್ಹರಿಗೆ ಒಂದು ಕೇಜಿ ಅಕ್ಕಿ, ಸಕ್ಕರೆ, ಕಬ್ಬು ಸೇರಿದಂತೆ ಒಂದು ಗಿಫ್ಟ್ ಹ್ಯಾಂಪರ್ ಹಾಗೂ 3000 ರು. ನಗದು ಸಿಗಲಿದೆ. ಅಲ್ಲದೆ ಒಂದು ಸೀರೆ, ಧೋತಿಯನ್ನು ವಿತರಿಸುವುದಾಗಿ ಸಿಎಂ ಸ್ಟಾಲಿನ್ ಘೋಷಿಸಿದ್ದಾರೆ. ಇದರಿಂದ ಪಡಿತರ ಚೀಟಿ ಮತ್ತು ಲಂಕಾ ಪುನರ್ವಸತಿ ಕೇಂದ್ರಗಳಲ್ಲಿರುವ ಒಟ್ಟು 2.22 ಕೋಟಿ ಫಲಾನುಭವಿಗಳು ಪ್ರಯೋಜನ ಪಡೆಯಲಿದ್ದಾರೆ. ಅಲ್ಲದೇ ಇದಕ್ಕಂತಲೇ ಸರ್ಕಾರ 6,936.17 ಕೋಟಿ ರು. ವಿನಿಯೋಗಿಸಲಿದೆ.
- ಪೊಂಗಲ್ ನಿಮಿತ್ತ ಪ್ರತಿ ವರ್ಷ ಜನತೆಗೆ ತಮಿಳ್ನಾಡು ಸರ್ಕಾರದಿಂದ ಗಿಫ್ಟ್
- ಈ ವರ್ಷ ಚುನಾವಣೆ ನಿಮಿತ್ತ ಪ್ರತಿ ವರ್ಷಕ್ಕಿಂತ ಹೆಚ್ಚಾಗಿಯೇ ಕೊಡುಗೆ
- 1 ಕೇಜಿ ಅಕ್ಕಿ, ಸಕ್ಕರೆ, ಕಬ್ಬು, 1 ಗಿಫ್ಟ್ ಹ್ಯಾಂಪರ್, ₹3000 ನಗದು ನೀಡಿಕೆ
- ಜತೆಗೆ 1 ಸೀರೆ, ಧೋತಿ ಕೂಡ ವಿತರಣೆ । ₹6,936.17 ಕೋಟಿ ವಿನಿಯೋಗ
- ಅರ್ಹ 2.22 ಕೋಟಿ ಪಡಿತರದಾರರು. ಲಂಕಾ ನಿರಾಶ್ರಿತರಿಗೆ ಈ ಬಂಪರ್


